ಡ್ಯುಯಲ್ ಚಾನಲ್ ಎಬಿ‍ಎಸ್ ಬೈಕ್ ವಿತರಣೆ ಶುರು ಮಾಡಿದ ಜಾವಾ

ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಕಡೆಗೂ ಡ್ಯೂಯಲ್ ಚಾನೆಲ್ ಎ‍‍ಬಿ‍ಎಸ್ ಹೊಂದಿರುವ ಜಾವಾ ಬೈಕುಗಳ ವಿತರಣೆಯನ್ನು ಶುರು ಮಾಡಿದೆ. ಜಾವಾ 42 ಮಾದರಿಯ ಮೊದಲ ಬೈಕ್ ಅನ್ನು ಪುಣೆಯಲ್ಲಿರುವ ಗ್ರಾಹಕರೊಬ್ಬರಿಗೆ ವಿತರಿಸಲಾಗಿದೆ.

ಡ್ಯುಯಲ್ ಚಾನಲ್ ಎಬಿ‍ಎಸ್ ಬೈಕ್ ವಿತರಣೆ ಶುರು ಮಾಡಿದ ಜಾವಾ

ಕ್ಲಾಸಿಕ್ ಲೆಜೆಂಡ್ಸ್ ಕಳೆದ ವರ್ಷದ ನವೆಂಬರ್‍‍ನಲ್ಲಿ ಜಾವಾ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಜಾವಾ ಬೈಕುಗಳ ಪುನರಾಗಮನದ ಹಿನ್ನೆಲೆಯಲ್ಲಿ ದೇಶದಲ್ಲಿ ಭಾರೀ ಪ್ರಮಾಣದ ನಿರೀಕ್ಷೆಯುಂಟಾಗಿತ್ತು. ಬೈಕುಗಳು ಬಿಡುಗಡೆಯಾದ ತಕ್ಷಣವೇ ಬುಕ್ಕಿಂಗ್‍‍ಗಳು ಆರಂಭವಾದವು. ಆದರೆ ಈ ಬೈಕಿನ ಡೆಲಿವರಿಯನ್ನು ಈ ವರ್ಷದ ಮಾರ್ಚ್‍ನಿಂದ ಶುರು ಮಾಡಲಾಯಿತು.

ಡ್ಯುಯಲ್ ಚಾನಲ್ ಎಬಿ‍ಎಸ್ ಬೈಕ್ ವಿತರಣೆ ಶುರು ಮಾಡಿದ ಜಾವಾ

ಮಾರ್ಚ್‌ನಿಂದ ಸಿಂಗಲ್ ಚಾನೆಲ್ ಎಬಿಎಸ್ ಮಾದರಿಯ ಬೈಕುಗಳ ವಿತರಣೆಯನ್ನು ಆರಂಭಿಸಲಾಗಿತ್ತು. ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಗಳ ಡೆಲಿವರಿಯನ್ನು ಕ್ಲಾಸಿಕ್ ಲೆಜೆಂಡ್ಸ್ ಮುಂದೂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಗ್ರಾಹಕರ ಪ್ರಶ್ನೆಗೆ ಉತ್ತರಿಸಿರುವ ಅನುಪಮ್ ತಾರೆಜಾರವರು ಡ್ಯುಯಲ್ ಚಾನೆಲ್ ಬೈಕುಗಳ ವಿತರಣೆಯನ್ನು ಖಚಿತಪಡಿಸಿದ್ದಾರೆ.

ಡ್ಯುಯಲ್ ಚಾನಲ್ ಎಬಿ‍ಎಸ್ ಬೈಕ್ ವಿತರಣೆ ಶುರು ಮಾಡಿದ ಜಾವಾ

ಕ್ಲಾಸಿಕ್ ಲೆಜೆಂಡ್ಸ್ ದೇಶಾದ್ಯಂತ 100 ಕ್ಕೂ ಹೆಚ್ಚು ಡೀಲರ್‍‍ಗಳನ್ನು ಸ್ಥಾಪಿಸಿದೆ. ಕಂಪನಿಯು ನಿರೀಕ್ಷೆಗೂ ಮೀರಿ ಬುಕ್ಕಿಂಗ್‍‍ಗಳನ್ನು ಪಡೆದಿದೆ. ಸದ್ಯಕ್ಕೆ ಕಂಪನಿಯು ಜಾವಾ ಬೈಕುಗಳ ವೇಟಿಂಗ್ ಪಿರಿಯಡ್ ಅನ್ನು 6 ರಿಂದ 9 ತಿಂಗಳುಗಳಿಗೆ ನಿಗದಿಪಡಿಸಿದೆ. ಮಾರಾಟಗಾರರ ಕಾರಣದಿಂದಾಗಿ ಬೈಕುಗಳ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ಕ್ಲಾಸಿಕ್ ಲೆಜೆಂಡ್ಸ್ ಹೇಳಿದೆ.

ಡ್ಯುಯಲ್ ಚಾನಲ್ ಎಬಿ‍ಎಸ್ ಬೈಕ್ ವಿತರಣೆ ಶುರು ಮಾಡಿದ ಜಾವಾ

ಬೈಕ್ ತಯಾರಕರು ಬ್ಯಾಚ್‌ಗಳಲ್ಲಿ ಹಾಗೂ ಬುಕ್ಕಿಂಗ್ ಕ್ರಮಾಂಕದ ಅನುಸಾರ ವಿತರಣೆಯನ್ನು ಆರಂಭಿಸಿದ್ದಾರೆ. ಕ್ಲಾಸಿಕ್ ಲೆಜೆಂಡ್ಸ್ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸಮಯಕ್ಕೆ ಸರಿಯಾಗಿ ಬೈಕುಗಳನ್ನು ವಿತರಿಸುವ ಭರವಸೆ ಹೊಂದಿದೆ.

ಡ್ಯುಯಲ್ ಚಾನಲ್ ಎಬಿ‍ಎಸ್ ಬೈಕ್ ವಿತರಣೆ ಶುರು ಮಾಡಿದ ಜಾವಾ

ಜಾವಾ ಸ್ಟ್ಯಾಂಡರ್ಡ್ ಹಾಗೂ ಜಾವಾ 42, ಬೈಕುಗಳೆರಡೂ 293 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿವೆ. ಈ ಎಂಜಿನ್ 27 ಬಿಹೆಚ್‌ಪಿ ಪವರ್ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡ್‍‍ನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಡ್ಯುಯಲ್ ಚಾನಲ್ ಎಬಿ‍ಎಸ್ ಬೈಕ್ ವಿತರಣೆ ಶುರು ಮಾಡಿದ ಜಾವಾ

ಜಾವಾ ಸ್ಟ್ಯಾಂಡರ್ಡ್ ಹಾಗೂ ಜಾವಾ 42 ಡ್ಯುಯಲ್ ಚಾನೆಲ್ ಎ‍‍ಬಿ‍ಎಸ್ ಬೈಕುಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಕ್ರಮವಾಗಿರೂ.1.72 ಲಕ್ಷ ಹಾಗೂ ರೂ.1.63 ಲಕ್ಷಗಳಾಗಿದೆ. ಸಿಂಗಲ್ ಚಾನೆಲ್ ಎಬಿಎಸ್ ಮಾದರಿಯ ಬೈಕುಗಳು, ಡ್ಯುಯಲ್ ಚಾನೆಲ್ ಎಬಿ‍ಎಸ್ ಬೈಕುಗಳಿಗಿಂತ ಸುಮಾರು ರೂ.9,000 ಕಡಿಮೆ ಬೆಲೆಯನ್ನು ಹೊಂದಿವೆ.

ಡ್ಯುಯಲ್ ಚಾನಲ್ ಎಬಿ‍ಎಸ್ ಬೈಕ್ ವಿತರಣೆ ಶುರು ಮಾಡಿದ ಜಾವಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಈ ಸುದ್ದಿಯಿಂದಾಗಿ ಜಾವಾ ಬೈಕುಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರು ಖುಷಿಯಾಗಿರುತ್ತಾರೆ. ಕ್ಲಾಸಿಕ್ ಲೆಜೆಂಡ್ಸ್ ವಿತರಣೆಯನ್ನು ಆರಂಭಿಸಲು ಹೆಚ್ಚಿನ ಸಮಯವನ್ನು ತೆಗೆದುಕೊಂಡಿದೆ. ರಾಯಲ್ ಎನ್‌ಫೀಲ್ಡ್ 350 ಬೈಕಿನ ಹಿಡಿತದಲ್ಲಿರುವ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದುವ ಕಾರಣದಿಂದ ಜಾವಾ ಬೈಕುಗಳನ್ನು ಮತ್ತೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಕ್ಲಾಸಿಕ್ ಲೆಜೆಂಡ್ಸ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿ ಗ್ರಾಹಕರ ನಿರೀಕ್ಷೆಯನ್ನು ಪೂರೈಸಬೇಕಿದೆ.

Most Read Articles

Kannada
English summary
Jawa Starts Deliveries Of Dual-Channel ABS Motorcycles — Finally! - Read in kannada
Story first published: Thursday, August 1, 2019, 16:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X