ಎಲೆಕ್ಟ್ರಿಕ್ ಬೈಕ್‍ಗಳಿಗೆ ಪೇಟೆಂಟ್ ಪಡೆದ ಕವಾಸಕಿ

ಕವಾಸಕಿ ತನ್ನ ಮುಂಬರುವ ಎಲೆಕ್ಟ್ರಿಕ್ ಮೋಟಾರ್ ಬೈಕ್‍ಗಳಿಗಾಗಿ ಬ್ಯಾಟರಿ ಚಾಲಿತ ಟೆಕ್ನಾಲಜಿಯ ಮೇಲೆ ಕಾರ್ಯ ನಿರತವಾಗಿದೆ. ಪೇಟೆಂಟ್ ಪಡೆಯಲು ಸಲ್ಲಿಸಿರುವ ಚಿತ್ರಗಳನ್ನು ನೋಡಿದರೆ ಜಪಾನ್ ಮೂಲದ ಮೋಟಾರ್ ಬೈಕ್ ಕಂಪನಿಯು ಆಶ್ಚರ್ಯಕರವಾದ ಬೆಳವಣಿಗೆಗೆ ಕಾರಣವಾಗಲಿದೆ.

ಎಲೆಕ್ಟ್ರಿಕ್ ಬೈಕ್ ಗಳಿಗೆ ಪೇಟೆಂಟ್ ಪಡೆದ ಕವಾಸಕಿ

ಪೇಟೆಂಟ್‍ಗೆ ಅರ್ಜಿ ಸಲ್ಲಿಸಿದ ತಕ್ಷಣ ಟೆಕ್ನಾಲಜಿಯನ್ನು ಉತ್ಪಾದನೆ ಮಾಡಲಾಗುವುದು ಎಂದು ಹೇಳಲಾಗುವುದಿಲ್ಲವಾದರೂ ಕವಾಸಕಿಯು ಎಲೆಕ್ಟ್ರಿಕ್ ಮೋಟಾರ್ ಬೈಕ್ ಗಳನ್ನು ಅಭಿವೃದ್ಧಿ ಪಡಿಸುತ್ತಿರುವುದನ್ನು ತೋರಿಸುತ್ತದೆ. ಸದ್ಯಕ್ಕೆ ಕವಾಸಕಿಯ ಎಲೆಕ್ಟ್ರಿಕ್ ಮೋಟಾರ್ ಬೈಕ್ ಗಳ ಬಗ್ಗೆ ಯಾವುದೇ ಸುದ್ದಿ ಇಲ್ಲದೇ ಇದ್ದರೂ ಈ ಪೇಟೆಂಟ್ ಚಿತ್ರಗಳನ್ನು ನೋಡಿದ ನಂತರ ಕವಾಸಕಿ ಇದರ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿರುವುದನ್ನು ಕಾಣಬಹುದು. ಪೇಟೆಂಟ್ ನಲ್ಲಿರುವ ಚಿತ್ರಗಳು ಟ್ಯೂಬುಲರ್ ಫ್ರೇಮ್ ಅನ್ನು ಪೂರ್ತಿಯಾಗಿ ಓಪನ್ ಮಾಡಿ ಬ್ಯಾಟರಿ ಪ್ಯಾಕ್ ಯೂನಿಟನ್ನು ತೆಗೆದು ಹಾಕುವ ಬಗ್ಗೆ ತೋರಿಸುತ್ತವೆ.

ಎಲೆಕ್ಟ್ರಿಕ್ ಬೈಕ್ ಗಳಿಗೆ ಪೇಟೆಂಟ್ ಪಡೆದ ಕವಾಸಕಿ

ಪ್ರತಿಯೊಬ್ಬರಿಗೂ ತಿಳಿದಿರುವಂತೆ ಎಲೆಕ್ಟ್ರಿಕ್ ಕಾರು ಮತ್ತು ಎಲೆಕ್ಟ್ರಿಕ್ ಮೋಟಾರ್ ಬೈಕ್ ಗಳು ಮುಂದಿನ ದಿನಗಳಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಲಿವೆ. ಇದೊಂದು ಮಹತ್ತರವಾದ ಬದಲಾವಣೆಯಾಗಿರಲಿದ್ದು ಎಲ್ಲಾ ತಯಾರಕರು ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಉಳಿಯಬೇಕಾದರೆ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವುದು ಅನಿವಾರ್ಯವಾಗಿರಲಿದೆ.

ಎಲೆಕ್ಟ್ರಿಕ್ ಬೈಕ್ ಗಳಿಗೆ ಪೇಟೆಂಟ್ ಪಡೆದ ಕವಾಸಕಿ

ಕವಾಸಕಿ ಕೂಡ ಈ ನಿಟ್ಟಿನಲ್ಲಿ ಯೋಚಿಸುತ್ತಿದ್ದು, ಯಾವುದೇ ಒಂದು ಪ್ರಾಡಕ್ಟ್ ನಲ್ಲಿ ಒಂದು ಪೂರ್ತಿ ಘಟಕವನ್ನು ಎಲೆಕ್ಟ್ರಿಕ್ ವಾಹನಗಳಿಗೆ ಮೀಸಲಿಡುವುದು ಕಡ್ಡಾಯವಾಗಿರಲಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ನೀಡುವುದು ಅವಶ್ಯಕವಾಗಿದ್ದು, ಅದರ ಸೌಲಭ್ಯವಿಲ್ಲದೇ ಕಾರ್ಯ ನಿರ್ವಹಿಸುವುದು ಅಸಾಧ್ಯವಾಗಲಿದೆ.

ಎಲೆಕ್ಟ್ರಿಕ್ ಬೈಕ್ ಗಳಿಗೆ ಪೇಟೆಂಟ್ ಪಡೆದ ಕವಾಸಕಿ

ಚಾರ್ಜಿಂಗ್ ಸೌಲಭ್ಯವನ್ನು ನೀಡಿದರೂ ಸಹ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆಗಲು ತುಂಬಾ ಸಮಯ ತಗುಲುತ್ತದೆ. ಆದ ಕಾರಣ ಕೆಲವು ದ್ವಿ ಚಕ್ರ ವಾಹನ ತಯಾರಕರ ಪ್ರಕಾರ ಬ್ಯಾಟರಿ ಚಾಲಿತ ಟೆಕ್ನಾಲಜಿ ಅಭಿವೃದ್ಧಿಪಡಿಸಲು ತುಂಬಾ ಬುದ್ದಿ ಶಕ್ತಿ ಬೇಕಾಗುತ್ತದೆ. ಕವಾಸಕಿಯು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಧ್ಯತೆಗಳಿವೆ. ಪೇಟೆಂಟ್ ಗಾಗಿ ಸಲ್ಲಿಸಿರುವ ಚಿತ್ರದಲ್ಲಿ ಪೂರ್ತಿ ಬ್ಯಾಟರಿ ಪ್ಯಾಕ್ ಅನ್ನು ಹೇಗೆ ತೆಗೆಯಬಹುದು ಎಂದು ಸ್ಪಷ್ಟವಾಗಿ ತೋರಿಸಲಾಗಿದೆ. ಮೋಟಾರ್ ಬೈಕ್ ನ ಪೂರ್ತಿ ಫ್ರೇಮ್ ಅನ್ನೇ ರಿ ಡಿಸೈನ್ ಮಾಡಲಾಗಿದ್ದು ಅದನ್ನು ಹೇಗೆ ತೆಗೆಯಬಹುದು ಎಂದು ತೋರಿಸಲಾಗಿದೆ.

ಎಲೆಕ್ಟ್ರಿಕ್ ಬೈಕ್ ಗಳಿಗೆ ಪೇಟೆಂಟ್ ಪಡೆದ ಕವಾಸಕಿ

ಎಡಭಾಗದಲ್ಲಿರುವ ಸ್ಟಿಯರಿಂಗ್ ಹೆಡ್ ಮತ್ತು ಸ್ವಿಂಗ್ ಆರ್ಮ್ ಮೌಂಟ್ ಗಳ ಮಧ್ಯದಲ್ಲಿರುವ ಟ್ಯುಬುಲರ್ ಫ್ರೇಮ್ ಅನ್ನು ಪೂರ್ತಿಯಾಗಿ ಹೊರತೆಗೆಯಬಹುದು, ಬ್ಯಾಟರಿ ಪ್ಯಾಕ್ ಅನ್ನು ಸ್ಲೈಡ್ ಔಟ್ ಮಾಡಬಹುದಾಗಿರುತ್ತದೆ. ಬ್ಯಾಟರಿಯು ಮೋಟಾರ್ ಬೈಕ್ ನಲ್ಲಿಯೇ ಇದ್ದರೂ ಆನ್ ಬೋರ್ಡ್ ಚಾರ್ಜರ್ ನಿಂದ ಬ್ಯಾಟರಿಯನ್ನು ಚಾರ್ಜ್ ಮಾಡುವುದನ್ನು ಪೇಟೆಂಟ್ ಚಿತ್ರದಲ್ಲಿ ತೋರಿಸಲಾಗಿದೆ.

ಎಲೆಕ್ಟ್ರಿಕ್ ಬೈಕ್ ಗಳಿಗೆ ಪೇಟೆಂಟ್ ಪಡೆದ ಕವಾಸಕಿ

ಬ್ಯಾಟರಿ ಪ್ಯಾಕ್ ಏರ್ ಕೂಲ್ ಆಗಿದ್ದರೆ, ಟ್ರಾನ್ಸ್ ಮಿಷನ್ ಯುನಿಟ್ ಆಯಿಲ್ ಕೂಲ್ ಆಗಿದೆ. ಪೇಟೆಂಟ್ ನಲ್ಲಿ ತೋರಿಸಿರುವ ಪ್ರಕಾರ ಕವಾಸಕಿಯು ಬ್ಯಾಟರಿ ಚಾಲಿತ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಲು ತುಂಬಾ ಬುದ್ದಿ ಶಕ್ತಿಯನ್ನುಉಪಯೋಗಿಸಿರುವುದು ಕಂಡು ಬರುತ್ತದೆ.

ಎಲೆಕ್ಟ್ರಿಕ್ ಬೈಕ್ ಗಳಿಗೆ ಪೇಟೆಂಟ್ ಪಡೆದ ಕವಾಸಕಿ

ಆಸಕ್ತಿಕರ ವಿಷಯವೆಂದರೆ, ಕವಾಸಕಿ ಈ ನೂತನ ಟೆಕ್ನಾಲಜಿಯನ್ನು ಚಾಲ್ತಿಯಲ್ಲಿರುವ ಮೋಟಾರ್ ಬೈಕ್ ನಲ್ಲಿ ಅಳವಡಿಸಿದೆ. ಪೇಟೆಂಟ್ ಸ್ಕೆಚ್ ನಲ್ಲಿರುವ ಚಿತ್ರಗಳು ಈಗ ಚಾಲ್ತಿಯಲ್ಲಿರುವ ಕವಾಸಕಿ ನಿಂಜಾ 400 ಬೈಕಿನ ಚಿತ್ರಗಳು ಎಂದು ಸ್ಪಷ್ಟವಾಗಿ ಕಾಣುತ್ತವೆ.

MOST READ: ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ..

ಎಲೆಕ್ಟ್ರಿಕ್ ಬೈಕ್ ಗಳಿಗೆ ಪೇಟೆಂಟ್ ಪಡೆದ ಕವಾಸಕಿ

ಇದರ ಅರ್ಥ ಸ್ಪಷ್ಟವಾಗಿದ್ದು ಬ್ಯಾಟರಿ ಚಾಲಿತ ಟೆಕ್ನಾಲಜಿಯು ಭವಿಷ್ಯದಲ್ಲಿ ಇರದೇ ಅನಿವಾರ್ಯವಾದಲ್ಲಿ ಸದ್ಯದಲ್ಲೇ ಉತ್ಪಾದನೆಯಾಗುವ ಸಾಧ್ಯತೆಗಳಿವೆ. ಇತ್ತೀಚಿನ ವರದಿಗಳ ಪ್ರಕಾರ ಜಪಾನಿನ ನಾಲ್ಕು ದೊಡ್ಡ ಬೈಕ್ ತಯಾರಕ ಕಂಪನಿಗಳಾದ ಹೋಂಡಾ, ಯಮಹಾ, ಸುಜುಕಿ ಮತ್ತು ಕವಾಸಕಿ ಕಂಪನಿಗಳು ಬ್ಯಾಟರಿ ಚಾಲಿತ ಟೆಕ್ನಾಲಜಿಯ ಬಗ್ಗೆ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಬ್ಯಾಟರಿ ಚಾಲಿತ ಟೆಕ್ನಾಲಜಿಯ ಬಗ್ಗೆ ಈ ಕಂಪನಿಗಳ ಮಧ್ಯೆ ಯಾವುದೇ ಒಪ್ಪಂದ ಏರ್ಪಡುವ ಬಗ್ಗೆ ಖಚಿತತೆ ಇಲ್ಲ.

ಎಲೆಕ್ಟ್ರಿಕ್ ಬೈಕ್ ಗಳಿಗೆ ಪೇಟೆಂಟ್ ಪಡೆದ ಕವಾಸಕಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕವಾಸಕಿಯು ಮೋಟಾರ್ ಬೈಕ್ ಜಗತ್ತಿನಲ್ಲಿ ವಿಶ್ವಾಸನೀಯ ಹೆಸರನ್ನು ಹೊಂದಿದ್ದು ಒಂದು ಕಾಲದಲ್ಲಿ ಝಡ್ಎಕ್ಸ್ 14ಆರ್ ಬೈಕನ್ನು ಉತ್ಪಾದಿಸುತ್ತಿತ್ತು ಮತ್ತು ಆ ಸಮಯದಲ್ಲಿ ಅದು ಪ್ರಪಂಚದ ವೇಗದ ಬೈಕ್ ಎಂಬ ಖ್ಯಾತಿ ಪಡೆದಿತ್ತು. ಕವಾಸಕಿ ಕಂಪನಿಯು ಸದ್ಯಕ್ಕೆ ಸೂಪರ್ ಚಾರ್ಜ್ ಎಂಜಿನ್ ಹೊಂದಿರುವ ಬೈಕ್ ಗಳನ್ನು ಅತಿ ಹೆಚ್ಚು ಉತ್ಪಾದಿಸುತ್ತಿರುವ ಕಂಪನಿಯಾಗಿದೆ. ಕವಾಸಕಿಯ ಪರ್ಫಾರ್ಮೆನ್ಸ್ ಬಗ್ಗೆ ಯಾವುದೆ ಸಂದೇಹಗಳಿಲ್ಲ. ಕವಾಸಕಿಯು ಪರಿಸರ ಸ್ನೇಹಿಯಾಗುತ್ತಿರುವುದರ ಬಗ್ಗೆ ಬಹುತೇಕರಿಗೆ ಆಶ್ಚರ್ಯವಾಗಿದೆ. ಆದರೆ ಜನರಿಗೆ ಇದರ ಬಗ್ಗೆ ಅರಿವಿದ್ದು ಬದಲಾವಣೆಯ ಜೊತೆಗೆ ನಡೆಯುವುದು ಅನಿವಾರ್ಯವಾಗಲಿದೆ.

Most Read Articles

Kannada
English summary
Kawasaki Patents Battery Swap Technology For Electric Bikes — Kawasaki Goes Green, Quite Literally! - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X