ನಿಗದಿಯಾಯ್ತು ಇಂಡಿಯನ್ ಮೋಟಾರ್‍‍ಸೈಕಲ್ ಬಿಡುಗಡೆ ದಿನಾಂಕ

ಇಂಡಿಯನ್ ಮೋಟಾರ್‍‍ಸೈಕಲ್ ಇದೇ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಎಫ್‍‍ಟಿ‍ಆರ್ 1200 ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಇಂಡಿಯನ್ ಎಫ್‍‍ಟಿ‍ಆರ್ 1200ನ ಎರಡು ಮಾದರಿಗಳನ್ನು ಈ ತಿಂಗಳ 19ರಂದು ಬಿಡುಗಡೆಗೊಳಿಸಲಾಗುವುದು.

ನಿಗದಿಯಾಯ್ತು ಇಂಡಿಯನ್ ಮೋಟಾರ್‍‍ಸೈಕಲ್ ಬಿಡುಗಡೆ ದಿನಾಂಕ

ಒಂದು ಮಾದರಿಯು ಎಫ್‍‍ಟಿ‍ಆರ್ 1200 ಎಸ್ ಆದರೆ, ಇನ್ನೊಂದು ಮಾದರಿಯು ಎಫ್‍‍ಟಿ‍ಆರ್ 1200 ರೇಸ್ ರೆಪ್ಲಿಕಾ ಆಗಿರಲಿದೆ. ಈ ಬೈಕುಗಳನ್ನು ಕಳೆದ ವರ್ಷವೇ ಅನಾವರಣಗೊಳಿಸಲಾಗಿದ್ದರೂ, ಬಿಡುಗಡೆಯು ನಿರೀಕ್ಷೆಗಿಂತ ತಡವಾಗಿದೆ. ಇಂಡಿಯನ್ ಮೋಟಾರ್‌ಸೈಕಲ್ ವಿಶ್ವದ ಅತ್ಯಂತ ಹಳೆಯ ಮೋಟಾರ್‌ಸೈಕಲ್ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಈ ಕಂಪನಿಯನ್ನು 1901ರಲ್ಲಿ ಸ್ಥಾಪಿಸಲಾಯಿತು.

ನಿಗದಿಯಾಯ್ತು ಇಂಡಿಯನ್ ಮೋಟಾರ್‍‍ಸೈಕಲ್ ಬಿಡುಗಡೆ ದಿನಾಂಕ

118 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಕಂಪನಿಯು ಮೋಟಾರ್ ಸೈಕ್ಲಿಂಗ್ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಬೈಕುಗಳ ತಯಾರಿಕೆಯಲ್ಲಿ ಒಂದು ಶತಮಾನಕ್ಕೂ ಹೆಚ್ಚಿನ ಅನುಭವವನ್ನು ಹೊಂದಿರುವ ಇಂಡಿಯನ್ ಮೋಟಾರ್‌ಸೈಕಲ್ ವಿವಿಧ ರೀತಿಯ ಕ್ರೂಸರ್‌ಗಳನ್ನು ತಯಾರಿಸುತ್ತಿದೆ.

ನಿಗದಿಯಾಯ್ತು ಇಂಡಿಯನ್ ಮೋಟಾರ್‍‍ಸೈಕಲ್ ಬಿಡುಗಡೆ ದಿನಾಂಕ

ಕಂಪನಿಯ ಬೈಕುಗಳು ಮೋಟರ್ ಸ್ಪೋರ್ಟ್ ಭಾಗವಹಿಸಿದ ನಂತರ ವಿನ್ಯಾಸ ಹಾಗೂ ನಿರ್ವಹಣೆಯಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಫ್ಲಾಟ್ ಟ್ರ್ಯಾಕ್ ರೇಸಿಂಗ್ ಅಮೆರಿಕಾದ ಜನಪ್ರಿಯವಾದ ಮೋಟಾರ್ ರೇಸ್ ಆಗಿದೆ.

ನಿಗದಿಯಾಯ್ತು ಇಂಡಿಯನ್ ಮೋಟಾರ್‍‍ಸೈಕಲ್ ಬಿಡುಗಡೆ ದಿನಾಂಕ

ಈ ರೇಸ್‍‍ನಲ್ಲಿ ಭಾಗವಹಿಸುವ ಬೈಕುಗಳು ಸಡಿಲವಾಗಿರುವ ಡರ್ಟ್ ಸರ್ಫೆಸ್‍‍ನಲ್ಲಿ ವೇಗವಾಗಿ ಚಲಿಸಬೇಕಾಗುತ್ತದೆ. ಇಂಡಿಯನ್ ಮೋಟಾರ್‌ಸೈಕಲ್ ಕಂಪನಿಯು ಹಾರ್ಲೆ ಡೇವಿಡ್ಸನ್‌ ಬೈಕುಗಳೊಂದಿಗೆ ಸ್ಪರ್ಧಿಸುವ ಸಲುವಾಗಿ ಈ ರೇಸ್‍‍ನಲ್ಲಿ ಭಾಗವಹಿಸಿತು. ಈ ರೇಸ್‍‍ಗಾಗಿಯೇ ಎಫ್‌ಟಿಆರ್ 750 ರೇಸ್ ಬೈಕ್‍‍ಗಳನ್ನು ತಯಾರಿಸಿತು. ಎಫ್‌ಟಿಆರ್ 750 ಸರಣಿಯ ಬೈಕುಗಳು ಜನಪ್ರಿಯವಾಗಲು ಹಾಗೂ ಫ್ಲಾಟ್ ಟ್ರ್ಯಾಕ್ ರೇಸಿಂಗ್‍‍ನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಗಳಿಸಲು ಹೆಚ್ಚು ಸಮಯ ಬೇಕಾಗಲಿಲ್ಲ.

ನಿಗದಿಯಾಯ್ತು ಇಂಡಿಯನ್ ಮೋಟಾರ್‍‍ಸೈಕಲ್ ಬಿಡುಗಡೆ ದಿನಾಂಕ

ಎಫ್‌ಟಿಆರ್ 1200 ಎಸ್ ಹಾಗೂ ಎಫ್‌ಟಿಆರ್ 1200 ರೇಸ್ ರೆಪ್ಲಿಕಾ ಎರಡೂ ಐ‍‍ತಿಹಾಸಿಕ ಎಫ್‌ಟಿಆರ್ 750ನಿಂದ ಪ್ರೇರಿತವಾಗಿ ನಿರ್ಮಾಣವಾಗಿವೆ. ಈ ಬೈಕುಗಳು ರಸ್ತೆ ಆಧಾರಿತ ಫ್ಲಾಟ್-ಟ್ರ್ಯಾಕ್ ರೆಪ್ಲಿಕಾಗಳಾಗಿವೆ.

ನಿಗದಿಯಾಯ್ತು ಇಂಡಿಯನ್ ಮೋಟಾರ್‍‍ಸೈಕಲ್ ಬಿಡುಗಡೆ ದಿನಾಂಕ

2018ರ ಡಿಸೆಂಬರ್‌ನಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಎಫ್‌ಟಿಆರ್ 1200 ಎಸ್ ಬೈಕಿನ ಬೆಲೆಯನ್ನು ರೂ.14.99 ಲಕ್ಷಗಳೆಂದು ಹಾಗೂ ಎಫ್‌ಟಿಆರ್ 1200 ರೇಸ್ ರೆಪ್ಲಿಕಾ ಬೆಲೆಯನ್ನು ರೂ.15.49 ಲಕ್ಷಗಳೆಂದು ಘೋಷಿಸಿತ್ತು.

ನಿಗದಿಯಾಯ್ತು ಇಂಡಿಯನ್ ಮೋಟಾರ್‍‍ಸೈಕಲ್ ಬಿಡುಗಡೆ ದಿನಾಂಕ

ಸ್ಕ್ರ್ಯಾಂಬ್ಲರ್‌ ಬೈಕುಗಳಾಗಿರುವುದರಿಂದ, ಎರಡೂ ಬೈಕುಗಳು ಇಂಡಿಯನ್ ಮೋಟಾರ್‌ಸೈಕಲ್ ಸರಣಿಯಲ್ಲಿರುವ ಕ್ರೂಸರ್‌ಗಳ ನಡುವೆ ಎದ್ದು ಕಾಣುತ್ತವೆ. ಎಫ್‌ಟಿಆರ್ 1200 ಎಸ್ ಹಾಗೂ ಎಫ್‌ಟಿಆರ್ 1200 ರೇಸ್ ರೆಪ್ಲಿಕಾ ಬೈಕುಗಳು ಒಂದೇ ರೀತಿಯ ಲಿಕ್ವಿಡ್-ಕೂಲ್ಡ್, 1,203 ಸಿಸಿ, ವಿ-ಟ್ವಿನ್ ಎಂಜಿನ್ ಹೊಂದಿವೆ.

ನಿಗದಿಯಾಯ್ತು ಇಂಡಿಯನ್ ಮೋಟಾರ್‍‍ಸೈಕಲ್ ಬಿಡುಗಡೆ ದಿನಾಂಕ

ಈ ಎಂಜಿನ್ ಗರಿಷ್ಠ ಪ್ರಮಾಣದ 120 ಬಿಹೆಚ್‌ಪಿ ಪವರ್ ಹಾಗೂ 112.3 ಎನ್‍ಎಂ ಟಾರ್ಕ್ ಉತ್ಪಾದಿಸುತ್ತವೆ. ಈ ಎಂಜಿನ್‍‍ನಲ್ಲಿರುವ 6 ಸ್ಪೀಡ್‍‍ನ ಗೇರ್ ಬಾಕ್ಸ್ ಹಿಂದಿನ ಚಕ್ರವನ್ನು ಚಲಾಯಿಸುತ್ತದೆ. ಈ ಬೈಕುಗಳು ಬಾಷ್ ಸ್ಟಾಬಿಲಿಟಿ ಕಂಟ್ರೋಲ್ ಹಾಗೂ ಸಿಕ್ಸ್ ಆಕ್ಸಿಸ್ ಇನ್‍‍ಹರ್ಶಿಯಲ್ ಮೆಷರ್‍‍ಮೆಂಟ್ ಯೂನಿಟ್, ಸ್ವಿಚೆಬಲ್ ರೈಡಿಂಗ್ ಮೋಡ್‌, 4.3-ಇಂಚಿನ ಟಚ್‌ಸ್ಕ್ರೀನ್ ಡಿಸ್‍‍ಪ್ಲೇಗಳನ್ನು ಹೊಂದಿವೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.

ನಿಗದಿಯಾಯ್ತು ಇಂಡಿಯನ್ ಮೋಟಾರ್‍‍ಸೈಕಲ್ ಬಿಡುಗಡೆ ದಿನಾಂಕ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇಂಡಿಯನ್ ಮೋಟಾರ್‍‍ಸೈಕಲ್‍‍ನ ಎಫ್‌ಟಿಆರ್ 1200 ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಾದ ಮೊದಲ ಬೈಕ್ ಆಗಿದೆ. ಈ ಪ್ಲಾಟ್‍‍ಫಾರಂನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಬೈಕ್‌ಗಳು ತಯಾರಿಕ ಹಂತದಲ್ಲಿವೆ. ಸ್ಟ್ರೀಟ್ ಫೈಟರ್ ಹಾಗೂ ಅಡ್ವೆಂಚರ್ ಟೂರರ್ ಬೈಕುಗಳ ಬಿಡುಗಡೆಯನ್ನು ಎದುರು ನೋಡಲಾಗುತ್ತಿದೆ. ಎಫ್‌ಟಿಆರ್ 1200 ಬಿಡುಗಡೆಯಾಗಲಿರುವ ಆಗಸ್ಟ್ 19ರಂದು ಇನ್ನಷ್ಟು ವಿವರಗಳು ಬಹಿರಂಗವಾಗಲಿವೆ.

Most Read Articles

Kannada
English summary
Indian Motorcycle FTR 1200S & FTR 1200 Race Replica Launch Date & Details Revealed - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X