ಬಿಡುಗಡೆಯಾದ ದುಬಾರಿ ಬೆಲೆಯ ಹೋಂಡಾ ಸಿಬಿಆರ್ 650ಆರ್

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ, ದೇಶಿಯ ಮಾರುಕಟ್ಟೆಯಲ್ಲಿ ಸಿಬಿಆರ್ 650 ಆರ್ ಬೈಕ್ ಬಿಡುಗಡೆಗೊಳಿಸಿದೆ. ಹೊಸ ಹೋಂಡಾ ಸಿಬಿಆರ್ 650ಆರ್ ಬೈಕ್ ನ ಬೆಲೆ ಭಾರತದಲ್ಲಿ ಎಕ್ಸ್ ಶೋ ರೂಂ ದರ ರೂ 7.70 ಲಕ್ಷ ಎಂದು ನಿಗದಿಪಡಿಸಲಾಗಿದೆ. ಸಿಬಿಆರ್ 650ಆರ್ ಬೈಕ್ ಅನ್ನು ಇತ್ತೀಚಿಗಷ್ಟೇ ನಿಲ್ಲಿಸಲಾದ ಸಿಬಿಆರ್ 650ಎಫ್ ಬೈಕಿನ ಬದಲಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಬಿಡುಗಡೆಯಾದ ದುಬಾರಿ ಬೆಲೆಯ ಹೋಂಡಾ ಸಿಬಿಆರ್ 650ಆರ್

ಹೋಂಡಾ ಸಿಬಿಆರ್ 650ಆರ್ ಬೈಕ್ ಅನ್ನು ಮೊದಲ ಬಾರಿಗೆ 2018ರ ಇಐಸಿಎಂಎ ಶೋನಲ್ಲಿ ಅನಾವರಣಗೊಳಿಸಲಾಗಿತ್ತು. ಸಿಬಿಆರ್ 650ಆರ್ ಬೈಕ್ ನ ಬುಕ್ಕಿಂಗ್ ಗಳನ್ನು ಅಧಿಕೃತವಾಗಿ ಫೆಬ್ರವರಿ 2019ರಲ್ಲಿಯೇ ರೂ 15,000 ಪಡೆದು ಶುರುಮಾಡಲಾಗಿತ್ತು. ಈ ಮೋಟಾರ್ ಸೈಕಲನ್ನು ಬ್ರಾಂಡ್ ನ 22 ಪ್ರಿಮೀಯಂ ವಿಂಗ್ ವರ್ಲ್ಡ್ ಔಟ್‍ಲೆಟ್ ಗಳಲ್ಲಿ ಮತ್ತು ಬಿಗ್‍ವಿಂಗ್ ಔಟ್‍ಲೆಟ್ ಗಳಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಲಾಯಿತು.

ಬಿಡುಗಡೆಯಾದ ದುಬಾರಿ ಬೆಲೆಯ ಹೋಂಡಾ ಸಿಬಿಆರ್ 650ಆರ್

ಸಿಬಿಆರ್ 650ಎಫ್ ಗೆ ಹೋಲಿಸಿದರೆ, ಸಿಬಿಆರ್ 650ಆರ್ ಬೈಕ್ ನಲ್ಲಿ ಅನೇಕ ಡಿಸೈನ್ ಗಳನ್ನು ಅಪ್ ಡೇಟ್ ಮಾಡಲಾಗಿದೆ. ಅವುಗಳೆಂದರೆ ಡ್ಯುಯಲ್ ಹೆಡ್ ಲ್ಯಾಂಪ್ ಯೂನಿಟ್, ಎಕ್ಸ್ ಪೊಸ್ಡ್ ಎಂಜಿನ್ ಮತ್ತು ವಿಭಿನ್ನ ವಿನ್ಯಾಸ ಹೊಂದಿರುವ ಬೈಕಿನ ಹಿಂಬದಿ ಭಾಗಗಳು.

ಬಿಡುಗಡೆಯಾದ ದುಬಾರಿ ಬೆಲೆಯ ಹೋಂಡಾ ಸಿಬಿಆರ್ 650ಆರ್

ಸಿಬಿಆರ್ 650ಆರ್ ನಲ್ಲಿರುವ ಅನೇಕ ವಿನ್ಯಾಸಗಳನ್ನು ಸಿಬಿಆರ್ 650ಎಫ್ ನಿಂದ ಪಡೆಯಲಾಗಿದೆ. ಸಿಬಿಆರ್ 650ಆರ್ ಬೈಕ್ ಅನ್ನು ಸ್ಪೋರ್ಟ್ ಟೂರರ್ ಆಗಿ ಬಿಡುಗಡೆ ಮಾಡಲಾಗಿದೆ. ಈ ಬೈಕಿನ ಹ್ಯಾಂಡಲ್ ಬಾರ್ ಗಳ ಮೇಲೆ ಕ್ಲಿಪ್ ಗಳನ್ನು ಅಳವಡಿಸಲಾಗಿದ್ದು, 30 ಎಂಎಂ ನಷ್ಟು ಕೆಳಗೆ ಬಿಡಲಾಗಿದೆ.

ಬಿಡುಗಡೆಯಾದ ದುಬಾರಿ ಬೆಲೆಯ ಹೋಂಡಾ ಸಿಬಿಆರ್ 650ಆರ್

ಇದರಿಂದ ಮೋಟಾರ್ ಸೈಕಲ್ ನಲ್ಲಿ ಆರಾಮದಾಯಕ ರೈಡಿಂಗ್ ಪೊಸಿಷನ್ ದೊರೆಯುತ್ತದೆ. ಸಿಬಿಆರ್ 650ಎಫ್ ಗೆ ಹೋಲಿಸಿದರೆ ಹಿಂಬದಿಯಲ್ಲಿರುವ ಫೂಟ್ ಪೆಗ್‍ಗಳನ್ನು ಹಿಂದಕ್ಕೆ ಸರಿಸಲಾಗಿದೆ. ಸಿಬಿಆರ್ 650ಆರ್ ಯಲ್ಲಿರುವ ಇತರ ಫೀಚರ್ ಗಳೆಂದರೆ : ಎಲ್ಇಡಿ ಹೆಡ್ ಲ್ಯಾಂಪ್ಸ್, ಸಂಪೂರ್ಣ ಡಿಜಿಟಲ್ ಎಲ್‍ಸಿಡಿ ಇನ್ಸೂಟ್ರೂಮೆಂಟ್ ಹೊಂದಿರುವ ಕ್ಲಸ್ಟರ್, ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್, ಸ್ಲಿಪರ್ ಕ್ಲಚ್ ಮತ್ತು ಕ್ವಿಕ್ ಶಿಫ್ಟರ್.

ಬಿಡುಗಡೆಯಾದ ದುಬಾರಿ ಬೆಲೆಯ ಹೋಂಡಾ ಸಿಬಿಆರ್ 650ಆರ್

ಸಿಬಿಆರ್ 650ಆರ್ ಬೈಕ್ 649 ಸಿಸಿ ಲಿಕ್ವಿಡ್ ಇನ್ ಲೈನ್ ಹೊಂದಿರುವ 4 ಸಿಲಿಂಡರ್ ಎಂಜಿನ್ ಹೊಂದಿದೆ. ಇದು 95 ಬಿಹೆಚ್‍‍ಪಿಯನ್ನು 12,000 ಆರ್‍‍ಪಿಎಂ ಮತ್ತು 64 ಎನ್ಎಂ ಪೀಕ್‍ಟಾರ್ಕ್ ಅನ್ನು 8,500 ಆರ್‍‍ಪಿಎಂ ನಲ್ಲಿ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಫೀಡಿನ ಗೇರ್ ಬಾಕ್ಸ್ ಹೊಂದಿದೆ. ಸಿಬಿಆರ್ 650ಆರ್ ನ ಫ್ಯುಯಲ್ ಟ್ಯಾಂಕ್ ಕೆಪಾಸಿಟಿಯು 15 ಲೀಟರ್ ಆಗಿದೆ. ಪ್ರತಿ ಲೀಟರಿಗೆ ಸುಮಾರು 20 ಕಿ.ಮೀ ಮೈಲೇಜ್ ನೀಡಲಿದೆ.

MUST READ: ಅತ್ಯಧಿಕ ಮಾರಾಟವಾಗುವ ಬೈಕ್‍ಗಳ ಪೈಕಿ ಹೀರೋ ಮತ್ತೆ ನಂ.1

ಬಿಡುಗಡೆಯಾದ ದುಬಾರಿ ಬೆಲೆಯ ಹೋಂಡಾ ಸಿಬಿಆರ್ 650ಆರ್

2019ರ ಹೋಂಡಾ ಸಿಬಿಆರ್ 650ಆರ್ 41 ಎಂಎಂ ಶೋವಾ ಯುಎಸ್‍ಡಿ ಫೋರ್ಕ್ ಅನ್ನು ಮುಂಭಾಗದಲ್ಲಿ ಮತ್ತು ಮೋನೋ ಶಾಕ್ ಅನ್ನು ಹಿಂಭಾಗದಲ್ಲಿ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಅನ್ನು ಡ್ಯುಯಲ್ ಡಿಸ್ಕ್ ಸೆಟ್ ನಿಯಂತ್ರಿಸುವುದು, ಮುಂಭಾಗದಲ್ಲಿ ರೇಡಿಯಲ್ ಮೌಂಟೆಡ್ ಕ್ಯಾಲಿಪರ್ ಗಳು ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಸೆಟ್ ಅಪ್ ಗಳಿದ್ದು ಇವುಗಳಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಬೆಂಬಲವಾಗರಲಿದೆ.

ಬಿಡುಗಡೆಯಾದ ದುಬಾರಿ ಬೆಲೆಯ ಹೋಂಡಾ ಸಿಬಿಆರ್ 650ಆರ್

ಸಿಬಿಆರ್ 650ಆರ್ ಮ್ಯಾಟ್ ಗನ್ ಪೌಡರ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಗ್ರಾಂಡ್ ಪ್ರಿಕ್ಸ್ ರೆಡ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರಲಿದೆ.

ಬಿಡುಗಡೆಯಾದ ದುಬಾರಿ ಬೆಲೆಯ ಹೋಂಡಾ ಸಿಬಿಆರ್ 650ಆರ್

ಹೆಚ್ಎಂಎಸ್ಐ ಸೇಲ್ಸ್ ಮತ್ತು ಮಾರ್ಕೆಟಿಂಗ್ ನ ಹಿರಿಯ ಉಪಾಧ್ಯಕ್ಷರಾದ ಯದುವಿಂದರ್ ಸಿಂಗ್ ಗುಲೇರಿಯಾ ರವರು ಮಾತನಾಡಿ ನಾವು ಕಳೆದ ವಾರವಷ್ಟೆ ಹೊಸ ಪ್ರಿಮೀಯಂ ಬಿಗ್ ಬೈಕ್ ಬಿಸಿನೆಸ್ ವರ್ಟಿಕಲ್ ಆದ ಹೋಂಡಾ ಬಿಗ್ ವಿಂಗ್ ಅನ್ನು ಘೋಷಣೆ ಮಾಡಲಾಗಿತ್ತು. ಸಿಬಿಆರ್ 650ಆರ್ ಮಾಡೆಲ್ ನ ಬೈಕ್ ಅನ್ನು ಹೋಂಡಾ ಬಿಗ್‍ವಿಂಗ್ ನಲ್ಲಿ ಮಾರಾಟ ಮತ್ತು ಸರ್ವಿಸ್ ಮಾಡಲಾಗುವುದು. ಸ್ಪೋರ್ಟಿ ಮತ್ತು ಪವರ್ ಫುಲ್ ಪರ್ಫಾರ್ಮೆನ್ಸ್ ರೇಸಿಂಗ್‍ ಹೊಂದಿರುವುದರಿಂದ, ಹೊಸ ಸಿಬಿಆರ್ 650ಆರ್ ಮಿಡಲ್ ವೇಟ್ ಬೈಕ್ ಬಯಸುವ ಆಸಕ್ತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬಿಡುಗಡೆಯಾದ ದುಬಾರಿ ಬೆಲೆಯ ಹೋಂಡಾ ಸಿಬಿಆರ್ 650ಆರ್

ಡ್ರೈವ್ ಸ್ಪಾಕ್ ಅಭಿಪ್ರಾಯ

ಸಿಬಿಆರ್ 650ಆರ್ ಭಾರತೀಯ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಹೊಂದಿರುವ ಮಿಡಲ್ ವೇಟ್ ಮೋಟಾರ್ ಸೈಕಲ್ ಸೆಗ್‍ಮೆಂಟಿನಲ್ಲಿ ಹೊಸದಾಗಿ ಪ್ರವೇಶ ಪಡೆದಿದೆ. 500 ರಿಂದ 800 ಸಿಸಿ ಸೆಗ್ ಮೆಂಟಿನಲ್ಲಿ ಅನೇಕ ಮೋಟಾರ್ ಸೈಕಲ್ ಗಳಿದ್ದು, ರಾಯಲ್ ಎನ್‍ಫೀಲ್ಡ್ 650 ಟ್ವಿನ್ಸ್ ಮುಂಚೂಣಿಯಲ್ಲಿದೆ. ಸಿಬಿಆರ್ 650ಆರ್ ಬೈಕ್ ಟ್ರಂಪ್ ಸ್ಟ್ರೀಟ್ ಟ್ರಿಪಲ್, ಆರ್‍ಇ 650 ಟ್ವಿನ್ಸ್ ಮತ್ತು ಇತ್ತೀಚಿಗಷ್ಟೆ ಬಿಡುಗಡೆಯಾದ ಸುಜುಕಿ ಜಿಎಸ್ಎಕ್ಸ್ ಎಸ್ 750 ಬೈಕ್ ಗಳಿಗೆ ಪ್ರಬಲ ಪೈಪೋಟಿ ನೀಡಲಿದೆ.

Most Read Articles

Kannada
Read more on ಹೋಂಡಾ honda
English summary
New Honda CBR650R Launched In India — Priced At Rs 7.70 Lakh - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X