ಕಡಿಮೆ ಅವಧಿಯಲ್ಲಿ ದಾಖಲೆ ಬರೆದ ಕವಾಸಕಿ ನಿಂಜಾ 300

300 ಸಿಸಿಯ ಬೈಕುಗಳ ಮಾರುಕಟ್ಟೆಯಲ್ಲಿರುವವರಿಗೆ, ಕವಾಸಕಿ ನಿಂಜಾ 300 ಬೈಕಿನ ಬಗ್ಗೆ ತಿಳಿದಿರುತ್ತದೆ. ಈ ಬೈಕ್‍‍ನ ಮಾರಾಟವು ಕಂಪನಿಯನ್ನು ಉತ್ತಮವಾದ ಸ್ಥಾನದಲ್ಲಿಟ್ಟಿದೆ. ಕಂಪನಿಯು ನಿಂಜಾ300ದ 1,000 ಬೈಕ್‍ಗಳನ್ನು ಮಾರಾಟ ಮಾಡಿರುವುದಾಗಿ ಘೋಷಿಸಿದೆ.

ಕಡಿಮೆ ಅವಧಿಯಲ್ಲಿ ದಾಖಲೆ ಬರೆದ ಕವಾಸಕಿ ನಿಂಜಾ 300

ಈ ಬೈಕ್ ಅನ್ನು ದೇಶಿಯವಾಗಿ ತಯಾರಿಸುತ್ತಿರುವುದು ಸಹ ಬೈಕಿನ ಬೆಲೆ ಕಡಿಮೆಯಾಗಿ, ಬೈಕಿನ ಮಾರಾಟವು ಚೇತರಿಸಿಕೊಳ್ಳಲು ನೆರವಾಗಿದೆ. 2018ರ ಮಧ್ಯ ಭಾಗದಲ್ಲಿ ಕಂಪನಿಯು ಕವಾಸಕಿ ನಿಂಜಾ300 ಬೈಕ್ ಅನ್ನು ದೇಶಿಯವಾಗಿ ನಿರ್ಮಿಸಿ ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಬೆಳವಣಿಗೆಯಲ್ಲಿ ಕಂಪನಿಯ ವತಿಯಿಂದ ಗ್ರಾಹಕರಿಗೆ ಆರಂಭಿಕ ಕೊಡುಗೆಗಳನ್ನು ನೀಡಲಾಗಿತ್ತು. ಸುಮಾರು ರೂ.80,000 ಗಳವರೆಗೆ ಕೊಡುಗೆಗಳನ್ನು ನೀಡಲಾಗಿತ್ತು.

ಕಡಿಮೆ ಅವಧಿಯಲ್ಲಿ ದಾಖಲೆ ಬರೆದ ಕವಾಸಕಿ ನಿಂಜಾ 300

ಎ‍‍ಬಿ‍ಎಸ್ ಹೊಂದಿಲ್ಲದ ಸಿ‍‍ಬಿ‍‍ಯು ಮಾದರಿಯ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.3.63 ಲಕ್ಷಗಳಾಗಿತ್ತು. ಬದಲಾದ ಸುರಕ್ಷತಾ ನಿಯಮಗಳಿಗನುಗುಣವಾಗಿ ದೇಶಿಯ ನಿರ್ಮಿತ ನಿಂಜಾ300 ಬೈಕಿನಲ್ಲಿ ಸ್ಟಾಂಡರ್ಡ್ ಆಗಿ ಎ‍‍ಬಿ‍ಎಸ್ ನೀಡಲಾಗುತ್ತಿದೆ.

ಕಡಿಮೆ ಅವಧಿಯಲ್ಲಿ ದಾಖಲೆ ಬರೆದ ಕವಾಸಕಿ ನಿಂಜಾ 300

300 ಸಿಸಿಯ ವ್ಯಾಪ್ತಿಯಲ್ಲಿರುವ ಬೈಕುಗಳಿಗೆ ಎ‍‍ಬಿ‍ಎಸ್ ಕಡ್ಡಾಯವೆಂಬ ನಿಯಮ 2019ರ ಏಪ್ರಿಲ್ 1 ರಿಂದ ಜಾರಿಗೆ ಬಂದ ನಂತರ ನಿಂಜಾ ಬೈಕಿನಲ್ಲೂ ಎ‍‍ಬಿ‍ಎಸ್ ಅಳವಡಿಸಲಾಗಿದೆ. ಎಬಿ‍ಎಸ್ ಇಲ್ಲದ ಮಾರಾಟವಾಗದೇ ಉಳಿದಿದ್ದ ನಿಂಜಾ300 ಬೈಕುಗಳನ್ನು, ಕಡಿಮೆ ಅವಧಿಯಲ್ಲಿ ಆಕರ್ಷಕ ದರಗಳಲ್ಲಿ ಮಾರಾಟ ಮಾಡಲಾಯಿತು.

ಕಡಿಮೆ ಅವಧಿಯಲ್ಲಿ ದಾಖಲೆ ಬರೆದ ಕವಾಸಕಿ ನಿಂಜಾ 300

ಬೆಲೆಗಳಲ್ಲಿನ ಏರಿಳಿತವನ್ನು ನಿಯಂತ್ರಿಸುವ ಉದ್ದೇಶದಿಂದ ಕವಾಸಕಿ ಇಂಡಿಯಾ ತನ್ನ ಎಲ್ಲಾ ಮಾದರಿಯ ವಾಹನಗಳ ಬೆಲೆಯನ್ನು 7% ನಷ್ಟು ಏರಿಕೆ ಮಾಡಿತು. ದೇಶಿಯವಾಗಿ ತಯಾರಿಸಲಾದ ಕವಾಸಕಿ ಎಂ‍‍ವೈ 2019 ನಿಂಜಾ 300 ಎ‍‍‍ಬಿ‍ಎಸ್ ಬೈಕ್ ಅನ್ನು 2018ರ ಜುಲೈನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾದಾಗ ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.2.98 ಲಕ್ಷಗಳಾಗಿತ್ತು.

ಕಡಿಮೆ ಅವಧಿಯಲ್ಲಿ ದಾಖಲೆ ಬರೆದ ಕವಾಸಕಿ ನಿಂಜಾ 300

ಕವಾಸಕಿ ನಿಂಜಾ ಬೈಕಿನಲ್ಲಿ ಹೆಚ್ಚಿನ ಪ್ರಮಾಣದ ಸ್ಟೀಲ್ ಫ್ರೇಂ ಇದ್ದು, ಸುಧಾರಿತ ಚಾಸೀಸ್‍‍‍ನ ಸ್ಥಿರತೆಗೆ ಸಹಕಾರಿಯಾಗಲಿದೆ. ಇದರಲ್ಲಿರುವ ರೇಸಿಂಗ್ ಟೆಕ್ನಾಲಜಿ ಅಸಿಸ್ಟ್ ಮತ್ತು ಸ್ಲಿಪರ್ ಕ್ಲಚ್ ಫಂಕ್ಷನಾಲಿಟಿಗಳು, ಬ್ಯಾಕ್ ಟಾರ್ಕ್ ಲಿಮಿಟರ್ ಹಾಗೂ ಕ್ಲಚ್ ಲಿವರ್‍‍‍‍ಗಾಗಿ ಸ್ವಯಂ ಚಾಲಿತ ಮೆಕಾನಿಕ್‍‍ಗಳನ್ನು ಒಳಗೊಂಡಿವೆ.

MOST READ: ರಾಯಲ್ ಎನ್‍‍ಫೀಲ್ಡ್ ಗೆ ಪೈಪೋಟಿ ನೀಡಲಿರುವ ಹಾರ್ಲೆ ಡೇವಿಡ್ಸನ್‍‍ನ ಹೊಸ ಬೈಕ್

ಕಡಿಮೆ ಅವಧಿಯಲ್ಲಿ ದಾಖಲೆ ಬರೆದ ಕವಾಸಕಿ ನಿಂಜಾ 300

ಈಗಿರುವ ಮಾದರಿಯಲ್ಲಿ ಈ ಬೈಕ್ ಎಲ್‍ಇ‍‍ಡಿ ಹೆಡ್ ಲೈಟ್ ಹಾಗೂ ಟೇಲ್ ಲ್ಯಾಂಪ್‍‍ಗಳ ಜೊತೆಗೆ ಇನ್ಸ್ ಟ್ರೂಮೆಂಟ್ ಕಂಸೋಲ್ ಹೊಂದಿದೆ.

ಕಡಿಮೆ ಅವಧಿಯಲ್ಲಿ ದಾಖಲೆ ಬರೆದ ಕವಾಸಕಿ ನಿಂಜಾ 300

ಈ ಬೈಕಿನಲ್ಲಿ 296 ಸಿಸಿಯ ಪ್ಯಾರಲೆಲ್ ಟ್ವಿನ್, 4 ಸ್ಟ್ರೋಕ್, ಫ್ಯೂಯಲ್ ಇಂಜೆಕ್ಟೆಡ್, ಲಿಕ್ವಿಡ್ ಕೂಲ್ ನ ಎಂಜಿನ್ ಅಳವಡಿಸಲಾಗಿದ್ದು, 38.5 ಬಿ‍‍ಹೆಚ್‍‍ಪಿಯನ್ನು 11,000 ಆರ್‍‍ಪಿ‍ಎಂನಲ್ಲಿ ಮತ್ತು 27 ಎನ್‍ಎಂ ಟಾರ್ಕ್ ಅನ್ನು 10,000 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ.

ಕಡಿಮೆ ಅವಧಿಯಲ್ಲಿ ದಾಖಲೆ ಬರೆದ ಕವಾಸಕಿ ನಿಂಜಾ 300

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್ ಬಾಕ್ಸ್ ಇದೆ. ಮುಂಭಾಗದ ಡಿಸ್ಕ್ ಬ್ರೇಕ್ 290 ಎಂಎಂ, ಹಿಂಭಾಗದ ಡಿಸ್ಕ್ 220 ಎಂಎಂ ಗಾತ್ರ ಹೊಂದಿವೆ. ಲೈಮ್ ಗ್ರೀನ್, ಎಬೊನಿ, ಕ್ಯಾಂಡಿ ಪ್ಲಾಸ್ಮಾ ಬ್ಲೂ ಎಂಬ ಬಣ್ಣಗಳಲ್ಲಿ ಲಭ್ಯವಿದೆ.

Most Read Articles

Kannada
English summary
Made in India Kawasaki Ninja 300 sales cross 1,000 units in record time - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X