ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಕವಾಸಕಿ ಕಂಪನಿಯು ತನ್ನ ಹೊಸ 2020ರ ನಿಂಜಾ ಝಡ್‍ಎಕ್ಸ್ 14 ಆರ್ ಬೈಕುಗಳಿಗಾಗಿ ಬುಕ್ಕಿಂಗ್ ಶುರು ಮಾಡಿದೆ. 2020ರ ನಿಂಜಾ ಝಡ್‍ಎಕ್ಸ್ 14 ಆರ್ ಬೈಕಿನ ಬೆಲೆಯು ಮಾರುಕಟ್ಟೆಯಲ್ಲಿರುವ 2019ರ ಮಾದರಿಯ ಬೈಕಿನಷ್ಟೇ ಅಂದರೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.19.70 ಲಕ್ಷಗಳಾಗಿರಲಿದೆ.

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಕವಾಸಕಿ ಡೀಲರ್‍‍ಗಳು ಈ ಬೈಕಿಗಳಿಗಾಗಿ ಬುಕ್ಕಿಂಗ್ ಆರಂಭವಾಗಿರುವುದನ್ನು ಖಚಿತಪಡಿಸಿದ್ದಾರೆ. ಈ ಬುಕ್ಕಿಂಗ್ ಸೀಮಿತ ಅವಧಿಯವರೆಗೂ ಜಾರಿಯಲ್ಲಿರಲಿದ್ದು, ಸೀಮಿತ ಸಂಖ್ಯೆಯ ಬೈಕುಗಳನ್ನು ಮಾತ್ರ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಹೊಸ ಬೈಕ್ ಅನ್ನು ಹೊಸ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

2020ರ ಕವಾಸಕಿ ಝಡ್‍ಎಕ್ಸ್ 14 ಆರ್ ಬೈಕ್ ಮೆಟಾಲಿಕ್ ಡಯಾಬ್ಲೊ ಬ್ಲಾಕ್ ಹಾಗೂ ಗೋಲ್ಡನ್ ಬ್ಲೇಜ್ಡ್ ಗ್ರೀನ್ ಎಂಬ ಎರಡು ಬಣ್ಣಗಳನ್ನು ಹೊಂದಿರಲಿದೆ. ಹೊಸ ಬೈಕಿನಲ್ಲಿರುವ ಹೊಸ ಬಣ್ಣವು ಮಾರುಕಟ್ಟೆಯಲ್ಲಿರುವ ಬೈಕ್ ಹೊಂದಿರುವ ಹಸಿರು ಬಣ್ಣಕ್ಕಿಂತ ಹೆಚ್ಚು ಆಕರ್ಷಕವಾಗಿ ಕಾಣಲಿದೆ.

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಹೊಸ ಬೈಕ್ ಬಿ‍ಎಸ್ 4 ಎಂಜಿನ್ ಹೊಂದಿರುವ ಕಾರಣ ಈ ಬೈಕ್ ಅನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುವುದು. ಕವಾಸಕಿ ಕಂಪನಿಯು 2020ರ ಏಪ್ರಿಲ್ 1ರಿಂದ ಹೊಸ ಬಿಎಸ್ 6 ನಿಯಮಗಳು ಜಾರಿಗೆ ಬರುವ ಮುನ್ನ ಸ್ಟಾಕ್‍‍ನಲ್ಲಿರುವ ತನ್ನ ಎಲ್ಲಾ ಬಿ‍ಎಸ್ 4 ಬೈಕುಗಳನ್ನು ಮಾರಾಟ ಮಾಡಲು ಬಯಸಿದೆ.

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಹೊಸ ಬಣ್ಣದ ಹೊರತಾಗಿ ಈ ಬೈಕಿನಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಆದರೆ, 2020ರ ನಿಂಜಾ ಝಡ್ಎಕ್ಸ್ 14 ಆರ್ ಬೈಕ್ ಮಾರುಕಟ್ಟೆಯಲ್ಲಿರುವ ಝಡ್‍ಎಕ್ಸ್ 14 ಆರ್‍‍ನ ಕೊನೆಯ ಆವೃತ್ತಿಯಾಗಿರಲಿದ್ದು, ಕವಾಸಕಿ ಕಂಪನಿಯು ಶೀಘ್ರದಲ್ಲೇ ಈ ಬೈಕ್ ಅನ್ನು ಸಂಪೂರ್ಣವಾಗಿ ಹೊಸದಾಗಿ ತಯಾರಿಸಲಿದೆ.

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಸದ್ಯ ಮಾರುಕಟ್ಟೆಯಲ್ಲಿರುವ ನಿಂಜಾ ಝಡ್ಎಕ್ಸ್ 14 ಆರ್ ಬೈಕ್ ಅನ್ನು ಈಗಿರುವ ಮಾದರಿಯಲ್ಲಿ 2012 ರಿಂದ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಕವಾಸಕಿ ಕಂಪನಿಯು ಈ ಬೈಕ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನವೀಕರಿಸಲು ಮುಂದಾಗಿದೆ.

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಕವಾಸಕಿ ಝಡ್‌ಎಕ್ಸ್ 14 ಆರ್ ಬೈಕ್ ದೊಡ್ಡ ಗಾತ್ರವನ್ನು ಹೊಂದಿದೆ. ಈ ಬೈಕ್ 2170 ಎಂಎಂ ಉದ್ದ, 770 ಎಂಎಂ ಅಗಲ, 1170 ಎಂಎಂ ಎತ್ತರ ಹಾಗೂ 1480 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಝಡ್ಎಕ್ಸ್ 14 ಆರ್ ಬೈಕಿನಲ್ಲಿರುವ ಸೀಟಿನ ಎತ್ತರವು 800 ಎಂಎಂ ಆಗಿದ್ದರೆ, ಗ್ರೌಂಡ್ ಕ್ಲಿಯರೆನ್ಸ್ 125 ಎಂಎಂಗಳಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಕವಾಸಕಿ ಝಡ್‌ಎಕ್ಸ್ 14 ಆರ್ ಬೈಕಿನಲ್ಲಿ 1,441 ಸಿಸಿಯ ಲಿಕ್ವಿಡ್ ಕೂಲ್ಡ್ ಇನ್ ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ದೊಡ್ಡ ಗಾತ್ರದ ಎಂಜಿನ್ ಎರಡು ಪವರ್ ಔ‍‍ಟ್‍‍ಪುಟ್‍‍ಗಳನ್ನು ಉತ್ಪಾದಿಸುತ್ತದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಏರ್ ಆಕ್ಟಿವೇಟ್ ಆಗಿದ್ದಾಗ 207.1 ಬಿಹೆಚ್‌ಪಿ ಪವರ್ ಹಾಗೂ ಏರ್ ಬಳಸದಿದ್ದಾಗ 197.3 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎರಡೂ ಪವರ್ ಮೋಡ್‌ಗಳಲ್ಲಿ ಎಂಜಿನ್ 158.2 ಎನ್‍ಎಂ ಟಾರ್ಕ್ ಅನ್ನು ಸ್ಟ್ಯಾಂಡರ್ಡ್ ಆಗಿ ಉತ್ಪಾದಿಸುತ್ತದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಎಂಜಿನ್‍‍ನಲ್ಲಿ ಆರು ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಈ ಸೂಪರ್ ಬೈಕ್ ಕವಾಸಕಿಯ ಮೂರು ಮೋಡ್‍‍ನ ಕೆಟಿಆರ್‍‍ಸಿಯನ್ನು (ಕವಾಸಕಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ) ಹೊಂದಿದೆ. ಹೆಚ್ಚುವರಿ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸಹ ಒಳಗೊಂಡಿದೆ.

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಸೂಪರ್‌ಬೈಕ್‌ನ ಸಸ್ಪೆಂಷನ್ ಕಾರ್ಯಗಳಿಗಾಗಿ ಮುಂಭಾಗದಲ್ಲಿ 43 ಎಂಎಂ ಅಪ್‌ಸೈಡ್ ಡೌನ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಓಹ್ಲಿನ್ಸ್ ಯುನಿಟ್‍‍ಗಳಿವೆ. ಎರಡೂ ಬದಿಗಳಲ್ಲಿ ಪ್ರಿ ಲೋಡ್‌ಗಾಗಿ ಅಡ್ಜಸ್ಟಬಿಲಿಟಿ ಹಾಗೂ ರಿಬೌಂಡ್‍‍ಗಳಿವೆ.

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಬ್ರೇಕ್‌ಗಳಿಗಾಗಿ ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 250 ಎಂಎಂ ಸಿಂಗಲ್ ರೋಟರ್‍‍ಗಳಿವೆ. ಈ ಎರಡೂ ಬ್ರೇಕ್‍‍ಗಳು ಬ್ರೆಂಬೊ ಕಂಪನಿಗೆ ಸೇರಿವೆ. ಕವಾಸಕಿ ಹಬ್ಬದ ಹಿನ್ನೆಲೆಯಲ್ಲಿ ತನ್ನ ಆಯ್ದ ಶ್ರೇಣಿಯ ಮಾದರಿಗಳ ಮೇಲೆ ಆಕರ್ಷಕ ರಿಯಾಯಿತಿ ಹಾಗೂ ಸೌಲಭ್ಯಗಳನ್ನು ನೀಡುತ್ತಿದೆ. ಈ ಆಫರ್‍‍ನಲ್ಲಿ ರೂ.85,000ಗಳವರೆಗಿನ ಸೌಲಭ್ಯಗಳನ್ನು ನೀಡಲಾಗುವುದು.

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಇವುಗಳನ್ನು ಕವಾಸಕಿ ಬೈಕುಗಳನ್ನು ಖರೀದಿಸುವಾಗ ಆರ್‌ಟಿಒ ಶುಲ್ಕ, ಎಕ್ಸ್ ಶೋ ರೂಂ ಬೆಲೆ ಹಾಗೂ ಆಕ್ಸೆಸರಿಸ್‍‍ಗಳ ವಿರುದ್ಧ ಪಡೆದುಕೊಳ್ಳಬಹುದು. ಈ ಯೋಜನೆಯಡಿ ಬರುವ ಮಾದರಿಗಳಲ್ಲಿ ನಿಂಜಾ ಝಡ್ಎಕ್ಸ್ 6 ಆರ್, ನಿಂಜಾ 1000, ನಿಂಜಾ 650, ನಿಂಜಾ 400, ವರ್ಸಿಸ್ 650, 6 ಡ್ 650 ಹಾಗೂ ವಲ್ಕನ್ ಎಸ್ ಬೈಕುಗಳು ಸೇರಿವೆ.

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಕವಾಸಕಿ ನಿಂಜಾ ಝಡ್‍‍ಎಕ್ಸ್ 14 ಆರ್ ಬೈಕ್, ಸೂಪರ್‍‍ಬೈಕುಗಳನ್ನು ಬಯಸುವ ಬೈಕ್ ಪ್ರಿಯರ ನೆಚ್ಚಿನ ಆಯ್ಕೆಯಾಗಿದೆ. ಬಿ‍ಎಸ್ 4 ಎಂಜಿನ್ ಹೊಂದಿರುವ ಕಾರಣಕ್ಕೆ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿರುವುದು ಸರಿಯಾಗಿದೆ.

ಶುರುವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 14 ಆರ್ ಬುಕ್ಕಿಂಗ್

ಹೊಸ ಮಾಲಿನ್ಯ ನಿಯಮಗಳು ಜಾರಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ವಾಹನಗಳನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಗ್ರೇಡ್‍‍ಗೊಳಿಸಲಿದೆ. ನಿಂಜಾ ಝಡ್‍ಎಕ್ಸ್ 14 ಆರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸುಜುಕಿ ಹಯಾಬೂಸಾ ಸೇರಿದಂತೆ ಹಲವು ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2020 Kawasaki Ninja ZX-14R Bookings Commence: New Colour & Limited Numbers Only - Read in Kannada
Story first published: Friday, October 18, 2019, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X