ಇನ್ನೂ ಬಹಿರಂಗವಾಗದ ಜಾವಾ ಮಾರಾಟ ವರದಿ

ಮಹೀಂದ್ರಾ ಮೊಜೊದ ಮಾರಾಟ ಅಂಕಿ ಅಂಶಗಳು ಲಭ್ಯವಿದ್ದರೂ, ಪ್ರಸಕ್ತ ಹಣಕಾಸು ವರ್ಷದ (ಏಪ್ರಿಲ್ - ಸೆಪ್ಟೆಂಬರ್ 2019) ಮೊದಲ ಆರು ತಿಂಗಳ ಜಾವಾ ಮಾರಾಟ ಅಂಕಿಅಂಶಗಳು ಲಭ್ಯವಿಲ್ಲ. ಜಾವಾ ಅಂತಿಮವಾಗಿ ಮಾರಾಟ ಮತ್ತು ರವಾನೆ ಡೇಟಾವನ್ನು ನವೆಂಬರ್ 2018 ರಿಂದ ಮಾರ್ಚ್ 2019 ರವರೆಗಿನ ಡೇಟಾವನ್ನು ಹಂಚಿಕೊಂಡಿದೆ.

ಇನ್ನೂ ಬಹಿರಂಗವಾಗದ ಜಾವಾ ಮಾರಾಟ ವರದಿ

ಈ ಐದು ತಿಂಗಳ ಅವಧಿಯಲ್ಲಿ ಒಟ್ಟು 255 ಬೈಕ್‍‍ಗಳನ್ನು ಮಾರಾಟ ಮಾಡಲಾಗಿದೆ. ಈ ಬೈಕ್‍ಗಳು ಬಹುಪಾಲು ಟೆಸ್ಟ್ ಮತ್ತು ಡಿಸ್‍‍ಪ್ಲೇ ಬೈಕ್‍‍ಗಳಾಗಿ ಜಾವಾ ಡೀಲರ್‍‍ಗಳಿಗೆ ಕಳುಹಿಸಲಾಗಿದೆ.

ಇನ್ನೂ ಬಹಿರಂಗವಾಗದ ಜಾವಾ ಮಾರಾಟ ವರದಿ

ಕ್ಲಾಸಿಕ್ ಲೆಜೆಂಡ್ಸ್ ಪತ್ರಿಕಾ ಪ್ರಕಟಣೆಯ ಮೂಲಕ ಸೆಪ್ಟೆಂಬರ್ ತಿಂಗಳವರೆಗೆ ಬೈಕ್ ಅನ್ನು ಮಾರಾಟ ಮಾಡಲಾಗಿದೆ ಎಂದು ಘೋಷಿಸಿತು. ಆದರೆ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವಿನ ಅವಧಿಯ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಇನ್ನೂ ಬಹಿರಂಗವಾಗದ ಜಾವಾ ಮಾರಾಟ ವರದಿ

ಡೇಟಾದ ಕೊರತೆಯ ಯಾಕೆ ಎಂಬುವುದಕ್ಕೆ ಎರಡು ವಿಷಯಗಳಲ್ಲಿ ನಾವು ಅರ್ಥಮಾಡಿಕೊಳ್ಳಬಹುದು . ಒಂದು ಕ್ಲಾಸಿಕ್ ಲೆಜೆಂಡ್ಸ್ ಮಾರಾಟ ಸಂಖ್ಯೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಎರಡು ಜಾವಾ ಮೋಟಾರ್ ಬೈಕ್‍‍ಗಳು ಕಂಪನಿಯು ನಿರೀಕ್ಷಿಸಿದಷ್ಟು ಮಾರಾಟವಾಗುತ್ತಿಲ್ಲ ಎಂಬ ಕಾರಣಕ್ಕೆ ಇನ್ನೂ ಬಹಿರಂಗಪಡಿಸಲ್ಲವೆಂಬ ವಾದಗಳು ಕೂಡ ಇದೆ.

ಇನ್ನೂ ಬಹಿರಂಗವಾಗದ ಜಾವಾ ಮಾರಾಟ ವರದಿ

ಡೀಲರ್‍‍‍ಗಳು, ಉತ್ಪಾದಕರು ಮತ್ತು ಬೈಕ್ ತುಕ್ಕು ಹಿಡಿದುಕೊಂಡಿದ್ದು, ಡೆಲಿವರಿ ಮಾಡುವವರ ಮಧ್ಯೆ ಹಲವಾರು ಸಮಸ್ಯೆಗಳು ಮತ್ತು ಗೊಂದಲಗಳು ಮತ್ತು ಹಲವಾರು ಬುಕ್ಕಿಂಗ್‍‍ಗಳು ರದ್ದಾಗಿರುವುದು. ಈ ಎಲ್ಲಾ ಕಾರಣದಿಂದ ಜಾವ ಬೈಕ್‍‍ಗಳು ಕಡಿಮೆ ಮಾರಾಟವಾಗಿವೆ. ಮಾರಾಟ ಹೆಚ್ಚಾಗಿದ್ದರೆ ರಸ್ತೆಗಳಲ್ಲಿ ಜಾವ ಬೈಕ್‍‍ಗಳು ಕಾಣಸಿಗುವಂತಿತ್ತು.

ಇನ್ನೂ ಬಹಿರಂಗವಾಗದ ಜಾವಾ ಮಾರಾಟ ವರದಿ

ಮಾರಾಟ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾವಾ ಇತ್ತೀಚೆಗೆ ಆನಿವರ್ಸರಿ ಎಡಿಷನ್ ಬಿಡುಗಡೆಗೊಳಿಸಿತ್ತು. ಆದರೆ ಆನಿವರ್ಸರಿ ಎಡಿಷನ್ ಕೇವಲ 90 ಯುನಿ‍‍ಟ್‍ಗಳಿಗೆ ಸೀಮಿತಗೊಳಿಸಿದೆ ಮತ್ತು ತಕ್ಷಣ ಡೆಲಿವರಿಗೆ ಲಭ್ಯವಿತ್ತು.

ಇನ್ನೂ ಬಹಿರಂಗವಾಗದ ಜಾವಾ ಮಾರಾಟ ವರದಿ

ಜಾವಾ ಮೋಟರ್ ಸೈಕಲ್ಸ್ ಲಕ್ಕಿ ಡ್ರಾ ಮೂಲಕ 90 ಗ್ರಾಹಕರನ್ನು ಆಯ್ಕೆ ಮಾಡುತ್ತಾರೆ. ಆಕ್ಟೋಬರ್ 22ರ ಮೊದಲು ಜಾವಾ ಬೈಕ್‍‍ಗಳು ಕಾಯ್ದಿರಿಸುವ ಗ್ರಾಹಕರು ಸೀಮಿತ ಆವೃತ್ತಿಯ ಬೈಕ್‍‍ಗಳ ತಕ್ಷಣದ ವಿತರಣೆಯನ್ನು ಗೆಲ್ಲಲು ಅರ್ಹರಾಗಿರುತ್ತಾರೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಇನ್ನೂ ಬಹಿರಂಗವಾಗದ ಜಾವಾ ಮಾರಾಟ ವರದಿ

ಕ್ಲಾಸಿಕ್ ಲೆಜೆಂಡ್ಸ್ ಜಾವಾ ಬ್ಯಾನರ್ ಅಡಿಯಲ್ಲಿ ಇನ್ನೂ ಮೂರು ಬೈಕ್‍‍ಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ. ಹೊಸ ಬೈಕ್‍ಗಳ ಬಗೆಗಿನ ವಿವರಗಳನ್ನು ನವೆಂಬರ್ 15ರಂದು ಪ್ರಕಟಿಸಲಾಗುವುದು. ಜಾವಾ ಭಾರತದಲ್ಲಿ ಒಂದು ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ವಿವರಗಳನ್ನು ನೀಡಲಾಗುತ್ತದೆ. ಕ್ಲಾಸಿಕ್ ಲೆಜೆಂಡ್ಸ್ ತನ್ನ ದೀರ್ಘಕಾಲದ ಯೋಜನೆಗಳ ಭಾಗವಾಗಿ ಬಿಎಸ್ಎ ಮತ್ತು ಯಜ್ಡೆ ಬ್ರಾಂಡ್ ಬೈಕ್‍‍ಗಳನ್ನು ಮರುರಚಿಸಲು ಯೋಜಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇನ್ನೂ ಬಹಿರಂಗವಾಗದ ಜಾವಾ ಮಾರಾಟ ವರದಿ

ಒಂದು ಕಾಲದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದ ಜಾವಾ, ದಿನ ಕಳೆದಂತೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. 70 ಮತ್ತು 80ರ ದಶಕದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಿಂಚಿದ ಬೈಕ್‍‍ಗಳ ಬೇಡಿಕೆ ಕಡಿಮೆಯಾಗಿದೆ. ಕ್ಲಾಸಿಕ್ ಲೆಜೆಂಡ್ಸ್ ತಮ್ಮ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಿಕೊಂಡು ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆಯಲು ಇನ್ನೂ ಕೂಡ ಅವಕಾಶಗಳಿವೆ.

Most Read Articles

Kannada
English summary
Jawa Sales Report: No Numbers Available Says SIAM - Read in Kannada
Story first published: Tuesday, October 22, 2019, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X