ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಹೋಂಡಾ ಮೋಟಾರ್‍‍ಸೈಕಲ್ಸ್ ಹಾಗೂ ಸ್ಕೂಟರ್ ಇಂಡಿಯಾ ತನ್ನ ಎಸ್‍‍ಪಿ 125 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಹೋಂಡಾ ಎಸ್‍‍ಪಿ 125 ಬೈಕಿನ ಆರಂಭಿಕ ಬೆಲೆಯು ರೂ.72,900ಗಳಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಈ ಹೊಸ ಬೈಕ್ ಅನ್ನು ಡ್ರಂ ಹಾಗೂ ಡಿಸ್ಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಟಾಪ್ ಮಾದರಿಯ ಎಸ್‍‍ಪಿ 125 ಡಿಸ್ಕ್ ಮಾದರಿಯ ಬೆಲೆಯು ರೂ.77,100ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರಗಳಾಗಿವೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಹೋಂಡಾ ಎಸ್‍‍ಪಿ 125 ಬೈಕ್ ಹೋಂಡಾ ಕಂಪನಿಯು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸುತ್ತಿರುವ ಎರಡನೇ ವಾಹನವಾಗಿದೆ. ಹೋಂಡಾ ಕಂಪನಿಯು ಇದಕ್ಕೂ ಮೊದಲು ಆಕ್ಟಿವಾ 125 ಸ್ಕೂಟರ್ ಅನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿತ್ತು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಹೋಂಡಾ ಎಸ್‌ಪಿ 125 ಬೈಕಿನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಹಾಗೂ 9,000 ಆರ್‌ಪಿಎಂನಲ್ಲಿ 10.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಈ ಎಂಜಿನ್‍‍ನಲ್ಲಿ ಐದು ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸರ್ವರ್‍‍‍ಗಳಿವೆ. ಹೋಂಡಾ ಎಸ್‌ಪಿ 125 ಬೈಕಿನಲ್ಲಿ ಬ್ರೇಕಿಂಗ್‍‍ಗಳಿಗಾಗಿ ಬೈಕಿನ ಎರಡೂ ತುದಿಯಲ್ಲಿ 130 ಎಂಎಂ ಡ್ರಮ್ ಬ್ರೇಕ್‌ಗಳಿವೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಟಾಪ್ ಎಂಡ್ ಮಾದರಿಯ ಬೈಕಿನ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಗಳಿವೆ. ಈ ಬೈಕಿನಲ್ಲಿ 18 ಇಂಚಿನ ವ್ಹೀಲ್‍‍ಗಳಿದ್ದು, ಎರಡೂ ಬದಿಯಲ್ಲಿ 80/100 ಟಯರ್ ಪ್ರೊಫೈಲ್‌ಗಳಿವೆ. ಹೋಂಡಾ ಎಸ್‍‍ಪಿ 125 ಬೈಕ್ 19 ಪೇಟೆಂಟ್ ಅರ್ಜಿಗಳನ್ನು ಹೊಂದಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಇದರಲ್ಲಿ ಟೆಕ್ನಾಲಜಿ ಪೇಟೆಂಟ್‌ಗಳಿದ್ದು, ಇವುಗಳಲ್ಲಿ ಬೈಕಿನ ಶೈಲಿ, ಆರಾಮದಾಯಕ ಹಾಗೂ ಕಂಫರ್ಟ್‍‍ಗಳು ಸೇರಿವೆ. ಎಸ್‌ಪಿ 125 ಬೈಕ್ ಕಂಪನಿಯ ಹೆಚ್‌ಇಟಿ (ಹೋಂಡಾ ಇಕೋ ಟೆಕ್ನಾಲಜಿ) ಯನ್ನು ಹೊಂದಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಇದನ್ನು ಇಎಸ್‌ಪಿ (ಎನ್‍‍ಹ್ಯಾನ್ಸ್ಡ್ ಸ್ಮಾರ್ಟ್ ಪವರ್) ನಿಂದ ನಿಯಂತ್ರಿಸಲಾಗುತ್ತದೆ. ಹೋಂಡಾ ಎಸ್‌ಪಿ 125 ಬೈಕಿನಲ್ಲಿರುವ ಈ ಹೊಸ ಫೀಚರ್ ಮೈಲೇಜ್, ಎಂಜಿನ್ ರಿಫೈನ್‍‍‍ಮೆಂಟ್ ಹಾಗೂ ಎಂಜಿನ್‌ ಅನ್ನು ಶಾಂತವಾಗಿ ಆರಂಭಿಸುತ್ತದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಹೋಂಡಾ ಎಸ್‌ಪಿ 125 ಬೈಕಿನಲ್ಲಿರುವ ಇತರ ಸ್ಟಾಂಡರ್ಡ್ ಫೀಚರ್‍‍ಗಳೆಂದರೆ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್. ಇದು ಬೈಕಿನ ಸರಾಸರಿ ಮೈಲೇಜ್, ಚಲಿಸಿರುವ ದೂರ, ಗೇರ್ ಪೊಸಿಷನ್ ಇಂಡಿಕೇಟರ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್‍‍ಗಳು ಸೇರಿವೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಹೋಂಡಾ ಎಸ್‍‍ಪಿ 125 ಬೈಕ್ ಎಲ್‌ಇಡಿ ಹೆಡ್‌ಲ್ಯಾಂಪ್‌, ಎಂಜಿನ್ ಸ್ಟಾರ್ಟ್ / ಸ್ಟಾಪ್, ಇಂಟಿಗ್ರೇಟೆಡ್ ಹೆಡ್‌ಲ್ಯಾಂಪ್ ಬೀಮ್, ಪಾಸಿಂಗ್ ಸ್ವಿಚ್, ಸ್ಪೋರ್ಟಿ ಅಲಾಯ್ ವ್ಹೀಲ್ಸ್ ಹಾಗೂ ಕ್ರೋಮ್ ಎಕ್ಸಾಸ್ಟ್ ಮಫ್ಲರ್ ಕವರ್‍‍ಗಳನ್ನು ಸಹ ಹೊಂದಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಹೋಂಡಾ ಎಸ್‍‍ಪಿ 125 ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಹಾಗೂ ಸ್ಪೋರ್ಟಿ ಟ್ಯಾಂಕ್ ವಿನ್ಯಾಸದೊಂದಿಗೆ ಬರುತ್ತದೆ. ಹೊಸ ಬೈಕ್ ಅನ್ನು ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಸ್ಟ್ರೈಕಿಂಗ್ ಗ್ರೀನ್, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ ಹಾಗೂ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಸೇರಿವೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಹೋಂಡಾ ಎಸ್‍‍ಪಿ 125 ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಎಸ್‍‍ಪಿ 125 ಬೈಕ್, ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುವ ಎರಡನೇ ಬಿ‍ಎಸ್ 6 ಎಂಜಿನ್ ಹೊಂದಿರುವ ವಾಹನವಾಗಿದೆ. ಎಸ್‍‍ಪಿ 125 ಬೈಕಿನಲ್ಲಿ ಹಲವಾರು ಟೆಕ್ನಾಲಜಿ ಹಾಗೂ ಫೀಚರ್‍‍ಗಳಿವೆ.

Most Read Articles

Kannada
English summary
Honda SP 125 BS-VI Launched In India: Prices Start At Rs 72,900. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X