Just In
- 11 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 12 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 13 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 13 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಹೋಂಡಾ ಸಿಬಿ300ಆರ್ ಬೈಕ್ ಬಿಡುಗಡೆಯ ದಿನಾಂಕ ಫಿಕ್ಸ್. ಯಾವಾಗ ಗೊತ್ತಾ.?
ಜಪಾನ್ ಬ್ರಾಂಡ್ ಹೋಂಡಾ ಮೋಟಾರ್ ಸೈಕಲ್ ಸಂಸ್ಥೆಯು ಮಧ್ಯಮ ಕ್ರಮಾಂಕದ ಕೆಲವು ಸೂಪರ್ ಬೈಕ್ ಮಾದರಿಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಇದರಲ್ಲಿ ವಿನೂತನ ವಿನ್ಯಾಸದ ಸಿಬಿ300ಆರ್ ಬೈಕ್ ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿರುವುದಲ್ಲದೇ ಬಜಾಜ್ ಡೋಮಿನಾರ್ 400 ಬೈಕ್ಗಳಿಗೆ ಪ್ರತಿಸ್ಪರ್ಧಿಯಾಗುವ ಸುಳಿವು ನೀಡಿದೆ.
ಹೋಂಡಾ ಸಂಸ್ಥೆಯು ಕಳೆದ 2017ರಲ್ಲೇ ಇಟಾಲಿಯಲ್ಲಿ ನಡೆದ ಇಐಸಿಎಂಎ ಆಟೋ ಮೇಳದಲ್ಲಿ ಸಿಬಿ300ಆರ್ ಬೈಕ್ ಪ್ರದರ್ಶನ ಮಾಡಿದಲ್ಲದೇ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ನೀಡಿತ್ತು. ಆದ್ರೆ ಇದೀಗ ಹೊಸ ಬೈಕ್ ವಿನ್ಯಾಸಗಳ ಕುರಿತಾಗಿ ಭಾರತದಲ್ಲಿ ಹಕ್ಕುಸ್ವಾಮ್ಯ(ಪೆಟೆಂಟ್) ದಾಖಲಿಸಿರುವುದಲ್ಲದೇ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದೆ.
ಬಿಡುಗಡೆಯ ಅವಧಿ
ನಿಯೋ ಸ್ಪೋಟ್ ಬೈಕ್ ಪ್ರೇರಣೆಯೊಂದಿಗೆ ಅಭಿವೃದ್ದಿ ಹೊಂದಿರುವ ಸಿಬಿ300ಆರ್ ಫೆಬ್ರವರಿ 8 ರಂದು ಬಿಡುಗಡೆಯಾಗುತ್ತಿದ್ದು, ಹೋಂಡಾ ಸಂಸ್ಥೆಯೇ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ಕೊಟ್ಟಿದೆ.
ಬುಕ್ಕಿಂಗ್ ಹೇಗೆ.?
ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಭಾರತದಲ್ಲಿರುವ ಕೆಲವೇ ಕೆಲವು ಹೋಂಡಾ ಡೀಲರ್ಸ್ ಬಳಿ ಸಿಬಿ300ಆರ್ ಬೈಕ್ ಖರೀದಿಗಾಗಿ ರೂ. 5,000 ಮುಂಗಡವಾಗಿ ನೀಡಿ ಬುಕ್ಕಿಂಗ್ ಮಾಡಬಹುದಾಗಿದ್ದು, ಕರ್ನಾಟಕದ ಸಿಲಿಕಾನ್ ಮೋಟಾರ್ಸ್ ಡೀಲರ್ಸ್ಗೆ ಮಾತ್ರವೇ ಸಿಬಿ300ಆರ್ ಬುಕ್ಕಿಂಗ್ ಅವಕಾಶ ದೊರೆತಿದೆ.
ಬೆಂಗಳೂರಿನಲ್ಲಿರುವ ಸಿಲಿಕಾನ್ ಮೋಟಾರ್ಸ್ ಡೀಲರ್ಸ್ ಬಳಿ ಮಾತ್ರವೇ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಮಾಡಬಹುದಾಗಿದ್ದು, ಹೊಸ ಬೈಕ್ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲು ಯೋಜಿಸಲಾಗಿದೆ.
ಇದರಿಂದ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಖರೀದಿ ಮಾಡುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, 250ಸಿಸಿ ಮೇಲ್ಪಟ್ಟ ಬೈಕ್ಗಳಿಗೆ ಹೆಚ್ಚುತ್ತಿರುವ ಬೇಡಿಕೆಯೇ ಈ ಹೊಸ ಬೈಕ್ ಪರಿಚಯಿಸುತ್ತಿರುವ ಪ್ರಮುಖ ಕಾರಣವಾಗಿದೆ.
ರೆಟ್ರೋ ಲುಕ್ ಹೆಡ್ಲ್ಯಾಂಪ್, ಎಲ್ಇಡಿ ಲೈಟ್ಸ್, ಸ್ಪೋರ್ಟಿ ಫ್ಯೂಲ್ ಟ್ಯಾಂಕ್, ಎಂಜಿನ್ ಬೆಲ್ಲಿ, ಗಮನಸೆಳೆಯುವ ಎಕ್ಸಾಸ್ಟ್ ವಿನ್ಯಾಸಗಳು ಬೈಕ್ ಬಲಿಷ್ಠತೆಗೆ ಸಹಕಾರಿಯಾಗಿದ್ದು, ಇದು ಬಜಾಜ್ ಡೋಮಿನಾರ್ 400 ಸೇರಿದಂತೆ ಪ್ರಮುಖ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎಂಜಿನ್ ಸಾಮರ್ಥ್ಯ
286ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂಂದಿರುವ ಸಿಬಿ300ಆರ್ ಬೈಕ್ಗಳು 30.5-ಬಿಎಚ್ಪಿ ಮತ್ತು 27.5-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್ನೊಂದಿಗೆ 6-ಸ್ಪೀಡ್ ಗೇರ್ಬಾಕ್ಸ್ ಪಡೆದಿದೆ.
ಜೊತೆಗೆ ಸುರಕ್ಷೆತೆಗಾಗಿ ಎಬಿಎಸ್ ಟೆಕ್ನಾಲಜಿ ಪಡೆದಿರುವ ಸಿಬಿ300ಆರ್ ಬೈಕ್ಗಳು ಮುಂಭಾಗದಲ್ಲಿ 41ಎಂಎಂ ಅಪ್ ಸೈಡ್ ಡೌನ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಷೆನ್ ಜೋಡಣೆಯಿದ್ದು, ರೆಟ್ರೋ ಡಿಸೈನ್ನೊಂದಿಗೆ ಮಾರ್ಡನ್ ಟೆಕ್ನಾಲಜಿ ಪ್ರೇರಣೆ ಹೊಂದಿದೆ.
ಹೀಗಾಗಿ ಹೋಂಡಾದ ಮತ್ತೊಂದು ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಮಾದರಿಯಾದ ಸಿಬಿಆರ್250ಆರ್ ಬೈಕಿಗಿಂತಲೂ ಹೆಚ್ಚಿನ ಗುಣಮಟ್ಟ ಮತ್ತು ಸೌಲಭ್ಯಗಳೊಂದಿಗೆ ರಸ್ತೆಗಿಳಿಯಲಿರುವ ಸಿಬಿ300ಆರ್ ಬೈಕ್ಗಳು ಎಕ್ಸ್ಶೋರಂ ಪ್ರಕಾರ ರೂ. 2.50 ಲಕ್ಷದಿಂದ ರೂ. 2.70 ಲಕ್ಷದ ತನಕ ಬೆಲೆ ಪಡೆಯುವ ಸಾಧ್ಯತೆಗಳಿವೆ.
ಸದ್ಯಕ್ಕೆ ಭಾರತದಲ್ಲಿ 22 ಹೋಂಡಾ ಶೋರೂಂಗಳಲ್ಲಿ ಮಾತ್ರವೇ ಹೊಸ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ಗೆ ಅವಕಾಶ ನೀಡಲಾಗಿದ್ದು, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಡೀಲರ್ಸ್ಗಳಿಗೆ ಬುಕ್ಕಿಂಗ್ ಅವಕಾಶ ನೀಡುವ ಸಾಧ್ಯತೆಗಳಿವೆ.
ಇದಲ್ಲದೇ ಗ್ರಾಹಕರ ಬೇಡಿಕೆಯ ಆಧಾರ ಮೇಲೆ ಹೊಸ ಬೈಕಿನ ಉತ್ಪಾದನಾ ಕಾರ್ಯವನ್ನು ಭಾರತದಲ್ಲೇ ಆರಂಭಿಸುವ ಬಗ್ಗೆಯು ಸುಳಿವು ನೀಡಿರುವ ಹೋಂಡಾ ಸಂಸ್ಥೆಯು ಬೇಡಿಕೆ ಹೆಚ್ಚಿದ್ದಲ್ಲಿ ಭಾರತದಲ್ಲೇ ಉತ್ಪಾದನೆ ಮಾಡಿ ಬೈಕಿನ ಬೆಲೆ ತಗ್ಗಿಸುವ ಗುರಿಹೊಂದಿದೆ.