ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿವೆ ಹಸ್ಕ್ ವರ್ನಾ ಬೈಕುಗಳು

ಡಿಸೆಂಬರ್ ಮೊದಲ ವಾರದಲ್ಲಿ ಹಸ್ಕ್ ವರ್ನಾ ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದನ್ನು ಬಜಾಜ್ ಆಟೋ ಖಚಿತಪಡಿಸಿದೆ. ಸ್ವಾರ್ಟ್‌ಪಿಲೆನ್ 401 ಹಾಗೂ ವಿಟ್‌ಪಿಲೆನ್ 401 ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿಯು ಖಚಿತಪಡಿಸಿದೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿವೆ ಹಸ್ಕ್ ವರ್ನಾ ಬೈಕುಗಳು

ಈ ಬೈಕುಗಳನ್ನು ಕೆಟಿಎಂ ಡೀಲರ್‍‍ಗಳ ಮೂಲಕ ಮಾರಾಟ ಮಾಡಲಾಗುವುದು. ಬಜಾಜ್ ಆಟೋ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಕೇಶ್ ಶರ್ಮಾರವರು ಮಾತನಾಡಿ, ಬಿಎಸ್ 4 ರಿಂದ ಬಿಎಸ್ 6 ಗೆ ಬದಲಿಸುವ ಅವಧಿ ಮುಗಿದ ಕೂಡಲೇ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಾಗುವುದು.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿವೆ ಹಸ್ಕ್ ವರ್ನಾ ಬೈಕುಗಳು

ಹಸ್ಕ್ ವರ್ನಾ ಬೈಕ್‌ಗಳನ್ನು ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು. ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿರುವ ಈ ಬೈಕ್‍‍ಗಳು ಜನವರಿ ಅಥವಾ ಫೆಬ್ರವರಿಯಿಂದ ಮಾರಾಟಕ್ಕೆ ಲಭ್ಯವಿರುತ್ತವೆ ಎಂದು ಹೇಳಿದರು. ವಿಟ್‌ಪಿಲೆನ್ 401 ಬೈಕ್ ಕೆಫೆ ರೇಸರ್ ಶೈಲಿಯ ಬೈಕ್ ಆಗಿದ್ದರೆ, ಸ್ವಾರ್ಟ್‌ಪಿಲೆನ್ ಸ್ಕ್ರ್ಯಾಂಬ್ಲರ್ ಶೈಲಿಯ ಬೈಕ್ ಆಗಿದೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿವೆ ಹಸ್ಕ್ ವರ್ನಾ ಬೈಕುಗಳು

ಈ ಎರಡೂ ಬೈಕ್‍‍ಗಳು 373 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿವೆ. ಈ ಎಂಜಿನ್ 43 ಬಿಹೆಚ್‌ಪಿ ಪವರ್ ಹಾಗೂ 37 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿವೆ ಹಸ್ಕ್ ವರ್ನಾ ಬೈಕುಗಳು

ಹಸ್ಕ್ ವರ್ನಾ ಈ ಎರಡೂ ಬೈಕ್‍‍ಗಳ ಆಟೋಮ್ಯಾಟಿಕ್ ಕ್ಲಚ್ ಮಾದರಿಯನ್ನು ಬಿಡುಗಡೆಗೊಳಿಸಲು ಯೋಜಿಸಿತ್ತು. ಆದರೆ ಈ ಬೈಕ್‍‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಸ್ವಾರ್ಟ್‌ಪಿಲೆನ್ ಹಾಗೂ ವಿಟ್‌ಪಿಲೆನ್‌ ಬೈಕ್‍‍ಗಳನ್ನು ಗಮನಿಸಿದರೆ, ಭಾರತದಲ್ಲಿ ಮ್ಯಾನುವಲ್ 6 ಸ್ಪೀಡಿನ ಶಿಫ್ಟರ್‍‍ಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿವೆ ಹಸ್ಕ್ ವರ್ನಾ ಬೈಕುಗಳು

ಸ್ವಾರ್ಟ್‍‍ಪಿಲೆನ್ ಬೈಕ್ ಅನ್ನು ಪೂರ್ಣಪ್ರಮಾಣದಲ್ಲಿ ಮರೆಮಾಡಿ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಸ್ಪಾಟ್ ಟೆಸ್ಟ್ ಮಾಡಿದ್ದ ಬೈಕಿನಲ್ಲಿ ಕೆಟಿ‍ಎಂನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿತ್ತು. ಕೆಟಿ‍ಎಂನ ವಿಶ್ವ ಮಾದರಿಯ ಬೈಕುಗಳಲ್ಲಿ ಮಲ್ಟಿ ಸ್ಪೋಕ್ ಅಲಾಯ್‍‍ಗಳನ್ನು ಅಳವಡಿಸಲಾಗಿರುತ್ತದೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿವೆ ಹಸ್ಕ್ ವರ್ನಾ ಬೈಕುಗಳು

ಭಾರತಕ್ಕಾಗಿಯೇ ತಯಾರಿಸಲಾಗಿರುವ ಈ ಎರಡೂ ಬೈಕುಗಳಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿರುವ ಸಾಧ್ಯತೆಗಳಿವೆ. ಇವುಗಳಲ್ಲಿ ಉದ್ದವಾದ ಪಿಲಿಯನ್ ಸೀಟ್, ಗ್ರಾಬ್ ಹ್ಯಾಂಡಲ್ಸ್ ಹಾಗೂ ಸ್ಯಾರಿ ಗಾರ್ಡ್‍‍ಗಳು ಸೇರಿವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿವೆ ಹಸ್ಕ್ ವರ್ನಾ ಬೈಕುಗಳು

ಕೆಟಿಎಂ ಡ್ಯೂಕ್ 390 ಎಂಜಿನ್ ಬಳಸಿ ಹಸ್ಕ್ ವರ್ನಾ ಬೈಕ್‍‍ಗಳನ್ನು ಅಭಿವೃದ್ದಿಪಡಿಸಲಾಗಿದ್ದರೂ, ಅವು ಹೆಚ್ಚು ಹಗುರವಾಗಿ ಕಾಣುತ್ತವೆ. ಇದು ತೂಕದ ರೇಷಿಯೊಗೆ ಸರಿಯಾದ ಪವರ್ ಅನ್ನು ನೀಡುತ್ತದೆ. ಇದರಿಂದಾಗಿ ಉತ್ತಮವಾದ ಪರ್ಫಾಮೆನ್ಸ್ ನೀಡುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿವೆ ಹಸ್ಕ್ ವರ್ನಾ ಬೈಕುಗಳು

ಈ ಎರಡೂ ಬೈಕ್‍‍ಗಳು ಡ್ಯೂಕ್ 390ಗಿಂತ ಹೆಚ್ಚು ಬೆಲೆಯನ್ನು ಹೊಂದಿರುವ ಸಾಧ್ಯತೆಗಳಿವೆ. ಡ್ಯೂಕ್ 390 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.48 ಲಕ್ಷಗಳಾಗಿದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿವೆ ಹಸ್ಕ್ ವರ್ನಾ ಬೈಕುಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕೊನೆಗೂ ಹಸ್ಕ್ ವರ್ನಾ ಸ್ವಾರ್ಟ್‍‍ಪಿಲೆನ್ ಹಾಗೂ ವಿಟ್‍‍ಪಿಲೆನ್ ಬೈಕುಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಕೆ‍‍ಟಿಎಂ ಹಾಗೂ ಹಸ್ಕ್ ವರ್ನಾ ಕಂಪನಿಗಳು ಈ ಬೈಕ್‍‍ಗಳನ್ನು ಬಿಡುಗಡೆಗೊಳಿಸಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿವೆ.

ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿವೆ ಹಸ್ಕ್ ವರ್ನಾ ಬೈಕುಗಳು

ಈ ಹಿಂದೆ ಕೆಟಿ‍ಎಂ ಕಂಪನಿಯು ಸಹ ಅಡ್ವೆಂಚರ್ 390 ಬೈಕ್ ಅನ್ನು ಬಿಡುಗಡೆಗೊಳಿಸುವ ಮುನ್ನ ಹೆಚ್ಚು ಪ್ರಚಾರ ನೀಡಲಾಗಿತ್ತು. ಈಗ ಹಸ್ಕ್ ವರ್ನಾ ಸಹ ಇದೇ ಹಾದಿಯಲ್ಲಿದೆ. ಈ ಎರಡೂ ಬೈಕುಗಳು ಹೆಚ್ಚಿನ ಪರ್ಫಾಮೆನ್ಸ್ ನೀಡುವ ಸಾಧ್ಯತೆಗಳಿವೆ.

Most Read Articles

Kannada
English summary
Bajaj Set To Launch Husqvarna Svartpilen & Vitpilen Motorcycles In December - Read in Kannada
Story first published: Wednesday, November 27, 2019, 13:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X