ಕೆ‍‍ಟಿ‍ಎಂ ಎಂಜಿನ್‍‍ನೊಂದಿಗೆ ಬರಲಿದೆ ಹಸ್ಕ್ ವರ್ನಾ ಬೈಕ್

ಸ್ವೀಡನ್ ಮೂಲದ ಬೈಕ್ ತಯಾರಕ ಕಂಪನಿಯಾದ ಹಸ್ಕ್ ವರ್ನಾ ತನ್ನ ಅಂಡರ್ ಪಿನ್ನಿಂಗ್ ಹಾಗೂ ಎಂಜಿನ್‍‍ಗಳನ್ನು ಆಸ್ಟ್ರಿಯಾ ಮೂಲದ ಬೈಕ್ ಕಂಪನಿಯಾದ ಕೆಟಿಎಂ ಡ್ಯೂಕ್ 390 ಬೈಕಿನೊಂದಿಗೆ ಹಂಚಿಕೊಂಡಿದೆ. ಇದರ ಜೊತೆಗೆ ಹಸ್ಕ್ ವರ್ನಾ ತನ್ನ ಮತ್ತಷ್ಟು ಎಂಜಿನ್ ಹಾಗೂ ಅಂಡರ್ ಪಿನ್ನಿಂಗ್‍‍ಗಳನ್ನು ಕೆಟಿಎಂನಿಂದ ಪಡೆಯುವ ಸಾಧ್ಯತೆಗಳಿವೆ.

ಕೆ‍‍ಟಿ‍ಎಂ ಎಂಜಿನ್‍‍ನೊಂದಿಗೆ ಬರಲಿದೆ ಹಸ್ಕ್ ವರ್ನಾ ಬೈಕ್

ಹೊಸ 490 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ ಈಗಾಗಲೇ ಕೆಟಿಎಂನಿಂದ ಅಭಿವೃದ್ಧಿಯಾಗಿದ್ದು, ಈ ಎಂಜಿನ್ ಅನ್ನು ಹೊಸ ಡ್ಯೂಕ್, ಆರ್‍‍ಸಿ, ಅಡ್ವೆಂಚರ್, ಎಂಡ್ಯೂರೋ ಹಾಗೂ ಸೂಪರ್‌ಮೊಟೊ ಬೈಕುಗಳಲ್ಲಿ ಅಳವಡಿಸಲಾಗುವುದು. ಹೆಚ್ಚುವರಿಯಾಗಿ ಇದೇ ಎಂಜಿನ್ ಅನ್ನು ಹಸ್ಕ್ ವರ್ನಾ 501 ಸರಣಿ ಬೈಕುಗಳಲ್ಲಿ ಬಳಸಲಾಗುವುದು.

ಕೆ‍‍ಟಿ‍ಎಂ ಎಂಜಿನ್‍‍ನೊಂದಿಗೆ ಬರಲಿದೆ ಹಸ್ಕ್ ವರ್ನಾ ಬೈಕ್

ಹೊಸ 501 ಸೀರಿಸ್ ಬೈಕ್ ವಿಟ್‌ಪಿಲೆನ್, ಸ್ವಾರ್ಟ್‌ಪಿಲೆನ್, ನೇಕೆಡ್ ರೋಡ್‍‍ಸ್ಟರ್, ಸೂಪರ್‌ಮೊಟೊ, ಎಂಡ್ಯೂರೋ ಉತ್ಪನ್ನಗಳು ಹಾಗೂ ಸಾಹಸ ಟೂರರ್ / ಎಕ್ಸ್‌ಪ್ಲೋರರ್‌ನಂತಹ ಕ್ಲಾಸಿಕ್‌ಗಳನ್ನು ಒಳಗೊಂಡಿದೆ.

ಕೆ‍‍ಟಿ‍ಎಂ ಎಂಜಿನ್‍‍ನೊಂದಿಗೆ ಬರಲಿದೆ ಹಸ್ಕ್ ವರ್ನಾ ಬೈಕ್

ಕೆಟಿಎಂನ ಹೊಸ 490 ಸಿಸಿ ಎಂಜಿನ್ ಅನ್ನು ಭಾರತದ ಬಜಾಜ್ ಆಟೋ ತಯಾರಿಸಲಿದೆ. ಈ ಹೊಸ ಎಂಜಿನ್ ಲಿಕ್ವಿಡ್ ಕೂಲ್ಡ್, 8 ವಾಲ್ವ್, ಡಿಒಹೆಚ್‌ಸಿ ಸೆಟಪ್ ಅನ್ನು ಹೊಂದಿರುತ್ತದೆ. ಕೆಟಿಎಂ 390 ಸೀರಿಸ್ ಬೈಕಿನಲ್ಲಿರುವ ಸಿಂಗಲ್-ಸಿಲಿಂಡರ್, ಡಿಒಹೆಚ್‌ಸಿ, 4-ವಾಲ್ವ್, ಲಿಕ್ವಿಡ್-ಕೂಲ್ಡ್ ಎಂಜಿನ್ 42 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತಿತ್ತು.

ಕೆ‍‍ಟಿ‍ಎಂ ಎಂಜಿನ್‍‍ನೊಂದಿಗೆ ಬರಲಿದೆ ಹಸ್ಕ್ ವರ್ನಾ ಬೈಕ್

ಹೊಸ 490 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ 54-59 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುವ ನಿರೀಕ್ಷೆಗಳಿವೆ. ಈ ಪ್ಯಾರಾಲೆಲ್ ಎಂಜಿನ್‍‍ನಲ್ಲಿ 6-ಸ್ಪೀಡ್ ಟ್ರಾನ್ಸ್ ಮಿಷನ್ ಜೋಡಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಸ್ಲಿಪ್ಪರ್ ಜೊತೆಗೆ ಹಾಗೂ ಅಸಿಸ್ಟ್ ಕ್ಲಚ್‍‍ಗಳಿದ್ದು ರೈಡ್-ಬೈ-ಥ್ರೊಟಲ್‍‍ಗೆ ನೆರವಾಗಲಿವೆ.

ಕೆ‍‍ಟಿ‍ಎಂ ಎಂಜಿನ್‍‍ನೊಂದಿಗೆ ಬರಲಿದೆ ಹಸ್ಕ್ ವರ್ನಾ ಬೈಕ್

ವಿನ್ಯಾಸದ ಬಗ್ಗೆ ಹೇಳುವುದಾದರೆ, 501 ಸೀರಿಸ್‍‍ನ ರೆಟ್ರೊ-ಶೈಲಿಯ ಬೈಕ್‌ಗಳಿಗಾಗಿ ವಿಟ್‌ಪಿಲೆನ್ ಹಾಗೂ ಸ್ವಾರ್ಟ್‌ಪಿಲೆನ್ ಬೈಕುಗಳಿಂದ ಹೆಚ್ಚಿನ ಪ್ರಮಾಣದ ಸ್ಫೂರ್ತಿ ಪಡೆಯಲಾಗುವುದು. ಸ್ಕ್ರ್ಯಾಂಬ್ಲರ್ ಹಾಗೂ ಕೆಫೆ ರೇಸರ್ ಬೈಕುಗಳಲ್ಲಿರುವ ವಿನ್ಯಾಸವನ್ನು ಮುಂಬರುವ ಉತ್ಪನ್ನಗಳಲ್ಲಿ ಅಳವಡಿಸುವ ನಿರೀಕ್ಷೆಯಿದೆ. ಸದ್ಯಕ್ಕೆ ಹಸ್ಕ್ ವರ್ನಾ ಸರಣಿಯಲ್ಲಿ ಯಾವುದೇ ನೇಕೆಡ್ ರೋಡ್‍ಸ್ಟರ್ ಬೈಕುಗಳಿಲ್ಲ.

ಕೆ‍‍ಟಿ‍ಎಂ ಎಂಜಿನ್‍‍ನೊಂದಿಗೆ ಬರಲಿದೆ ಹಸ್ಕ್ ವರ್ನಾ ಬೈಕ್

ಆದ್ದರಿಂದ 501 ಮಾದರಿಯ ಸ್ಟೈಲಿಂಗ್ ಸೂಚನೆಗಳ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಇದರ ಜೊತೆಗೆ, ಹಸ್ಕ್ ವರ್ನಾ ಎಂಡ್ಯೂರೋ ಹಾಗೂ ಸೂಪರ್‌ಮೊಟೊ ಪೋರ್ಟ್ ಪೋಲಿಯೊವನ್ನು ಹೊಂದಿದ್ದು, ಮುಂಬರುವ 501 ಸರಣಿ ಬೈಕ್‌ಗಳು ಪ್ರಸ್ತುತ ಪೀಳಿಗೆಯ ವಿನ್ಯಾಸಗಳನ್ನು ಒಳಗೊಂಡಿರುತ್ತವೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಕೆ‍‍ಟಿ‍ಎಂ ಎಂಜಿನ್‍‍ನೊಂದಿಗೆ ಬರಲಿದೆ ಹಸ್ಕ್ ವರ್ನಾ ಬೈಕ್

701 ನೊಮಾಡ್ ಅಡ್ವೆಂಚರ್ ಬೈಕ್ 501 ಎಕ್ಸ್‌ಪ್ಲೋರರ್ ಬೈಕಿಗೆ ಆಧಾರವಾಗಬಹುದೆಂದು ಹೇಳಲಾಗಿದೆ. ಸಸ್ಪೆಂಷನ್ ಹಾಗೂ ಬ್ರೇಕಿಂಗ್‍‍ಗಳಿಗಾಗಿ, ಮುಂಭಾಗದಲ್ಲಿ ಡಬ್ಲ್ಯು‍ಪಿಯ ತಲೆಕೆಳಗಾದ ಫೋರ್ಕ್‌ಗಳು ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍‍ಗಳಿವೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಕೆ‍‍ಟಿ‍ಎಂ ಎಂಜಿನ್‍‍ನೊಂದಿಗೆ ಬರಲಿದೆ ಹಸ್ಕ್ ವರ್ನಾ ಬೈಕ್

ಎರಡೂ ತುದಿಗಳಲ್ಲಿ ಸಿಂಗಲ್ ಡಿಸ್ಕ್ ಇರಲಿದ್ದು, ಸ್ವಿಚಬಲ್ ಎ‍‍ಬಿಎಸ್ ಅನ್ನು ನಿರೀಕ್ಷಿಸಲಾಗಿದೆ. ಇದಲ್ಲದೆ, ಕೆಟಿಎಂ ಇಂಡಸ್ಟ್ರೀಸ್ 2022ರ ವೇಳೆಗೆ ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಯುನಿಟ್‍‍ಗಳನ್ನು ಉತ್ಪಾದಿಸಲು ಯೋಜಿಸುತ್ತಿದೆ.

MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಕೆ‍‍ಟಿ‍ಎಂ ಎಂಜಿನ್‍‍ನೊಂದಿಗೆ ಬರಲಿದೆ ಹಸ್ಕ್ ವರ್ನಾ ಬೈಕ್

ಇದು ಕಂಪನಿಯು ಸದ್ಯಕ್ಕೆ ಉತ್ಪಾದಿಸುವ ಯುನಿಟ್‍‍ಗಳಿಗಿಂತ ಎರಡರಷ್ಟು ಹೆಚ್ಚಾಗಿದೆ. ಈ ಹೆಚ್ಚಳದಿಂದಾಗಿ ಆಸ್ಟ್ರಿಯ ಮೂಲದ ಕಂಪನಿಗೆ 2017ರಿಂದ 2022ರ ನಡುವೆ ಅಂದಾಜು 17.1% ವಾರ್ಷಿಕ ಬೆಳವಣಿಗೆಯ ದರವನ್ನು ನೀಡುತ್ತದೆ.

ಕೆ‍‍ಟಿ‍ಎಂ ಎಂಜಿನ್‍‍ನೊಂದಿಗೆ ಬರಲಿದೆ ಹಸ್ಕ್ ವರ್ನಾ ಬೈಕ್

ಉದ್ದೇಶಿತ ಎರಡು ಲಕ್ಷ ಯುನಿ‍‍ಟ್‍ಗಳ ಉತ್ಪಾದನೆಯು ಕೆಟಿಎಂ ಹಾಗೂ ಹಸ್ಕ್ ವರ್ನಾ ಮಾದರಿಗಳನ್ನು ಒಳಗೊಂಡಿರಲಿದೆ. ಸದ್ಯಕ್ಕೆ ಭಾರತದಲ್ಲಿ ಕೆಟಿಎಂ ಬೈಕುಗಳನ್ನು ಮಾತ್ರ ಉತ್ಪಾದಿಸಲಾಗುತ್ತಿದೆ. ಡಿಸೆಂಬರ್ ತಿಂಗಳಿನಿಂದ ಹಸ್ಕ್ ವರ್ನಾ ಬೈಕುಗಳನ್ನು ಭಾರತದಲ್ಲಿಯೂ ಉತ್ಪಾದಿಸಲಾಗುವುದು.

Most Read Articles

Kannada
English summary
Husqvarna 501 to use ktm 490 engine - Read in Kannada
Story first published: Monday, November 4, 2019, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X