ಕವಾಸಕಿ ನಿಂಜಾ300 ಬೈಕಿಗೆ ಹೆಚ್ಚಿದ ಬೇಡಿಕೆ

ಬಿಡುಗಡೆಯಾಗಿ ಆರು ವರ್ಷಗಳಾಗಿದ್ದರೂ, ಕವಾಸಕಿ ನಿಂಜಾ 300 ಬೈಕ್ ದೇಶಿಯ ಮೋಟಾರ್ ಸೈಕಲ್ ಮಾರುಕಟ್ಟೆಯಲ್ಲಿ ಪ್ರಮುಖ ಬೈಕ್ ಆಗಿ ಮುಂದುವರೆದಿದೆ. ಅಂಕಿ ಅಂಶಗಳ ಪ್ರಕಾರ 2019ರ ಮೇ ತಿಂಗಳಲ್ಲಿ ಕವಾಸಕಿ ನಿಂಜಾ300ನ 174 ಬೈಕುಗಳು ಮಾರಾಟವಾಗಿದ್ದರೆ, ಇತ್ತೀಚೆಗೆ ಬಿಡುಗಡೆಯಾದ ಟಿವಿಎಸ್ ಅಪಾಚೆ ಆರ್‍ಆರ್ 310ರ 175 ಬೈಕುಗಳು ಮಾರಾಟವಾಗಿವೆ. ನಿಂಜಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲವೇ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯಲಿದೆ.

ಕವಾಸಕಿ ನಿಂಜಾ300 ಬೈಕಿಗೆ ಹೆಚ್ಚಿದ ಬೇಡಿಕೆ

ಕವಾಸಕಿ ನಿಂಜಾ300 ಬೈಕ್ ಅನ್ನು 2013 ರಲ್ಲಿ ನಿಂಜಾ250 ಬೈಕಿನ ಬದಲಿಗೆ ಬಿಡುಗಡೆಗೊಳಿಸಲಾಯಿತು. ನಿಂಜಾ 300ರ ಬೆಲೆಗಳು ಕಳೆದ ವರ್ಷದವರೆಗೂ ಹೆಚ್ಚಾಗಿದ್ದ ಕಾರಣ ನಿಂಜಾ300 ಬೈಕುಗಳ ಮಾರಾಟದಲ್ಲಿ ಕುಸಿತವಾಗಿತ್ತು. ಕವಾಸಕಿ ನಿಂಜಾ300 ಬೈಕ್ ಅನ್ನು ಕಳೆದ ವರ್ಷವರೆಗೂ ಆಮದು ಮಾಡಿಕೊಂಡ ಬಿಡಿಭಾಗಗಳನ್ನು ಬಳಸಿ ಭಾರತದಲ್ಲಿ ತಯಾರಿಸಲಾಗಿತ್ತು. ಇದರಿಂದಾಗಿ ಬೈಕಿನ ಬೆಲೆಯು ಹೆಚ್ಚಾಗಿತ್ತು. ಇದರ ನಂತರ ಕವಾಸಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ನಿಂಜಾ 400 ಬೈಕ್ ಅನ್ನು ಬಿಡುಗಡೆಗೊಳಿಸಿತು. ಈ ಬೈಕ್ ಅನ್ನು ಸ್ಥಳೀಯ ಬಿಡಿಭಾಗಗಳನ್ನು ಬಳಸಿ ತಯಾರಿಸಿಲಾಯಿತು.

ಕವಾಸಕಿ ನಿಂಜಾ300 ಬೈಕಿಗೆ ಹೆಚ್ಚಿದ ಬೇಡಿಕೆ

ಇದರಿಂದಾಗಿ ನಿಂಜಾ300 ಹಾಗೂ ನಿಂಜಾ400 ಬೈಕುಗಳ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದ ವ್ಯತ್ಯಾಸ ಉಂಟಾಯಿತು. ಕವಾಸಕಿ ನಿಂಜಾ300 ಬೈಕ್ ಅನ್ನು ಸ್ಥಳೀಯವಾಗಿ ನಿರ್ಮಿಸಿದ ನಂತರ ಈ ಬೈಕಿನ ಬೆಲೆಯನ್ನು ಸುಮಾರು ರೂ.1 ಲಕ್ಷದವರೆಗೆ ಕಡಿಮೆ ಮಾಡಲಾಯಿತು. ಬೆಲೆ ಇಳಿಸಿದ ನಂತರ ಕವಾಸಕಿ ನಿಂಜಾ 300ಬೈಕಿನ ಮಾರಾಟದಲ್ಲಿ ಏರಿಕೆಯಾಯಿತು. ನಿಂಜಾ300 ದೇಶಿಯ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿರುವ ಟ್ವಿನ್ ಸಿಲಿಂಡರ್ ಬೈಕ್ ಆಗಿದೆ. ಮೇ 2018 ಹಾಗೂ ಮೇ 2019ರ ಮಾರಾಟಕ್ಕೆ ಹೋಲಿಸಿದಾಗ, ಮಾರಾಟವು 8,600%ನಷ್ಟು ಹೆಚ್ಚಾಗಿದೆ.

ಕವಾಸಕಿ ನಿಂಜಾ300 ಬೈಕಿಗೆ ಹೆಚ್ಚಿದ ಬೇಡಿಕೆ

2018ರ ಮೇ ತಿಂಗಳಲ್ಲಿ ಕೇವಲ 2 ನಿಂಜಾ300 ಬೈಕುಗಳ ಮಾರಾಟವಾಗಿತ್ತು. 2019ರ ಮೇ ತಿಂಗಳಿನಲ್ಲಿ 174 ಬೈಕುಗಳನ್ನು ಮಾರಾಟ ಮಾಡಲಾಗಿದೆ. ಮತ್ತೊಂದೆಡೆ ಟಿವಿಎಸ್ ಕಂಪನಿಯು, 2018ರ ಮೇ ತಿಂಗಳಲ್ಲಿ ಆರ್‍ಆರ್ 310ರ 595 ಬೈಕುಗಳನ್ನು ಮಾರಾಟ ಮಾಡಿತ್ತು. ಈ ಮಾರಾಟದಲ್ಲಿ 71% ಕುಸಿತವುಂಟಾಗಿ 2019ರ ಮೇ ತಿಂಗಳಿನಲ್ಲಿ ಕೇವಲ 175 ಬೈಕುಗಳ ಮಾರಾಟವಾಗಿದೆ. ಈ ವರ್ಷದ ಮೇ 27 ರಂದು ಟಿವಿಎಸ್ ಅಪಾಚೆ ಆರ್‍ಆರ್310ರ ನವೀಕರಣಗೊಂಡ ಬೈಕ್ ಅನ್ನು ಬಿಡುಗಡೆಗೊಳಿಸಿದ ಕಾರಣ ಮಾರಾಟದಲ್ಲಿ ಕುಸಿತ ಉಂಟಾಗಿದೆ.

ಕವಾಸಕಿ ನಿಂಜಾ300 ಬೈಕಿಗೆ ಹೆಚ್ಚಿದ ಬೇಡಿಕೆ

ನವೀಕೃತ ಬೈಕಿನ ಬಿಡುಗಡೆಯ ಬಗ್ಗೆ ಮಾರ್ಚ್/ ಏಪ್ರಿಲ್ ತಿಂಗಳಿನಲ್ಲಿ ಬಹಿರಂಗಪಡಿಸಿದ ಕಾರಣಕ್ಕೆ ಬೈಕುಗಳನ್ನು ಖರೀದಿಸಲು ಬಯಸಿದ್ದವರು ಬೈಕುಗಳ ಖರೀದಿಯನ್ನು ಮುಂದೂಡಿರುವ ಸಾಧ್ಯತೆಗಳಿವೆ. ಖರೀದಿಯನ್ನು ಮುಂದೂಡಿದ್ದವರು ಹೊಸ ಫೀಚರ್‍‍ಗಳನ್ನು ಹೊಂದಿರುವ ನವೀಕೃತ ಬೈಕ್ ಪಡೆಯಲಿದ್ದಾರೆ. ಟಿವಿ‍ಎಸ್ ಅಪಾಚೆ ಆರ್‍‍ಆರ್310 ನವೀಕೃತ ಬೈಕಿನಲ್ಲಿ ರೇಸ್ ಟ್ಯೂನ್ ಸ್ಲಿಪರ್ ಕ್ಲಚ್, ಅಪ್‍‍ಡೇಟೆಡ್ ಇ‍‍ಸಿಯು, ಮರುವಿನ್ಯಾಸದ ವೈಸರ್, ಚೈನ್ ರೋಲರ್ ಹಾಗೂ ವೈಬ್ರೇಷನ್ ಡ್ಯಾಂಪಿಂಗ್‍‍ಗಾಗಿ ತೂಕವಿರುವ ಬಾರ್ ಎಂಡ್ ವೇಟ್‍‍ಗಳನ್ನು ಅಳವಡಿಸಲಾಗಿದೆ.

MOST READ: ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಕವಾಸಕಿ ನಿಂಜಾ300 ಬೈಕಿಗೆ ಹೆಚ್ಚಿನ ಬೇಡಿಕೆ

ಮೊದಲೇ ಜನಪ್ರಿಯವಾಗಿದ್ದ ಅಪಾಚೆ ಆರ್‍‍ಆರ್310 ಬೈಕ್ ಅನ್ನು ಅಪ್‍‍ಡೇಟ್‍‍ಗಳಿಂದಾಗಿ ಮತ್ತಷ್ಟು ಆಕರ್ಷಣೀಯವಾಗಿಸಲಾಗಿದೆ. ನವೀಕರಿಸಿದ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್ ಅನ್ನು ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್‌ನಲ್ಲಿ ಚಲಾಯಿಸಿ ಪರೀಕ್ಷಿಸಲಾಗಿತ್ತು. ಜನರು ನವೀಕೃತ ಬೈಕಿನ ಖರೀದಿಗಾಗಿ ಕಾಯುತ್ತಿದ್ದ ಕಾರಣ ಈ ಬೈಕಿನ ಮಾರಾಟದಲ್ಲಿ ಕುಸಿತ ಉಂಟಾಗಿದೆ. ಅಪಾಚೆ ಆರ್‍ಆರ್310 ಬೈಕಿನ ಮಾರಾಟವು ಜೂನ್ ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.

MOST READ: ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಕವಾಸಕಿ ನಿಂಜಾ300 ಬೈಕಿಗೆ ಹೆಚ್ಚಿನ ಬೇಡಿಕೆ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕುಗಳ ಮಾರಾಟವು ಜೂನ್ ತಿಂಗಳಿನಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ ನಿಂಜಾ300 ಬೈಕಿನ ಮಾರಾಟ. ಕವಾಸಕಿ ಈ ಬೈಕಿನಲ್ಲಿರುವ ಯಾವುದೇ ಮೆಕಾನಿಕಲ್ ಅಂಶಗಳನ್ನು ನವೀಕರಿಸಿಲ್ಲ. ಆದರೆ ಈ ಬೈಕ್ ಅನ್ನು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಳಿಸಿದೆ. ಇದರ ಹೊರತಾಗಿಯೂ, ನಿಂಜಾ300 ಬೈಕ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿರುವುದು ಬೈಕ್ ಯಾವ ರೀತಿಯಾಗಿ ಅದ್ಭುತವಾಗಿದೆ ಎಂಬುದನ್ನು ತೋರಿಸುತ್ತದೆ.

Most Read Articles

Kannada
English summary
Kawasaki Ninja 300 Sales Going Strong; Matches That Of TVS Apache RR 310 — Here’s Why - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X