ಸ್ಥಗಿತಗೊಂಡ ಹೋಂಡಾ ಯೂನಿಕಾರ್ನ್160 ಬೈಕ್ ಮಾರಾಟ

ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸಿಬಿ ಯೂನಿಕಾರ್ನ್ 160 ಮಾರಾಟವನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗದ ಹಿನ್ನೆಲೆಯಲ್ಲಿ ಹಾಗೂ ಹೊಸ ಸುರಕ್ಷಾ ನಿಯಮ ಹಾಗೂ ಹೊಸ ಬಿ‍ಎಸ್6 ನಿಯಮಗಳಿಗೆ ತಕ್ಕಂತೆ ಈ ಬೈಕ್ ಅನ್ನು ಅಪ್‍‍ಡೇಟ್ ಮಾಡದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ವರ್ಷದಿಂದ ಜಾರಿಯಾಗಲಿರುವ ಬಿಎಸ್6 ನಿಯಮಗಳ ಹಿನ್ನೆಲೆಯಲ್ಲಿ ಹೋಂಡಾ ಕಂಪನಿಯು ಕೆಲವು ದ್ವಿಚಕ್ರ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಸ್ಥಗಿತಗೊಂಡ ಹೋಂಡಾ ಯೂನಿಕಾರ್ನ್160 ಬೈಕ್ ಮಾರಾಟ

ಆ ಮಾದರಿಗಳಲ್ಲಿ ಸಿಬಿ ಯೂನಿಕಾರ್ನ್ 160 ಬೈಕ್ ಸಹ ಒಂದು. 2014ರಲ್ಲಿ ಹೋಂಡಾ ಸಿಬಿ ಯೂನಿಕಾರ್ನ್150 ಬೈಕಿನ ಬದಲಿಗೆ ಸಿಬಿ ಯೂನಿಕಾರ್ನ್160 ಬೈಕ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ಗ್ರಾಹಕರ ಬೇಡಿಕೆಯ ಹಿನ್ನೆಲೆಯಲ್ಲಿ ಸಿಬಿ ಯೂನಿಕಾರ್ನ್150 ಬೈಕ್ ಅನ್ನು ಮತ್ತೆ ಬಿಡುಗಡೆಗೊಳಿಸಲಾಯಿತು. ಈ ಬೈಕುಗಳು ಗಣನೀಯ ಪ್ರಮಾಣದಲ್ಲಿ ಮಾರಾಟವಾದವು. 2018ರ ವೇಳೆಗೆ ಹೋಂಡಾ ಕಂಪನಿಯು, ಸಿಬಿ ಯೂನಿಕಾರ್ನ್ 150ಬೈಕುಗಳ ಮಾರಾಟದಲ್ಲಿ 20 ಲಕ್ಷ ಮಾರಾಟದ ಮೈಲಿಗಲ್ಲನ್ನು ತಲುಪಿತು.

ಸ್ಥಗಿತಗೊಂಡ ಹೋಂಡಾ ಯೂನಿಕಾರ್ನ್160 ಬೈಕ್ ಮಾರಾಟ

ಮತ್ತೊಂದೆಡೆ ಸಿಬಿ ಯೂನಿಕಾರ್ನ್160 ಬೈಕುಗಳ ಮಾರಾಟವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹೊಸ ಸುರಕ್ಷತಾ ನಿಯಮಗಳಿಗೆ ಅನುಸಾರವಾಗಿ ಸಿಬಿ ಯೂನಿಕಾರ್ನ್ 150ಬೈಕಿನಲ್ಲಿ ಎಬಿಎಸ್‌ ಅಳವಡಿಸಲಾಗಿದೆ. ಆದರೆ ಸಿಬಿ ಯೂನಿಕಾರ್ನ್ 160 ಬೈಕಿನಲ್ಲಿ ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್)ಅಳವಡಿಸಿರುವುದಾಗಿ ಕಂಪನಿಯ ವೈಬ್‍‍ಸೈಟಿನಲ್ಲಿ ಪ್ರಕಟಿಸಲಾಗಿದೆ. ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಈ ಬೈಕಿನ ಮಾರಾಟವನ್ನು ಸ್ಥಗಿತಗೊಳಿಸಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಸ್ಥಗಿತಗೊಂಡ ಹೋಂಡಾ ಯೂನಿಕಾರ್ನ್160 ಬೈಕ್ ಮಾರಾಟ

ಹೋಂಡಾ ದ್ವಿಚಕ್ರ ವಾಹನಗಳ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಮಿನೊರು ಕಾಟೊರವರು ಕೆಲವು ತಿಂಗಳ ಹಿಂದೆ ಬಿಎಸ್6 ಜಾರಿಯಾದ ನಂತರ ಈಗ ಮಾರುಕಟ್ಟೆಯಲ್ಲಿರುವ ಎಲ್ಲಾ ಬೈಕುಗಳು ಹಾಗೂ ಸ್ಕೂಟರ್‌ಗಳು ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದರು. ಬಿಎಸ್4 ಎಂಜಿನ್ ಹೊಂದಿರುವ ಸಿಬಿ ಯೂನಿಕಾರ್ನ್160 ಬೈಕಿನಲ್ಲಿ 162.71 ಸಿಸಿ ಏರ್ ಕೂಲ್ಡ್, ಎಸ್‌ಐ ಎಂಜಿನ್ ಅಳವಡಿಸಲಾಗಿದ್ದು, 8000 ಆರ್‌ಪಿಎಂನಲ್ಲಿ 13.82 ಬಿಎಚ್‌ಪಿ ಹಾಗೂ 6000 ಆರ್‌ಪಿಎಂನಲ್ಲಿ 13.92 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಥಗಿತಗೊಂಡ ಹೋಂಡಾ ಯೂನಿಕಾರ್ನ್160 ಬೈಕ್ ಮಾರಾಟ

ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಬೈಕ್ ಅನ್ನು ಸ್ಟ್ಯಾಂಡರ್ಡ್ ಹಾಗೂ ಸಿಬಿಎಸ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 106 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ. ಸಿಬಿಎಸ್ ಮಾದರಿಯ ಬೈಕ್ 136 ಕೆ.ಜಿ ತೂಕವನ್ನು ಹೊಂದಿದ್ದರೆ, ಸ್ಟಾಂಡರ್ಡ್ ಮಾದರಿಯ ಬೈಕ್ 134 ಕೆ.ಜಿ ಹೆಚ್ಚಿನ ತೂಕವನ್ನು ಹೊಂದಿದೆ. ಸಿಬಿ ಯೂನಿಕಾರ್ನ್ 160 ಸ್ಟ್ಯಾಂಡರ್ಡ್ ಮಾದರಿಯ ಬೆಲೆ ರೂ.75,884ಗಳಾಗಿದ್ದರೆ, ಸಿಬಿಎಸ್ ಮಾದರಿಯ ಬೆಲೆಯು ರೂ.78,332ಗಳಾಗಿದೆ.

ಸ್ಥಗಿತಗೊಂಡ ಹೋಂಡಾ ಯೂನಿಕಾರ್ನ್160 ಬೈಕ್ ಮಾರಾಟ

ಬೈಕಿನ ಮುಂಭಾಗದ ಸಸ್ಪೆಂಷನ್ ಕಾರ್ಯಗಳನ್ನು ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್‌ಗಳು ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳು ನಿರ್ವಹಿಸುತ್ತವೆ. ಬೈಕಿನ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್‍‍ಗಳಿವೆ. ಹೋಂಡಾ ಕಂಪನಿಯು ತನ್ನ ಸ್ಕೂಟರ್ ಹಾಗೂ ಬೈಕುಗಳಲ್ಲಿ ಬಿಎಸ್ 6 ಆಧಾರಿತ ಎಂಜಿನ್‍‍ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಸ್ಥಗಿತಗೊಂಡ ಹೋಂಡಾ ಯೂನಿಕಾರ್ನ್160 ಬೈಕ್ ಮಾರಾಟ

ಬಿಎಸ್ 6 ಎಂಜಿನ್‍‍ಗಳಿಗೆ ಅಪ್‍‍ಗ್ರೇಡ್ ಆಗದ ಕಾರಣ ದೇಶಿಯ ಮಾರುಕಟ್ಟೆಯಲ್ಲಿರುವ ಕೆಲವು ಮಾದರಿಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಗಳಿವೆ. ಹೋಂಡಾ ಕಂಪನಿಯು ಇತ್ತೀಚಿಗಷ್ಟೇ ತನ್ನ ಮೊದಲ ಬಿ‍ಎಸ್‍6 ಎಂಜಿನ್ ಆಧಾರಿತ ಹೊಸ ಆಕ್ಟಿವಾ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ.

Most Read Articles

Kannada
English summary
Honda Unicorn 160 did not get ABS update – Discontinued? - Read in kannada
Story first published: Saturday, July 6, 2019, 16:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X