ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಕಂಪನಿಯು ವಿಶ್ವದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಹೋಂಡಾ ಕಂಪನಿಯು ಪ್ರಪಂಚದ ವಿವಿಧ ಮಾರುಕಟ್ಟೆಗಳಲ್ಲಿ ಹಲವಾರು ಅತ್ಯಾಧುನಿಕ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತದೆ. ಆದರೆ ಕಂಪನಿಯು ಭಾರತದಲ್ಲಿ ಇದುವರೆಗೂ ಎಂಟ್ರಿ ಲೆವೆಲ್‍‍ನ ಸ್ಕೂಟರ್ ಅನ್ನು ಮಾತ್ರ ಪ್ರಯಾಣಿಕರ ಸೆಗ್‍ಮೆಂಟಿನಲ್ಲಿ ಬಿಡುಗಡೆಗೊಳಿಸಿದೆ.

ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ, ಭಾರತದ 2ನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. ಕಂಪನಿಯು ಭಾರತದಲ್ಲಿ ಆಕ್ಟಿವಾ ಆಟೋಮ್ಯಾಟಿಕ್ ಸ್ಕೂಟರ್‌‍‍ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತದೆ. ಈ ಸ್ಕೂಟರ್‍‍ನ ಬೆಲೆಯು ಸುಮಾರು ರೂ.60,000ಗಳಾಗಿದೆ. ಹೋಂಡಾ ಕಂಪನಿಯು ಸ್ಕೂಟರ್‍ ಸೆಗ್‍‍ಮೆಂಟಿನಲ್ಲಿ ಬೇರೆ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸದೇ ಇರುವುದು, ಹೋಂಡಾ ಅಭಿಮಾನಿಗಳನ್ನು ಅಸಮಾಧಾನಕ್ಕೆ ಕಾರಣವಾಗಿತ್ತು.

ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಕಂಪನಿಯು, ತನ್ನ ಗ್ರಾಹಕರ ಬೇಡಿಕೆಗೆ ಕೊನೆಗೂ ಸ್ಪಂದಿಸಿದೆ. ಇತ್ತೀಚೆಗಷ್ಟೇ ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಿಬಿ300ಆರ್ ಹಾಗೂ ಸಿಬಿಆರ್650ಆರ್ ಗಳನ್ನು ಬಿಡುಗಡೆಗೊಳಿಸಿತ್ತು. ಜಿಗ್‍‍ವೀಲ್ಸ್ ವರದಿಯಂತೆ, ಹೋಂಡಾ 2019ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ಫೋರ್ಜಾ 300 ಸ್ಪೋರ್ಟ್ಸ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದೆ. ಸದ್ಯಕ್ಕೆ ಈ ಸ್ಕೂಟರ್ ಅನ್ನು ಆಸಿಯಾನ್ ದೇಶಗಳಲ್ಲಿ ಹಾಗೂ ಜಪಾನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆಗೊಳಿಸಲಿದೆ ಹೋಂಡಾ

ಫೋರ್ಜಾ 300 ಏರೋಡೈನಾಮಿಕ್ಸ್ ಡಿಸೈನ್ ಹೊಂದಿದೆ. ಈ ಸ್ಕೂಟರ್‍‍ನಲ್ಲಿ ದೊಡ್ಡ ಗಾತ್ರದ ಎಲ್ಇಡಿ ಹೆಡ್‍‍ಲ್ಯಾಂಪ್, ಮುಂಭಾಗದಲ್ಲಿ ದೊಡ್ಡ ಏಪ್ರನ್ ಹಾಗೂ ಆರಾಮದಾಯಕವಾದ ಸೀಟುಗಳನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿ ಇಂಟಿಗ್ರೇಟೆಡ್ ಇಂಡಿಕೇಟರ್‍ ಹೊಂದಿರುವ ಟೇಲ್ ಲ್ಯಾಂಪ್‍‍ಗಳಿವೆ. ಈ ಮ್ಯಾಕ್ಸಿ ಸ್ಕೂಟರ್ ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ವಿಂಡ್‍‍ಸ್ಕ್ರೀನ್ ಹಾಗೂ ಸ್ಪೀಡೋ ಮತ್ತು ಟ್ಯಾಕೋಗಳಿಗಾಗಿ ಎರಡು ಅನಲಾಗ್ ಡಯಲ್‌ಗಳನ್ನು ಹೊಂದಿದೆ.

ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆಗೊಳಿಸಲಿದೆ ಹೋಂಡಾ

ಎಲ್‍‍ಸಿ‍‍ಡಿ ಪ್ಯಾನೆಲ್ ಇತರ ಅಂಕಿಅಂಶಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಅಂಡರ್ ಸೀಟ್ ಸ್ಟ್ರೋರೇಜ್, 2 ಹೆಲ್ಮೆಟ್‍‍ಗಳನ್ನು ಇಡುವಷ್ಟು ಜಾಗವನ್ನು ಹೊಂದಿದೆ. 12ವಿ ಚಾರ್ಜಿಂಗ್ ಸಾಕೆಟ್ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಉಳಿದ ಆನ್ ಬೋರ್ಡ್ ಫೀಚರ್‍‍ಗಳೆಂದರೆ ಸೀಟನ್ನು ಅನ್‍‍ಲಾಕ್ ಮಾಡಲು ಸ್ಮಾರ್ಟ್ ಕೀ ಸಿಸ್ಟಂ ಹೊಂದಿರಲಿದೆ. ಹೋಂಡಾ ಫೋರ್ಜಾ 300 ಸ್ಕೂಟರ್ 15 ಇಂಚಿನ ಮುಂಭಾಗದ ವ್ಹೀಲ್ ಹಾಗೂ 14 ಇಂಚಿನ ಹಿಂಬದಿಯ ವ್ಹೀಲ್‍‍ಗಳನ್ನು ಹೊಂದಿದ್ದು, 120/70 ವಿಭಾಗದ ಮುಂಭಾಗ ಹಾಗೂ 140/70 ವಿಭಾಗದ ಹಿಂಭಾಗದ ಟಯರ್‍‍ಗಳಿವೆ.

ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹೋಂಡಾ ಫೋರ್ಜಾ 300 ಸ್ಕೂಟರ್ 279 ಸಿಸಿ, 4 ವಾಲ್ವ್, ಎಸ್‌ಒಹೆಚ್‌ಸಿ, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 24.64 ಬಿಹೆಚ್‍‍ಪಿ ಪವರ್ ಹಾಗೂ 27.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪ್ರತಿ ಲೀಟರ್ ಪೆಟ್ರೋಲ್‍‍ಗೆ 31 ಕಿ.ಮೀ ಮೈಲೇಜ್ ನೀಡಲಿದೆ. ಸಸ್ಪೆಂಷನ್‍‍ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಟ್ವಿನ್ ಸ್ಪ್ರಿಂಗ್‍‍ಗಳಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 259 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್‍‍ಗಳಿವೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುವುದು.

ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಫೋರ್ಜಾ300 ಎಂಜಿನ್‍, ವಿವಿಟಿ - ವೇರಿಯಬಲ್ ವಾಲ್ವ್ ಟೈಮಿಂಗ್ - ಅನ್ನು ಹೊಂದಿದೆ. ಉತ್ತಮ ಟ್ರಾಕ್ ಕಂಟ್ರೋಲ್‍ ಹಾಗೂ ರೇರ್ ವ್ಹೀಲ್ ಟ್ರಾಕ್ಷನ್‍‍ಗಾಗಿ, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (ಎಚ್‌ಎಸ್‌ಟಿಸಿ) ಹೊಂದಿದ್ದು, ಲೋ, ಮಿಡ್ ಹಾಗೂ ಟಾಪ್ ಎಂಡ್ ಪರ್ಫಾಮೆನ್ಸ್ ನೀಡಲಿದೆ.

ಮತ್ತೊಂದು ಹೊಸ ಸ್ಕೂಟರ್ ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಫೋರ್ಜಾ 300 ಸ್ಕೂಟರ್ ಭಾರತದಲ್ಲಿ ಕಂಪ್ಲೀಟ್ ಬಿಲ್ಟ್ ಯೂನಿಟ್ (ಸಿಬಿಯು) ಆಗಿ ಬರಬಹುದು. ಈ ಸ್ಕೂಟರ್ ಅನ್ನು ಟೂರರ್ ಸೆಂಟ್ರಿಕ್ ಆಟೋಮ್ಯಾಟಿಕ್ ಸ್ಪೋರ್ಟ್ಸ್ ಸ್ಕೂಟರ್ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಸ್ಕೂಟರ್‍‍ನ ಬೆಲೆಯು ರೂ.7 ಲಕ್ಷಗಳಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Honda Forza 300 scooter may launch in India by Dec 2019 - Read in kannada
Story first published: Tuesday, July 23, 2019, 15:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X