ಹೊಸ ಕ್ಲಾಸಿಕ್ ಬೈಕ್‌ಗಳಿಗೆ ವಿನೂತನ ಆಕ್ಸ್‌ಸರಿಸ್ ಬಿಡುಗಡೆ ಮಾಡಿದ ಜಾವಾ

2018ರ ನವೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಜಾವಾ ಹೊಸ ಮೋಟಾರ್‌ಸೈಕಲ್‌ಗಳು ಬರೋಬ್ಬರಿ ಆರು ತಿಂಗಳು ನಂತರ ಗ್ರಾಹಕರ ಕೈಸೇರುತ್ತಿದ್ದು, ಜಾವಾ ಸಂಸ್ಥೆಯು ತನ್ನ ಜನಪ್ರಿಯ ಕ್ಲಾಸಿಕ್ ಜಾವಾ ಮತ್ತು ಜಾವಾ 42 ಬೈಕ್ ಮಾದರಿಗಳಿಗಾಗಿ ಗ್ರಾಹಕರ ಬೇಡಿಕೆ ಅನ್ವಯ ವಿನೂತನ ಆಕ್ಸ್‌ಸರಿಸ್‌ಗಳನ್ನು ಬಿಡುಗಡೆ ಮಾಡಿದೆ.

ಹೊಸ ಕ್ಲಾಸಿಕ್ ಬೈಕ್‌ಗಳಿಗೆ ವಿನೂತನ ಆಕ್ಸ್‌ಸರಿಸ್ ಬಿಡುಗಡೆ ಮಾಡಿದ ಜಾವಾ

ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಯಶಸ್ವಿಯಾಗಿದೆ.

ಹೊಸ ಕ್ಲಾಸಿಕ್ ಬೈಕ್‌ಗಳಿಗೆ ವಿನೂತನ ಆಕ್ಸ್‌ಸರಿಸ್ ಬಿಡುಗಡೆ ಮಾಡಿದ ಜಾವಾ

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಹೊಸ ಕ್ಲಾಸಿಕ್ ಬೈಕ್‌ಗಳಿಗೆ ವಿನೂತನ ಆಕ್ಸ್‌ಸರಿಸ್ ಬಿಡುಗಡೆ ಮಾಡಿದ ಜಾವಾ

ಇನ್ನು ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಇದರ ಹೊರತಲಾಗಿ ಗ್ರಾಹಕರು ತಮ್ಮ ಹೊಸ ಬೈಕ್‌ಗಳಿಗೆ ಹೆಚ್ಚುವರಿ ದರ ಪಾವತಿಸಿ ಬೇಡಿಕೆ ಅನ್ವಯ ಆಕ್ಸ್‌ಸರಿಸ್ ಪಡೆದುಕೊಳ್ಳಬಹುದಾಗಿದೆ.

ಹೊಸ ಕ್ಲಾಸಿಕ್ ಬೈಕ್‌ಗಳಿಗೆ ವಿನೂತನ ಆಕ್ಸ್‌ಸರಿಸ್ ಬಿಡುಗಡೆ ಮಾಡಿದ ಜಾವಾ

ಜಾವಾ ಮತ್ತು ಜಾವಾ 42 ಬೈಕ್ ಆಕ್ಸ್‌ಸರಿಸ್ ಮತ್ತು ಬೆಲೆಗಳು

ಆಕ್ಸ್‌ಸರಿಸ್‌ಗಳು ಬೆಲೆಗಳು
ಸ್ಟ್ಯಾಂಡರ್ಡ್ ಗ್ರಾಬ್ ರೈಲ್ ರೂ. 399
ಲಗೇಜ್ ರಾಕ್ ರೂ. 599
ದ ಗಾರ್ಡಿಯನ್ ಹಾಲೋ(ಗ್ರಾಬ್‌ರೈಲ್) ರೂ. 749
ಮ್ಯಾಟೆ ಸೀಟ್ ಸ್ಪಾಯ್ಲರ್ ರೂ. 999
ಬ್ಲ್ಯಾಕ್ ರೆಸ್ಟ್ ರೂ. 999
ಬಾರ್ ಅಂಡ್ ಮೀರರ್ ರೂ. 1,499
ಕ್ರ್ಯಾಶ್ ಗಾರ್ಡ್ ಮ್ಯಾಟೆ ರೂ. 1,499
ಕ್ರ್ಯಾಶ್ ಗಾರ್ಡ್ ಕ್ರೋಮ್ ರೂ. 1,599

ಹೊಸ ಕ್ಲಾಸಿಕ್ ಬೈಕ್‌ಗಳಿಗೆ ವಿನೂತನ ಆಕ್ಸ್‌ಸರಿಸ್ ಬಿಡುಗಡೆ ಮಾಡಿದ ಜಾವಾ

ರೈಡಿಂಗ್ ಸಾಮಗ್ರಿಗಳು ಮತ್ತು ಬೆಲೆಗಳು

ರೈಡಿಂಗ್ ಸಾಮಗ್ರಿಗಳು ಬೆಲೆಗಳು
ಸೀಸನ್ 1 ಟಿ-ಶರ್ಟ್ ರೂ. 899

ಕೊನೊರಾ ಹೆಲ್ಮೆಟ್ ಜೊತೆ ವಿಜರ್

ರೂ. 2,349

ಹಾಲೊ ಹೆಲ್ಮೆಟ್ ಜೊತೆ ವಿಜರ್

ರೂ. 2,349

ಗ್ರಿಟಿ ಗಾಂಟ್‌ಲೆಟ್ ಗ್ಲೋಲ್ಸ್

ರೂ. 2,499

ಅರ್ಬನ್ ಎನ್‌ಡ್ಯೂರ್ ಸ್ಟೆಲ್ತ್ ಜಾಕೆಟ್

ರೂ. 7,499

ಹೊಸ ಕ್ಲಾಸಿಕ್ ಬೈಕ್‌ಗಳಿಗೆ ವಿನೂತನ ಆಕ್ಸ್‌ಸರಿಸ್ ಬಿಡುಗಡೆ ಮಾಡಿದ ಜಾವಾ

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಕ್ಲಾಸಿಕ್ ಬೈಕ್‌ಗಳಿಗೆ ವಿನೂತನ ಆಕ್ಸ್‌ಸರಿಸ್ ಬಿಡುಗಡೆ ಮಾಡಿದ ಜಾವಾ

ಇದರಲ್ಲಿ ಬಾಬ್ಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ. ಇದು ಜಾವಾ ಸಂಸ್ಥೆಯಿಂದಲೇ ಮಾಡಿಫೈಗೊಂಡ ಮೊದಲ ಬೈಕ್ ಮಾದರಿಯಾಗಿದ್ದು, ಇದೇ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಹೊಸ ಕ್ಲಾಸಿಕ್ ಬೈಕ್‌ಗಳಿಗೆ ವಿನೂತನ ಆಕ್ಸ್‌ಸರಿಸ್ ಬಿಡುಗಡೆ ಮಾಡಿದ ಜಾವಾ

ಈ ಮೂಲಕ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಭರ್ಜರಿ ಪೈಪೋಟಿ ನೀಡಲು ಸಜ್ಜಾಗಿರುವ ಜಾವಾ ಸಂಸ್ಥೆಯು ಬೈಕ್ ವಿತರಣೆಯೊಂದಿಗೆ ಮತ್ತಷ್ಟು ಬೈಕ್ ಮಾರಾಟ ಮಳಿಗೆಗಳನ್ನು ತೆರೆಯುವ ಇರಾದೆಯಲ್ಲಿದ್ದು, ಆರ್‌ಇ ಬೈಕ್ ಪ್ರಿಯರನ್ನು ತನ್ನತ್ತ ಸೆಳೆಯಲು ಹಲವು ಯೋಜನೆಗಳನ್ನು ರೂಪಿಸಿದೆ.

Most Read Articles

Kannada
English summary
Jawa Bike Official Accessories. Read in Kannada.
Story first published: Wednesday, June 26, 2019, 19:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X