ಸ್ವಾರ್ಟ್‍‍ಪಿಲೆನ್ 200 ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಸ್ಕ್​ವರ್ನಾ

ಹಸ್ಕ್​ವರ್ನಾ ಈ ತಿಂಗಳ ಆರಂಭದಲ್ಲಿ ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳನ್ನು ಅನಾವರಣಗೊಳಿಸಿತ್ತು. ಇವುಗಳ ಜೊತೆಗೆ ತನ್ನ ಮೂರನೇ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ.

ಸ್ವಾರ್ಟ್‍‍ಪಿಲೆನ್ 200 ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಸ್ಕ್​ವರ್ನಾ

ಸ್ವಾರ್ಟ್‍‍ಪಿಲೆನ್ 200 ಬೈಕ್ ಅನ್ನು ಭಾರತದಲ್ಲಿ 2020ರ ಜುಲೈ ಹಾಗೂ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ. ಹಸ್ಕ್​ವರ್ನಾ ಕಂಪನಿಯ ಜಾಗತಿಕ ವೆಬ್‍‍ಸೈಟಿನಲ್ಲಿರುವಂತೆ ಸ್ವಾರ್ಟ್‍‍ಪಿಲೆನ್ 200 ಬೈಕ್ ಕೆಟಿ‍ಎಂ ಡ್ಯೂಕ್ 200 ಬೈಕಿನಲ್ಲಿರುವಂತಹ ಎಂಜಿನ್ ಹೊಂದಿರಲಿದೆ.

ಸ್ವಾರ್ಟ್‍‍ಪಿಲೆನ್ 200 ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಸ್ಕ್​ವರ್ನಾ

200 ಸಿಸಿಯ ಈ ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್, ಲಿಕ್ವಿಡ್ ಕೂಲ್‍ ಆಗಿರಲಿದೆ. ಈ ಎಂಜಿನ್ 26 ಬಿ‍‍ಹೆಚ್‍‍ಪಿ ಪವರ್ ಹಾಗೂ 19.2 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಸ್ವಾರ್ಟ್‍‍ಪಿಲೆನ್ 200 ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಸ್ಕ್​ವರ್ನಾ

ಸ್ವಾರ್ಟ್‍‍ಪಿಲೆನ್ 200 ಬೈಕಿನಲ್ಲಿ ಕೆಟಿ‍ಎಂ ಡ್ಯೂಕ್ 200 ಬೈಕಿನಲ್ಲಿರುವಂತಹ ಮುಂಭಾಗದ ಹಾಗೂ ಹಿಂಭಾಗದ ಸಸ್ಪೆಂಷನ್ ಹಾಗೂ ಬ್ರೇಕ್‍‍ಗಳಿರಲಿವೆ. ಸ್ವಾರ್ಟ್‍‍ಪಿಲೆನ್ 200 ಬೈಕ್ ಕೆಟಿ‍ಎಂ ಡ್ಯೂಕ್ 250 ಬೈಕಿನಲ್ಲಿರುವಂತಹ ಚಾಸೀಸ್ ಹೊಂದಿರಲಿದೆ.

ಸ್ವಾರ್ಟ್‍‍ಪಿಲೆನ್ 200 ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಸ್ಕ್​ವರ್ನಾ

ಇದರ ಜೊತೆಗೆ ಸ್ವಾರ್ಟ್‍‍ಪಿಲೆನ್ 200 ಬೈಕ್ ಸ್ವಾರ್ಟ್‍‍ಪಿಲೆನ್ 250 ಬೈಕಿನಲ್ಲಿರುವಂತಹ ಅಲಾಯ್ ವ್ಹೀಲ್, ಬಾಡಿ ಪ್ಯಾನೆಲ್, ಎಲ್‍ಇ‍‍ಡಿ ಲೈಟಿಂಗ್ ಹಾಗೂ ಸೈಡ್ ಮೌಂಟ್ ಎಕ್ಸಾಸ್ಟ್ ಗಳನ್ನು ಹೊಂದಿರಲಿದೆ. ಹೊಸ ಸ್ವಾರ್ಟ್‍‍ಪಿಲೆನ್ 200 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.85 ಲಕ್ಷಗಳಾಗಿರಲಿದೆ.

ಸ್ವಾರ್ಟ್‍‍ಪಿಲೆನ್ 200 ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಸ್ಕ್​ವರ್ನಾ

ಹಸ್ಕ್​ವರ್ನಾ ಇತ್ತೀಚಿಗೆ ಪ್ರದರ್ಶಿಸಿದ ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳು ಕೆಟಿ‍ಎಂ ಡ್ಯೂಕ್ 250 ಬೈಕಿನಲ್ಲಿರುವಂತಹ ಎಂಜಿನ್ ಅನ್ನು ಹೊಂದಿವೆ. ಈ ಎಂಜಿನ್ 29.6 ಬಿ‍‍ಹೆಚ್‍‍ಪಿ ಪವರ್ ಹಾಗೂ 24 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ವಾರ್ಟ್‍‍ಪಿಲೆನ್ 200 ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಸ್ಕ್​ವರ್ನಾ

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಸ್ವಾರ್ಟ್‍‍ಪಿಲೆನ್ 250 ಸ್ಕ್ರಾಂಬ್ಲರ್ ಮಾದರಿಯ ಬೈಕ್ ಆಗಿದ್ದು, ದೊಡ್ಡ ಗಾತ್ರದ ಟ್ಯಾಂಕ್, 8 ಸ್ಪೋಕ್‍‍ನ ಅಲಾಯ್ ವ್ಹೀಲ್, ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಹೊಂದಿರಲಿದೆ.

ಸ್ವಾರ್ಟ್‍‍ಪಿಲೆನ್ 200 ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಸ್ಕ್​ವರ್ನಾ

ವಿಟ್‍‍ಪಿಲೆನ್ 250 ಬೈಕ್ ಕೆಫೆ ರೇಸರ್ ಮಾದರಿಯ ಬೈಕ್ ಆಗಿದ್ದು, ಸ್ವಾರ್ಟ್‍‍ಪಿಲೆನ್ ಬೈಕ್ ಹೊಂದಿರುವಂತಹ ಬಾಡಿಯನ್ನು ಹೊಂದಿದೆ. ಹಸ್ಕ್​ವರ್ನಾ ಕಂಪನಿಯು ಹಲವಾರು ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸುವ ವದಂತಿಗಳಿವೆ.

ಸ್ವಾರ್ಟ್‍‍ಪಿಲೆನ್ 200 ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಸ್ಕ್​ವರ್ನಾ

ಇವುಗಳಲ್ಲಿ ಕೆಟಿ‍ಎಂ 390 ಬೈಕಿನಲ್ಲಿರುವ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವಂತಹ ಸ್ವಾರ್ಟ್‍‍ಪಿಲೆನ್ 401 ಹಾಗೂ ವಿಟ್‍‍ಪಿಲೆನ್ 401 ಬೈಕ್‍‍ಗಳು ಸೇರಿವೆ. ಇದರ ಜೊತೆಗೆ ಕೆಟಿಎಂ ಅಡ್ವೆಂಚರ್ 390 ಬೈಕ್ ಅನ್ನು ಹೋಲುವ ನಾರ್ಡನ್ 401 ಬೈಕ್ ಬಿಡುಗಡೆಗೊಳಿಸಬಹುದೆಂಬ ವದಂತಿಗಳಿವೆ.

ಸ್ವಾರ್ಟ್‍‍ಪಿಲೆನ್ 200 ಬೈಕ್ ಬಿಡುಗಡೆಯನ್ನು ಖಚಿತಪಡಿಸಿದ ಹಸ್ಕ್​ವರ್ನಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸುವ ಯಾವುದೇ ಕಂಪನಿಯಾಗಲಿ ಮಾಸ್ ಸೆಗ್‍‍ಮೆಂಟ್ ಅನ್ನು ಗುರಿಯಾಗಿಸಿಕೊಂಡು ವಾಹನಗಳನ್ನು ಬಿಡುಗಡೆಗೊಳಿಸುತ್ತವೆ. ಇದನ್ನೇ ಹಸ್ಕ್​ವರ್ನಾ ಕಂಪನಿಯೂ ಸಹ ಮಾಡುತ್ತಿದೆ. ಬಿಡುಗಡೆಯಾದ ನಂತರ ಹಸ್ಕ್ ವರ್ನಾ ಕಂಪನಿಯ ಎಲ್ಲಾ ವಾಹನಗಳು ಜನಪ್ರಿಯವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Husqvarna Svartpilen 200 India Launch Confirmed For Third Quarter Next Year: Details & Expected Price. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X