ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‍‍ಟಿ‍ಆರ್ 1200 ಬೈಕ್

ಹಾರ್ಲೆ ಡೇವಿಡ್ಸನ್ ಕಂಪನಿಯು ಪ್ಯಾನ್ ಅಮೇರಿಕಾ 1250 ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬೈಕ್ 2020ರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹೊಸ ವರದಿಗಳ ಪ್ರಕಾರ ಅಮೇರಿಕಾ ಮೂಲದ ಮತ್ತೊಂದು ಬೈಕ್ ತಯಾರಕ ಕಂಪನಿಯಾದ ಇಂಡಿಯನ್ ಮೋಟಾರ್‍‍ಸೈಕಲ್ಸ್ ಅಡ್ವೆಂಚರ್ ಟೂರ್ ಬೈಕ್ ಸೆಗ್‍‍ಮೆಂಟಿನಲ್ಲಿ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ.

ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‍‍ಟಿ‍ಆರ್ 1200 ಬೈಕ್

ಇಂಡಿಯನ್ ಮೋಟಾರ್‍‍ಸೈಕಲ್ಸ್ ಕಂಪನಿಯು ತನ್ನ ಹೊಸ ಎಫ್‍‍ಟಿ‍ಆರ್ 1200 ಅಡ್ವೆಂಚರ್ ಬೈಕ್ ಅನ್ನು 2020ರಲ್ಲಿ ಬಿಡುಗಡೆಗೊಳಿಸಲಿದೆ. ವರದಿಗಳ ಪ್ರಕಾರ ಬಹಿರಂಗಗೊಂಡಿರುವ ಕೆಲವು ದಾಖಲೆಗಳು ಎಫ್‍‍ಟಿ‍ಆರ್ 1200 ಅಡ್ವೆಂಚರ್ ಟೂರ್ ಬೈಕಿನ ಬಿಡುಗಡೆಯನ್ನು ಖಚಿತಪಡಿಸಿವೆ.

ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‍‍ಟಿ‍ಆರ್ 1200 ಬೈಕ್

ಈ ಬೈಕಿನಲ್ಲಿ 1203 ಸಿಸಿಯ ಲಿಕ್ವಿಡ್ ಕೂಲ್ಡ್, ಡಿ‍ಒ‍‍ಹೆಚ್‍‍ಸಿ, ವಿ ಟ್ವಿನ್ ಎಂಜಿನ್‍‍ನಲ್ಲಿ ಅಳವಡಿಸಲಾಗುವುದು. ಈ ಎಂಜಿನ್ 123 ಬಿ‍‍ಹೆಚ್‍‍ಪಿ ಪವರ್ ಹಾಗೂ 120 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಉತ್ಪಾದನಾ ಹಂತದಲ್ಲಿರುವ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೇರಿಕಾ 1250 ಬೈಕ್, 145 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‍‍ಟಿ‍ಆರ್ 1200 ಬೈಕ್

ಅಡ್ವೆಂಚರ್ ಬೈಕಿಗೆ ಹೊಂದಿಕೊಳ್ಳುವಂತೆ ಈ ಬೈಕಿನ ಚಾಸೀಸ್‍‍ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುವುದು. ಹೊಸ ಬೈಕ್ ಮಾರುಕಟ್ಟೆಯಲ್ಲಿರುವ ರೋಡ್‍‍ಸ್ಟರ್ ಹಾಗೂ ಸ್ಕ್ರಾಂಬ್ಲರ್ ಬೈಕಿಗಿಂತ ಉದ್ದವಾದ ಸಸ್ಪೆಂಷನ್ ಹೊಂದಿರಲಿದೆ.

ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‍‍ಟಿ‍ಆರ್ 1200 ಬೈಕ್

ವ್ಹೀಲ್‍‍ಗಳನ್ನು ಸಹ ಬದಲಾವಣೆ ಮಾಡಲಾಗುವುದು. ಹೊಸ ಬೈಕಿನ ಮುಂಭಾಗದಲ್ಲಿ 19 ಇಂಚಿನ ವ್ಹೀಲ್ ಅಳವಡಿಸುವ ಸಾಧ್ಯತೆಗಳಿವೆ. ಕ್ರಾಸ್ ಸ್ಪೋಕ್ ವಿನ್ಯಾಸವನ್ನು ಹೊಂದಿರುವ ಟ್ಯೂಬ್‍‍ಲೆಸ್ ಟಯರ್‍‍ಗಳನ್ನು ಸಹ ಅಳವಡಿಸುವ ನಿರೀಕ್ಷೆಗಳಿವೆ.

ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‍‍ಟಿ‍ಆರ್ 1200 ಬೈಕ್

ಸ್ಟೈಲಿಂಗ್‍‍ಗಳಿಗಾಗಿ ಎತ್ತರದ ವಿಂಡ್‌ಸ್ಕ್ರೀನ್‌ನೊಂದಿಗೆ ಸೆಮಿ ಫೇರಿಂಗ್ ವಿನ್ಯಾಸವಿರಲಿದೆ. ಇದರ ಜೊತೆಗೆ ಎತ್ತರದ ಸೆಟ್ ಹ್ಯಾಂಡಲ್‌ಬಾರ್ ಹಾಗೂ ಹೈ ಪೊಸಿಷನ್ ಎಕ್ಸಾಸ್ಟ್ ಗಳಿವೆ. ಬೇರೆ ಕಂಪನಿಗಳ ಬೈಕ್‍‍ಗಳಿಗೆ ಪೈಪೋಟಿ ನೀಡಲು ಹಲವಾರು ಫೀಚರ್‍‍ಗಳಿರಲಿವೆ.

ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‍‍ಟಿ‍ಆರ್ 1200 ಬೈಕ್

ಇಂಡಿಯನ್ ಅಡ್ವೆಂಚರ್ ಟೂರರ್ ಬೈಕಿನಲ್ಲಿ ಕಾರ್ನರಿಂಗ್ ಲೈಟ್ಸ್ ಹೊಂದಿರುವ ಎಲ್ಇಡಿ ಟೇಲ್‍‍ಲೈಟ್, ಕಲರ್ ಟಿಎಫ್‍‍ಟಿ ಡಿಸ್‍‍ಪ್ಲೇ, ಬ್ಲೂಟೂತ್ ಮೂಲಕ ಸ್ಮಾರ್ಟ್ಫೋನ್ ಕನೆಕ್ಟಿವಿಟಿ ಪೂರ್ಣ ಪ್ರಮಾಣದ ಎಲ್ಇಡಿ ಹೆಡ್‍‍ಲೈಟ್‍‍ಗಳಿರಲಿವೆ.

ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‍‍ಟಿ‍ಆರ್ 1200 ಬೈಕ್

ಇದರ ಜೊತೆಗೆ ಹಲವಾರು ಎಲೆಕ್ಟ್ರಾನಿಕ್ ಪ್ಯಾಕೇಜ್‍‍ಗಳನ್ನು ಈ ಬೈಕಿನೊಂದಿಗೆ ನೀಡುವ ಸಾಧ್ಯತೆಗಳಿವೆ. ಹೊಸ ಬೈಕಿನಲ್ಲಿ ಮಲ್ಟಿಪಲ್ ರೈಡಿಂಗ್ ಮೋಡ್, ಸ್ವಿಚೇಬಲ್ ಎ‍‍ಬಿ‍ಎಸ್, ಟ್ರಾಕ್ಷನ್ ಕಂಟ್ರೋಲ್ ಸೆಟ್ಟಿಂಗ್ ಹಾಗೂ ಲೀನ್ ಸೆನ್ಸಿಟಿವ್ ಸುರಕ್ಷತಾ ಫೀಚರ್‍‍ಗಳಿರಲಿವೆ.

ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‍‍ಟಿ‍ಆರ್ 1200 ಬೈಕ್

ಇನ್ನೂ ಅಭಿವೃದ್ದಿ ಹಂತದಲ್ಲಿರುವ ಎಫ್‍‍ಟಿ‍ಆರ್ 1200 ಅಡ್ವೆಂಚರ್ ಬೈಕ್ ಅನ್ನು ಮುಂದಿನ ವರ್ಷದ ಮಧ್ಯ ಭಾಗದ ನಂತರ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಬೈಕಿನ ಬೆಲೆಯು ಹಾರ್ಲೆ ಡೇವಿಡ್ಸನ್ ಕಂಪನಿಯ ಪ್ಯಾನ್ ಅಮೇರಿಕಾ 1250 ಬೈಕಿಗೆ ಸರಿ ಸಮನಾಗಿರಲಿದೆ.

ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಇಂಡಿಯನ್ ಎಫ್‍‍ಟಿ‍ಆರ್ 1200 ಬೈಕ್

ಬಿಡುಗಡೆಯಾದ ನಂತರ ಈ ಬೈಕ್ ಬಿ‍ಎಂ‍‍ಡಬ್ಲ್ಯು ಕಂಪನಿಯ ಆರ್ 1250 ಜಿ‍ಎಸ್, ಡುಕಾಟಿಯ ಮಲ್ಟಿಸ್ಟ್ರಾಡ 1260 ಎಂಡ್ಯುರೊ ಹಾಗೂ ಕೆಟಿ‍ಎಂ ಕಂಪನಿಯ 1290 ಸೂಪರ್ ಅಡ್ವೆಂಚರ್ ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Indian FTR 1200-based adventure tourer could be launched next year - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X