ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

2018ರ ನವೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮರುಬಿಡುಗಡೆಗೊಳ್ಳುವ ಮೂಲಕ ಕ್ಲಾಸಿಕ್ ಬೈಕ್ ಪ್ರಿಯರಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಜಾವಾ ಸಂಸ್ಥೆಯು ಸದ್ಯ ಜಾವಾ ಮತ್ತು ಜಾವಾ 42 ಎನ್ನುವ ಎರಡು ಕ್ಲಾಸಿಕ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತೆ ಮೂರು ಹೊಸ ಶ್ರೇಣಿಯ ಬೈಕ್‌ಗಳನ್ನು ಬಿಡುಗಡೆ ಮಾಡುವುದಾಗಿ ಸುಳಿವು ನೀಡಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

ಮಾಧ್ಯಮ ಸಂವಾದದಲ್ಲಿ ಹೊಸ ಬೈಕ್ ಉತ್ಪನ್ನಗಳ ಮಾರಾಟ ಮತ್ತು ಮಾರುಕಟ್ಟೆ ವಿಸ್ತರಣೆ ಕುರಿತಂತೆ ಮಾತನಾಡಿರುವ ಜಾವಾ ಕ್ಲಾಸಿಕ್ ಲೆಜೆಂಡ್ಸ್ ಪ್ರೈ.ಲಿ ಸಿಇಒ ಆಶಿಸ್ ಜೋಶಿಯವರು, ಮುಂಬರುವ 18 ತಿಂಗಳ ಅವಧಿಯಲ್ಲಿ ಜಾವಾ ಮಾರಾಟ ವಿಸ್ತರಣೆಯಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ಹೊಸ ಮಾರಾಟ ಮಳಿಗೆಗಳ ಜೊತೆಗೆ ಮತ್ತೆ ಮೂರು ಬ್ರಾಂಡ್ ಕ್ಲಾಸಿಕ್ ಬೈಕ್‌ಗಳನ್ನು ಅಭಿವೃದ್ದಿಗೊಳಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

ಸದ್ಯ ಜಾವಾ ಸಂಸ್ಥೆಯು ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ಸ್ ಪ್ರೈ.ಲಿ ಜೊತೆಗೂಡಿ ಹೊಸ ಬೈಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಬ್ರಿಟಿಷ್ ಮೋಟಾರ್‌ಸೈಕಲ್ ಉತ್ಪಾದನಾ ಸಂಸ್ಥೆಯಾದ ಬಿಎಸ್ಎ ಕೂಡಾ ಜಾವಾ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಜೊತೆಯಾಗಿ ಮತ್ತಷ್ಟು ಹೊಸ ಬೈಕ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

ಕ್ಲಾಸಿಕ್ ಬೈಕ್ ಅಭಿವೃದ್ದಿಯಲ್ಲಿ ಜಾವಾದಂತೆ ಬಿಎಸ್ಎ ಕೂಡಾ ಸಾಕಷ್ಟು ಮುಂಚೂಣಿಯಲ್ಲಿದ್ದು, ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಕ್ಲಾಸಿಕ್ ಬೈಕ್ ಉತ್ಪನ್ನಗಳನ್ನು ಮಾರಾಟ ಮಾಡಿ ನಂತರದ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಿಂದ ಹೊರನಡೆದಿತ್ತು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

ಇದೀಗ ಜಾವಾ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಜೊತೆಗೂಡಿ ಕ್ಲಾಸಿಕ್ ಬೈಕ್ ನಿರ್ಮಾಣದಲ್ಲಿ ಮತ್ತೆ ಹೊಸ ಸಂಚಲನಕ್ಕೆ ಕಾರಣವಾಗಿರುವರಿಂದ ಬಿಎಸ್ಎ ಕೂಡಾ ತನ್ನ ಹಳೆಯ ಕ್ಲಾಸಿಕ್ ಬೈಕ್‌ಗಳ ವಿನ್ಯಾಸ ಪ್ರೇರಿತ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಇದಕ್ಕಾಗಿ ಕ್ಲಾಸಿಕ್ ಲೆಜೆಂಡ್ಸ್ ಸಂಪರ್ಕಿಸಿರುವ ಬಿಎಸ್ಎ ಸಂಸ್ಥೆಯು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗಳಿಗೆ ಪೈಪೋಟಿ ನೀಡಬಲ್ಲ ಹಲವು ಹೊಸ ಬೈಕ್ ವಿನ್ಯಾಸಗಳನ್ನು ಸಿದ್ದಪಡಿಸಿದ್ದು, ಇದರಲ್ಲಿ ಕೆಲವು ಬೈಕ್ ಮಾದರಿಗಳನ್ನು ಕ್ಲಾಸಿಕ್ ಲೆಜೆಂಡ್ಸ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

ಹೀಗಾಗಿ ಜಾವಾ, ಬಿಎಸ್ಎ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಅಭಿವೃದ್ದಿಪಡಿಸುತ್ತಿರುವ ಹೊಸ ಬೈಕ್‌ಗಳು 200ಸಿಸಿ ಯಿಂದ400ಸಿಸಿ ವಿಭಾಗದಲ್ಲಿ ಮತ್ತಷ್ಟು ಸದ್ದು ಮಾಡುವ ನೀರಿಕ್ಷೆಯಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇವು ಮತ್ತಷ್ಟು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

ಇದರೊಂದಿಗೆ ಜಾವಾ ಬೈಕ್‌ಗಳ ಬೇಡಿಕೆಗೆ ತಕ್ಕಂತೆ ಬೈಕ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಧೀರ್ಘ ಕಾಲದ ಕಾಯುವಿಕೆ ಅವಧಿಯನ್ನು ತಗ್ಗಿಸಲು ಮಧ್ಯಪ್ರದೇಶದ ಪ್ರೀತಂಪುರದಲ್ಲಿರುವ ಬೈಕ್ ಉತ್ಪಾದನಾ ಘಟಕವನ್ನು ಮತ್ತಷ್ಟು ವಿಸ್ತರಣೆ ಮಾಡಲಾಗುತ್ತಿದೆ.

MOST READ: ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

ಇದರೊಂದಿಗೆ ಗ್ರಾಹಕರ ಬೇಡಿಕೆಯೆಂತೆ ವಿವಿಧ ಬೈಕ್ ಶ್ರೇಣಿಯೊಂದಿಗೆ ಬೇಡಿಕೆ ಪೂರೈಕೆ, ಮಾರಾಟ ನಂತರ ಸೇವೆಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿರುವ ಜಾವಾ ಸಂಸ್ಥೆಯು ಗ್ರಾಹಕರ ಪರ-ವಿರೋಧದ ನಡುವೆಯು ಹೊಸ ಬೈಕ್ ಮಾರಾಟದಲ್ಲಿ ಒಂದು ವರ್ಷ ಪೂರೈಸುತ್ತಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

ಇನ್ನು ಕಳೆದ ವರ್ಷ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಿ ಮಾರಾಟ ಮಾಡುತ್ತಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿರುವ ಜಾವಾ ಸಂಸ್ಥೆಯು ಮುಂಬರುವ ಡಿಸೆಂಬರ್ ಹೊತ್ತಿಗೆ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತೆ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಜಾವಾ

ಇದರಲ್ಲಿ ಬಾಬ್ಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಹೊಸ ಉತ್ಪನ್ನಗಳ ಜೊತೆಗೆ ಮುಂಬರುವ 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಹೊಸ ಬೈಕ್‌ಗಳನ್ನು ಸಿದ್ದಪಡಿಸುತ್ತಿದೆ.

Source:The Hindu

Most Read Articles

Kannada
English summary
Jawa is planning to launch 3 new motorcycles in India by next one and half year timeline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X