ಬಿಎಸ್-6 ನಿಯಮ ಜಾರಿಗೆ ದಿನಗಣನೆ- ಹೋಂಡಾ ಸ್ಕೂಟರ್‌ಗಳ ಮೇಲೆ ಭರ್ಜರಿ ಆಫರ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ವಿಭಾಗವು ತನ್ನ ಜನಪ್ರಿಯ ಸ್ಕೂಟರ್ ಮತ್ತು ಬೈಕ್ ಆವೃತ್ತಿಗಳ ಮೇಲೆ ಸೆಪ್ಟೆಂಬರ್ ಅವಧಿಗೆ ಆಕರ್ಷಕ ಡಿಸ್ಕೌಂಟ್‌ಗಳನ್ನು ನೀಡುತ್ತಿದ್ದು, ಯಾವ ಸ್ಕೂಟರ್ ಮೇಲೆ ಯಾವೆಲ್ಲಾ ಆಫರ್ ನೀಡಲಾಗುತ್ತಿದೆ ಎನ್ನುವುದು ಇಲ್ಲಿ ತಿಳಿಯಿರಿ.

ಬಿಎಸ್-6 ನಿಯಮ ಜಾರಿಗೆ ದಿನಗಣನೆ- ಹೋಂಡಾ ಸ್ಕೂಟರ್‌ಗಳ ಮೇಲೆ ಭರ್ಜರಿ ಆಫರ್

2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಅವಧಿಗೂ ಮುನ್ನ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರ ತಮ್ಮ ವಾಹನ ಉತ್ಪನ್ನಗಳನ್ನು ಉನ್ನತೀಕರಿಸುತ್ತಿವೆ. ಹೀಗಾಗಿ ಹೋಂಡಾ ಮೋಟಾರ್‌ಸೈಕಲ್ ಕೂಡಾ ಬಿಎಸ್-6 ಪ್ರೇರಿತ ಆಕ್ಟಿವಾ 125 ಬಿಡುಗಡೆಗೊಳಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಬಿಎಸ್-4 ಸ್ಕೂಟರ್‌ಗಳ ಸ್ಟಾಕ್ ಪ್ರಮಾಣವನ್ನು ತಗ್ಗಿಸಲು ಭರ್ಜರಿ ಆಫರ್‌ಗಳನ್ನು ಘೋಷಣೆ ಮಾಡಿದೆ.

ಬಿಎಸ್-6 ನಿಯಮ ಜಾರಿಗೆ ದಿನಗಣನೆ- ಹೋಂಡಾ ಸ್ಕೂಟರ್‌ಗಳ ಮೇಲೆ ಭರ್ಜರಿ ಆಫರ್

ಕಳೆದ 10 ತಿಂಗಳಿನಿಂದ ದ್ವಿಚಕ್ರ ವಾಹನ ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿರುವ ಹೋಂಡಾ ಸಂಸ್ಥೆಯು 19 ವರ್ಷಗಳ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಮಾರಾಟ ಕುಸಿತ ಕಂಡಿದ್ದು, ಮಾರಾಟ ಸುಧಾರಣೆಗಾಗಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.

ಬಿಎಸ್-6 ನಿಯಮ ಜಾರಿಗೆ ದಿನಗಣನೆ- ಹೋಂಡಾ ಸ್ಕೂಟರ್‌ಗಳ ಮೇಲೆ ಭರ್ಜರಿ ಆಫರ್

ವಾಹನ ಉತ್ಪಾದನೆಯಲ್ಲಿ ಸಾಕಷ್ಟು ಕಡಿತಗೊಳಿಸಲಾಗುತ್ತಿದ್ದು, ಸ್ಟಾಕ್ ಪ್ರಮಾಣವನ್ನು ನಿಗದಿ ಅವಧಿಯಲ್ಲಿ ಪೂರ್ಣಗಳಿಸುವ ಮೂಲಕ ಬಿಎಸ್-6 ನಿಯಮದಂತೆ ಪೂರ್ಣಪ್ರಮಾಣದ ವಾಹನ ಉತ್ಪಾದನೆಗಾಗಿ ಸಿದ್ದವಾಗುತ್ತಿದೆ. ಈ ಹಿನ್ನಲೆಯಲ್ಲಿ ಬಿಎಸ್-4 ವಾಹನಗಳ ಮೇಲೆ ಡಿಸ್ಕೌಂಟ್ ನೀಡುತ್ತಿದೆ.

ಬಿಎಸ್-6 ನಿಯಮ ಜಾರಿಗೆ ದಿನಗಣನೆ- ಹೋಂಡಾ ಸ್ಕೂಟರ್‌ಗಳ ಮೇಲೆ ಭರ್ಜರಿ ಆಫರ್

ಸಾಮಾನ್ಯವಾಗಿ ಹೋಂಡಾ ಸಂಸ್ಥೆಯು ತನ್ನ ಜನಪ್ರಿಯ ಸ್ಕೂಟರ್ ಮಾದರಿಗಳಾದ ಆಕ್ಟಿವಾ ಮೇಲೆ ಆಫರ್ ನೀಡುವುದು ತೀರಾ ವಿರಳ. ಯಾಕೆಂದ್ರೆ ಮಾರುಕಟ್ಟೆಯಲ್ಲಿ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿರುವ ಆಕ್ಟಿವಾ ಸ್ಕೂಟರ್‌ಗಳು ಪ್ರತಿ ತಿಂಗಳು 2.25 ಲಕ್ಷದಿಂದ 2.80 ಲಕ್ಷ ಯುನಿಟ್ ಸರಾಸರಿ ಮಾರಾಟವಾಗುತ್ತವೆ. ಆದರೆ ಈ ಬಾರಿ ಆರ್ಥಿಕ ಸಂಕಷ್ಟು ಎದುರಾದ ಹಿನ್ನಲೆಯಲ್ಲಿ ಮಾರಾಟ ಪ್ರಮಾಣವು ಶೇ. 15 ರಷ್ಟು ಕುಸಿದಿದ್ದು, ಇದೇ ಮೊದಲ ಬಾರಿಗೆ ಅತ್ಯುತ್ತಮ ಆಫರ್‌ಗಳನ್ನು ಘೋಷಿಸಿದೆ.

ಬಿಎಸ್-6 ನಿಯಮ ಜಾರಿಗೆ ದಿನಗಣನೆ- ಹೋಂಡಾ ಸ್ಕೂಟರ್‌ಗಳ ಮೇಲೆ ಭರ್ಜರಿ ಆಫರ್

ಮಾಹಿತಿಗಳ ಪ್ರಕಾರ ಹೋಂಡಾ ಸಂಸ್ಥೆಯು ಆಕ್ಟಿವಾ 5ಜಿ ಸ್ಕೂಟರ್ ಮತ್ತು ಸಿಬಿ ಶೈನ್ ಬೈಕ್ ಮೇಲೆ ಅತ್ಯುತ್ತಮ ಆಫರ್ ಘೋಷಿಸಿದ್ದು, ರೂ. 1,100 ಡೌನ್‌ ಪೇಮೆಂಟ್‌ನೊಂದಿಗೆ ಖರೀದಿಗೆ ಅವಕಾಶ ನೀಡುತ್ತಿದೆ.

ಬಿಎಸ್-6 ನಿಯಮ ಜಾರಿಗೆ ದಿನಗಣನೆ- ಹೋಂಡಾ ಸ್ಕೂಟರ್‌ಗಳ ಮೇಲೆ ಭರ್ಜರಿ ಆಫರ್

ಇದರೊಂದಿಗೆ ಶೂನ್ಯ ದರದೊಂದಿಗೆ ಪ್ರೋಸೆಸಿಂಗ್ ಫೀ, ನೋ ಕಾಸ್ಟ್ ಇಎಂಐನಿಂದಾಗಿ ರೂ.2,100 ನೇರವಾಗಿ ಉಳಿತಾಶವಾಗಲಿದ್ದು, ಇನ್ನು ಹೆಚ್ಚಿನ ಆಫರ್ ಬಯಸುವ ಆಸಕ್ತ ಗ್ರಾಹಕರು ಪೇಟಿಎಂ ಮೂಲಕ ದರ ಪಾವತಿಸಿ ಗರಿಷ್ಠ ರೂ.7 ಸಾವಿರ ತನಕ ಕ್ಯಾಶ್‌ಬ್ಯಾಕ್ ಆಫರ್ ಪಡೆದುಕೊಳ್ಳಬಹುದು.

MOST READ: ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಬಿಎಸ್-6 ನಿಯಮ ಜಾರಿಗೆ ದಿನಗಣನೆ- ಹೋಂಡಾ ಸ್ಕೂಟರ್‌ಗಳ ಮೇಲೆ ಭರ್ಜರಿ ಆಫರ್

ಈ ಆಫರ್ ಸೀಮಿತ ಅವಧಿಗೆ ಮಾತ್ರವೇ ಲಭ್ಯವಿರಲಿದ್ದು, ಆಕ್ಟಿವಾ 5ಜಿ ಮತ್ತು ಶೈನ್ ಬೈಕ್ ಹೊರತುಪಡಿಸಿ ಇನ್ನುಳಿದ ಬೈಕ್ ಮಾದರಿಗಳ ಖರೀದಿಗೆ ಈ ಆಫರ್ ಅನ್ವಯಿಸುವುದಿಲ್ಲ. ಹೀಗಾಗಿ ಆಕ್ಟಿವಾ 5ಜಿ ಮತ್ತು ಶೈನ್ ಖರೀದಿಸುವ ಗ್ರಾಹಕರು ಆಫರ್‌ಗಳ ಕುರಿತಾಗಿ ಸರಿಯಾದ ಮಾಹಿತಿ ಪಡೆದ ನಂತರವಷ್ಟೇ ವ್ಯವಹಾರ ಮುಂದುವರಿಸಿ.

MOST READ: ಹೊಸ ವಾಹನ ಖರೀದಿ ನೀರಿಕ್ಷೆಯಲ್ಲಿದ್ದ ಗ್ರಾಹಕರಿಗೆ ಕೇಂದ್ರದಿಂದ ಮತ್ತೆ ನಿರಾಸೆ?

ಬಿಎಸ್-6 ನಿಯಮ ಜಾರಿಗೆ ದಿನಗಣನೆ- ಹೋಂಡಾ ಸ್ಕೂಟರ್‌ಗಳ ಮೇಲೆ ಭರ್ಜರಿ ಆಫರ್

ಇನ್ನು ಆಕ್ಟಿವಾ 125 ಮಾದರಿಯನ್ನು ಬಿಎಸ್-6 ಹೊಸ ನಿಯಮದಂತೆ ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಿದ್ದು, ಹೋಂಡಾ ಸಂಸ್ಥೆಯು ಅವಧಿಗೂ ಮುನ್ನವೇ ಬಿಎಸ್-6 ವಾಹನಗಳ ಮಾರಾಟವನ್ನು ಶುರು ಮಾಡಿದೆ. ಬಿಎಸ್-4 ವೈಶಿಷ್ಟ್ಯತೆಯ ಎಂಜಿನ್‌ಗಿಂತಲೂ ಸಾಕಷ್ಟು ಸುಧಾರಣೆ ಹೊಂದಿರುವ ಬಿಎಸ್-6 ಎಂಜಿನ್ ಪ್ರೇರಿತ ಆಕ್ಟಿವಾ 125 ಮಾದರಿಯು ಫ್ಯೂಲ್ ಇಂಜೆಕ್ಷಡ್ ಯುನಿಟ್ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 67,490ಕ್ಕೆ ನಿಗದಿಪಡಿಸಲಾಗಿದೆ.

MOST READ: ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಬಿಎಸ್-6 ನಿಯಮ ಜಾರಿಗೆ ದಿನಗಣನೆ- ಹೋಂಡಾ ಸ್ಕೂಟರ್‌ಗಳ ಮೇಲೆ ಭರ್ಜರಿ ಆಫರ್

ಹೊಸ ಆಕ್ಟಿವಾ 125 ಸ್ಕೂಟರ್ ವಿನ್ಯಾಸದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಹೊಸ ಡಿಸೈನ್ ಪ್ರೇರಿತ ಫ್ರಂಟ್ ಅಪಾರ್ನ್, ಎಲ್ಇಡಿ ಡಿಆರ್‌ಎಲ್ಎಸ್ ಜೊತೆ ಟರ್ನ್ ಇಂಡಿಕೇಟರ್ ನೀಡಲಾಗಿದೆ. ಹಾಗೆಯೇ ಕ್ರೋಮ್ ಡಿಸೈನ್‌ನಿಂದಾಗಿ ಹೊಸ ಸ್ಕೂಟರಿಗೆ ಮತ್ತಷ್ಟು ಪ್ರೀಮಿಯಂ ವಿನ್ಯಾಸವನ್ನು ಒದಗಿಸಿದ್ದು, ಇದು ಸ್ಕೂಟರ್ ಖರೀದಿದಾರರನ್ನು ಸೆಳೆಯಲಿದೆ. ಇದರೊಂದಿಗೆ ಬಿಎಸ್-6 ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರ್ ಮಾದರಿಯು ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಪರ್ಫಾಮೆನ್ಸ್‌ನೊಂದಿಗೆ ಇಂಧನ ಕಾರ್ಯಕ್ಷಮತೆಯಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ ಎನ್ನಬಹುದು.

Most Read Articles

Kannada
English summary
Honda Discount Offers For Sep 2019. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X