ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಗಾಗಿ ಮುಗಿಬೀಳುತ್ತಿರುವ ಗ್ರಾಹಕರು

ಆಸ್ಟ್ರೀಯಾ ಮೂಲದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಕೆಟಿಎಂ ಇಂಡಿಯಾ ಸದ್ಯ ವಿವಿಧ ಮಾದರಿಯ ಪರ್ಫಾಮೆನ್ಸ್ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಡ್ಯೂಕ್ 125 ಆರಂಭಿಕ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.

ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಗಾಗಿ ಮುಗಿಬೀಳುತ್ತಿರುವ ಗ್ರಾಹಕರು

ಕೆಟಿಎಂ ಸಂಸ್ಥೆಯು ಪ್ರಮುಖವಾಗಿ ಪರ್ಫಾಮೆನ್ಸ್ ಬೈಕ್ ಆವೃತ್ತಿಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಭಾರತವನ್ನು ಹೊರತುಪಡಿಸಿ ಜಾಗತಿಕ ಮಾರುಕಟ್ಟೆಗಳಲ್ಲಿ 1200 ಸಿಸಿ ಸಾಮರ್ಥ್ಯದ 1290 ಸೂಪರ್ ಡ್ಯೂಕ್ ಬೈಕ್ ಆವೃತ್ತಿಯನ್ನು ಸಹ ಮಾರಾಟ ಮಾಡುತ್ತಿದೆ. ಹೀಗಿರುವಾಗ ಭಾರತೀಯ ಗ್ರಾಹಕರ ಬೇಡಿಕೆಯನ್ನು ಅರಿತಿರುವ ಕೆಟಿಎಂ ಸಂಸ್ಥೆಯು 125ಸಿಸಿ ಸಾಮರ್ಥ್ಯದ ಎಂಜಿನ್‌ನೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವ ಹೊಸ ಪ್ರಯತ್ನಕ್ಕೆ ಕೈಹಾಕಿದೆ.

ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಗಾಗಿ ಮುಗಿಬೀಳುತ್ತಿರುವ ಗ್ರಾಹಕರು

ಸದ್ಯ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಡ್ಯೂಕ್ 125 ಆವೃತ್ತಿಯು ಮಾರಾಟಗೊಳ್ಳುತ್ತಿದ್ದು, ಬೇಬಿ ಡ್ಯೂಕ್ ಎಂದೇ ಜನಪ್ರಿಯತೆಗೊಂಡಿದೆ. ಹೀಗಾಗಿ ಬಿಡುಗಡೆಯಾದ ಕೇವಲ ನಾಲ್ಕು ತಿಂಗಳಾದರೂ ಸಹ ಮಾರುಕಟ್ಟೆಯಲ್ಲಿ ಈ ಬೈಕಿನ ಕ್ರೇಜ್ ಕಡಿಮೆಯಾಗಲಿಲ್ಲ. ಏಕೆಂದರೆ ಕಳೆದ ಫೆಬ್ರವರಿ ತಿಂಗಳಿನಲ್ಲಿ ಸುಮಾರು 3,014 ಕೆಟಿಎಂ ಡ್ಯೂಕ್ 125 ಬೈಕ್‍ಗಳು ಮಾರಾಟಗೊಂಡಿದೆ.

ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಗಾಗಿ ಮುಗಿಬೀಳುತ್ತಿರುವ ಗ್ರಾಹಕರು

ಲೆಕ್ಕ ಹಾಕಿದರೆ ಬಿಡುಗಡೆಗೊಂಡು ಒಂದು ತಿಂಗಳ ಅವಧಿಯಲ್ಲಿ ಹೆಚ್ಚು ಜನಪ್ರೀಯತೆಯನ್ನು ಪದೆದುಕೊಂಡಿದ್ದ ಬೇಬಿ ಡ್ಯೂಕ್ ಜನವರಿ 2019ರಲ್ಲಿ ಆಷ್ಟು ಸದ್ದು ಮಾಡಲಿಲ್ಲ. ಆದ್ರೆ ಫೆಬ್ರವರಿ ತಿಂಗಳಿನಲ್ಲಿ ಕೆಟಿಎಂ ಬೇರೆಲ್ಲಾ ಬೈಕ್‍ಗಳ ಮಾರಾಟದ ಸಂಖ್ಯೆಗಿಂತಲೂ ಡ್ಯೂಕ್ 125 ಬೈಕ್ ಅಧಿಕವಾಗಿ ಅಂದರೆ ಸುಮಾರು 3,014 ಬೈಕ್‍ಗಳು ಮಾರಾಟಗೊಂಡಿದೆ.

ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಗಾಗಿ ಮುಗಿಬೀಳುತ್ತಿರುವ ಗ್ರಾಹಕರು

ಇನ್ನು ಡ್ಯೂಕ್ 125 ತಾಂತ್ರಿಕವಾಗಿ 125ಸಿಸಿ ಆವೃತ್ತಿಯಾದ್ರು ಡ್ಯೂಕ್ 200 ಮಾದರಿಯಲ್ಲೇ ಬಹುತೇಕ ಹೊರ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದ್ದು, ಹೊಸ ಬೈಕಿನಲ್ಲಿ 43-ಎಂಎಂ ಡಬ್ಲ್ಯುಪಿ ಅಪ್‌ಸೈಡ್-ಡೌನ್ ಫೋಕ್ಸ್‌ನೊಂದಿಗೆ ಖರೀದಿ ಉತ್ತಮವಾಗಿದೆ.

ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಗಾಗಿ ಮುಗಿಬೀಳುತ್ತಿರುವ ಗ್ರಾಹಕರು

ಡ್ಯೂಕ್ 200 ಮಾದರಿಯಲ್ಲೇ ಚಾರ್ಸಿ, ಸಸ್ಷೆನ್, ಚಕ್ರಗಳು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬಾಡಿ ಪ್ಯಾನೆಲ್ ಸಹ ಡ್ಯೂಕ್ 125ನಲ್ಲಿದ್ದು, ಬೈಕಿನ ಸ್ಪೋಟಿ ಲುಕ್ ಹೆಚ್ಚಿಸುವುದರ ಜೊತೆ ಎಂಜಿನ್ ರಕ್ಷಣೆಗಾಗಿ ಸ್ವಿಂಗ್ ಆರ್ಮ್ ಸೌಲಭ್ಯವನ್ನು ಜೋಡಿಸಲಾಗಿದೆ.

ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಗಾಗಿ ಮುಗಿಬೀಳುತ್ತಿರುವ ಗ್ರಾಹಕರು

ಎಂಜಿನ್ ಮತ್ತು ಟಾಪ್ ಸ್ಪೀಡ್

125 ಡ್ಯೂಕ್ ಬೈಕ್ ಮಾದರಿಯು 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ. ಇದೇ ಕಾರಣಕ್ಕೆ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗ ಪಡೆದುಕೊಳ್ಳುವ ಗುಣಹೊಂದಿರುವ ಡ್ಯೂಕ್ 125 ಬೈಕ್ ಮಾದರಿಯು, ಗಂಟೆಗೆ 109ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್ ನೀಡಬಲ್ಲದು.

ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಗಾಗಿ ಮುಗಿಬೀಳುತ್ತಿರುವ ಗ್ರಾಹಕರು

ಬೈಕಿನ ವೈಶಿಷ್ಟ್ಯತೆ

ಡಿಜಿಟಲ್ ಇನ್ಟ್ರಮೆಂಟ್ ಕ್ಲಸ್ಟರ್‌ನೊಂದಿಗೆ 148 ಕೆಜಿ ತೂಕ ಹೊಂದಿರುವ ಡ್ಯೂಕ್ 125 ಬೈಕ್ ಮಾದರಿಯಲ್ಲಿ 818ಎಂಎಂ ಎತ್ತರದ ಆಸನ ಸೌಲಭ್ಯ ಹೊಂದಿದ್ದು, ಹಿಂಬದಿಯ ಸವಾರರ ಆಸನ ಇದ್ದರೂ ಸಹ ಅಷ್ಟಾಗಿ ಸ್ಥಳಾವಕಾಶ ನೀಡಿಲ್ಲ. ಹೀಗಾಗಿ ಡ್ಯೂಕ್ 125 ಬೈಕ್ ಮಾದರಿಯ ಸಿಂಗಲ್ ರೈಡ್‌ಗೆ ಅತ್ಯುತ್ತಮ ಎನ್ನಬಹುದು.

ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಗಾಗಿ ಮುಗಿಬೀಳುತ್ತಿರುವ ಗ್ರಾಹಕರು

ಟೈರ್ ಮತ್ತು ಬ್ರೇಕಿಂಗ್ ಸೌಲಭ್ಯ

ಬೈಕಿನ ಮುಂಭಾಗದಲ್ಲಿ 110/70 ಆರ್17 ಮತ್ತು ಹಿಂಭಾಗದಲ್ಲಿ 150/60 ಆರ್17 ಎಂಆರ್‌ಎಫ್ ಗ್ರಿಪ್ ಟೈರ್‌ಗಳನ್ನು ಹೊಂದಿರುವ ಡ್ಯೂಕ್ 125 ಬೈಕಿನಲ್ಲಿ ಬ್ರೇಕಿಂಗ್ ಸೌಲಭ್ಯಗಳು ಮುಖ್ಯ ಆಕರ್ಷಣೆಯಾಗಿದೆ. 43-ಎಂಎಂ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಹೋಂದಾಣಿಕೆ ಮಾಡಬಲ್ಲ ಮೊನೋಶಾರ್ಕ್ ಸೌಲಭ್ಯದೊಂದಿಗೆ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 230ಎಂಎಂ ಡಿಸ್ಕ್ ಬ್ರೇಕ್ ಪಡೆದಿದ್ದು, ಬಾಷ್ ನಿರ್ಮಾಣದ ಸಿಂಗಲ್ ಚಾನೆಲ್ ಎಬಿಎಸ್ ಯುನಿಟ್ ಇದರಲ್ಲಿದೆ.

ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಗಾಗಿ ಮುಗಿಬೀಳುತ್ತಿರುವ ಗ್ರಾಹಕರು

ಬೈಕಿನ ಮೈಲೇಜ್

10.5-ಲೀಟರ್ ಫ್ಯೂಲ್ ಟ್ಯಾಂಕ್ ಜೋಡಣೆ ಹೊಂದಿರುವ ಡ್ಯೂಕ್ 125 ಬೈಕ್ ಪ್ರತಿ ಲೀಟರ್‌ಗೆ ಕೆಟಿಎಂ ಸಂಸ್ಥೆಯೇ ಹೇಳಿಕೊಂಡಂತೆ 40ರಿಂದ 42ಕಿ.ಮಿ ನೀಡಬಹುದು ಎಂದಿದ್ದು, ಇನ್ನು ಕೆಲವು ಹವ್ಯಾಸಿ ಕೆಟಿಎಂ ಬೈಕ್ ಸವಾರರ ಪ್ರಕಾರ ಹೊಸ ಬೈಕ್ ಅನ್ನು ಎಕಾನಮಿಕ್ ಮೊಡ್‌ನಲ್ಲಿ ಬೈಕ್ ಚಾಲನೆ ಮಾಡಿದ್ದಲ್ಲಿ ಪ್ರತಿ ಲೀಟರ್‌ಗೆ 55 ಕಿ.ಮಿ ನಿಂದ 60 ಕಿ.ಮಿ ಮೈಲೇಜ್ ಗಿಟ್ಟಿಸಿಕೊಳ್ಳಬಹುದು ಎಂದಿದ್ದಾರೆ.

ಕೆಟಿಎಂ ಡ್ಯೂಕ್ 125 ಬೈಕ್ ಖರೀದಿಗಾಗಿ ಮುಗಿಬೀಳುತ್ತಿರುವ ಗ್ರಾಹಕರು

ಬೈಕಿನ ಬೆಲೆ (ಎಕ್ಸ್‌ಶೋರೂಂ ಪ್ರಕಾರ)

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಡ್ಯೂಕ್ 125 ಮಾದರಿಯು 1.18 ಲಕ್ಷ ಬೆಲೆ ಪಡೆದಿದ್ದು, ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿದ್ದರು ಸಹ ಪರ್ಫಾಮೆನ್ಸ್ ವಿಚಾರದಲ್ಲಿ ಗಮನಸೆಳೆಯುವ ಬೈಕಿನ ಬೆಲೆಗಳು ಸ್ಪರ್ಧಾತ್ಮಕವಾಗಿವೆ ಎನ್ನಬಹುದು.

Most Read Articles

Kannada
English summary
KTM 125 Duke Sells 3,014 Units In February 2019. Read In Kannada
Story first published: Friday, March 22, 2019, 9:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X