ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಬಿಡುಗಡೆಗೂ ಮುನ್ನವೇ ಬೈಕ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಾವಾ ಹೊಚ್ಚ ಹೊಸ ಬೈಕ್‌ಗಳನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯು ಕಳೆದ ನವೆಂಬರ್‌ನಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಖರೀದಿಗಾಗಿ ಲಕ್ಷಾಂತರ ಗ್ರಾಹಕರು ತುದಿಗಾಲಿನ ಮೇಲೆ ನಿಂತಿದ್ದಾರೆ ಅಂದ್ರೆ ತಪ್ಪಾಗುವುದಿಲ್ಲ.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಸಂಸ್ಥೆಯು ಯಶಸ್ವಿಯಾಗಿದೆ.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಹೀಗಾಗಿ ಹೊಸ ಬೈಕ್ ಖರೀದಿಗಾಗಿ ಈಗಾಗಲೇ ಗ್ರಾಹಕರು ಮುಂಗಡ ಪಾವತಿಸಿ ಬೈಕ್ ಪಡೆಯಲು ಕಾಯುತ್ತಿದ್ದು, ಬೆಂಗಳೂರಿನಲ್ಲಿ ಜಾವಾ ತನ್ನ ಮೊದಲ ಬೈಕ್ ಮಳಿಗೆಗೆ ಚಾಲನೆ ನೀಡಿದ್ದಲ್ಲದೇ ಮುಂದಿನ ಒಂದು ತಿಂಗಳು ಒಳಗಾಗಿ ದೇಶಾದ್ಯಂತ 105 ಹೊಸ ಡೀಲರ್ಸ್‌ಗೆ ಚಾಲನೆ ನೀಡುವ ಸುಳಿವು ನೀಡಿದೆ.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಸದ್ಯಕ್ಕೆ ಜಾವಾ ಸಂಸ್ಥೆಯು ಬೈಕ್ ಖರೀದಿಗಾಗಿ ರೂ.5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಬಂದ್ ಮಾಡಿದ್ದು, ಫೆಬ್ರುವರಿ ಆರಂಭದಲ್ಲಿ ಹೊಸ ಬೈಕ್ ವಿತರಣೆ ಮಾಡುವುದಾಗಿ ಹೇಳಿಕೊಂಡಿತ್ತು. ಆದ್ರೆ ಹೊಸ ಬೈಕ್ ಖರೀದಿ ಮಾಡುವ ಗ್ರಾಹಕರು ಬುಕ್ಕಿಂಗ್ ನಂತರ ತುಸು ತಾಳ್ಮೆಯಿಂದ ಇರುವುದು ಒಳಿತು.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಯಾಕೆಂದ್ರೆ ಕಳೆದ ಒಂದು ವಾರದ ಹಿಂದೆಯೇ ಲಕ್ಷಕ್ಕೂ ಅಧಿಕ ಗ್ರಾಹಕರಿಂದ ಬುಕ್ಕಿಂಗ್ ಸ್ವಿಕರಿಸಲಾಗಿದ್ದು, ಒಂದು ವೇಳೆ ನೀವು ಕೂಡಾ ಬುಕ್ಕಿಂಗ್ ಮಾಡಿದ್ದರೆ ಹೊಸ ಬೈಕಿಗಾಗಿ ಬರೋಬ್ಬರಿ 9 ತಿಂಗಳು ಕಾಯಲೇಬೇಕಾದ ಅನಿವಾರ್ಯತೆಯಿದೆ.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಹೌದು, 2019ರ ಸೆಪ್ಟೆಂಬರ್ ಅವಧಿಯ ತನಕ ಜಾವಾ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಗಳು ಭರ್ತಿಯಾಗಿದ್ದು, ಆರಂಭದಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಮಾತ್ರ ಫೆಬ್ರುವರಿ ಮೊದಲ ವಾರದಿಂದ ಬೈಕ್ ವಿತರಣೆ ಆರಂಭವಾಗಲಿದೆ ಎಂದು ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಹೇಳಿಕೊಂಡಿದೆ.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಬ್ಯಾಚ್ ಪ್ರಕಾರ ಗ್ರಾಹಕರಿಗೆ ಬೈಕ್ ವಿತರಣೆ ಆರಂಭವಾಗಲಿದ್ದು, ಬುಕ್ಕಿಂಗ್ ಮಾಡಿದ ಪ್ರತಿ ಬ್ಯಾಚ್‌‌ಗಳು ಸಹ ಒಂದೊಂದು ತಿಂಗಳು ಕಾಲ ಹೆಚ್ಚುವರಿಯಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಸದ್ಯ ಮಧ್ಯಪ್ರದೇಶದ ಪ್ರಿಥಮ್‌ಪುರ್‌ನಲ್ಲಿರುವ ಒಂದೇ ಒಂದು ಬೈಕ್ ಉತ್ಪಾದನಾ ಘಟಕದಲ್ಲಿ ಜಾವಾ ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಆದರೂ ಸಹ ಜಾವಾ ಪ್ರಿಯರು ಅಷ್ಟೊಂದು ಕಾಯುವ ಅವಧಿಯ ನಡುವೆಯು ಬುಕ್ಕಿಂಗ್ ಮಾಡಿದ್ದು, ಸೆಪ್ಟೆಂಬರ್ ಆದ್ರು ಪರವಾಗಿಲ್ಲ ನಮಗೆ ಜಾವಾ ಖರೀದಿ ಮಾಡಲೇಬೇಕು ಎನ್ನುತ್ತಿರುವುದು ಕ್ಲಾಸಿಕ್ ಲೆಜೆಂಡ್ ಸಂಸ್ಥೆಗೆ ಅಚ್ಚರಿ ತರಿಸಿದೆ.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಆನ್‌ಲೈನ್ ಬುಕ್ಕಿಂಗ್ ಬಂದ್..!

ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಗ್ರಾಹಕರ ಕಾಯುವಿಕೆ ಅವಧಿಯನ್ನು ತಗ್ಗಿಸಲು ಶ್ರಮಿಸುತ್ತಿರುವ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಬೇಡಿಕೆ ಪೂರೈಸಲು ಪರದಾಟುತ್ತಿದ್ದು, ಡಿಸೆಂಬರ್ 26ರಿಂದಲೇ ಆನ್‌ಲೈನ್ ಬುಕ್ಕಿಂಗ್ ಅನ್ನು ಕ್ಲೋಸ್ ಮಾಡಿದೆ.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಹೀಗಾಗಿ ಮುಂದಿನ 9 ತಿಂಗಳ ಕಾಲ ಜಾವಾ ಖರೀದಿಗಾಗಿ ಯಾವುದೇ ಅವಕಾಶಗಳಿಲ್ಲದಿರುವುದು ಜಾವಾ ಪ್ರಿಯರಲ್ಲಿ ನಿರಾಶೆ ಮೂಡಿಸಿದೆ. ಸದ್ಯಕ್ಕೆ ಬುಕ್ಕಿಂಗ್ ಸ್ವಿಕರಿಸುವ ಗ್ರಾಹಕರಿಗೆ ಮಾತ್ರ ಫೆಬ್ರುವರಿಯಿಂದ ಬೈಕ್ ವಿತರಣೆ ಆರಂಭಿಸಿದ್ದಲ್ಲಿ ಅದು ಮುಂದಿನ ಸೆಪ್ಟೆಂಬರ್ ತನಕವು ವಿತರಣೆಯಾಗಲಿದೆ. ತದನಂತರವಷ್ಟೇ ಮತ್ತೆ ಬುಕ್ಕಿಂಗ್ ಪ್ರಕ್ರಿಯೆಗಳು ಆರಂಭವಾಗುತ್ತೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಅಷ್ಟು ದಿನ ಕಾಯುವುದರಲ್ಲಿ ಅರ್ಥವಿದ್ಯಾ?

ಸಾಮಾನ್ಯವಾಗಿ ಈ ಪ್ರಶ್ನೆಯು ಬಹುತೇಕರಲ್ಲಿ ಮೂಡುತ್ತೆ. ಆದ್ರೆ ಜಾವಾ ಬೈಕ್ ಖರೀದಿಗಾಗಿ ಒಂಬತ್ತು ತಿಂಗಳಷ್ಟು ಕಾಯುವುದರಲ್ಲಿ ಅರ್ಥವಿದೆ ಎನ್ನಬಹುದು. ಕಾರಣ, ಕೈಗೆಟುಕುವ ಬೆಲೆಗಳಲ್ಲಿ ಅತ್ಯುತ್ತಮ ಡಿಸೈನ್ ಮತ್ತು ಉತ್ತಮ ಪರ್ಫಾಮೆನ್ಸ್ ಹೊಂದಿರುವ ಜಾವಾ ಬೈಕ್ ಪ್ರೇಮಿಗಳ ಹಾಟ್ ಫೆವರಿಟ್ ಎನ್ನಬಹುದು.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಇನ್ನು ಮಹೀಂದ್ರಾ ಸಂಸ್ಥೆಯು ಸದ್ಯಕ್ಕೆ ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಜಾವಾ ಪೆರಾಕ್ ಎನ್ನುವ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

ಜಾವಾದಿಂದ ಬುಕ್ಕಿಂಗ್ ಬಂದ್- ಹೊಸ ಬೈಕಿಗಾಗಿ 9 ತಿಂಗಳು ಕಾಯಲೇಬೇಕಂತೆ..!

ಜೊತೆಗೆ ರಾಯಲ್ ಎನ್‌ಫೀಲ್ಡ್ ಖರೀದಿಸುವ ಗ್ರಾಹಕರನ್ನ ತನ್ನತ್ತ ಸೆಳೆಯುವ ಉದ್ದೇಶ ಮತ್ತೊಂದು ಯೋಜನೆ ಆರಂಭಿಸಿರುವ ಜಾವಾ ಸಂಸ್ಥೆಯು, ದೇಶದ ವಿವಿಧ ನಗರಗಳಲ್ಲಿ ನೆಲೆಗೊಂಡಿರುವ ರಾಯಲ್ ಎನ್‌ಫೀಲ್ಡ್ ಶೋರೂಂಗಳ ಎದುರಲ್ಲೇ ಹೊಸ ಜಾವಾ ಬೈಕ್ ಡೀಲರ್ಸ್ ತೆರೆಯುವುದಾಗಿ ಹೇಳಿಕೊಂಡಿರುವುದು ಮಾರಾಟದಲ್ಲಿ ಮತ್ತಷ್ಟು ಜಿದ್ದಾಜಿದ್ದಿಗೆ ಕಾರಣವಾಗಿದೆ.

Most Read Articles

Kannada
English summary
Jawa Motorcycles Deliveries To Commence Soon — Waiting Period Still Nine Months. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X