ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಜಾವಾ ಸಂಸ್ಥೆಯು ಭಾರತದಲ್ಲಿ ಮಹೀಂದ್ರಾ ಒಡೆತನ ಕ್ಲಾಸಿಕ್ ಲೆಜೆಂಡ್ ಜೊತೆಗೂಡಿ ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ 2 ಹೊಸ ಬೈಕ್‌ಗಳು ಬಿಡುಗಡೆ ಮಾಡಿದೆ. ಆದ್ರೆ ಹೊಸ ಬೈಕ್ ಬಿಡುಗಡೆಯಾಗಿ ಸರಿಸುಮಾರು 5 ತಿಂಗಳು ಕಳೆದರೂ ಒಂದೇ ಒಂದು ಬೈಕ್ ವಿತರಣೆಯಾಗದಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಹೌದು, ಜಾವಾ ಸಂಸ್ಥೆಯು ಕ್ಲಾಸಿಕ್ ಲೆಜೆಂಡ್ ಜೊತೆಗೂಡಿ ಜನಪ್ರಿಯ ಕ್ಲಾಸಿಕ್ ಬೈಕ್‌ಗಳನ್ನು ಭಾರತದಲ್ಲಿ ಮರುಬಿಡುಗಡೆ ಮಾಡಿದ್ದು, ಐಕಾನಿಕ್ ಕ್ಲಾಸಿಕ್ ಬೈಕ್ ಅನ್ನು ಖರೀದಿ ಮಾಡಲೇಬೇಕೆಂಬ ಉದ್ದೇಶದಿಂದ ಲಕ್ಷಾಂತರ ಗ್ರಾಹಕರು ರೂ.5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾಡಿದ್ದಾರೆ. ಹೀಗಿರುವಾಗ ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ವಿತರಣೆ ಮಾಡಬೇಕಿದ್ದ ಜಾವಾ ಸಂಸ್ಥೆಯ ಗ್ರಾಹಕರಿಂದ ಬುಕ್ಕಿಂಗ್ ಸ್ವಿಕರಿಸಿ ಮೌನ ವಹಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರು ರೊಚ್ಚಿಗೆದ್ದಿದ್ದಾರೆ.

ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಕಳೆದ ನವೆಂಬರ್‌ನಲ್ಲಿ ಹೊಸ ಬೈಕ್ ಬಿಡುಗಡೆಯ ಸಂದರ್ಭದಲ್ಲಿ 2019ರ ಜನವರಿ ಆರಂಭದಲ್ಲಿ ಬುಕ್ಕಿಂಗ್ ಪ್ರಕಾರ ಬೈಕ್ ವಿತರಣೆ ಮಾಡುವುದಾಗಿ ಹೇಳಿಕೊಂಡಿತ್ತು. ತದನಂತರ ಮಾರ್ಚ್ ಎಂದಿದ್ದ ಜಾವಾ ಸಂಸ್ಥೆಯು ಇದುವರೆಗೂ ಒಂದೇ ಒಂದು ಬೈಕ್ ಅನ್ನು ವಿತರಿಸಿಲ್ಲವೆಂದು ಗ್ರಾಹಕರು ತಮ್ಮ ಅಳಲು ತೊಡಿಕೊಂಡಿದ್ದಾರೆ.

ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಹೊಸ ಬೈಕ್ ಬಿಡುಗಡೆಯಾದಾಗ ಹಿರಿಹಿರಿ ಹಿಗ್ಗಿದ್ದ ಜಾವಾ ಬೈಕ್ ಪ್ರಿಯರೇ ಇಂದು ಬೈಕ್ ವಿತರಣೆ ವಿಳಂಬವಾಗುತ್ತಿರುವುದಕ್ಕೆ ರೊಸಿಹೋಗಿದ್ದು, ಬುಕ್ಕಿಂಗ್ ಮಾಡಿದ್ದ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣವನ್ನು ವಾಪಸ್ ಪಡೆಯುತ್ತಿದ್ದಾರೆ. ಜೊತೆಗೆ ಗ್ರಾಹಕರ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಿದ ಸಂಸ್ಥೆಯ ವಿರುದ್ಧವೂ ಕೆಲವು ಗ್ರಾಹಕರು ಕಿಡಿಕಾರಿದ್ದಾರೆ.

ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಸದ್ಯ ಹೊಸ ಬೈಕ್ ಡೀಲರ್ಸ್‌ಗಳಿಗೆ ಚಾಲನೆ ನೀಡುವುದರಲ್ಲೇ ಬ್ಯುಸಿಯಾಗಿರುವ ಜಾವಾ ಸಂಸ್ಥೆಯು ಏಪ್ರಿಲ್ 1ರಿಂದ ಬೈಕ್ ವಿತರಣೆ ಮಾಡುವುದಾಗಿ ಹೇಳಿಕೊಂಡಿತ್ತು. ಆದ್ರೆ ಇದುವರೆಗೂ ಒಂದೇ ಒಂದು ಬೈಕ್ ವಿತರಣೆಯಾಗಿಲ್ಲ ಎನ್ನುವುದು ಗ್ರಾಹಕರ ಅಳಲು.

ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಇನ್ನು ಜಾವಾ ಸಂಸ್ಥೆಯು ಹೊಸ ಬೈಕ್ ವಿತರಣೆಗೂ ಮುನ್ನ ಮೊನ್ನೆಯಷ್ಟೇ ಹುತಾತ್ಮ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ಹೊಸ ಬೈಕ್‌ಗಳನ್ನು ಹರಾಜು ಮೂಲಕ ಮಾರಾಟ ಮಾಡಿ ಬರೋಬ್ಬರಿ 1.43 ದೇಣಿಗೆ ಸಂಗ್ರಹಿಸಿದ್ದು, ಈ ವೇಳೆ ಶೀಘ್ರದಲ್ಲೇ ಬೈಕ್ ವಿತರಣೆಗೆ ಚಾಲನೆ ನೀಡುವುಗಾಗಿ ಮತ್ತೊಂದು ಭರವಸೆ ನೀಡಿದೆ.

ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಆದರೂ ಕೂಡಾ ಹೊಸ ಬೈಕ್ ವಿತರಣೆಯು ಇಂದಿನಿಂದಲೇ ಆರಂಭವಾದರೂ ಕೂಡಾ ಮುಂದಿನ 9 ತಿಂಗಳ ತನಕ ಬುಕ್ಕಿಂಗ್ ಪ್ರಕ್ರಿಯೆಯು ಭರ್ತಿಯಾಗಿದ್ದು, ಈ ತನಕ ಬುಕ್ಕಿಂಗ್ ಮಾಡಲಾಗಿರುವ ಬೈಕ್‌ಗಳನ್ನು ಪಡೆದುಕೊಳ್ಳವು ಗ್ರಾಹಕರು ಇನ್ನು ಕನಿಷ್ಠ 6-7 ತಿಂಗಳು ಕಾಯಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಹೀಗಾಗಿ ಬಹುತೇಕ ಗ್ರಾಹಕರು ಬುಕ್ಕಿಂಗ್ ವಾಪಸ್ ಪಡೆದು ಪರ್ಯಾಯ ಬೈಕ್ ಮಾದರಿಯಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ಥಂಡರ್‌ಬರ್ಡ್ 350ಎಕ್ಸ್ ಖರೀದಿಯತ್ತ ಮುಖಮಾಡುತ್ತಿದ್ದು, ಹೊಸ ಕ್ಲಾಸಿಕ್ ಬೈಕ್ ಖರೀದಿ ಮಾಡಬೇಕೆಂಬ ಯೋಜನೆಯಲ್ಲಿದ್ದ ಗ್ರಾಹಕರಿಗೆ ಜಾವಾ ನಿರಾಸೆ ಉಂಟುಮಾಡಿದೆ.

MOST READ: ಜಗತ್ತಿನ ಅತಿ ದುಬಾರಿ ಕಾರ್ ಕೀ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಇನ್ನು ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

MOST READ: ಮೋಸ ಮಾಡಿದ ಮರ್ಸಿಡಿಸ್ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿಕಲಿಸಿದ ಮಹಿಳೆ

ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಇದರಲ್ಲಿ ಬಾಬ್ಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ.

Most Read Articles

Kannada
English summary
Jawa Owners Cancel Bookings Over Delivery Delays. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X