ಹೊಸ ಬಣ್ಣದೊಂದಿಗೆ ಬಿಡುಗಡೆಗೊಂಡ 2020ರ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್

ಕವಾಸಕಿ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಸೂಪರ್ ಬೈಕ್ ಆವೃತ್ತಿಯಾದ ನಿಂಜಾ ಜೆಡ್ಎಕ್ಸ್-10ಆರ್ ಬೈಕಿನ 2020ರ ಮಾದರಿಯನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದ್ದು, ಹೊಸ ಬಣ್ಣದ ಆಯ್ಕೆಯನ್ನು ಹೊಂದಿರುವ ನಿಂಜಾ ಜೆಡ್ಎಕ್ಸ್-10ಆರ್ ಬೈಕ್ ಈ ಭಾರೀ ಮತ್ತೊಂದು ಹೊಸ ಬಣ್ಣದಲ್ಲಿ ಖರೀದಿಗೆ ಲಭ್ಯವಾಗಿದೆ.

ಹೊಸ ಬಣ್ಣದೊಂದಿಗೆ ಬಿಡುಗಡೆಗೊಂಡ 2020ರ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್

2020ರ ನಿಂಜಾ ಜೆಡ್ಎಕ್ಸ್-10ಆರ್ ಬೈಕ್ ಮಾದರಿಯು ಕೆಲವು ತಾಂತ್ರಿಕ ಬದಲಾವಣೆಗಳೊಂದಿಗೆ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಈ ಹಿಂದಿನಂತೆಯೇ ತಾಂತ್ರಿಕ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದ್ದು, ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.13.99 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಸಿಕೆಡಿ ವಿಧಾನ ಮೂಲಕ ಭಾರತದಲ್ಲಿ ಮಾರಾಟವಾಗುವ ನಿಂಜಾ ಜೆಡ್ಎಕ್ಸ್-10ಆರ್ ಬೈಕ್ ಮಾದರಿಯು ಹೊಸದಾಗಿ ನೀಡಲಾಗಿರುವ ಬಣ್ಣದ ಆಯ್ಕೆಯು ಬೈಕಿಗೆ ಹೊಸ ಲುಕ್ ನೀಡಿದೆ.

ಹೊಸ ಬಣ್ಣದೊಂದಿಗೆ ಬಿಡುಗಡೆಗೊಂಡ 2020ರ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್

ಕವಾಸಕಿ ನಿರ್ಮಾಣದ ಬಹುತೇಕ ಬೈಕ್ ಮಾದರಿಗಳು ಗ್ರಿನ್ ಮತ್ತು ಬ್ಲ್ಯಾಕ್ ಬಣ್ಣಗಳನ್ನೇ ಹೊಂದಿದ್ದು, ಇದೀಗ ಬಿಡುಗಡೆಯಾಗಿರುವ ಹೊಸ ನಿಂಜಾ ಜೆಡ್ಎಕ್ಸ್-10 ಬೈಕ್ ಮಾದರಿಯು ಗ್ರಿನ್ ಮತ್ತು ಬ್ಲ್ಯಾಕ್ ಬಣ್ಣದ ಜೊತೆಗೆ ಬೈಕಿನ ಫೂಲ್ಯ ಟ್ಯಾಂಕ್ ಜೊತೆಗೆ ಅಲ್ಲಲ್ಲಿ ಗೋಲ್ಡ್ ಬಣ್ಣದ ಲೈನ್‌ಗಳನ್ನು ಬಳಕೆ ಮಾಡಲಾಗಿದೆ.

ಹೊಸ ಬಣ್ಣದೊಂದಿಗೆ ಬಿಡುಗಡೆಗೊಂಡ 2020ರ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್

ಗೋಲ್ಡ್ ಬಣ್ಣದ ಬ್ರಾಂಡ್ ಬ್ಯಾಡ್ಜ್ ಮತ್ತು ಲೈನ್‌ಗಳು ಬೈಕಿನ ಹೊರ ನೋಟವನ್ನೇ ಬದಲಿಸಿದ್ದು, ತನ್ನ ಸಾಂಪ್ರದಾಯಿಕ ಬಣ್ಣದ ಆಯ್ಕೆಯೊಂದಿಗೆ ಗೋಲ್ಡ್ ಬಣ್ಣವನ್ನು ನೀಡಿರುವುದು ಸೂಪರ್ ಬೈಕ್ ಖರೀದಿದಾರರ ಗಮನಸೆಳೆಯಲಿದೆ.

ಹೊಸ ಬಣ್ಣದೊಂದಿಗೆ ಬಿಡುಗಡೆಗೊಂಡ 2020ರ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್

ಇದರ ಹೊರತಾಗಿ ಈ ಹಿಂದಿನಂತೆಯೇ ತಾಂತ್ರಿಕ ಸೌಲಭ್ಯಗಳು ಮತ್ತು ದರ ಪಟ್ಟಿ ಹೊಂದಿರುವ ನಿಂಜಾ ಜೆಡ್ಎಕ್ಸ್-10ಆರ್ ಬೈಕ್ ಮಾದರಿಯು ಭಾರತದಲ್ಲೇ ಬಿಡಿಭಾಗಳ ಜೋಡಣೆಯಿಂದಾಗಿ ಬೈಕಿನ ಬೆಲೆಯಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯವಾಗಿದೆ. ಈ ಹಿಂದೆ ಸಂಪೂರ್ಣವಾಗಿ ಜಪಾನ್ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದ್ದ ನಿಂಜಾ ಜೆಡ್ಎಕ್ಸ್-10ಆರ್ ಬೈಕ್ ಅನ್ನು ಇದೀಗ ದೇಶಿಯವಾಗಿಯೇ ಬಿಡಿಭಾಗಗಳನ್ನು ಬಳಕೆ ಮಾಡುತ್ತಿದ್ದು, ಬೈಕಿನ ಬೆಲೆ ಇಳಿಕೆಗೆ ಕಾರಣವಾಗಿದೆ.

ಹೊಸ ಬಣ್ಣದೊಂದಿಗೆ ಬಿಡುಗಡೆಗೊಂಡ 2020ರ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್

ಇನ್ನು ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್ ಬೈಕ್ ಮಾದರಿಯು 998ಸಿಸಿ ಇನ್-ಲೈನ್ ಫೋರ್ ಸಿಲಿಂಡರ್ ಎಂಜಿನ್ ಹೊಂದಿದ್ದು, 200-ಬಿಎಚ್‌ಪಿ ಮತ್ತು 115-ಎನ್ಎಂ ಟಾರ್ಕ್ ಉತ್ಪಾದನೆಯ ಮೂಲಕ ಪ್ರತಿ ಗಂಟೆಗೆ 250 ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿದೆ.

MOST READ:ಬಂಪರ್ ಕ್ರ್ಯಾಶ್ ಗಾರ್ಡ್ ವಿರುದ್ದ ವಿಶೇಷ ಕಾರ್ಯಾಚರಣೆ- ನಿಯಮ ಉಲ್ಲಂಘನೆಗೆ ದಂಡ ಎಷ್ಟು ಗೊತ್ತಾ?

ಹೊಸ ಬಣ್ಣದೊಂದಿಗೆ ಬಿಡುಗಡೆಗೊಂಡ 2020ರ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್

ನಿಂಜಾ ಜೆಡ್ಎಕ್ಸ್-10ಆರ್ ಬೈಕಿನಲ್ಲಿ 43-ಎಂಎಂ ಫ್ರಂಟ್ ಇನ್ವರ್ಟೆಡ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಪೂರ್ಣ ಹೊಂದಾಣಿ ಮಾಡಿಕೊಳ್ಳಬಲ್ಲ ಮೊನೊ-ಶಾರ್ಕ್ ಸಸ್ಪೆಷನ್ ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್‌ನೊಂದಿಗೆ ಮುಂಭಾಗದ ಚಕ್ರದಲ್ಲಿ 330-ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220-ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಹೊಂದಿದೆ.

MOST READ:ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಹೊಸ ಬಣ್ಣದೊಂದಿಗೆ ಬಿಡುಗಡೆಗೊಂಡ 2020ರ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್

ಇದರೊಂದಿಗೆ ಹೊಸ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಮ್ಯಾನೆಜೆಮೆಂಟ್ ಫಂಕ್ಷನ್, ಎಂಜಿನ್ ಬ್ರೇಕ್ ಕಂಟ್ರೋಲ್, ಎಲೆಕ್ಟ್ರಾನಿಕ್ ಟ್ರೊಟಲ್ ವೆವ್ಸ್, ಒಹಿಲಿನ್ಸ್ ಎಲೆಕ್ಟ್ರಾನಿಕ್ ಸ್ಟಿರಿಂಗ್ ಡ್ಯಾಂಪರ್ ಮತ್ತು ಮಲ್ಟಿಪಲ್ ರೈಡಿಂಗ್ ಮೋಡ್ಸ್ ಸೌಲಭ್ಯಗಳನ್ನು ನೀಡಲಾಗಿದೆ.

MOST READ:ಕಿಯಾ ಸೆಲ್ಟೊಸ್ ಬಿಡುಗಡೆ- ಆಟೋ ಉದ್ಯಮದಲ್ಲಿ ಹೊಸ ಅಧ್ಯಾಯ ಶುರು..!

ಹೊಸ ಬಣ್ಣದೊಂದಿಗೆ ಬಿಡುಗಡೆಗೊಂಡ 2020ರ ಕವಾಸಕಿ ನಿಂಜಾ ಜೆಡ್ಎಕ್ಸ್-10ಆರ್

ಈ ಮೂಲಕ ಹೊಸ ನಿಂಜಾ ಜೆಡ್ಎಕ್ಸ್-ಆರ್10 ಬೈಕ್ ಮಾದರಿಯು ಸ್ಥಳೀಯವಾಗಿ ಅಭಿವೃದ್ಧಿ ಹೊಂದುವ ಮೂಲಕ ಆಕರ್ಷಕ ಬೆಲೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಯಮಹಾ ಆರ್1, ಬಿಎಂಡಬ್ಲ್ಯು ಎಸ್ 1000 ಆರ್‌ಆರ್, ಹೋಂಡಾ ಸಿಬಿಆರ್ 1000ಆರ್‌ಆರ್, ಡುಕಾಟಿ ಪಾನಿಗಾಲೆ ವಿ4, ಎಪ್ರಿಲಿಯಾ ಆರ್‌ಎಸ್‌ವಿ4-ಆರ್‌ಆರ್ ಮತ್ತು ಸುಜುಕಿ ಜಿಎಸ್ಎಕ್ಸ್-1000 ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
2020 Kawasaki Ninja ZX-10R Launched In A New Colour. Read in Kannada.
Story first published: Monday, August 26, 2019, 18:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X