ಬೈಕ್ ಮಾರಾಟದಲ್ಲಿ ಯಮಹಾ ಎಂಟಿ-15 ಹಿಂದಿಕ್ಕಿದ ಕೆಟಿಎಂ ಡ್ಯೂಕ್ 125

ಪ್ರೀಮಿಯಂ ಬೈಕ್ ಮಾರಾಟದಲ್ಲಿ ಸದ್ಯ ಯಮಹಾ ಎಂಟಿ-15 ಮತ್ತು ಕೆಟಿಎಂ ಡ್ಯೂಕ್ 125 ಆವೃತ್ತಿಗಳ ನಡುವೆ ಭಾರೀ ಪೈಪೋಟಿಯಿದ್ದು, ಎರಡು ಬೈಕ್‌ಗಳು ಸಹ ಕಡಿಮೆ ಎಂಜಿನ್ ಸಾಮರ್ಥ್ಯವನ್ನು ಹೊಂದಿದ್ದರೂ ಸಹ ಪರ್ಫಾಮೆನ್ಸ್ ವಿಚಾರವಾಗಿ ಯುವಕನ ಪಾಲಿನ ಹಾಟ್ ಫೆವರಿಟ್ ಮಾದರಿಗಳಾಗಿವೆ.

ಬೈಕ್ ಮಾರಾಟದಲ್ಲಿ ಯಮಹಾ ಎಂಟಿ-15 ಹಿಂದಿಕ್ಕಿದ ಕೆಟಿಎಂ ಡ್ಯೂಕ್ 125

ಸದ್ಯ ಮಾರುಕಟ್ಟೆಯಲ್ಲಿ ಯಮಹಾ ಎಂಟಿ-15 ಮತ್ತು ಕೆಟಿಎಂ ಡ್ಯೂಕ್ ಮಧ್ಯೆ ಸಾಕಷ್ಟು ಪೈಪೋಟಿಯಿದ್ದು, ಬಿಡುಗಡೆಯಾದ ನಂತರ ಸತತವಾಗಿ ಡ್ಯೂಕ್ 125 ಬೈಕ್ ಮಾರಾಟಕ್ಕಿಂತಲೂ ಮುಂಚೂಣಿ ಸಾಧಿಸಿದ್ದ ಎಂಟಿ-15 ಬೈಕ್ ಇದೇ ಮೊದಲ ಬಾರಿಗೆ ಡ್ಯೂಕ್ 125 ಬೈಕ್‌ಗಿಂತಲೂ ಕಡಿಮೆ ಮಾರಾಟ ಪ್ರಮಾಣ ದಾಖಲಿಸಿದೆ. ಈ ಹಿಂದೆ ಡ್ಯೂಕ್ 125ಗಿಂತಲೂ ಬೈಕ್ ಮಾರಾಟದಲ್ಲಿ ಕನಿಷ್ಠ ಒಂದೂವರೆಯಿಂದ ಎರಡು ಸಾವಿರ ಯುನಿಟ್ ಮುಂಚೂಣಿ ಸಾಧಿಸುತ್ತಿದ್ದ ಎಂಟಿ-15 ಬೈಕ್ ಮಾದರಿಯು ಇದೀಗ ಡ್ಯೂಕ್ 125 ಮುಂದೆ ನೆಲಕಚ್ಚಿದೆ.

ಬೈಕ್ ಮಾರಾಟದಲ್ಲಿ ಯಮಹಾ ಎಂಟಿ-15 ಹಿಂದಿಕ್ಕಿದ ಕೆಟಿಎಂ ಡ್ಯೂಕ್ 125

ಹೌದು, ಕಳೆದ ಮೇ ತಿಂಗಳ ಅವಧಿಯಲ್ಲಿ ಯಮಹಾ ಎಂಟಿ-15 ಬೈಕ್ ಮಾದರಿಯು ಕೇವಲ 2,048 ಯುನಿಟ್‌ಗಳು ಮಾರಾಟವಾಗಿದ್ದರೆ ಕೆಟಿಎಂ ಡ್ಯೂಕ್ 125 ಬೈಕ್ ಮಾದರಿಯು ಮೇ ಅವಧಿಯಲ್ಲಿ 2,228 ಯುನಿಟ್ ಮಾರಾಟದೊಂದಿಗೆ ಎಂಟಿ-15 ಬೈಕಿಗೆ ಟಕ್ಕರ್ ನೀಡಿದೆ.

ಬೈಕ್ ಮಾರಾಟದಲ್ಲಿ ಯಮಹಾ ಎಂಟಿ-15 ಹಿಂದಿಕ್ಕಿದ ಕೆಟಿಎಂ ಡ್ಯೂಕ್ 125

ಈ ಹಿಂದೆ ಸರಾಸರಿಯಾಗಿ 4 ಸಾವಿರ ಯುನಿಟ್ ಮಾರಾಟವನ್ನು ತನ್ನದಾಗಿಸಿಕೊಂಡಿದ್ದ ಯಮಹಾ ಎಂಟಿ-15 ಬೈಕ್ ಮಾದರಿಯು ಇದೇ ಮೊದಲ ಬಾರಿಗೆ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದು, ಕೆಟಿಎಂ ಡ್ಯೂಕ್ 125 ಬೈಕ್ ಮಾತ್ರ ಬಿಡುಗಡೆಯಾದ ದಿನದಿಂದ ಇದುವರೆಗೂ ಒಂದೇ ಪ್ರಮಾಣದ ಬೇಡಿಕೆ ಕಾಯ್ದುಕೊಂಡಿದೆ.

ಬೈಕ್ ಮಾರಾಟದಲ್ಲಿ ಯಮಹಾ ಎಂಟಿ-15 ಹಿಂದಿಕ್ಕಿದ ಕೆಟಿಎಂ ಡ್ಯೂಕ್ 125

ಪ್ರತಿ ತಿಂಗಳು ಸರಾಸರಿಯಾಗಿ 2,500 ಬೈಕ್ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿರುವ ಡ್ಯೂಕ್ 125 ಮಾದರಿಯು ಮೇ ಅವಧಿಯಲ್ಲಿ ಎಂಟಿ-15 ಬೈಕ್‌ಗೆ ವಿರುದ್ಧವಾಗಿ ಹೆಚ್ಚುವರಿ 180 ಯುನಿಟ್ ಮಾರಾಟವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಪೈಪೋಟಿ ನೀಡುವ ತವಕದಲ್ಲಿದೆ. ಇನ್ನು ಮೇ ಅವಧಿಯಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹಿನ್ನಡೆ ಅನುಭವಿಸಿರುವುದು ಕೂಡಾ ಎಂಟಿ-15 ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಚೇತರಿಕೆ ಕಾಣಲಿದೆ ಎನ್ನುವ ಬಗ್ಗೆ ಯಮಹಾ ವಿಶ್ವಾಸ ವ್ಯಕ್ತಪಡಿಸಿದೆ.

ಬೈಕ್ ಮಾರಾಟದಲ್ಲಿ ಯಮಹಾ ಎಂಟಿ-15 ಹಿಂದಿಕ್ಕಿದ ಕೆಟಿಎಂ ಡ್ಯೂಕ್ 125

ಇದಲ್ಲದೇ ಯಮಹಾ ನಿರ್ಮಾಣದ ಬಹುತೇಕ ದ್ವಿಚಕ್ರ ವಾಹನ ಉತ್ಪನ್ನಗಳು ಮೇ ಅವಧಿಯಲ್ಲಿ ಹಿನ್ನಡೆ ಅನುಭವಿಸಿದ್ದು, ತೈಲ ಬೆಲೆ ಏರಿಕೆ, ಲೋಕಸಭಾ ಚುನಾವಣೆ ಇದ್ದ ಹಿನ್ನಲೆಯಲ್ಲಿ ಹೊಸ ವಾಹನಗಳ ಮಾರಾಟವು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು.

ಬೈಕ್ ಮಾರಾಟದಲ್ಲಿ ಯಮಹಾ ಎಂಟಿ-15 ಹಿಂದಿಕ್ಕಿದ ಕೆಟಿಎಂ ಡ್ಯೂಕ್ 125

ಇನ್ನು ಎಂಟಿ-15 ಬೈಕ್ ಮಾದರಿಯು ಪ್ರೀಮಿಯಂ ಸೌಲಭ್ಯಗಳೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿ ಹೊರಹೊಮ್ಮಿದ್ದು, 'ದ ಡಾರ್ಕ್ ಸೈಡ್ ಆಫ್ ಜಪಾನ್' ಮಾದರಿಯ ಹೆಡ್‌ಲ್ಯಾಂಪ್ ಸೌಲಭ್ಯವು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿದೆ.

ಬೈಕ್ ಮಾರಾಟದಲ್ಲಿ ಯಮಹಾ ಎಂಟಿ-15 ಹಿಂದಿಕ್ಕಿದ ಕೆಟಿಎಂ ಡ್ಯೂಕ್ 125

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.36 ಲಕ್ಷ ಬೆಲೆ ಹೊಂದಿರುವ ಎಂಟಿ-15 ಮಾದರಿಯು ವೈಜೆಡ್ಎಫ್-ಆರ್15 ಬೈಕಿಗಿಂತಲೂ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದ್ದು, ಲಿಕ್ಟಿಡ್ ಕೂಲ್ಡ್ 155 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ವೆರಿವೆಬಲ್ ವೆವ್ ಟಿಮಿಂಗ್(ವಿವಿಟಿ) ತಂತ್ರಜ್ಞಾನ ಪ್ರೇರಣೆ ಹೊಂದಿದೆ. ಈ ಮೂಲಕ 19.3-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ರಿಯರ್ ವೀಲ್ಹ್ ಸ್ಲಿಪ್ಲರ್ ಕ್ಲಚ್ ಸೌಲಭ್ಯ ಪಡೆದಿದೆ.

ಬೈಕ್ ಮಾರಾಟದಲ್ಲಿ ಯಮಹಾ ಎಂಟಿ-15 ಹಿಂದಿಕ್ಕಿದ ಕೆಟಿಎಂ ಡ್ಯೂಕ್ 125

ಹಾಗೆಯೇ ಕೆಟಿಎಂ ಡ್ಯೂಕ್ 125 ಮಾದರಿಯು ಸಹ ಪರ್ಫಾಮೆನ್ಸ್ ವಿಚಾರವಾಗಿ ಯುವ ಸಮುದಾಯವನ್ನು ಸೆಳೆಯುತ್ತಿದ್ದು, ಬೇಬಿ ಡ್ಯೂಕ್ ಎಂದೇ ಜನಪ್ರಿಯವಾಗಿರುವ ಡ್ಯೂಕ್ 125 ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.30 ಲಕ್ಷ ಬೆಲೆ ಪಡೆದಿದೆ.

MOST READ: ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ಬೈಕ್ ಮಾರಾಟದಲ್ಲಿ ಯಮಹಾ ಎಂಟಿ-15 ಹಿಂದಿಕ್ಕಿದ ಕೆಟಿಎಂ ಡ್ಯೂಕ್ 125

2018ರ ನವೆಂಬರ್ ಕೊನೆಯಲ್ಲಿ ಬಿಡುಗಡೆಯಾಗಿದ್ದ ಡ್ಯೂಕ್ 125 ಮಾದರಿಯು ಆರಂಭದಲ್ಲಿ ರೂ. 1.18 ಲಕ್ಷದಿಂದ ಸದ್ಯ ರೂ.1.30 ಲಕ್ಷಕ್ಕೆ ಏರಿಕೆಯಾಗಿದ್ದು, 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

Most Read Articles

Kannada
English summary
KTM 125 Duke Beats Yamaha MT-15 In May 2019 Sales. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X