ಹೊಸ ಬೈಕ್‌ಗಳಲ್ಲಿ ನಿಲ್ಲದ ತುಕ್ಕು ಸಮಸ್ಯೆ- ಜಾವಾ ಬೈಕ್ ಖರೀದಿಸಿ ಗ್ರಾಹಕರು ತಪ್ಪು ಮಾಡಿದ್ರಾ?

ಇಷ್ಟು ದಿನಗಳ ಕಾಲ ಹೊಸ ಬೈಕ್ ವಿತರಣೆ ಯಾವಾಗ ಶುರು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಜಾವಾ ಹೊಸ ಬೈಕ್ ಖರೀದಿದಾರರು ಇದೀಗ ಬೈಕಿನ ಗುಣಮಟ್ಟದ ಬಗ್ಗೆ ಸಿಡಿದೆದ್ದಿದ್ದಾರೆ. ಮೊನ್ನೆಯಷ್ಟೇ ಹೊಸ ಜಾವಾ ಬೈಕಿನಲ್ಲಿ ತುಕ್ಕು ಹಿಡಿಯುತ್ತಿರುವ ಬಗ್ಗೆ ಗ್ರಾಹಕರೊಬ್ಬರಿಂದ ದೂರು ಬಂದ ಎರಡೇ ದಿನದಲ್ಲಿ ಮತ್ತಷ್ಟು ಗ್ರಾಹಕರು ತಮ್ಮ ಬೈಕಿನಲ್ಲೂ ಇಂತದ್ದೆ ಸಮಸ್ಯೆ ಎದುರಾಗಿರುವ ಬಗ್ಗೆ ಸಾಕ್ಷಿ ಸಮೇತ ಜಾವಾ ವಿರುದ್ದ ಕಿಡಿಕಾರುತ್ತಿದ್ದಾರೆ.

ಹೊಸ ಬೈಕ್‌ಗಳಲ್ಲಿ ನಿಲ್ಲದ ತುಕ್ಕು ಸಮಸ್ಯೆ- ಜಾವಾ ಬೈಕ್ ಖರೀದಿಸಿ ಗ್ರಾಹಕರು ತಪ್ಪು ಮಾಡಿದ್ರಾ?

ಹೌದು, ಕಳೆದ ಎರಡು ದಿನಗಳ ಹಿಂದಷ್ಟೇ ಹೊಸ ಜಾವಾ 42 ಬೈಕ್ ಖರೀದಿಸಿದ್ದ ಗ್ರಾಹಕರೊಬ್ಬರ ಬೈಕಿನಲ್ಲಿ ಕೇವಲ 20 ದಿನಕ್ಕೆ ತುಕ್ಕು ಹಿಡಿಯುತ್ತಿರುವ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮತ್ತಷ್ಟು ಜಾವಾ ಬೈಕ್‌ಗಳಲ್ಲೂ ತುಕ್ಕು ಹಿಡಿಯುತ್ತಿರುವ ಸಮಸ್ಯೆ ಕಾಣಿಸಿಕೊಂಡಿದ್ದು, ದುಬಾರಿ ಬೆಲೆಯ ಬೈಕ್‌ಗಳಲ್ಲಿ ಮಹೀಂದ್ರಾ ಸಂಸ್ಥೆಯು ಕಳಪೆ ಬೀಡಿಭಾಗಗಳನ್ನು ಜೋಡಣೆ ಮಾಡಿ ಮಾರಾಟ ಮಾಡಲಾಗುತ್ತಿದೆಯಾ ಎನ್ನುವಂತಹ ಪ್ರಶ್ನೆ ಎದುರಾಗಿದೆ.

ಹೊಸ ಬೈಕ್‌ಗಳಲ್ಲಿ ನಿಲ್ಲದ ತುಕ್ಕು ಸಮಸ್ಯೆ- ಜಾವಾ ಬೈಕ್ ಖರೀದಿಸಿ ಗ್ರಾಹಕರು ತಪ್ಪು ಮಾಡಿದ್ರಾ?

ಕಳೆದ ಎರಡು ದಶಕಗಳ ಹಿಂದೆ ತನ್ನದೆ ಆದ ಜನಪ್ರಿಯತೆಯೊಂದಿಗೆ ಭಾರೀ ಸದ್ದು ಮಾಡಿ ಕಾರಣಾಂತರಗಳಿಂದ ಮರೆಯಾಗಿದ್ದ ಜಾವಾ ಇದೀಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದಿದೆ. ಆದ್ರೆ ಕನಸಿನ ಬೈಕ್ ಮರಳಿ ಮಾರುಕಟ್ಟೆಗೆ ಬಂದಾಗ ಹಿರಿಹಿರಿ ಹಿಗ್ಗಿದ್ದ ಜಾವಾ ಬೈಕ್ ಪ್ರಿಯರು ಅದೇ ಸಂಸ್ಥೆಯ ವಿರುದ್ದ ಇದೀಗ ಆಕ್ರೋಶ ವ್ಯಕ್ತಪಡಿಸುವಂತಹ ಪರಿಸ್ಥಿತಿ ಎದುರಾಗಿದೆ.

ಹೊಸ ಬೈಕ್‌ಗಳಲ್ಲಿ ನಿಲ್ಲದ ತುಕ್ಕು ಸಮಸ್ಯೆ- ಜಾವಾ ಬೈಕ್ ಖರೀದಿಸಿ ಗ್ರಾಹಕರು ತಪ್ಪು ಮಾಡಿದ್ರಾ?

ಜಾವಾ ಬೈಕ್ ಪ್ರಿಯರು ಕೂಡಾ ನೀರಿಕ್ಷೆ ಮಾಡದ ರೀತಿಯಲ್ಲಿ ಮರಳಿ ಮಾರುಕಟ್ಟೆಗೆ ಪ್ರವೇಶಿಸಿದ್ದ ಜಾವಾ ಹೊಸ ಬೈಕ್‌‌ಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯ ಬುಕ್ಕಿಂಗ್ ಪಡೆದುಕೊಂಡಿದ್ದವು. ಹೀಗಿರುವಾಗ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದಾದರೂ ಹೊಸ ಬೈಕ್‌ಗಳ ಬೀಡಿಭಾಗಗಳ ಗುಣಮಟ್ಟದ ಬಗ್ಗೆ ಇದೀಗ ಹಲವು ಅನುಮಾನಗಳು ಕಾಡತೊಡಗಿವೆ.

ಹೊಸ ಬೈಕ್‌ಗಳಲ್ಲಿ ನಿಲ್ಲದ ತುಕ್ಕು ಸಮಸ್ಯೆ- ಜಾವಾ ಬೈಕ್ ಖರೀದಿಸಿ ಗ್ರಾಹಕರು ತಪ್ಪು ಮಾಡಿದ್ರಾ?

ಗ್ರಾಹಕರೊಬ್ಬರು ನೀಡಿದ ಮಾಹಿತಿ ಅನ್ವಯ ಜಾವಾ 42 ಬೈಕ್ ಒಂದರಲ್ಲಿ ಹ್ಯಾಂಡಲ್ ಬಾರ್ ಬೋಲ್ಟ್‌, ಎಕ್ಸಾಸ್ಟ್ ಮುಂಭಾಗ, ಡಿಜಿಟಲ್ ಕಸ್ಟರ್ ಬಳಿಯಲ್ಲಿ ಹಾಗೂ ಸೈಡ್ ಸ್ಯಾಂಡ್ ಬಳಿಯ ವ್ಡೆಡಿಂಗ್ ಕೂಡಾ ತುಕ್ಕು ಹಿಡಿಯುತ್ತಿರುವುದು ಕಂಡುಬಂದಿದ್ದು, ತಕ್ಷಣವೇ ಈ ಕುರಿತು ಗಮನಹರಿಸಬೇಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಾವಾ ಸಂಸ್ಥೆಗೆ ಮನವಿ ಮಾಡಿದ್ದರು. ಇದಾದ ಎರಡೇ ದಿನದಲ್ಲಿ ಹತ್ತಕ್ಕೂ ಹೆಚ್ಚು ಗ್ರಾಹಕರ ಇಂತದ್ದೆ ಸಮಸ್ಯೆ ತಮ್ಮ ಬೈಕಿನಲ್ಲೂ ಎದುರಾಗಿರುವ ಬಗ್ಗೆ ಡ್ರೈವ್‌ಸ್ಪಾರ್ಕ್ ತಂಡದ ಜೊತೆಗೆ ಸಾಕ್ಷಿ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ.

ಹೊಸ ಬೈಕ್‌ಗಳಲ್ಲಿ ನಿಲ್ಲದ ತುಕ್ಕು ಸಮಸ್ಯೆ- ಜಾವಾ ಬೈಕ್ ಖರೀದಿಸಿ ಗ್ರಾಹಕರು ತಪ್ಪು ಮಾಡಿದ್ರಾ?

ಮೊದಲ ಬಾರಿಗೆ ಮಾಹಿತಿ ಹಂಚಿಕೊಂಡಿದ್ದ ಜಾವಾ ಬೈಕಿನಲ್ಲಿನ ಸಮಸ್ಯೆಯೇ ಇತರೆ ಬೈಕಿನಲ್ಲೂ ಕಾಣಿಸಿಕೊಂಡಿದ್ದು, ಹೊಸ ಬೈಕ್ ಈಗಲೇ ಖರೀದಿ ಮಾಡಿ ತಿಂಗಳು ಕಳೆದಿಲ್ಲ ಆಗಲೇ ಹೊಸ ಬೈಕ್ ಎರಡು ವರ್ಷದಷ್ಟು ಹಳೆಯ ಎನ್ನುವಷ್ಟು ಭಾಸವಾಗುತ್ತಿದೆ.

ಹೊಸ ಬೈಕ್‌ಗಳಲ್ಲಿ ನಿಲ್ಲದ ತುಕ್ಕು ಸಮಸ್ಯೆ- ಜಾವಾ ಬೈಕ್ ಖರೀದಿಸಿ ಗ್ರಾಹಕರು ತಪ್ಪು ಮಾಡಿದ್ರಾ?

ಹೀಗಾಗಿ ಹೊಸ ಬೈಕ್ ಇಷ್ಟು ಬೇಗ ತುಕ್ಕು ಹಿಡಿಯುತ್ತಿರುವುದು ಸಹಜವಾಗಿಯೇ ಕೆಲವು ಅನುಮಾನಗಳಿಗೆ ಕಾರಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಎಲ್ಲಾ ಘಟನೆ ನೋಡುತ್ತಿರುವ ಗ್ರಾಹಕರು ಈ ಹಿಂದೆ ಪಾವತಿ ಮಾಡಲಾದ ರೂ. 5 ಸಾವಿರ ಹಿಂದಕ್ಕೆ ಪಡೆದು ಪರ್ಯಾಯ ಬೈಕ್ ಖರೀದಿಯತ್ತ ಮುಖಮಾಡುತ್ತಿದ್ದಾರೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಹೊಸ ಬೈಕ್‌ಗಳಲ್ಲಿ ನಿಲ್ಲದ ತುಕ್ಕು ಸಮಸ್ಯೆ- ಜಾವಾ ಬೈಕ್ ಖರೀದಿಸಿ ಗ್ರಾಹಕರು ತಪ್ಪು ಮಾಡಿದ್ರಾ?

ಇದಲ್ಲದೇ ಜಾವಾ ಬೈಕ್ ಡೀಲರ್ಸ್ ಸಹ ಗ್ರಾಹಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು, ಬೈಕ್ ವಿತರಣೆ ವೇಳೆ ನಿಗದಿತ ಆನ್‌ರೋಡ್ ಬೆಲೆಗಳಿಂತಲೂ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೊಸ ಬೈಕ್‌ಗಳಲ್ಲಿ ನಿಲ್ಲದ ತುಕ್ಕು ಸಮಸ್ಯೆ- ಜಾವಾ ಬೈಕ್ ಖರೀದಿಸಿ ಗ್ರಾಹಕರು ತಪ್ಪು ಮಾಡಿದ್ರಾ?

ಬೆಂಗಳೂರಿನ ಪ್ರಮುಖ ಜಾವಾ ಡೀಲರ್ಸ್‌ಗಳಲ್ಲೇ ಗ್ರಾಹಕರಿಂದ ಕಾನೂನುಬಾಹಿರವಾಗಿ ಹ್ಯಾಂಡ್‌ಲಿಂಗ್ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದ್ದು, ಮೊನ್ನೆಯಷ್ಟೇ ಗ್ರಾಹಕರೊಬ್ಬರು ದಾಖಲೆಯ ಸಮೇತ ಡೀಲರ್ಸ್ ಮೋಸದ ಬಗ್ಗೆ ಕಂಪನಿಯ ಗಮನಕ್ಕೆ ತಂದಿದ್ದರು.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಹೊಸ ಬೈಕ್‌ಗಳಲ್ಲಿ ನಿಲ್ಲದ ತುಕ್ಕು ಸಮಸ್ಯೆ- ಜಾವಾ ಬೈಕ್ ಖರೀದಿಸಿ ಗ್ರಾಹಕರು ತಪ್ಪು ಮಾಡಿದ್ರಾ?

ಇನ್ನು ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಒಟ್ಟು ಮೂರು ಹೊಸ ಬೈಕ್‌ಗಳನ್ನು ಅನಾವರಣಗೊಳಿಸಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಮುಂಬರುವ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಹೊಸ ಬೈಕ್‌ಗಳಲ್ಲಿ ನಿಲ್ಲದ ತುಕ್ಕು ಸಮಸ್ಯೆ- ಜಾವಾ ಬೈಕ್ ಖರೀದಿಸಿ ಗ್ರಾಹಕರು ತಪ್ಪು ಮಾಡಿದ್ರಾ?

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

Source: Jawa owners & Lovers

Most Read Articles

Kannada
English summary
A second complaint about rust that is doing the rounds on social media shows a Jawa motorcycle half-way rusting. The image was posted by Adarsh Gupta on the Jawa Owners & Lovers group on Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X