Just In
Don't Miss!
- News
ಸಿದ್ದರಾಮಯ್ಯ ಜ್ಯೋತಿಷ್ಯಾಲಯಕ್ಕೆ ಬೀಗ ಜಡೀರಿ: ಆರ್.ಅಶೋಕ ಲೇವಡಿ
- Movies
'ಚಪಾಕ್' ಟ್ರೈಲರ್ ರಿಲೀಸ್ ವೇಳೆ ಭಾವುಕರಾಗಿ ಕಣ್ಣೀರಿಟ್ಟ ನಟಿ ದೀಪಿಕಾ ಪಡುಕೋಣೆ
- Lifestyle
ಬರೋಬ್ಬರಿ 85ಲಕ್ಷ ಬೆಲೆಬಾಳುವ ಬಾಳೆಹಣ್ಣು ತಿಂದ ಭೂಪ!
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Technology
ವಾಟ್ಸ್ ಆಪ್ ಚಾಟ್ ನ್ನು ಹೈಡ್ ಮಾಡುವುದಕ್ಕೆ ಇರುವ ಸಿಂಪಲ್ ಟ್ರಿಕ್ಸ್ ಗಳು
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್ಎಕ್ಸ್ 14 ಆರ್ ಬುಕ್ಕಿಂಗ್
ಕವಾಸಕಿ ಕಂಪನಿಯು ತನ್ನ ಹೊಸ 2020ರ ನಿಂಜಾ ಝಡ್ಎಕ್ಸ್ 14 ಆರ್ ಬೈಕುಗಳಿಗಾಗಿ ಬುಕ್ಕಿಂಗ್ ಶುರು ಮಾಡಿದೆ. 2020ರ ನಿಂಜಾ ಝಡ್ಎಕ್ಸ್ 14 ಆರ್ ಬೈಕಿನ ಬೆಲೆಯು ಮಾರುಕಟ್ಟೆಯಲ್ಲಿರುವ 2019ರ ಮಾದರಿಯ ಬೈಕಿನಷ್ಟೇ ಅಂದರೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.19.70 ಲಕ್ಷಗಳಾಗಿರಲಿದೆ.

ಕವಾಸಕಿ ಡೀಲರ್ಗಳು ಈ ಬೈಕಿಗಳಿಗಾಗಿ ಬುಕ್ಕಿಂಗ್ ಆರಂಭವಾಗಿರುವುದನ್ನು ಖಚಿತಪಡಿಸಿದ್ದಾರೆ. ಈ ಬುಕ್ಕಿಂಗ್ ಸೀಮಿತ ಅವಧಿಯವರೆಗೂ ಜಾರಿಯಲ್ಲಿರಲಿದ್ದು, ಸೀಮಿತ ಸಂಖ್ಯೆಯ ಬೈಕುಗಳನ್ನು ಮಾತ್ರ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಹೊಸ ಬೈಕ್ ಅನ್ನು ಹೊಸ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

2020ರ ಕವಾಸಕಿ ಝಡ್ಎಕ್ಸ್ 14 ಆರ್ ಬೈಕ್ ಮೆಟಾಲಿಕ್ ಡಯಾಬ್ಲೊ ಬ್ಲಾಕ್ ಹಾಗೂ ಗೋಲ್ಡನ್ ಬ್ಲೇಜ್ಡ್ ಗ್ರೀನ್ ಎಂಬ ಎರಡು ಬಣ್ಣಗಳನ್ನು ಹೊಂದಿರಲಿದೆ. ಹೊಸ ಬೈಕಿನಲ್ಲಿರುವ ಹೊಸ ಬಣ್ಣವು ಮಾರುಕಟ್ಟೆಯಲ್ಲಿರುವ ಬೈಕ್ ಹೊಂದಿರುವ ಹಸಿರು ಬಣ್ಣಕ್ಕಿಂತ ಹೆಚ್ಚು ಆಕರ್ಷಕವಾಗಿ ಕಾಣಲಿದೆ.

ಹೊಸ ಬೈಕ್ ಬಿಎಸ್ 4 ಎಂಜಿನ್ ಹೊಂದಿರುವ ಕಾರಣ ಈ ಬೈಕ್ ಅನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುವುದು. ಕವಾಸಕಿ ಕಂಪನಿಯು 2020ರ ಏಪ್ರಿಲ್ 1ರಿಂದ ಹೊಸ ಬಿಎಸ್ 6 ನಿಯಮಗಳು ಜಾರಿಗೆ ಬರುವ ಮುನ್ನ ಸ್ಟಾಕ್ನಲ್ಲಿರುವ ತನ್ನ ಎಲ್ಲಾ ಬಿಎಸ್ 4 ಬೈಕುಗಳನ್ನು ಮಾರಾಟ ಮಾಡಲು ಬಯಸಿದೆ.

ಹೊಸ ಬಣ್ಣದ ಹೊರತಾಗಿ ಈ ಬೈಕಿನಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಆದರೆ, 2020ರ ನಿಂಜಾ ಝಡ್ಎಕ್ಸ್ 14 ಆರ್ ಬೈಕ್ ಮಾರುಕಟ್ಟೆಯಲ್ಲಿರುವ ಝಡ್ಎಕ್ಸ್ 14 ಆರ್ನ ಕೊನೆಯ ಆವೃತ್ತಿಯಾಗಿರಲಿದ್ದು, ಕವಾಸಕಿ ಕಂಪನಿಯು ಶೀಘ್ರದಲ್ಲೇ ಈ ಬೈಕ್ ಅನ್ನು ಸಂಪೂರ್ಣವಾಗಿ ಹೊಸದಾಗಿ ತಯಾರಿಸಲಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ನಿಂಜಾ ಝಡ್ಎಕ್ಸ್ 14 ಆರ್ ಬೈಕ್ ಅನ್ನು ಈಗಿರುವ ಮಾದರಿಯಲ್ಲಿ 2012 ರಿಂದ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಕವಾಸಕಿ ಕಂಪನಿಯು ಈ ಬೈಕ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನವೀಕರಿಸಲು ಮುಂದಾಗಿದೆ.

ಕವಾಸಕಿ ಝಡ್ಎಕ್ಸ್ 14 ಆರ್ ಬೈಕ್ ದೊಡ್ಡ ಗಾತ್ರವನ್ನು ಹೊಂದಿದೆ. ಈ ಬೈಕ್ 2170 ಎಂಎಂ ಉದ್ದ, 770 ಎಂಎಂ ಅಗಲ, 1170 ಎಂಎಂ ಎತ್ತರ ಹಾಗೂ 1480 ಎಂಎಂ ವ್ಹೀಲ್ಬೇಸ್ ಹೊಂದಿದೆ. ಝಡ್ಎಕ್ಸ್ 14 ಆರ್ ಬೈಕಿನಲ್ಲಿರುವ ಸೀಟಿನ ಎತ್ತರವು 800 ಎಂಎಂ ಆಗಿದ್ದರೆ, ಗ್ರೌಂಡ್ ಕ್ಲಿಯರೆನ್ಸ್ 125 ಎಂಎಂಗಳಾಗಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಕವಾಸಕಿ ಝಡ್ಎಕ್ಸ್ 14 ಆರ್ ಬೈಕಿನಲ್ಲಿ 1,441 ಸಿಸಿಯ ಲಿಕ್ವಿಡ್ ಕೂಲ್ಡ್ ಇನ್ ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ದೊಡ್ಡ ಗಾತ್ರದ ಎಂಜಿನ್ ಎರಡು ಪವರ್ ಔಟ್ಪುಟ್ಗಳನ್ನು ಉತ್ಪಾದಿಸುತ್ತದೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಏರ್ ಆಕ್ಟಿವೇಟ್ ಆಗಿದ್ದಾಗ 207.1 ಬಿಹೆಚ್ಪಿ ಪವರ್ ಹಾಗೂ ಏರ್ ಬಳಸದಿದ್ದಾಗ 197.3 ಬಿಹೆಚ್ಪಿ ಪವರ್ ಉತ್ಪಾದಿಸುತ್ತದೆ. ಈ ಎರಡೂ ಪವರ್ ಮೋಡ್ಗಳಲ್ಲಿ ಎಂಜಿನ್ 158.2 ಎನ್ಎಂ ಟಾರ್ಕ್ ಅನ್ನು ಸ್ಟ್ಯಾಂಡರ್ಡ್ ಆಗಿ ಉತ್ಪಾದಿಸುತ್ತದೆ.
MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಎಂಜಿನ್ನಲ್ಲಿ ಆರು ಸ್ಪೀಡಿನ ಗೇರ್ಬಾಕ್ಸ್ ಅಳವಡಿಸಲಾಗಿದೆ. ಈ ಸೂಪರ್ ಬೈಕ್ ಕವಾಸಕಿಯ ಮೂರು ಮೋಡ್ನ ಕೆಟಿಆರ್ಸಿಯನ್ನು (ಕವಾಸಕಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ) ಹೊಂದಿದೆ. ಹೆಚ್ಚುವರಿ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸಹ ಒಳಗೊಂಡಿದೆ.

ಸೂಪರ್ಬೈಕ್ನ ಸಸ್ಪೆಂಷನ್ ಕಾರ್ಯಗಳಿಗಾಗಿ ಮುಂಭಾಗದಲ್ಲಿ 43 ಎಂಎಂ ಅಪ್ಸೈಡ್ ಡೌನ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಓಹ್ಲಿನ್ಸ್ ಯುನಿಟ್ಗಳಿವೆ. ಎರಡೂ ಬದಿಗಳಲ್ಲಿ ಪ್ರಿ ಲೋಡ್ಗಾಗಿ ಅಡ್ಜಸ್ಟಬಿಲಿಟಿ ಹಾಗೂ ರಿಬೌಂಡ್ಗಳಿವೆ.

ಬ್ರೇಕ್ಗಳಿಗಾಗಿ ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 250 ಎಂಎಂ ಸಿಂಗಲ್ ರೋಟರ್ಗಳಿವೆ. ಈ ಎರಡೂ ಬ್ರೇಕ್ಗಳು ಬ್ರೆಂಬೊ ಕಂಪನಿಗೆ ಸೇರಿವೆ. ಕವಾಸಕಿ ಹಬ್ಬದ ಹಿನ್ನೆಲೆಯಲ್ಲಿ ತನ್ನ ಆಯ್ದ ಶ್ರೇಣಿಯ ಮಾದರಿಗಳ ಮೇಲೆ ಆಕರ್ಷಕ ರಿಯಾಯಿತಿ ಹಾಗೂ ಸೌಲಭ್ಯಗಳನ್ನು ನೀಡುತ್ತಿದೆ. ಈ ಆಫರ್ನಲ್ಲಿ ರೂ.85,000ಗಳವರೆಗಿನ ಸೌಲಭ್ಯಗಳನ್ನು ನೀಡಲಾಗುವುದು.

ಇವುಗಳನ್ನು ಕವಾಸಕಿ ಬೈಕುಗಳನ್ನು ಖರೀದಿಸುವಾಗ ಆರ್ಟಿಒ ಶುಲ್ಕ, ಎಕ್ಸ್ ಶೋ ರೂಂ ಬೆಲೆ ಹಾಗೂ ಆಕ್ಸೆಸರಿಸ್ಗಳ ವಿರುದ್ಧ ಪಡೆದುಕೊಳ್ಳಬಹುದು. ಈ ಯೋಜನೆಯಡಿ ಬರುವ ಮಾದರಿಗಳಲ್ಲಿ ನಿಂಜಾ ಝಡ್ಎಕ್ಸ್ 6 ಆರ್, ನಿಂಜಾ 1000, ನಿಂಜಾ 650, ನಿಂಜಾ 400, ವರ್ಸಿಸ್ 650, 6 ಡ್ 650 ಹಾಗೂ ವಲ್ಕನ್ ಎಸ್ ಬೈಕುಗಳು ಸೇರಿವೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಕವಾಸಕಿ ನಿಂಜಾ ಝಡ್ಎಕ್ಸ್ 14 ಆರ್ ಬೈಕ್, ಸೂಪರ್ಬೈಕುಗಳನ್ನು ಬಯಸುವ ಬೈಕ್ ಪ್ರಿಯರ ನೆಚ್ಚಿನ ಆಯ್ಕೆಯಾಗಿದೆ. ಬಿಎಸ್ 4 ಎಂಜಿನ್ ಹೊಂದಿರುವ ಕಾರಣಕ್ಕೆ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿರುವುದು ಸರಿಯಾಗಿದೆ.

ಹೊಸ ಮಾಲಿನ್ಯ ನಿಯಮಗಳು ಜಾರಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ವಾಹನಗಳನ್ನು ಬಿಎಸ್ 6 ಎಂಜಿನ್ನೊಂದಿಗೆ ಅಪ್ಗ್ರೇಡ್ಗೊಳಿಸಲಿದೆ. ನಿಂಜಾ ಝಡ್ಎಕ್ಸ್ 14 ಆರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸುಜುಕಿ ಹಯಾಬೂಸಾ ಸೇರಿದಂತೆ ಹಲವು ಬೈಕುಗಳಿಗೆ ಪೈಪೋಟಿ ನೀಡುತ್ತದೆ.