ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಹೀರೋ ಎಕ್ಸ್‌ಪಲ್ಸ್ 200

ಹೀರೋ ಎಕ್ಸ್‌ಪಲ್ಸ್ 200 ಬೈಕ್ ವರ್ಷದ ಪ್ರತಿಷ್ಠಿತ 2020ರ ಇಂಡಿಯನ್ ಬೈಕ್ ಆಫ ದಿ ಇಯರ್ ಅವಾರ್ಡ್ ಅನ್ನು ಗೆದ್ದು ಕೊಂಡಿದೆ. ಹೀರೋ ಎಕ್ಸ್‌ಪಲ್ಸ್ 200 ಬೈಕ್ ಅನ್ನು ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಹೀರೋ ಎಕ್ಸ್‌ಪಲ್ಸ್ 200

ಅಡ್ವೆಂಚರ್ ಬೈಕ್ ಸೆಗ್‍‍ಮೆಂಟಿನಲ್ಲಿ ಬೆನಲ್ಲಿ ಇಂಪೀರಿಯಲ್ 400, ಹೀರೋ ಎಕ್ಸ್ ಟ್ರೀಮ್ 200 ಎಸ್ ಮತ್ತು ಎಕ್ಸ್ ಪಲ್ಸ್ 200, ಹೋಂಡಾ ಸಿಬಿ 300 ಆರ್, ಜಾವಾ, ಕೆ‍ಟಿಎಂ 125 ಡ್ಯೂಕ್, ಸುಜುಕಿ ಜಿಕ್ಸರ್ 250 ಮತ್ತು ಯಮಹಾ ಎಂಟಿ ಬೈಕ್‍ಗಳು ಚಾಂಪಿಯನ್ ಆಗಿವೆ.

ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಹೀರೋ ಎಕ್ಸ್‌ಪಲ್ಸ್ 200

ಐ‍ಎಂಒಟಿ‍ವೈ 2020ರ ಪ್ರಶಸ್ತಿಯನ್ನು ಜೆಕೆ ಟಯರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್‍‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ರಘುಪತಿ ಸಿಂಘಾನಿಯಾ ಅವರು ವಿತರಿಸಿದರು. ಐಎಂಒ‍ಟಿ‍ವೈಆರ್ ತೀರ್ಪುಗಾರರು ಡಿಜಿ‍ಟಲ್ ಮತ್ತು ಮುದ್ರಣ ಮಾಧ್ಯಮದ ಪತ್ರಕರ್ತರನ್ನು ಒಳಗೊಂಡಿದೆ.

ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಹೀರೋ ಎಕ್ಸ್‌ಪಲ್ಸ್ 200

ಈ ವರ್ಷದ ತೀರ್ಪುಗಾರರಲ್ಲಿ ಆಟೋ ಟುಡೇನ ರಾಹುಲ್ ಘೋಷ್ ದತ್ತಾ ಮತ್ತು ಆಟೆಎಕ್ಸ್ ವಿನ ಜೇರೆಡ್ ಸೊಲೊಮನ್ ಮತ್ತು ಅರೂಪ್ ದಾಸ್ ಸೇರಿದ್ದಾರೆ. ಹೀರೋ ಕಂಪನಿಯು ದೇಶದಲ್ಲಿ ಮೊದಲ ಬಾರಿಗೆ ಪೂರ್ಣಪ್ರಮಾಣದ ಅಡ್ವೆಂಚರ್ ಬೈಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು.

ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಹೀರೋ ಎಕ್ಸ್‌ಪಲ್ಸ್ 200

ಈ ಹಿಂದಿನ ಇಮ್‌ಪಲ್ಸ್ 150 ಬೈಕ್ ಮಾದರಿಯ ಪ್ರೇರಣೆಯೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲು ಹೀರೋ ಮೋಟೊಕಾರ್ಪ್ ಎಕ್ಸ್‌ಪಲ್ಸ್ 200 ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಹೀರೋ ಎಕ್ಸ್‌ಪಲ್ಸ್ 200

ಎಕ್ಸ್‌ಪಲ್ಸ್ 200 ಬೈಕ್ 199.6 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 18.3 ಬಿ‍ಹೆಚ್‍‍ಪಿ ಪವರ್ ಮತ್ತು 17.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಟ್ರಿ ಲೆವೆಲ್ ಆಫ್ ರೋಡ್ ಬೈಕ್ ಖರೀದಿದಾರರನ್ನು ಗುರಿಯಾಗಿಸಿಕೊಂಡು ಹೀರೋ ಮೋಟೊಕಾರ್ಪ್ ಈ ವರ್ಷದ ಮೇ ತಿಂಗಳಲ್ಲಿ ಎಕ್ಸ್‌ಪಲ್ಸ್ 200 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.

ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಹೀರೋ ಎಕ್ಸ್‌ಪಲ್ಸ್ 200

ಇದು ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಅಡ್ವೆಂಚರ್ ಮತ್ತು ಟೂರರ್ ವಿಭಾಗದಲ್ಲಿನ ಬೇಡಿಕೆಯೆಂತೆ ಗರಿಷ್ಠ ಮಟ್ಟದ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಬೈಕ್‌ಗಳು ಡ್ಯುಯಲ್ ಪರ್ಪಸ್ ಟಯರ್, 21-ಇಂಚಿನ ಫ್ರಂಟ್ ವೀಲ್ಹ್, 18-ಇಂಚಿನ ರೇರ್ ವ್ಹೀಲ್, ಫುಲ್ ಎಲ್‌ಇಡಿ ರೌಂಡ್ ಹೆಡ್‌ಲ್ಯಾಂಪ್, ಸಿಂಗಲ್ ಪೀಸ್ ಸೀಟ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಗೇರ್ ಇಂಡಿಕೇಟರ್ ಅನ್ನು ಅಳವಡಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಹೀರೋ ಎಕ್ಸ್‌ಪಲ್ಸ್ 200

ಬೈಕಿನಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಕಾಲ್ ಅಲರ್ಟ್, ಬ್ಲೂಟೂಥ್ ಕನೆಕ್ಟಿವಿಟಿ ಸೌಲಭ್ಯವಿದ್ದು, ಬೈಕ್ ಸವಾರರ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್, ಕನ್ವೆಷನಲ್ ಎಕ್ಸಾಸ್ಟ್, ಸಣ್ಣದಾದ ವೀಂಡ್ ಸ್ಕೀನ್, ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಮತ್ತು ಲಾಂಗ್ ಟ್ರಾವೆಲ್ ಸಸ್ಪೆಂಷನ್ ಅಳವಡಿಸಲಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಹೀರೋ ಎಕ್ಸ್‌ಪಲ್ಸ್ 200

ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಪ್ರತಿಷ್ಠಿತ ಅವಾರ್ಡ್ ಮುಡಿಗೇರಿಸಿಕೊಳ್ಳುವ ಮೂಲಕ ದೊಡ್ಡ ಸಾಧನೆಯನ್ನು ಮಾಡಿದೆ. ಹೀರೋ ಮೋಟಾಕಾರ್ಪ್‍ನ ಅಡ್ವೆಂಚರ್ ಬೈಕು‍ಗಳ ಆವೃತ್ತಿಯಲ್ಲಿ ಪ್ರಮುಖ ಆವೃತ್ತಿಯಾಗಿದೆ.

Most Read Articles

Kannada
English summary
IMOTY 2020: Hero Xpulse Wins The Prestigious Indian Motorcycle Of The Year Award - Read in Kannada
Story first published: Thursday, December 19, 2019, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X