ಹಸಿರು ಬಣ್ಣದ ಜಾವಾ ಬೈಕ್ ರಿಜಿಸ್ಟ್ರೇಷನ್‍‍ಗೆ ಬ್ರೇಕ್..!

ಜಾವಾ ಕಂಪನಿಯು ತನ್ನ ವೆಬ್‍‍ಸೈಟಿನಲ್ಲಿ ಪ್ರಕಟಿಸಿರುವ ಪ್ರಕಾರ, ಜಾವಾ 42 ಬೈಕ್ ಅನ್ನು ಆರು ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಆರು ಬಣ್ಣಗಳ ಪಟ್ಟಿಯಲ್ಲಿ ಹಸಿರು ಬಣ್ಣವು ಮೊದಲ ಸ್ಥಾನದಲ್ಲಿದೆ. ಹಸಿರು ಬಣ್ಣವನ್ನು ಈ ಪಟ್ಟಿಯಲ್ಲಿ ನೋಡಿದ್ದ ಹಲವರು ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದರು. ಹಸಿರು ಬಣ್ಣದಲ್ಲಿ ಬೈಕ್ ಅನ್ನು ನೀಡುತ್ತಿರುವುದು ಸರಿಯಾದ ಕ್ರಮವೇ ಎಂದು ಹಲವರು ಪ್ರಶ್ನಿಸಿದ್ದರು.

ಹಸಿರು ಬಣ್ಣದ ಜಾವಾ ಬೈಕ್ ರಿಜಿಸ್ಟ್ರೇಷನ್‍‍ಗೆ ಬ್ರೇಕ್..!

ಭಾರತ ಸರ್ಕಾರವು ದೇಶದ ನಾಗರೀಕರು ಹಸಿರು ಬಣ್ಣದ ವಾಹನಗಳನ್ನು ಹೊಂದುವುದನ್ನು ನಿಷೇಧಿಸಿದೆ. ಹಸಿರು ಬಣ್ಣದ ವಾಹನಗಳನ್ನು ಸೇನೆ ಮಾತ್ರ ಉಪಯೋಗಿಸಬೇಕೆಂಬ ನಿಯಮವಿದೆ. ಈಗ ಹಸಿರು ಬಣ್ಣದ ಜಾವಾ 42 ಬೈಕ್ ಅನ್ನು ಖರೀದಿಸಿರುವ ಗ್ರಾಹಕರೊಬ್ಬರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರು ಖರೀದಿಸಿರುವ ಹಸಿರು ಬಣ್ಣದ ಜಾವಾ 42 ಬೈಕ್ ಅನ್ನು ರಿಜಿಸ್ಟರ್ ಮಾಡಲು ಸ್ಥಳೀಯ ಆರ್‍‍ಟಿ‍ಒ ನಿರಾಕರಿಸಿದೆ.

ಹಸಿರು ಬಣ್ಣದ ಜಾವಾ ಬೈಕ್ ರಿಜಿಸ್ಟ್ರೇಷನ್‍‍ಗೆ ಬ್ರೇಕ್..!

ಕೇರಳಾದ ಎರ್ನಾಕುಲಮ್‍‍ನಲ್ಲಿರುವ ಆರ್‍‍ಟಿ‍ಒ, ಹಸಿರು ಬಣ್ಣದಲ್ಲಿರುವ ವಾಹನಗಳನ್ನು ಹೊಂದುವುದು ಮೋಟಾರ್ ವೆಹಿಕಲ್ ಆಕ್ಟ್ ನ ನಿಯಮಗಳನ್ನು ಉಲ್ಲಂಘಿಸಿದಂತಾಗುವುದರಿಂದ ಜಾವಾ 42 ಬೈಕ್ ಅನ್ನು ರಿಜಿಸ್ಟರ್ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದೆ. ಆರ್‍‍ಟಿ‍ಒ ಅಧಿಕಾರಿ, ಹಸಿರು ಬಣ್ಣದ ಜಾವಾ ಬೈಕ್ ಮಾರಾಟ ಮಾಡಿದ, ಕಾಲಾಮಸೆರಿಯಲ್ಲಿರುವ ಮೆ.ಕ್ಲಾಸಿಕ್ ಮೋಟಾರ್ಸ್ ಡೀಲರ್‍‍ಗೆ ಪತ್ರ ಬರೆದಿದ್ದಾರೆ.

ಹಸಿರು ಬಣ್ಣದ ಜಾವಾ ಬೈಕ್ ರಿಜಿಸ್ಟ್ರೇಷನ್‍‍ಗೆ ಬ್ರೇಕ್..!

ದಿನಾಂಕ 16.07.2019ರಂದು ಬರೆಯಲಾಗಿರುವ ಈ ಪತ್ರದಲ್ಲಿ ಆರ್‍‍ಟಿ‍ಒ ಅಧಿಕಾರಿ, ಈ ಬೈಕ್ ಅನ್ನು ರಿಜಿಸ್ಟರ್ ಮಾಡುವ ಸಮಯದಲ್ಲಿ ಪರೀಕ್ಷಿಸಿದಾಗ ಈ ಬೈಕ್ ಆಲೀವ್ ಹಸಿರು ಬಣ್ಣವನ್ನು ಹೊಂದಿರುವುದು ಕಂಡು ಬಂದಿದೆ. ಈ ರೀತಿಯ ಬಣ್ಣವನ್ನು ಹೊಂದುವುದು ಮೋಟಾರ್ ವೆಹಿಕಲ್ ಆಕ್ಟ್ ಗೆ ವಿರುದ್ಧವಾಗಿದೆ. ಆದ ಕಾರಣ ಈ ಪತ್ರ ತಲುಪಿದ 7 ದಿನಗಳ ಒಳಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಖುದ್ದಾಗಿ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ನೀಡಬೇಕೆಂದು ಸೂಚಿಸಿದ್ದಾರೆ.

ಹಸಿರು ಬಣ್ಣದ ಜಾವಾ ಬೈಕ್ ರಿಜಿಸ್ಟ್ರೇಷನ್‍‍ಗೆ ಬ್ರೇಕ್..!

ಹಸಿರು ಬಣ್ಣದ ಜಾವಾ ಬೈಕ್ ಅನ್ನು ಮಾರಾಟ ಮಾಡಿದ್ದ ಡೀಲರ್ ಈ ಪತ್ರವನ್ನು ಹಸಿರು ಬಣ್ಣದ ಜಾವಾ ಬೈಕ್ ಖರೀದಿಸಿದ್ದ ಮಾಲೀಕರಿಗೆ ನೀಡಿದ್ದಾರೆ. ಆ ಬೈಕಿನ ಮಾಲೀಕರು ಈ ಬಾರಿ ಭಾರತದಲ್ಲಿ ಜಾವಾ ಬೈಕುಗಳ ಬಿಡುಗಡೆಗೊಳಿಸುತ್ತಿರುವ ಕ್ಲಾಸಿಕ್ ಲೆಜೆಂಡ್ಸ್ ಸಿ‍ಇ‍ಒ ಆಶೀಶ್ ಜೋಶಿರವರನ್ನು ಸಂಪರ್ಕಿಸಿದ್ದಾರೆ. ಬೈಕ್ ಮಾಲೀಕರ ಪ್ರಶ್ನೆಗೆ ಆಶೀಶ್‍‍ರವರು ಈ ಫೋಟೊದಲ್ಲಿ ತೋರಿಸಿರುವಂತೆ, ಉತ್ತರ ನೀಡಿದ್ದಾರೆ.

ಹಸಿರು ಬಣ್ಣದ ಜಾವಾ ಬೈಕ್ ರಿಜಿಸ್ಟ್ರೇಷನ್‍‍ಗೆ ಬ್ರೇಕ್..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಆಶೀಶ್‍‍ರವರು ನೀಡಿರುವ ಉತ್ತರದಲ್ಲಿ ಇದೊಂದು ಸಮಸ್ಯೆಯೇ ಅಲ್ಲ. ಈ ರೀತಿಯಾಗಿ ಆಗಬಾರದಿತ್ತು. ಬೈಕುಗಳನ್ನು ದೇಶಾದ್ಯಂತ ರಿಜಿಸ್ಟರ್ ಮಾಡಲಾಗುತ್ತಿದೆ. ನಾನು ಈ ಸಮಸ್ಯೆಯತ್ತ ಗಮನಹರಿಸುತ್ತಿದ್ದು, ಆದಷ್ಟು ಬೇಗ ನಿಮ್ಮನ್ನು ಸಂಪರ್ಕಿಸುತ್ತೇನೆ ಎಂದು ಹೇಳಿದ್ದಾರೆ. ಮರುದಿನ ಗ್ರಾಹಕರಿಗೆ ಉತ್ತರ ನೀಡಿರುವ ಆಶೀಶ್‍‍ರವರು, ನಾವು ಆರ್‍‍ಟಿ‍ಒ ಅಧಿಕಾರಿಯನ್ನು ಭೇಟಿ ಮಾಡಿದ್ದೇವು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಅಧಿಕಾರಿ ಬೈಕಿನ ವೇಟಿಂಗ್ ಪಿರಿಯಡ್‍‍ಗಾಗಿ ಕಾಯದೇ ಬೈಕ್ ಪಡೆಯಲು ಇಚ್ಛಿಸಿದ್ದರು.

ಹಸಿರು ಬಣ್ಣದ ಜಾವಾ ಬೈಕ್ ರಿಜಿಸ್ಟ್ರೇಷನ್‍‍ಗೆ ಬ್ರೇಕ್..!

ನಾವು ಬೈಕುಗಳನ್ನು ಮರುಬಳಕೆ ಮಾಡಿರುವುದರಿಂದ ಅವರು ತೊಂದರೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಬಣ್ಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಇನ್ನೂ 2-3 ದಿನಗಳಲ್ಲಿ ಅವರಿಗೆ ನೀಡಲಿದ್ದೇವೆ. ಮುಂದೆ ಅವರು ನಮಗಾಗಲೀ, ನಮ್ಮ ಗ್ರಾಹಕರಿಗಾಗಲೀ ಯಾವುದೇ ತೊಂದರೆಯನ್ನು ನೀಡುವುದಿಲ್ಲವೆಂಬ ಭರವಸೆಯಿದೆ ಎಂದು ಹೇಳಿದ್ದಾರೆ. ಆ ಆರ್‍‍ಟಿ‍ಒ ಅಧಿಕಾರಿ ಹಸಿರು ಬಣ್ಣದ ಜಾವಾ ಬೈಕ್ ಅನ್ನು ರಿಜಿಸ್ಟರ್ ಮಾಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Jawa green colour registration denied by RTO as it is similar to Army colour - Read in kannada
Story first published: Friday, July 19, 2019, 12:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X