ಮಾರುಕಟ್ಟೆಗೆ ಲಗ್ಗೆಯಿಟ್ಟ ಇಂಡಿಯನ್ ಎಫ್‍ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲಿಕ

ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತಮ್ಮದೆ ಚಾಪನ್ನು ಮೂಡಿಸಿದ ಇಂಡಿಯನ್ ಮೋಟಾರ್‌ಸೈಕಲ್‌ ಸಂಸ್ಥೆಯು ತಮ್ಮ ಇಂಡಿಯನ್ ಎಫ್‌ಟಿಆರ್ 1200 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಬ್ಯೆಕ್ ಪ್ರಿಯರು ಕಾತರದಿಂದ ಕಾಯುತಿದ್ದ ಇಂಡಿಯನ್ ಎಫ್ ಬ್ಯೆಕ್ ಎರಡೂ ರೀತಿಯ ವಿಭಿನ್ನ ರೂಪಾಂತಾರಗಳ ಮೂಲಕ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಇಂಡಿಯನ್ ಎಫ್‍ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲೀಕ

ಹೊಸ ಇಂಡಿಯನ್ ಎಫ್‌ಟಿಆರ್ 1200 ಎಸ್ ಮತ್ತು ಎಫ್‌ಟಿಆರ್ 1200 ರೇಸ್ ರೆಪ್ಲಿಕ ಎಂಬ ಎರಡೂ ರೂಪಾಂತರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಭಾರತೀಯ ಎಕ್ಸ್ ಶೋರೂಂ ಪ್ರಕಾರ ಎರಡೂ ಮೋಟಾರ್‌ಸೈಕಲ್‌ಗಳಿಗೆ ಕ್ರಮವಾಗಿ ರೂ. 15.99 ಲಕ್ಷ ಮತ್ತು 17.99 ಲಕ್ಷ ಲಭ್ಯವಿದೆ. ರೇಸಿಂಗ್ ಬೈಕ್ ಪ್ರಿಯರ ಬಯಕೆಗೆ ತಕ್ಕಂತೆ ಸಿದ್ದಗೊಂಡಿರುವ ಬೈಕ್‍ ಅನ್ನು ನೀವು ನೇರವಾಗಿ ಶೋರೂಂಗಳಲ್ಲಿ ಖರೀದಿಸಬಹುದಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಇಂಡಿಯನ್ ಎಫ್‍ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲೀಕ

ಭಾರತೀಯ ಎಫ್‌ಟಿಆರ್ 1200 ರ ಎರಡೂ ರೂಪಾಂತರಗಳು ಕೂಡ ಸ್ಕ್ರ್ಯಾಂಬ್ಲರ್ ಶೈಲಿಯ ಬ್ಯೆಕ್‍ಗಳಾಗಿವೆ. ಎಫ್‌ಟಿಆರ್ 1200 ಮಾದರಿಯು ಎಫ್‌ಟಿಆರ್ 750 ಫ್ಲಾಟ್-ಟ್ರ್ಯಾಕ್ ರೇಸ್ ಬ್ರಾಂಡ್‍ನ ಬೈಕ್‌ನಿಂದ ಸ್ಫೂರ್ತಿ ಪಡೆದುಕೊಂಡಿದೆ. ಎಫ್‌ಟಿಆರ್ 1200 ಹಳೆಯ ರೇಸ್ ಬೈಕ್‌ನ ಪರಂಪರೆಯನ್ನು ಆಧುನಿಕತೆಯ ವೈಶಿಷ್ಟ್ಯಗಳು ಮತ್ತು ಉಪಕರಣಗಳೊಂದಿಗೆ ಸಂಯೋಜಿಸುತ್ತದೆ. ಬೈಕ್ ರೇಸ್ ಹಾಗೂ ವೇಗವನ್ನು ಇಷ್ಟಪಡುವವರಿಗೆ ಈ ಬೈಕ್ ಉತ್ತಮ ಆಯ್ಕೆಯಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಇಂಡಿಯನ್ ಎಫ್‍ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲೀಕ

ಬೈಕ್ ಹೊಸ ಸ್ಟೈಲ್‍ನಲ್ಲಿ

ಇಂಡಿಯನ್ ಎಫ್‍ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲಿಕ ಬೈಕ್‍ಗಳು ಹೊಸ ಲುಕ್‍ನೊಂದಿಗೆ ಆಕರ್ಷಕವಾದ ಶೈಲಿಯನ್ನು ಹೊಂದಿದೆ. ಎರಡೂ ಬೈಕ್‍ಗಳು ಬಾಡಿವರ್ಕ್, ಎಕ್ಸ್‌ಪೋಸ್ಡ್ ಫ್ರೇಮ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಯೂನಿಟ್‌ಗಳು, 4.3-ಇಂಚಿನ ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಡಿಸ್ಪ್ಲೇ ಮತ್ತು ಅಪ್‌ಸ್ವೀಪ್ಡ್ ಸೈಡ್-ಮೌಂಟೆಡ್ ಎಕ್ಸಾಸ್ಟ್ ಸಿಸ್ಟಮ್‌ನ್ನು ಹೊಂದಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಇಂಡಿಯನ್ ಎಫ್‍ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲೀಕ

ಇಂಡಿಯನ್ ಎಫ್‌ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲಿಕ ಎರಡೂ ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ. ಇದನ್ನು ಭವಿಷ್ಯದ ಮಾದರಿಗಳಿಗೆ ಬಳಸಲಾಗುವುದು, ಇದರಲ್ಲಿ ನೇಕೆಡ್ ಸ್ಟ್ರೀಟ್ ಫೈಟರ್ ಬೈಕ್‍ಗಳು ಕೂಡಾ ಇರಲಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಇಂಡಿಯನ್ ಎಫ್‍ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲೀಕ

ಎಂಜಿನ್ ಸಾಮರ್ಥ್ಯ

ಎಂಜಿನ್ ವಿಷಯದಲ್ಲಿ, ಎಫ್‌ಟಿಆರ್ 1200 ಎಸ್ ಮತ್ತು ಎಫ್‌ಟಿಆರ್ 1200 ರೇಸ್ ರೆಪ್ಲೀಕ ಎರಡೂ ಒಂದೇ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತವೆ. ಇದರಲ್ಲಿರುವ 1,203 ಸಿಸಿ ಲಿಕ್ವಿಡ್-ಕೂಲ್ಡ್ ವಿ-ಟ್ವಿನ್ ಎಂಜಿನ್ 120 ಬಿಹೆಚ್‌ಪಿ ಮತ್ತು 112.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಇಂಡಿಯನ್ ಎಫ್‍ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲೀಕ

ಸಸ್ಪೆನ್ಷನ್ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ 43 ಎಂಎಂ ಇನ್‍ವರ್ಟೆಡ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಪಿಗ್ಗಿಬ್ಯಾಕ್ ಐಎಫ್‌ಪಿ ಸಸ್ಪೆನ್ಷನ್‍ಗಳನ್ನು ನೀಡಲಾಗಿದೆ. ರೈಡರ್‍‍ಗಳ ಸುರಕ್ಷತೆಗಾಗಿ ಎರಡೂ ಬೈಕ್‍ಗಳಲ್ಲಿ ಬ್ರೇಕಿಂಗ್ ಮುಂಭಾಗದಲ್ಲಿ ಡ್ಯುಯಲ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 265 ಎಂಎಂ ಡಿಸ್ಕ್ ಬ್ರೇಕ್‍‍ಗಳನ್ನು ನೀಡಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಇಂಡಿಯನ್ ಎಫ್‍ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲೀಕ

ಎರಡೂ ಬೈಕ್‍ಗಳು ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸಿಕ್ಸ್ ಎಕ್ಸಸ್ ಇಂಟಿರಿಯಲ್ ಮಾಪನ ಘಟಕ (ಐಎಂಯು), ಬಾಷ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಬಹು ದೂರ ಸಾಗುವಂತಹ ಶಕ್ತಿಶಾಲಿ ಸವಾರಿ ವಿಧಾನಗಳಂತಹ ಹಲವಾರು ಎಲೆಕ್ಟ್ರಾನಿಕ್ ರೈಡರ್ ಸಾಧನಗಳನ್ನು ಸಹ ಆಳವಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಇಂಡಿಯನ್ ಎಫ್‍ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲೀಕ

ಈ ಎರಡೂ ಬೈಕ್‍ಗಳು ಭಾರತೀಯ ಮಾರುಕಟ್ಟೆಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ಪರಿಚಯಿಸಲಾಗಿದ್ದು, ಈ ಬೈಕಿನ ಬೆಲೆಗಳನ್ನು ಸಹ ಈ ಮೊದಲೇ ಘೋಷಿಸಲಾಗಿತ್ತು. ಆದರೆ, ಭಾರತೀಯ ಮಾರುಕಟ್ಟೆಯಲ್ಲಿ ಎರಡೂ ಮಾದರಿಗಳ ಬಿಡುಗಡೆ ಕಾರಣಾಂತರದಿಂದ ವಿಳಂಬವಾಯಿತು. ಈ ಎರಡೂ ಬೈಕ್‍ಗಳ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದ್ದು, ಆಸಕ್ತ ಗ್ರಾಹಕರು ಈ ಬೈಕ್‍ಗಳನ್ನು ನಿಮ್ಮ ಸಮೀಪದಲ್ಲಿರುವ ಇಂಡಿಯನ್ ಮೋಟಾರ್‍‍‍ಸೈಕಲ್ಸ್ ಶೋರುಂಗೆ ಭೇಟಿ ನೀಡು ರೂ. 2 ಲಕ್ಷ ನೀಡಿ ಪ್ರೀ-ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದ್ದು, ವಿತರಣೆಯು ಶೀಘ್ರದಲ್ಲೇ ಪ್ರಾರಂಭವಾಗಲಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಇಂಡಿಯನ್ ಎಫ್‍ಟಿಆರ್ 1200 ಎಸ್ ಮತ್ತು 1200 ರೇಸ್ ರೆಪ್ಲೀಕ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇಂಡಿಯನ್ ಎಫ್‌ಟಿಆರ್ 1200 ಎಸ್ & 1200 ರೇಸ್ ರೆಪ್ಲೀಕ ಎಫ್‌ಟಿಆರ್ 750 ಸ್ಕೌಟ್ ಫ್ಲಾಟ್-ಟ್ರ್ಯಾಕ್ ರೇಸ್ ಬೈಕ್‌ನಿಂದ ಸ್ಫೂರ್ತಿ ಪಡೆದಿದೆ. ಎರಡೂ ಮೋಟಾರ್‌ಸೈಕಲ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ನೇರ ಪ್ರತಿಸ್ಪರ್ಧಿಗಳಿಲ್ಲವಾದರೂ, ಇದು ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ನೈನ್ ಟಿ ಸ್ಕ್ರ್ಯಾಂಬ್ಲರ್ ಮತ್ತು ಟ್ರಯಂಫ್ ಸ್ಕ್ರ್ಯಾಂಬ್ಲರ್ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Indian FTR 1200 S & FTR 1200 Race Replica Launched In India: Prices Start At Rs 15.99 Lakh. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X