ಬಿಡುಗಡೆಯಾಯ್ತು ಕವಾಸಕಿ ಡಬ್ಲ್ಯು800 ಸ್ಟ್ರೀಟ್

ಕವಾಸಕಿ ಕಂಪನಿಯು, ಡಬ್ಲ್ಯು 800 ಸ್ಟ್ರೀಟ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಕವಾಸಕಿ ಡಬ್ಲ್ಯು 800 ಸ್ಟ್ರೀಟ್ ಬೈಕಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7.99 ಲಕ್ಷಗಳಾಗಲಿದೆ. ಹೊಸ ಎಂ‍‍ವೈ20 ಡಬ್ಲ್ಯು800 ಸ್ಟ್ರೀಟ್ ಬೈಕ್, ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ ರೆಟ್ರೊ ಸರಣಿಗೆ ಹೊಸ ಸೇರ್ಪಡೆಯಾಗಿದೆ.

ಬಿಡುಗಡೆಯಾಯ್ತು ಕವಾಸಕಿ ಡಬ್ಲ್ಯು800 ಸ್ಟ್ರೀಟ್

ಕವಾಸಕಿ ಡಬ್ಲ್ಯು 800 ಸ್ಟ್ರೀಟ್ ಬೈಕ್, ಕ್ಲಾಸಿಕ್ ರೆಟ್ರೊ ಸ್ಟೈಲಿಂಗ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ, ಇದು ಸಾಂಪ್ರದಾಯಿಕ ಡಬ್ಲ್ಯು1 ಬೈಕುಗಳಿಂದ ಸ್ಫೂರ್ತಿ ಪಡೆದಿದೆ. ಡಬ್ಲ್ಯು800 ಸ್ಟ್ರೀಟ್ ಬೈಕ್ ಉತ್ತಮ ಗುಣಮಟ್ಟದ ಸಾಲಿಡ್ ಮೆಟಲ್ ಭಾಗಗಳೊಂದಿಗೆ ಹಳೆಯ ಡಿಸೈನ್ ಲ್ಯಾಂಗ್ವೇಜ್ ಅನ್ನು ನೀಡುತ್ತದೆ.

ಬಿಡುಗಡೆಯಾಯ್ತು ಕವಾಸಕಿ ಡಬ್ಲ್ಯು800 ಸ್ಟ್ರೀಟ್

ಇದು ಸೊಗಸಾದ ವಿನ್ಯಾಸವನ್ನು ಹೊಂದಿರುವ ನಯವಾದ ಬಾಹ್ಯರೇಖೆಗಳೊಂದಿಗೆ ಬರುತ್ತದೆ. ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಫ್ಯೂಯಲ್ ಟ್ಯಾಂಕ್‌ಗಳು ಹಾಗೂ ಜೋಡಿ ಕ್ರೋಮ್ ಎಕ್ಸಾಸ್ಟ್ ಪೈಪ್‌ಗಳೊಂದಿಗೆ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ. ಕವಾಸಕಿ ಡಬ್ಲ್ಯು 800 ಸ್ಟ್ರೀಟ್ ಬೈಕಿನಲ್ಲಿ 773 ಸಿಸಿ ಏರ್ ಕೂಲ್ಡ್ ಪ್ಯಾರೆಲಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಕವಾಸಕಿ ಡಬ್ಲ್ಯು800 ಸ್ಟ್ರೀಟ್

ಈ ಎಂಜಿನ್‍‍ನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್‌ಗೆ ಅಳವಡಿಸಲಾಗಿದೆ. ಕವಾಸಕಿ ಕಂಪನಿಯು, ಡಬ್ಲ್ಯು 800 ಬೈಕ್ ಉತ್ಪಾದಿಸುವ ಪವರ್ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಈ ಬೈಕ್ 4,800 ಆರ್‍‍ಪಿಎಂನಲ್ಲಿ 62.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ.

ಬಿಡುಗಡೆಯಾಯ್ತು ಕವಾಸಕಿ ಡಬ್ಲ್ಯು800 ಸ್ಟ್ರೀಟ್

ಈ ಬೈಕಿನ ಸುತ್ತಲೂ ಡಬಲ್ ಕ್ರೆಡಲ್ ಚಾಸೀಸ್ ಅಳವಡಿಸಲಾಗಿದ್ದು, ಆಧುನಿಕವಾದ ಸಸ್ಪೆಂಷನ್ ಸಿಸ್ಟಂಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಹಾಗೂ ಡ್ಯೂಯಲ್ ರೇರ್ ಶಾಕ್ ಅಬ್ಸ‍‍ರ್ವರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಕವಾಸಕಿ ಡಬ್ಲ್ಯು800 ಸ್ಟ್ರೀಟ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಡಬ್ಲ್ಯು 800 ಸ್ಟ್ರೀಟ್‌ ಬ್ರೇಕಿಂಗ್ ಕಾರ್ಯಗಳನ್ನು ಮುಂಭಾಗದಲ್ಲಿ ಸಿಂಗಲ್ 320 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ನಿರ್ವಹಿಸುತ್ತವೆ. ಇವುಗಳಿಗೆ ನೆರವಾಗಲು ಡ್ಯೂಯಲ್ ಚಾನೆಲ್ ಎ‍‍ಬಿ‍ಎಸ್ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಕವಾಸಕಿ ಡಬ್ಲ್ಯು800 ಸ್ಟ್ರೀಟ್

ಕವಾಸಕಿ ಡಬ್ಲ್ಯು 800 ಸ್ಟ್ರೀಟ್‌ ಬೈಕಿನಲ್ಲಿರುವ ಇತರ ಟೆಕ್ನಿಕಲ್ ಎಕ್ವಿಪ್‍‍ಮೆಂಟ್‍‍ಗಳೆಂದರೆ, 18 ಇಂಚಿನ ಅಲ್ಯೂಮಿನಿಯಂ ಸ್ಪೋಕ್ ವೀಲ್ಸ್, ಸ್ಲಿಪ್ಪರ್ ಕ್ಲಚ್ ಹಾಗೂ ಅಸಿಸ್ಟ್, 5 ವೇ ಅಡ್ಜಸ್ಟಬಲ್ ಕ್ಲಚ್ ಲಿವರ್, 4 ವೇ ಅಡ್ಜಸ್ಟಬಲ್ ಬ್ರೇಕ್ ಲಿವರ್, ಟ್ವಿನ್-ಎಕ್ಸಾಸ್ಟ್ ಹಾಗೂ ಕಾಂಪ್ಯಾಕ್ಟ್ ಸ್ವಿಚ್ ಗೇರ್‍‍ಗಳು.

ಬಿಡುಗಡೆಯಾಯ್ತು ಕವಾಸಕಿ ಡಬ್ಲ್ಯು800 ಸ್ಟ್ರೀಟ್

ಕವಾಸಕಿ ಡಬ್ಲ್ಯು 800 ಸ್ಟ್ರೀಟ್ ಬೈಕಿನಲ್ಲಿ ಸ್ಪೀಡೋಮೀಟರ್ ಹಾಗೂ ಟ್ಯಾಕೋಮೀಟರ್‍‍ಗಾಗಿ ಡ್ಯುಯಲ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮಲ್ಟಿ ಫಂಕ್ಷನಲ್ ಎಲ್‍‍ಸಿ‍‍ಡಿ ಸ್ಕ್ರೀನ್, ಆರಾಮದಾಯಕ ವಿಂಟೇಜ್ ರೈಡಿಂಗ್ ಪೊಸಿಷನ್, ಹಗುರವಾದ ಸ್ಪೋರ್ಟಿ ಹ್ಯಾಂಡ್ಲಿಂಗ್ ಹಾಗೂ ಮಫ್ಲರ್ ಡಿಸೈನ್‍‍ಗಳಿವೆ.

ಬಿಡುಗಡೆಯಾಯ್ತು ಕವಾಸಕಿ ಡಬ್ಲ್ಯು800 ಸ್ಟ್ರೀಟ್

ಎಂ‍‍ವೈ20 ಕವಾಸಕಿ ಡಬ್ಲ್ಯು800 ಸ್ಟ್ರೀಟ್ ಬೈಕ್ ಅನ್ನು, ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲಾಕ್ / ಮೆಟಾಲಿಕ್ ಮ್ಯಾಟ್ ಗ್ರ್ಯಾಫೈಟ್ ಗ್ರೇ, ಬಣ್ಣದಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ಡಬ್ಲ್ಯು 800 ಸ್ಟ್ರೀಟ್‌ ಬೈಕಿನ ಬುಕ್ಕಿಂಗ್‍‍ಗಳನ್ನು ಮೊದಲ ಹಂತದಲ್ಲಿ ನಿರ್ದಿಷ್ಟ ಸಂಖ್ಯೆಗೆ ಸೀಮಿತಗೊಳಿಸಲಾಗಿದೆ.

ಬಿಡುಗಡೆಯಾಯ್ತು ಕವಾಸಕಿ ಡಬ್ಲ್ಯು800 ಸ್ಟ್ರೀಟ್

ಈ ಬುಕ್ಕಿಂಗ್‍‍ಗಳನ್ನು ಆನ್‌ಲೈನ್ ಮೂಲಕ ಅಥವಾ ಭಾರತದಾದ್ಯಂತದ ಯಾವುದೇ ಡೀಲರ್‍‍ಗಳ ಮೂಲಕ ಮಾಡಬಹುದು. ಕವಾಸಕಿ ಡಬ್ಲ್ಯು 800 ಸ್ಟ್ರೀಟ್ ಬೈಕಿನ ಡೆಲಿವರಿಯನ್ನು ಆಗಸ್ಟ್ ಮಧ್ಯಭಾಗದಿಂದ ನೀಡಲಾಗುವುದು ಎಂದು ಹೇಳಲಾಗುತ್ತಿದೆ.

ಬಿಡುಗಡೆಯಾಯ್ತು ಕವಾಸಕಿ ಡಬ್ಲ್ಯು800 ಸ್ಟ್ರೀಟ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ, ಕವಾಸಕಿ ಕಂಪನಿಯ ಕ್ಲಾಸಿಕ್ ರೆಟ್ರೊ ಬೈಕುಗಳ ಸಾಲಿನಲ್ಲಿ ಕವಾಸಕಿ ಡಬ್ಲ್ಯು800 ಸ್ಟ್ರೀಟ್ ಇತ್ತೀಚಿನ ಸೇರ್ಪಡೆಯಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಬೈಕ್ ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕಿಗೆ ಪೈಪೋಟಿ ನೀಡಲಿದೆ. ಬೇರೆ ಬೈಕುಗಳಿಗೆ ಹೋಲಿಸಿದರೆ, ಕಡಿಮೆ ಬೆಲೆಯನ್ನು ಹೊಂದಿದೆ.

Most Read Articles

Kannada
English summary
Kawasaki W800 Street Launched in India — Prices Start At Rs 7.99 Lakh - Read in kannada
Story first published: Saturday, July 27, 2019, 16:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X