ಅಧಿಕೃತವಾಗಿ ಬಹಿರಂಗಗೊಂಡ ಜಾವಾ ಬೈಕ್‍ಗಳ ಮೈಲೇಜ್ ಬಗೆಗಿನ ಮಾಹಿತಿ

ನವೆಂಬರ್ 16, 2018ರಂದು ಜವಾ ಮೋಟಾರ್‍‍ಸೈಕಲ್ ಸಂಸ್ಥೆಯು ತಮ್ಮ ಜಾವಾ ಮತ್ತು ಜಾವಾ 42 ಎಂಬ ಎರಡು ಬೈಕ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು, ಬಿಡುಗಡೆಗೊಂಡಾಗಿನಿಂದಲೂ ಸಹ ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗಿಂತಲೂ ಹೆಚ್ಚು ಕ್ರೇಜ್ ಅನ್ನು ಹುಟ್ತುಹಾಕಿದ್ದು, ಅಧಿಕ ಸಂಖ್ಯೆಯಲ್ಲಿ ಮರಾಟವಾಗುತ್ತಿದೆ.

ಅಧಿಕೃತವಾಗಿ ಬಹಿರಂಗಗೊಂಡ ಜಾವಾ ಬೈಕ್‍ಗಳ ಮೈಲೇಜ್ ಬಗೆಗಿನ ಮಾಹಿತಿ

ಜಾವಾ ಬೈಕ್‍ಗಳನ್ನು ಖರೀದಿಸಲು ಮತ್ತು ಟೆಸ್ಟ್ ಡ್ರೈವ್‍‍ಗಾಗಿ ಬರುವ ಎಲ್ಲಾ ಗ್ರಾಹಕರೂ ಸಹ ಈ ಬೈಕ್‍ಗಳು ಎಷ್ಟು ಮೈಲೇಜ್ ನೀಡುತ್ತದೆ ಎಂದು ಡೀಲರ್‍‍ಗಳ ಬಳಿ ಮಾತ್ರವಲ್ಲದೇಯೆ ಸಾಮಾಜಿಕ ಜಾಲತಾಣಗಳಲ್ಲಿ ಜಾವಾ ಸಂಸ್ಥೆಯನ್ನು ಗ್ರಾಹಕರು ಪ್ರಶಿಸುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಜಾವಾ ಮೋಟಾರ್‍‍ಸೈಕಲ್ ಸಂಸ್ಥೆಯು ಅಧಿಕೃತವಾದ ಹೇಳಿಕೆಯೊಂದನ್ನು ನೀಡಿದ್ದು, ಈ ಬೈಕ್‍ಗಳ ಮೈಲೇಜ್ ಕುರಿತಾಗಿ ಗ್ರಾಹಕರಿಗಿದ್ದ ಪ್ರಶ್ನೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉತ್ತರ ನೀಡಿದ್ದಾರೆ.

ಬಹಿರಂಗಗೊಂಡ ಮೈಲೇಜ್ ಬಗೆಗಿನ ಮಾಹಿತಿ

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಜಾವಾ ಬೈಕ್‍ಗಳ ಮೈಲೇಜ್ ಬಗ್ಗೆ ಗ್ರಾಹಕರು ಕೇಳುತ್ತಿರುವ ಪ್ರಶ್ನೆಗೆ ಜಾವಾ ಸಂಸ್ಥೆಯು ಉತ್ತರ ನೀಡಿದೆ. ಅದೇನೆಂದರೆ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪ್ರಕಾರ ಜಾವಾ ಬೈಕ್‍ಗಳು ಪ್ರತೀ ಲೀಟರ್ ಪೆಟ್ರೋಲ್‍ಗೆ 37.5 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.

ಅಧಿಕೃತವಾಗಿ ಬಹಿರಂಗಗೊಂಡ ಜಾವಾ ಬೈಕ್‍ಗಳ ಮೈಲೇಜ್ ಬಗೆಗಿನ ಮಾಹಿತಿ

ಸಧ್ಯ ಮಾರುಕಟ್ಟೆಯಲ್ಲಿ ಜಾವಾ ಬೈಕ್‍ಗಳು ರಾಯಲ್ ಎನ್‍ಫೀಲ್ಡ್ ಸಂಸ್ಥೆಯ ಕ್ಲಾಸಿಕ್ 350 ಬೈಕ್‍ಗೆ ಪೈಪೋಟಿ ನೀಡುತ್ತಿದ್ದು, ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳು ಒಂದು ಲೀಟರ್ ಪೆಟ್ರೋಲ್‍‍ಗೆ ಸುಮಾರು 35 ರಿಂದ 37 ಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು.

ಅಧಿಕೃತವಾಗಿ ಬಹಿರಂಗಗೊಂಡ ಜಾವಾ ಬೈಕ್‍ಗಳ ಮೈಲೇಜ್ ಬಗೆಗಿನ ಮಾಹಿತಿ

ಹಾಗೆಯೆ ಡ್ರಂ ಬ್ರೇಕ್ ಆಧಾರಿತ ಜಾವಾ ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.64 ಲಕ್ಷ ಮತ್ತು ಜಾವಾ42 ಬೈಕ್ ರೂ. 1.55 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಡ್ಯುಯಲ್ ಚಾನೆಲ್ ಎಬಿಎಸ್ ಆಧಾರಿತ ಜಾವಾ ಬೈಕ್ ರೂ. 1.72 ಲಕ್ಷ ಹಾಗು ಜಾವಾ42 ಬೈಕ್ ರೂ. 1.63 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಅಧಿಕೃತವಾಗಿ ಬಹಿರಂಗಗೊಂಡ ಜಾವಾ ಬೈಕ್‍ಗಳ ಮೈಲೇಜ್ ಬಗೆಗಿನ ಮಾಹಿತಿ

ಜಾವಾ ಸಂಸ್ಥೆಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕುಗಳ ವಿನ್ಯಾಸದಲ್ಲಿ ಸುಧಾರಿತ ಮಾದರಿಯ ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ. ಅಲ್ಲದೇ ಈ ಮೂರು ಬೈಕುಗಳು ಬಿಎಸ್6 ಮಾದರಿಯನ್ನು ಒಳಗೊಂಡಿದೆ.

ಅಧಿಕೃತವಾಗಿ ಬಹಿರಂಗಗೊಂಡ ಜಾವಾ ಬೈಕ್‍ಗಳ ಮೈಲೇಜ್ ಬಗೆಗಿನ ಮಾಹಿತಿ

ಜಾವಾ ಹಾಗೂ ಜಾವಾ 42 ಬೈಕ್‍ಗಳು ಮಧ್ಯಪ್ರದೇಶದಲ್ಲಿರುವ ಪಿಥಮ್‍ಪುರ್ ಮಹೀಂದ್ರಾ ಘಟಕದಲ್ಲಿ ಸಿದ್ದಗೊಳ್ಳುತ್ತಿದ್ದು, 2019ರ ಆರಂಭದಲ್ಲಿ ಬೈಕುಗಳು ಟೆಸ್ಟ್ ರೈಡ್‍ಗೆ ಸಿಗಲಿವೆ. ಜೊತೆಗೆ ಜಾವಾ ಪೆರಾಕ್ ಬೈಕ್ 2019ರ ಮಧ್ಯದಲ್ಲಿ ಗ್ರಾಹಕರಿಗೆ ತಲುಪಲಿದೆ ಎಂದು ಹೇಳಲಾಗುತ್ತಿದೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಅಧಿಕೃತವಾಗಿ ಬಹಿರಂಗಗೊಂಡ ಜಾವಾ ಬೈಕ್‍ಗಳ ಮೈಲೇಜ್ ಬಗೆಗಿನ ಮಾಹಿತಿ

ಜಾವಾ ಬಿಡುಗಡೆಗೊಳಿಸಿದ ಜಾವಾ ಮತ್ತು ಜಾವಾ 42 ಬೈಕ್‍ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ರಾಯಲ್ ಎನ್‍ಫೀಲ್ಡ್ 350 ಕ್ಲಾಸಿಕ್ ಬೈಕ್‍ಗಳೊಂದಿಗೆ ನೇರವಾಗಿ ಪ್ರತಿಸ್ಪರ್ಧಿಯಾಗಿವೆ ಎನ್ನಬಹುದು.

ಅಧಿಕೃತವಾಗಿ ಬಹಿರಂಗಗೊಂಡ ಜಾವಾ ಬೈಕ್‍ಗಳ ಮೈಲೇಜ್ ಬಗೆಗಿನ ಮಾಹಿತಿ

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

ಅಧಿಕೃತವಾಗಿ ಬಹಿರಂಗಗೊಂಡ ಜಾವಾ ಬೈಕ್‍ಗಳ ಮೈಲೇಜ್ ಬಗೆಗಿನ ಮಾಹಿತಿ

ಲಭ್ಯವಿರುವ ಬಣ್ಣಗಳು

ಜಾವಾ ಬಿಡುಗಡೆಗೊಳಿಸಿದ ಈ ಎರಡು ಬೈಕ್‍ಗಳು ಆಕರ್ಷಕ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಜಾವಾ ಬೈಕ್ - ಜಾವಾ ಬ್ಲಾಕ್, ಜಾವಾ ಮರೂನ್ ಮತ್ತು ಜಾವಾ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಅಧಿಕೃತವಾಗಿ ಬಹಿರಂಗಗೊಂಡ ಜಾವಾ ಬೈಕ್‍ಗಳ ಮೈಲೇಜ್ ಬಗೆಗಿನ ಮಾಹಿತಿ

ಇನ್ನು ಜಾವಾ 42 ಬೈಕ್ ಹಾಲಿಸ್ ಟೀಲ್, ಗ್ಲಾಕ್ಟಿಕ್ ಗ್ರೀನ್, ಸ್ಟಾರ್‍‍ಲೈಟ್ ಬ್ಲೂ, ಲುಮೊಸ್ ಲೈಮ್, ನೆಬ್ಯುಲಾ ಬ್ಲೂ ಮತ್ತು ಕೊಮೆಟ್ ರೆಡ್ ಎಂಬ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Jawa and Jawa Forty Two mileage officially revealed – ARAI certified 37.5 kmpl. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X