ವಿತರಣಾ ಅವಧಿಯನ್ನು ಕಡಿತಗೊಳಿಸಿದ ಜಾವಾ

ಜಾವಾ ಮೋಟಾರ್‍‍ಸೈಕಲ್ ಕಂಪನಿಯು ತನ್ನ ಪೆರಾಕ್ ಬೈಕ್ ಅನ್ನು ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.94 ಲಕ್ಷ ಬೆಲೆಯನ್ನು ಹೊಂದಿದೆ. ಬಾಬರ್ ಶೈಲಿಯ ಜಾವಾ ಅ್ಯಂಡ್ ಜಾವಾ 42 ಮಾದರಿಯ ಬಳಿಕ ಬ್ರ್ಯಾಂಡ್‍‍ನಿಂದ ಬಿಡುಗಡೆಯಾದ ಮೂರನೇ ಮಾದರಿ ಇದಾಗಿದೆ.

ವಿತರಣಾ ಅವಧಿಯನ್ನು ಕಡಿತಗೊಳಿಸಿದ ಜಾವಾ

ಈ ಹಿಂದೆ ಬಿಡುಗಡೆಗೊಳಿಸಿದ ಜಾವಾ ಮಾದರಿಗಳ ಬೇಡಿಕೆ ಹೆಚ್ಚಾಗಿತ್ತು, ಕಂಪನಿಯು ವಿತರಣೆಯನ್ನು ಕ್ರಮಬದ್ದವಾಗಿ ನಿರ್ವಹಿಸಲು ವಿಫಲವಾಗಿದ್ದರು. ಇದು ಬಹಳಷ್ಟು ಗೊಂದಲಗಳಿಗೆ ಕಾರಣಾವಾಯಿತು, ಅನೇಕ ಗ್ರಾಹಕರು ಬುಕ್ಕಿಂಗ್ ಮಾಡಿದ ಬೈಕುಗಳಿಗಾಗಿ ತಿಂಗಳುಗಟ್ಟಲೆ ಕಾಯಬೇಕಾಯ್ತು.

ವಿತರಣಾ ಅವಧಿಯನ್ನು ಕಡಿತಗೊಳಿಸಿದ ಜಾವಾ

ಕ್ಲಾಸಿಕ್ ಲೆಜೆಂಡ್ಸ್ ಸಹ-ಸಂಸ್ಥಾಪಕ ಅನುಪಮ್ ತಾರೆಜಾ ಅವರು ಮಾತನಾಡಿ, ಭವಿಷ್ಯದಲ್ಲಿ ಎಲ್ಲಾ ಮಾದರಿಗಳಿಗೂ ಸುವ್ಯವಸ್ಥಿತವಾಗಿ ವಿತರಣೆಯನ್ನು ಮಾಡಲಾಗುವುದು. ಈ ಬೈಕ್ ಬುಕ್ಕಿಂಗ್ ಮಾಡಿದ ಮೂರು ತಿಂಗಳಲ್ಲಿ ವಿತರಣೆ ಮಾಡಲಾಗುವುದು. ಇವುಗಳ ವಿತರಣೆ ಮುಗಿದ ಬಳಿಕ ಜಾವಾ ಮುಂದಿನ ಮೂರು ತಿಂಗಳವರೆಗೆ ಬುಕ್ಕಿಂಗ್ ಅನ್ನು ತೆರೆಯುತ್ತದೆ ಎಂದು ಹೇಳಿದರು.

ವಿತರಣಾ ಅವಧಿಯನ್ನು ಕಡಿತಗೊಳಿಸಿದ ಜಾವಾ

ಪ್ರಸ್ತುತ ಜಾವಾ ಅ್ಯಂಡ್ 42 ಬೈಕ್‍‍ಗಾಗಿ ಮಾತ್ರ ಬುಕ್ಕಿಂಗ್ ಪ್ರಾರಂಭಿಸಿದೆ. ಜಾವಾ ಪೆರಾಕ್ ಬೈಕಿನ ಬುಕ್ಕಿಂಗ್ ಮುಂದಿನ ವರ್ಷದ ಜನವರಿ 1 ರಿಂದ ಪ್ರಾರಂಭವಾಗಲಿದ್ದು, ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ವಿತರಣೆಯನ್ನು ಪ್ರಾರಂಭಿಸುತ್ತದೆ.

ವಿತರಣಾ ಅವಧಿಯನ್ನು ಕಡಿತಗೊಳಿಸಿದ ಜಾವಾ

ಜಾವಾ ಪೆರಾಕ್ 334 ಸಿಸಿ ಎಂಜಿನ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 30 ಬಿಎಚ್‌ಪಿ ಪವರ್ ಮತ್ತು 31 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆರಾಕ್ ಬೈಕ್ ಅನ್ನು 2020ರ ಎಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಸಾರ ಅಭಿವೃದ್ದಿಪಡಿಸಿದೆ.

ವಿತರಣಾ ಅವಧಿಯನ್ನು ಕಡಿತಗೊಳಿಸಿದ ಜಾವಾ

ಜಾವಾ ಪೆರಾಕ್ ಮಾದರಿಯು ಕ್ಲಾಸಿಕ್ ಲೆಜೆಂಡ್ ಕಂಪನಿಯಿಂದಲೇ ಮಾಡಿಫೈಗೊಂಡ ಬೈಕ್ ಆವೃತ್ತಿಯಾಗಿದೆ. ಡ್ಯುಯಲ್ ಚಾನೆಲ್ ಎಬಿಎಸ್, ಎರಡು ಟಯರ್‍‍ಗಳಲ್ಲಿ ಡಿಸ್ಕ್ ಬ್ರೇಕ್, ರೌಂಡ್ ಹೆಡ್‌ಲ್ಯಾಂಪ್, ಡ್ಯಯಲ್ ಎಕ್ಸಾಸ್ಟ್ ಫೀಚರ್ಸ್‌ಗಳು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ವಿತರಣಾ ಅವಧಿಯನ್ನು ಕಡಿತಗೊಳಿಸಿದ ಜಾವಾ

ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಹೊಸ ಸಂಚಲನವನ್ನು ಮೂಡಿಸಿ ಮರೆಯಾಗಿ ಇದೀಗ ಮತ್ತೆ ಹೊಸ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೊಸ ಬೈಕ್ ಅನ್ನು ಆಕರ್ಷಕವಾಗಿ ಮತ್ತು ನೂತನ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ವಿತರಣಾ ಅವಧಿಯನ್ನು ಕಡಿತಗೊಳಿಸಿದ ಜಾವಾ

ಇತ್ತೀಚೆಗೆ ಬಿಡುಗಡೆಯಾದ ಜಾವ ಪೆರಾಕ್ ಬೈಕ್ ಅನ್ನು ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ವಿತರಣೆಯನ್ನು ಪ್ರಾರಂಭಿಸುತ್ತದೆ. ಹೊಸ ಜಾವಾ ಪೆರಾಕ್ ಬೈಕು ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ಬೆನೆಲ್ಲಿ ಇಂಪೀರಿಯಲ್ 400 ಬೈಕುಗಳಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
English summary
Jawa Motorcycles To Streamline Bookings & Delivery Process Of All Models: Reduce Waiting Period - Read in Kannada
Story first published: Monday, November 18, 2019, 19:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X