ಹೋಂಡಾ ಸಿಬಿ300ಆರ್ ಬೈಕಿನ ಬೆಲೆ ಏರಿಕೆ

ಹೋಂಡಾ ಸಂಸ್ಥೆಯು ತಮ್ಮ ಹೊಸ ಸಿಬಿ300ಆರ್ ಬೈಕ್ ಅನ್ನು ಇದೇ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆಯುತ್ತಿದೆ. ಈ ಬಿಡುಗಡೆಯ ಅವಧಿಯಲ್ಲಿ ಸಂಸ್ಥೆಯು ಮೂರು ತಿಂಗಳಿಗೆ ಆಗುವಷ್ಟು ಬುಕ್ಕಿಂಗ್ ಪಡೆದಿರುವುದಾಗಿ ಹೇಳಿಕೊಂಡಿತ್ತು.

ಹೋಂಡಾ ಸಿಬಿ300ಆರ್ ಬೈಕಿನ ಬೆಲೆ ಏರಿಕೆ

ಹೋಂಡಾ ಸಿಬಿ300ಆರ್ ಬೈಕ್ ಬಿಡುಗಡೆಗೊಂಡಾಗ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.41 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, ಇದೀಗ ಈ ಬೈಕಿನ ಬೆಲೆಯಲ್ಲಿ ರೂ. 989 ಏರಿಕೆ ಮಾಡಲಾಗಿದೆ. ಬೆಲೆ ಏರಿಕೆಯ ನಂತರ ಹೋಂಡಾ ಸಿಬಿ300ಆರ್ ಬೈಕ್ ಇದೀಗ ರೂ. 2,41,989 ಲಕ್ಷದ ಬೆಲೆಯನ್ನು ಪಡುದುಕೊಂಡಿದೆ. ಬೆಲೆ ಏರಿಕೆಯ ನಂತರವು ಸಹ ಹೋಂಡಾ ಸಿಬಿ300ಆರ್ ಬೈಕ್ ತನ್ನ ಎದುರಾಳಿಯದ ಕೆಟಿಎಂ 390 ಡ್ಯೂಕ್ ಬೈಕ್‍ಗಳಿಗಿಂತಲೂ ಕಡಿಮೆ ಬೆಲೆಯನ್ನು ಹೊಂದಿದೆ.

ಹೋಂಡಾ ಸಿಬಿ300ಆರ್ ಬೈಕಿನ ಬೆಲೆ ಏರಿಕೆ

ಬಿಡುಗಡೆಗೊಂಡು ಸುಮಾರು 2 ತಿಂಗಳುಗಳ ನಂತರ ಹೋಂಡಾ ಡೀಲರ್‍‍ಗಳು ಈ ಬೈಕಿನ ವಿತರಣೆಯನ್ನು ಶುರು ಮಾಡಲಾಗಿದ್ದರು. ಇಷ್ಟೆ ಅಲ್ಲದೇ ದುಬಾರಿ ಬೆಲೆಯ ನಿಯೋ ಸ್ಪೋಟ್ ಬೈಕ್ ಪ್ರೇರಣೆಯೊಂದಿಗೆ ಅಭಿವೃದ್ದಿ ಹೊಂದಿರುವ ಸಿಬಿ300ಆರ್ ಬೈಕ್ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭಗೊಂಡಿದ್ದು, ಭಾರತದಲ್ಲಿರುವ ಕೆಲವೇ ಕೆಲವು ಹೋಂಡಾ ಡೀಲರ್ಸ್ ಬಳಿ ಸಿಬಿ300ಆರ್ ಬೈಕ್ ಖರೀದಿಗಾಗಿ ರೂ. 5,000 ಮುಂಗಡವಾಗಿ ನೀಡಿ ಬುಕ್ಕಿಂಗ್ ಮಾಡಬಹುದಾಗಿದೆ.

ಹೋಂಡಾ ಸಿಬಿ300ಆರ್ ಬೈಕಿನ ಬೆಲೆ ಏರಿಕೆ

ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಖರೀದಿ ಮಾಡುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, 250ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯೇ ಈ ಹೊಸ ಬೈಕ್ ಪರಿಚಯಿಸುತ್ತಿರುವ ಪ್ರಮುಖ ಕಾರಣವಾಗಿದೆ.

ಹೋಂಡಾ ಸಿಬಿ 300ಆರ್ ಬೈಕ್ ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ರೆಟ್ರೋ ಮಾದರಿಯ ವೃತ್ತಾಕಾರದ ಎಲ್ಇಡಿ ಹೆಡ್‍ಲ್ಯಾಂಪ್ಸ್, ಪೆಟಲ್ ಡಿಸ್ಕ್ ಬ್ರೇಕ್ಸ್, 5 ಟ್ವಿನ್ ಸ್ಪೋಕ್ ಅಲಾಯ್ ವ್ಹೀಲ್ಸ್ ಮತ್ತು ಆಕ್ರಮಣಕಾರಿ ವಿನ್ಯಾಸವನ್ನು ಪಡೆದಿರುವ ಪ್ಯುಯಲ್ ಟ್ಯಾಂಕ್ ಅನ್ನು ನೀಡಲಾಗಿದೆ.

ಹೋಂಡಾ ಸಿಬಿ300ಆರ್ ಬೈಕಿನ ಬೆಲೆ ಏರಿಕೆ

ಈ ಬೈಕ್ ಸೆಗ್ಮೆಂಟ್‍‍ನಲ್ಲಿ ಅತೀ ಕಡಿಮೆ ತೂಕವನ್ನು ಹೊಂದಿರುವ ಬೈಕ್ ಇದಾಗಿದ್ದು, ಹೋಂಡಾ ಸಿಬಿ 300ಆರ್ ಬೈಕ್ ಸುಮಾರು 143 ಕಿಲೋಗ್ರಾಂನ ತೂಕವನ್ನು ಹೊಂದಿದೆ. ಇಷ್ಟೆ ಅಲ್ಲದೇ ಈ ಬೈಕಿನ ಹಿಂಭಾಗದಲ್ಲಿ ಸಾಧಾರಣವಾದ ಟೈಲ್ ಲ್ಯಾಂಪ್ಸ್ ಮತ್ತು ಟರ್ನ್ ಇಂಡಿಕೇಟರ್ ಸೇಟಪ್ ಅನ್ನು ಒದಗಿಸಲಾಗಿದೆ.

ಹೋಂಡಾ ಸಿಬಿ300ಆರ್ ಬೈಕಿನ ಬೆಲೆ ಏರಿಕೆ

ಎಂಜಿನ್ ಸಾಮರ್ಥ್ಯ

286ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂಂದಿರುವ ಸಿಬಿ300ಆರ್ ಬೈಕ್‌ಗಳು 31.4-ಬಿಎಚ್‌ಪಿ ಮತ್ತು 27.5-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದಿದೆ.

ಹೋಂಡಾ ಸಿಬಿ300ಆರ್ ಬೈಕಿನ ಬೆಲೆ ಏರಿಕೆ

ಜೊತೆಗೆ ಸುರಕ್ಷೆತೆಗಾಗಿ ಎಬಿಎಸ್ ಟೆಕ್ನಾಲಜಿ ಪಡೆದಿರುವ ಸಿಬಿ300ಆರ್ ಬೈಕ್‌ಗಳು ಮುಂಭಾಗದಲ್ಲಿ 41ಎಂಎಂ ಅಪ್ ಸೈಡ್ ಡೌನ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಷೆನ್ ಜೋಡಣೆಯಿದ್ದು, ರೆಟ್ರೋ ಡಿಸೈನ್‌ನೊಂದಿಗೆ ಮಾರ್ಡನ್ ಟೆಕ್ನಾಲಜಿ ಪ್ರೇರಣೆ ಹೊಂದಿದೆ.

ಹೋಂಡಾ ಸಿಬಿ300ಆರ್ ಬೈಕಿನ ಬೆಲೆ ಏರಿಕೆ

ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಂಡಿರುವ ಹೊಸ ಹೋಂಡಾ ಸಿಬಿ 300ಆರ್ ಬೈಕ್‍ಗಳು ಈಗಾಗಲೆ ಮಾರಾಟಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 3390, ಕವಾಸಕಿ ನಿಂಜಾ 400 ಮತ್ತು ಯಮಹಾ ಜೆಡ್ಎಫ್-ಆರ್3 ಬೈಕ್‍ಗಳಿಗೆ ಟಾಂಗ್ ನೀಡಲಿದೆ.

ಇಷ್ಟೆ ಅಲ್ಲದೆಯೆ ಬಜಾಜ್ ಸಂಸ್ಥೆಯು ಕೂಡಾ ತಮ್ಮ ವಾಹನಗಳ ಮೇಲೆ ಬೆಲೆ ಏರಿಕೆಯನ್ನು ಮಾಡಲಾಗಿದ್ದು, ಇದು ಕೇಂದ್ರ ಸರ್ಕಾರವು ಜಾರಿ ಮಾಡಲಾದ ಹೊಸ ಆದೇಶದ ಮೆರೆ ಹೋಂಡಾ, ಬಜಾಜ್ ಸೇರಿದಂತೆ ಇನ್ನು ಹಲವಾರು ವಾಹನ ತಯಾರಕ ಸಂಸ್ಥೆಗಳು ತಮ್ಮ ವಾಹನಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಲಾಗಿದೆ.

Source: Rushlane

Most Read Articles

Kannada
English summary
Honda CB300R Price Hike By Rs.989. Read In Kannada
Story first published: Saturday, August 3, 2019, 14:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X