ಕೆಟಿಎಂ ಆರ್‍‍ಸಿ ಬೈಕಿನ ರೂಪದಲ್ಲಿ ಮಿಂಚಿದ ಹೋಂಡಾ ಡಿಯೋ..!

ಮಾಡಿಫಿಕೇಷನ್ ವಾಹನಗಳು ಎಂದರೆ ಮೊದಲಿಗೆ ನಮ್ಮ ತಲೆಗೆ ಬರುವುದು ಬೈಕ್‍ಗಳಲ್ಲಿ ರಾಯಲ್ ಎನ್‍ಫೀಲ್ಡ್ ಮತ್ತು ಕಾರುಗಳಲ್ಲಿ ಟೊಯೊಟಾ ಫಾರ್ಚ್ಯುನರ್ ಆದರೆ ಮಾಡಿಫೈ ಆಗಿರುವ ಸ್ಕೂಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುವುದರ ಬಗ್ಗೆ ಕೇಳಿದ್ದೀರಾ.? ಹಾಗಾದರೆ ಇಂದಿನ ಲೇಖನದಲ್ಲಿ ಅಂತದೊಂದು ಸ್ಕೂಟರ್‍‍ನ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಕೆಟಿಎಂ ಆರ್‍‍ಸಿ ಬೈಕಿನ ರೂಪದಲ್ಲಿ ಮಿಂಚಿದ ಹೋಂಡಾ ಡಿಯೋ..!

ದೇಶದಲ್ಲಿ ಹೊಸ ವಾಹನವನ್ನು ಖರೀದಿಸಿದ ನಂತರ ಉತ್ಪಾದಕರು ನೀಡಿದ ಉಪಕರಣಗಳು ಇಷ್ಟವಿಲ್ಲವೆಂದು ತಮ್ಮ ರುಚಿಗೆ ತಕ್ಕಹಾಗೆ ವಾಹನ ಮಾಲೀಕರು ಹೆಚ್ಚು ಹಣ ನೀಡಿ, ಮಾಡಿಫೈ ಮಾಡಿಕೊಂಡ ಉದಾಹರಣೆಗಳನ್ನು ನಾವು ದಿನನಿತ್ಯ ಕಾಣುತ್ತಲೇ ಇರುತ್ತೇವೆ. ಆದ್ರೆ ಇಂದು ಮಾಡಿಫೈ ಆದ ಈ ವಾಹನದ ಬಗ್ಗೆ ತಿಳಿದರೆ ನಿಮಗೆ ಅಚ್ಚರಿಯಾಗಬಹುದು.

ಕೆಟಿಎಂ ಆರ್‍‍ಸಿ ಬೈಕಿನ ರೂಪದಲ್ಲಿ ಮಿಂಚಿದ ಹೋಂಡಾ ಡಿಯೋ..!

ಹೌದು, ಸ್ಕೂಟರ್‍‍ಗಳಲ್ಲಿಹಲವಾರು ಗ್ರಾಹಕರ ಜನಪ್ರಿಯತೆಯನ್ನು ಪಡೆದುಕೊಂಡಿರುವ ಹೋಂಡಾ ಡಿಯೋ ಸ್ಕೂಟರ್‍ ಮಾಲೀಕರು ಕೂಡಾ ತಮ್ಮ ವಾಹನವನ್ನು ಮಾಡಿಫೈ ಮಾಡಿಸಿಕೊಂಡಿರುವ ಉದಾಹರಣೆಗಳನ್ನು ಕೂಡಾ ನಾವು ಕಾಣಬಲ್ಲೆವು. ಆದ್ರೆ ಈ ಡಿಯೋ ಸ್ಕೂಟರ್ ಮಾತ್ರ ಬೈಕಿನ ಹಾಗೆ ಕಾಣುವ ಹಾಗೆ ಮಾಡಿಫೈ ಆಗಿದೆ.

ಕೆಟಿಎಂ ಆರ್‍‍ಸಿ ಬೈಕಿನ ರೂಪದಲ್ಲಿ ಮಿಂಚಿದ ಹೋಂಡಾ ಡಿಯೋ..!

ಸಾಧಾರಣವಾದ ಹೋಂಡಾ ಡಿಯೋ ಬೈಕ್ ರಸ್ತೆಯಲ್ಲಿ ಹೋಗುತ್ತಿದ್ದರೆ ಜನರ ಕಣ್ಣು ಆ ಸ್ಕೂಟರಿನ ಕಡೆಗೆ ಒಮ್ಮೆಯಾದರೂ ತಿರುಗುತ್ತದೆ, ಆದರೆ ಈ ಸ್ಕೂಟರ್ ಯಮಹಾ ಆರ್15 ಬೈಕಿನ ಮಾದರಿಯ ಹಿಂಭಾಗವನ್ನು ಪಡೆದುಕೊಂಡಿದ್ದು, ಕೆಟಿಎಂ ಆರ್‍‍ಸಿ ಬೈಕಿನಿಂದ ಪಡೆದ ಟ್ರೆಯಿಲ್ ಫ್ರೇಮಿಂಗ್ ಅನ್ನು ಇದರಲ್ಲಿ ಬಳಸಲಾಗಿದೆ.

ಕೆಟಿಎಂ ಆರ್‍‍ಸಿ ಬೈಕಿನ ರೂಪದಲ್ಲಿ ಮಿಂಚಿದ ಹೋಂಡಾ ಡಿಯೋ..!

ಮಾಡಿಫೈಡ್ ಆದ ಈ ಹೋಂಡಾ ಡಿಯೋ ಸ್ಕೂಟರ್‍‍ನಲ್ಲಿ ಹೋಂಡಾ ಸಂಸ್ಥೆಯ ಮತ್ತೊಂದು ಜನಪ್ರಿಯ ಸ್ಕೂಟರ್ ಆದ ಏವಿಯೇಟರ್ ಸ್ಕೂಟರ್‍‍ನಿಂದ ಟೈರ್‍‍ಗಳು, ಫೋರ್ಕ್ಸ್, ಮತ್ತು ಡಿಸ್ಕ್ ಬ್ರೇಕ್ ಅನ್ನು ಬಳಸಲಾಗಿದೆ. ಅಂದರೆ ಇದು ಡಿಸ್ಕ್ ಬ್ರೇಕ್ ಅನ್ನು ಪಡೆದ ಮೊದಲ ಹೋಂಡಾ ಡಿಯೋ ಸ್ಕೂಟರ್ ಇದು ಎಂದರೆ ತಪ್ಪಾಗಲಾರದು.

ಕೆಟಿಎಂ ಆರ್‍‍ಸಿ ಬೈಕಿನ ರೂಪದಲ್ಲಿ ಮಿಂಚಿದ ಹೋಂಡಾ ಡಿಯೋ..!

ಸಾಧಾರಣ ಡಿಯೋ ಸ್ಕೂಟರ್‍‍ನಲ್ಲಿದ್ದ ಫೆಂಡರ್ ಅನ್ನು ತೆಗೆದು ಹಾಕಲಾಗಿದ್ದು, ಈ ವಾಹನಕ್ಕೆ ಯಮಹಾ ಎಫ್‍‍ಜೆಡ್ ಬೈಕಿನ ಹ್ಯಾಂಡಲ್‍‍ಬಾರ್ ಅನ್ನು ಒದಗಿಸಲಾಗಿದೆ. ಹಿಂಭಾಗದ ಸೀಟ್ ಮತ್ತು ಇನ್ನಿತರೆ ಹೊರಭಾಗಗಳನ್ನು ತೆಗೆದು ಹಾಕಲಾಗಿದೆ.

ಕೆಟಿಎಂ ಆರ್‍‍ಸಿ ಬೈಕಿನ ರೂಪದಲ್ಲಿ ಮಿಂಚಿದ ಹೋಂಡಾ ಡಿಯೋ..!

ಈ ಹೋಂಡಾ ಡಿಯೋವನ್ನು ಯಮಹಾ ಆರ್15 ಬೈಕಿನಂತೆ ಕಾಣಲು ಕೇವಲ 35ಸಾವಿರ ಖರ್ಚಾಗಿದೆ ಎಂದು ಇದನ್ನು ರೂಪಾಂತರಗೊಳಿಸಿದ ಮೆಕಾನಿಕ್ ಹೇಳಿಕೊಳ್ಳಲಾಗಿದ್ದು, ಹೋಂಡಾ ಡಿಯೋ ಸ್ಕೂಟರ್‍ ಮಾಲೀಕನ ಸಹೋದರನು ಮಾಡಿಫೈ ಮಾಡಿಸಿಕೊಳ್ಳಲು ಸಲಹೆಯನ್ನು ನೀಡಿದ್ದರಂತೆ.

ಈ ಸ್ಕೂಟರ್‍‍ಗೆ ಕಸ್ಟಂ ಎಕ್ಸಾಸ್ಟ್ ಅನ್ನು ಸಹ ನೀಡಲಾಗಿದ್ದು, ಆಕರ್ಷಕವಾದ ವಿನ್ಯಾಸ ಮತ್ತು ಸದ್ದನ್ನು ನೀಡುತ್ತದೆ. ಸಂಪೂರ್ಣವಾದ ಸ್ಕೂಟರ್‍‍‍ಗೆ ಮೇಟ್ ಬ್ಲಾಕ್ ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಹಿಂಭಾಗದ ಸಬ್ ಫ್ರೇಮ್ ಮತ್ತು ರಿಮ್ಸ್ ಅನ್ನು ಆರೆಂಜ್ ಬಣ್ಣದ ಪೆಯಿಂಟ್‍‍ನಿಂದ ಸಜ್ಜುಗೊಳಿಸಲಾಗಿದೆ. ಮತ್ತು ಇನ್ನು ಹೆಚ್ಚು ಆಕರ್ಷಕವಾಗಿ ಕಾಣಲು ಅಲ್ಲಲ್ಲಿ ಸ್ಟಿಕ್ಕರಿಂಗ್ ಅನ್ನು ನೀಡಲಾಗಿದೆ.

ಕೆಟಿಎಂ ಆರ್‍‍ಸಿ ಬೈಕಿನ ರೂಪದಲ್ಲಿ ಮಿಂಚಿದ ಹೋಂಡಾ ಡಿಯೋ..!

ಹೋಂಡಾ ಡಿಯೋ ಸ್ಕೂಟರ್ ಅನ್ನು ಯಮಹಾ ಆರ್15 ಬೈಕಿನಂತೆ ಕಾಣಲು ಸುಮಾರು 25 ದಿನಗಳ ಕಾಲ ಶ್ರಮಿಸಿದ್ದು, ಮೇಲೆ ಹೇಳಿರುವ ಹಾಗೆ ಇದಕ್ಕೆ ಒಟ್ಟಾರೆಯಾಗಿ ರೂ. 35,000 ಹಣ ಖರ್ಚಾಗಿದೆಯಂತೆ. ಕೇವಲ ಉಪಕರಣಗಳನ್ನು ಮಾತ್ರ ಮಾಡಿಫೈ ಮಾಡಲಾಗಿದ್ದು, ಇನ್ನುಳಿದ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

Source: Bullet Singh Boisar

Most Read Articles

Kannada
English summary
This Honda Dio wants to be a KTM RC sportsbike. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X