ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಜಾವಾ ಮೋಟಾರ್‍‍ಸೈಕಲ್ ದೇಶಿಯ ಮಾರುಕಟ್ಟೆಯಲ್ಲಿ ಹಲವು ದಿನಗಳಿಂದ ತನ್ನ ಬೈಕುಗಳನ್ನು ಮಾರಾಟ ಮಾಡುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍‍ಫೀಲ್ಡ್ ಬೈಕುಗಳಿಗೆ ಪೈಪೋಟಿ ನೀಡುವ ಜೆಕ್ ಮೂಲದ ಈ ಕಂಪನಿಯು ಮಹೀಂದ್ರಾ ಕಂಪನಿಯಡಿಯಲ್ಲಿ ಬೈಕುಗಳನ್ನು ಮಾರಾಟ ಮಾಡುತ್ತದೆ.

ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಜಾವಾ ಮೋಟಾರ್‍‍ಸೈಕಲ್ ಕಂಪನಿಯ ಪ್ರಮುಖ ಸಮಸ್ಯೆಯೆಂದರೆ ಬೈಕಿನ ವಿತರಣೆ. ಬೈಕಿನ ವಿತರಣೆ ಯಾವಾಗ ನಡೆಯುತ್ತದೆ ಎಂಬುದು ಖಚಿತವಿರಲಿಲ್ಲ. ಜೊತೆಗೆ ಬುಕ್ಕಿಂಗ್ ಮಾಡಿದ ನಂತರ ಬೈಕಿನ ವಿತರಣೆಯನ್ನು ಪಡೆಯಲು ಹೆಚ್ಚು ಸಮಯ ಕಾಯಬೇಕಾಗಿತ್ತು.

ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಒಂದು ಲೆಕ್ಕಾಚಾರದಂತೆ ಜಾವಾ ಬೈಕುಗಳ ವಿತರಣೆಗಾಗಿ 10 ತಿಂಗಳು, ಕೆಲವೊಮ್ಮೆ 11 ತಿಂಗಳು ಕಾಯ ಬೇಕಾಗುತ್ತದೆ. ಚಂಡೀಗಢ ಮೂಲದ ಬೈಕ್ ಗ್ರಾಹಕರೊಬ್ಬರು ತಮ್ಮ ಜಾವಾ 42 ಬೈಕಿನ ವಿತರಣೆಯನ್ನು 16 ದಿನಗಳಲ್ಲಿ ಪಡೆದಿರುವುದಾಗಿ ತಿಳಿಸಿದ್ದಾರೆ.

ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಈ ಮಾಹಿತಿಯನ್ನು ಅವರು ಜಾವಾ ಓನರ್ಸ್ ಹಾಗೂ ಲವರ್ಸ್ ಎಂಬ ಫೇಸ್‍‍ಬುಕ್ ಗ್ರೂಪ್‍‍ನಲ್ಲಿ ಶೇರ್ ಮಾಡಿದ್ದಾರೆ. ಇದನ್ನು ಓದಿರುವ ಬೇರೆ ಗ್ರಾಹಕರು ಈ ಬಗ್ಗೆ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಹೀಗೆ 16 ದಿನದಲ್ಲಿ ಬೈಕಿನ ವಿತರಣೆಯನ್ನು ಪಡೆದಿರುವುದಾಗಿ ಹೇಳುತ್ತಿರುವ ಗ್ರಾಹಕರ ಹೆಸರು ಜಸ್ಮೀತ್ ಸಿಂಗ್.

ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಅವರು ಗ್ಯಾಲಾಕ್ಟಿಕ್ ಗ್ರೀನ್ ಸಿಂಗಲ್ ಚಾನೆಲ್ ಎ‍‍ಬಿ‍ಎಸ್ ಜಾವಾ 42 ಬೈಕ್ ಅನ್ನು ನವೆಂಬರ್ 6ರಂದು ಬುಕ್ ಮಾಡಿದ್ದರು. 16 ದಿನಗಳ ನಂತರ ಬೈಕಿನ ವಿತರಣೆಯನ್ನು ಪಡೆದಿರುವುದಾಗಿ ತಿಳಿಸಿದ್ದಾರೆ. ಈ ಬೈಕ್ ಅನ್ನು ಬುಕ್ ಮಾಡಿರುವ ಹಲವಾರು ಜನರು ತಿಂಗಳುಗಳ ಕಾಲದಿಂದ ಈ ಬೈಕಿನ ವಿತರಣೆಗಾಗಿ ಕಾದಿದ್ದಾರೆ.

ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಜಾವಾ ಕಂಪನಿಯ ಅಧಿಕಾರಿಗಳ ಪ್ರಕಾರ, ಜಾವಾ ಬೈಕುಗಳನ್ನು ಮೊದಲು ಬಂದವರಿಗೆ ಮೊದಲು ನೀಡುವ ನಿಯಮದಂತೆ ವಿತರಿಸಲಾಗುತ್ತದೆ. ಜಸ್ಮೀತ್ ಸಿಂಗ್‍‍ರವರು ಈ ನಿಯಮದ ಪ್ರಕಾರ ಬೈಕ್ ಅನ್ನು ಪಡೆದಂತೆ ಕಾಣುತ್ತಿಲ್ಲ.

ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಇಲ್ಲಿ ಎರಡು ಸಾಧ್ಯತೆಗಳಿವೆ. ಒಂದು ಜಸ್ಮೀತ್ ಸಿಂಗ್‍‍ರವರಿಗಾಗಿ ಮೊದಲು ಬಂದವರಿಗೆ ಮೊದಲು ನೀಡುವ ನಿಯಮವನ್ನು ಗಾಳಿಗೆ ತೂರಿರಬೇಕು. ಮತ್ತೊಂದು ಜಾವಾ ಬೈಕುಗಳ ವಿತರಣಾ ಅವಧಿಯನ್ನು ಕಡಿಮೆಗೊಳಿಸಿರಬೇಕು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಇದರಿಂದಾಗಿ ಭಾರತದ ಬೇರೆ ನಗರಗಳಲ್ಲಿಯೂ ವಿತರಣಾ ಅವಧಿಯು ಕಡಿಮೆಯಾಗುವ ಸಾಧ್ಯತೆಗಳಿವೆ. ಇತ್ತೀಚಿಗೆ ಬಿಡುಗಡೆಯಾದ ಜಾವಾ ಪೆರಾಕ್ ಬೈಕಿನ ವಿತರಣೆಯನ್ನು 2020ರ ಏಪ್ರಿಲ್‍‍ನಿಂದ ವಿತರಿಸುವುದಾಗಿ ಹೇಳಲಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಈ ಬೈಕ್ ಅನ್ನು ಬುಕ್ ಮಾಡಿರುವವರು ಶೀಘ್ರದಲ್ಲಿಯೇ ಈ ಬೈಕಿನ ವಿತರಣೆಯನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಜಾವಾ ಮೋಟಾರ್‍‍ಸೈಕಲ್ 2018ರ ನವೆಂಬರ್‍‍ನಲ್ಲಿ ದೇಶಿಯ ಮಾರುಕಟ್ಟೆಗೆ ಮತ್ತೆ ಕಾಲಿಟ್ಟಿತು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಆ ವೇಳೆಯಲ್ಲಿ ಜಾವಾ ಕ್ಲಾಸಿಕ್, ಜಾವಾ 42, ಜಾವಾ ಪೆರಾಕ್ ಎಂಬ ಮೂರು ಹೊಸ ಬೈಕುಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿತು. ಈ ಪೈಕ್ ಜಾವಾ ಕ್ಲಾಸಿಕ್ ಹಾಗೂ ಜಾವಾ 42 ಬೈಕುಗಳನ್ನು ಕಳೆದ ವರ್ಷವೇ ಬಿಡುಗಡೆಗೊಳಿಸಿದರೆ, ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಅನ್ನು ಇತ್ತೀಚಿಗೆ ಬಿಡುಗಡೆಗೊಳಿಸಿತು.

ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಜಾವಾ ಕ್ಲಾಸಿಕ್ ಹಾಗೂ ಜಾವಾ 42 ಬೈಕಿನಲ್ಲಿ 293 ಸಿಸಿಯ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 27 ಬಿ‍‍ಹೆಚ್‍‍ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬುಕ್ಕಿಂಗ್ ಮಾಡಿದ 16 ದಿನಕ್ಕೆ ವಿತರಣೆಯಾಯ್ತು ಜಾವಾ ಬೈಕ್

ಜಾವಾ ಪೆರಾಕ್ ಬೈಕಿನಲ್ಲಿ 334 ಸಿಸಿಯ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 30 ಬಿ‍‍ಹೆಚ್‍‍ಪಿ ಪವರ್ ಹಾಗೂ 31 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲ್ಲಾ ಮೂರೂ ಬೈಕುಗಳಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಬಹುನೀರಿಕ್ಷಿತ ಪೆರಾಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ ಜಾವಾ

ಇನ್ನು ಜಾವಾ ಮೋಟಾರ್‌ಸೈಕಲ್ ಸಂಸ್ಥೆಯು ಕಳೆದ ವರ್ಷ ಅನಾವರಣಗೊಳಿಸಲಾಗಿದ್ದ ತನ್ನ ಬಹುನೀರಿಕ್ಷಿತ ಪೆರಾಕ್ ಬಾಬರ್ ಸ್ಟೈಲ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1,95,500 ಬೆಲೆ ಪಡೆದುಕೊಂಡಿದೆ.

ಬಹುನೀರಿಕ್ಷಿತ ಪೆರಾಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ ಜಾವಾ

2020ರ ಜನವರಿ ಮೊದಲ ವಾರದಲ್ಲಿ ಹೊಸ ಬೈಕ್ ಖರೀದಿಗೆ ಆನ್‌ಲೈನ್ ಬುಕ್ಕಿಂಗ್ ಪ್ರಾರಂಭಮಾಡುವುದಾಗಿ ಜಾವಾ ಸಂಸ್ಥೆಯು ಹೇಳಿಕೊಂಡಿದೆ.

ಬಹುನೀರಿಕ್ಷಿತ ಪೆರಾಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ ಜಾವಾ

1940ರ ಅವಧಿಯಲ್ಲಿನ ಬಾಬರ್ ಸ್ಟೈಲ್ ಬೈಕ್ ವಿನ್ಯಾಸವನ್ನು ಹೊತ್ತುಬಂದಿರುವ ಪೆರಾಕ್ ಬೈಕ್ ಮಾದರಿಯು ವಿಶೇಷ ಬಾಡಿ ಶೈಲಿಯೊಂದಿಗೆ ಭಾರತದಲ್ಲಿರುವ ಇತರೆ ಎಲ್ಲಾ ಬೈಕ್ ಮಾದರಿಗಳಿಂತಲೂ ಉದ್ದವಾದ ವೀಲ್ಹ್ ಬೆಸ್ ಹೊಂದಿರುವ ಮೊದಲ ಬೈಕ್ ಇದಾಗಿದೆ.

ಬಹುನೀರಿಕ್ಷಿತ ಪೆರಾಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ ಜಾವಾ

ಪೆರಾಕ್ ಬೈಕ್ ಮಾದರಿಯು 2020ರ ಎಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಸಾರ ಅಭಿವೃದ್ದಿ ಹೊಂದಿದ್ದು, 334-ಸಿಸಿ ಎಂಜಿನ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 30-ಬಿಎಚ್‌ಪಿ ಮತ್ತು 31-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಬಹುನೀರಿಕ್ಷಿತ ಪೆರಾಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ ಜಾವಾ

ಪೆರಾಕ್ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮಾದರಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಬಹುನೀರಿಕ್ಷಿತ ಪೆರಾಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ ಜಾವಾ

ಮತ್ತೊಂದು ವಿಶೇಷ ಅಂದ್ರೆ, ಪೆರಾಕ್ ಮಾದರಿಯು ಕ್ಲಾಸಿಕ್ ಲೆಜೆಂಡ್ ಕಂಪನಿಯಿಂದಲೇ ಮಾಡಿಫೈಗೊಂಡ ಬೈಕ್ ಆವೃತ್ತಿಯಾಗಲಿದ್ದು, ಡ್ಯುಯಲ್ ಚಾನೆಲ್ ಎಬಿಎಸ್, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್, ರೌಂಡ್ ಹೆಡ್‌ಲ್ಯಾಂಪ್, ಡ್ಯಯಲ್ ಎಕ್ಸಾಸ್ಟ್ ಫೀಚರ್ಸ್‌ಗಳು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿವೆ.

ಬಹುನೀರಿಕ್ಷಿತ ಪೆರಾಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ ಜಾವಾ

ಈ ಮೂಲಕ ದುಬಾರಿ ಬೆಲೆಯ ಹಾರ್ಲೆ ಡೇವಿಡ್ಸನ್ ಬೈಕ್ ರೈಡಿಂಗ್ ಅನುಭವ ನೀಡುವ ಪೆರಾಕ್ ಬೈಕ್‌ಗಳು ಯುವ ಸಮುದಾಯದ ನೆಚ್ಚಿನ ಬೈಕ್ ಮಾದರಿಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕ್ಲಾಸಿಕ್ 350 ಮಾತ್ರವಲ್ಲದೇ ಇತ್ತೀಚೆಗೆ ಬಿಡುಗಡೆಯಾಗಲಿರುವ ಬೆನೆಲ್ಲಿ ಇಂಪೀರಿಯಲ್ 400 ಬೈಕಿಗೂ ಇದು ಪೈಪೋಟಿ ನೀಡಲಿದೆ.

ಬಹುನೀರಿಕ್ಷಿತ ಪೆರಾಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ ಜಾವಾ

ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

ಬಹುನೀರಿಕ್ಷಿತ ಪೆರಾಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ ಜಾವಾ

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಸದ್ಯಕ್ಕೆ ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳು ಈಗಾಗಲೇ ಮಾರಾಟವಾಗುತ್ತಿದೆ. ಇದೀಗ ಬಿಡುಗಡೆಯಾಗಿರುವ ಪೆರಾಕ್ ಕಸ್ಟಮ್ ಬೈಕ್ ಮಾದರಿಯು ಕೂಡಾ 2020ರ ಫೆಬ್ರುವರಿ ಅಥವಾ ಏಪ್ರಿಲ್‌ಗೆ ರಸ್ತೆಗಿಳಿಯಲಿವೆ.

Most Read Articles

Kannada
English summary
Jawa 42 delivered within 16 days fastest jawa delivery yet - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X