ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

ಕೆಟಿ‍ಎಂ ಕಂಪನಿಯು 2019ರ ಇ‍ಐ‍‍ಸಿ‍ಎಂಎನಲ್ಲಿ ಹೊಸ 390 ಅಡ್ವೆಂಚರ್ ಬೈಕ್ ಅನ್ನು ಅನಾವರಣಗೊಳಿಸಿದ ನಂತರ ಮತ್ತೊಂದು ಬೈಕ್ ಅನ್ನು ಅನಾವರಣಗೊಳಿಸಿದೆ. ತನ್ನ ಅಧಿಕೃತ ವೆಬ್‍‍ಸೈಟಿನಲ್ಲಿ 250 ಅಡ್ವೆಂಚರ್ ಬೈಕ್ ಅನ್ನು ಅನಾವರಣಗೊಳಿಸಿದೆ.

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

390 ಅಡ್ವೆಂಚರ್ ಬೈಕಿನಲ್ಲಿರುವಂತಹ ವಿನ್ಯಾಸ ಹಾಗೂ ಸ್ಟೈಲಿಂಗ್ ಅನ್ನು ಈ ಬೈಕ್ ಸಹ ಹೊಂದಿದೆ. ಕಡಿಮೆ ಬೆಲೆಯಲ್ಲಿ ಆಫ್ ರೋಡ್ ಬೈಕುಗಳನ್ನು ಖರೀದಿಸ ಬಯಸುವವರಿಗಾಗಿ ಈ ಬೈಕ್ ಅನ್ನು ಮಾರಾಟ ಮಾಡಲಾಗುವುದು.

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

ಕೆಟಿ‍ಎಂ 250 ಅಡ್ವೆಂಚರ್ ಬೈಕಿನಲ್ಲಿ, 250 ಡ್ಯೂಕ್ ಬೈಕಿನಲ್ಲಿರುವಂತಹ 248.8 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 30 ಬಿ‍‍ಹೆಚ್‍‍ಪಿ ಪವರ್ ಹಾಗೂ 24 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಬೈಕಿನಲ್ಲಿ ಸ್ಟೀಲ್ ಟ್ರೆಲ್ಲಿಸ್ ಫ್ರೇಂಗಳಿದ್ದು, ಮುಂಭಾಗದಲ್ಲಿ ಡಬ್ಲ್ಯುಪಿ 43 ಎಂಎಂ ಇನ್ವರ್ಟೆಡ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ. 250 ಡ್ಯೂಕ್ ಬೈಕಿನ ಮುಂಭಾಗದಲ್ಲಿ 142 ಎಂಎಂ ಹಾಗೂ ಹಿಂಭಾಗದಲ್ಲಿ 150 ಎಂಎಂ ಸಸ್ಪೆಂಷನ್‍‍ಗಳಿವೆ.

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

250 ಅಡ್ವೆಂಚರ್ ಬೈಕಿನ ಮುಂಭಾಗದಲ್ಲಿ 170 ಎಂಎಂ ಹಾಗೂ ಹಿಂಭಾಗದಲ್ಲಿ 177 ಎಂಎಂ ಸಸ್ಪೆಂಷನ್‍‍ಗಳಿವೆ. ಅಡ್ವೆಂಚರ್ 390 ಬೈಕಿನ ಬೆಲೆ ರೂ.3 ಲಕ್ಷಗಳಾದರೆ, 250 ಅಡ್ವೆಂಚರ್ ಬೈಕಿನ ಬೆಲೆಯು ರೂ.2.3 ಲಕ್ಷಗಳಾಗಲಿದೆ.

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

250 ಡ್ಯೂಕ್ ಬೈಕಿನ ಗ್ರೌಂಡ್ ಕ್ಲಿಯರೆನ್ಸ್ 185 ಎಂಎಂಗಳಾದರೆ, 250 ಅಡ್ವೆಂಚರ್ ಬೈಕ್ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಡ್ಯೂಕ್ 250 ಬೈಕಿನ ಸೀಟ್ ಎತ್ತರವು 830 ಎಂಎಂಗಳಾದರೆ, 250 ಅಡ್ವೆಂಚರ್ ಬೈಕಿನ ಸೀಟಿನ ಎತ್ತರವು 855 ಎಂಎಂಗಳಾಗಿದೆ.

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

ಟೂರಿಂಗ್ ಉದ್ದೇಶಕ್ಕಾಗಿ ಮುಂಭಾಗದಲ್ಲಿ ದೊಡ್ಡ ವ್ಹೀಲ್‍‍ಗಳಿದ್ದು, 250 ಅಡ್ವೆಂಚರ್ ಬೈಕಿನಲ್ಲಿ 63.5 ಡಿಗ್ರಿಯ ರೇಕ್ ಆಂಗಲ್‍‍ಗಳಿವೆ. 250 ಡ್ಯೂಕ್ ಬೈಕ್ 65 ಡಿಗ್ರಿಯ ರೇಕ್ ಆಂಗಲ್ ಹೊಂದಿದೆ. 250 ಡ್ಯೂಕ್ ಬೈಕಿನ ತೂಕವು 146 ಕೆ.ಜಿಗಳಾದರೆ, 250 ಅಡ್ವೆಂಚರ್ ಬೈಕಿನ ತೂಕವು 156 ಕೆ.ಜಿಗಳಾಗಿದೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

ಬ್ರೇಕಿಂಗ್ ಕಾರ್ಯಗಳಿಗಾಗಿ 250 ಅಡ್ವೆಂಚರ್ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಗಳಿದ್ದರೆ, ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಗಳಿವೆ. ಸ್ವಿಚೇಬಲ್ ಡ್ಯುಯಲ್ ಚಾನೆಲ್ ಎಬಿ‍ಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

ಈ ಬೈಕಿನಲ್ಲಿ ಎಂ‍ಆರ್‍ಎಫ್ ಮೊಗ್ರಿಪ್ ಮೆಟಿಯೊರ್ ಎಫ್‍ಎಂ 2 ಟಯರ್‍‍ಗಳಿದ್ದು, ಮುಂಭಾಗದಲ್ಲಿ 100/90-19 ಹಾಗೂ ಹಿಂಭಾಗದಲ್ಲಿ 130/80-17 ಟಯರ್‍‍ಗಳಿವೆ. ಕೆಟಿ‍ಎಂ 390 ಬೈಕಿನಲ್ಲಿರುವಂತೆ ಕೆಟಿಎಂ 250 ಅಡ್ವೆಂಚರ್ ಬೈಕಿನಲ್ಲಿಯೂ ಸಹ ಬಣ್ಣದ ಟಿ‍ಎಫ್‍‍ಟಿ ಡಿಸ್‍‍ಪ್ಲೇ ನೀಡಲಾಗಿದ್ದು, ಇದರಿಂದಾಗಿ ಬ್ಲೂಟೂತ್ ಮೂಲಕ ಸ್ಮಾರ್ಟ್‍‍ಫೋನ್ ಕನೆಕ್ಟ್ ಮಾಡಬಹುದು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

ಈ ಬೈಕಿನ ಜೊತೆಗೆ ಚಾರ್ಜಿಂಗ್ ಪೋರ್ಟ್ ನೀಡಲಾಗುವುದು. ಆಫ್ ರೋಡಿಂಗ್ ಹಾಗೂ ನಗರದೊಳಗೆ ವಾಹನ ಸವಾರಿ ಮಾಡುವಾಗ ವಿಂಡ್‍‍ಸ್ಕ್ರೀನ್‍‍ಗಳನ್ನು ಸವಾರಿಗೆ ತಕ್ಕಂತೆ ಅಡ್ಜಸ್ಟ್ ಮಾಡಿಕೊಳ್ಳಬಹುದಾಗಿದೆ.

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

250 ಅಡ್ವೆಂಚರ್ ಬೈಕಿನ ಬೆಲೆಯನ್ನು ಕಡಿಮೆಗೊಳಿಸುವ ಕಾರಣಕ್ಕಾಗಿ ಕೆಟಿ‍ಎಂ ಕಂಪನಿಯು, ಈ ಬೈಕಿನಲ್ಲಿ ಪೂರ್ಣ ಪ್ರಮಾಣದ ಎಲ್‍ಇ‍‍ಡಿ ಹೆಡ್‍‍ಲೈಟ್‍‍ಗಳಿಗೆ ಬದಲಿಗೆ ಹ್ಯಾಲೊಜೆನ್ ಹೆಡ್‍‍ಲ್ಯಾಂಪ್‍‍ಗಳನ್ನು ಅಳವಡಿಸಿದೆ.

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

ಇದರ ಜೊತೆಗೆ ಪೆಟಲ್ ಡಿಸ್ಕ್, ಟ್ರಾಕ್ಷನ್ ಕಂಟ್ರೋಲ್, ಪ್ರೀಮಿಯಂ ಟಯರ್ ಹಾಗೂ ಅಡ್ಜಸ್ಟಬಲ್ ಸಸ್ಪೆಂಷನ್‍‍ಗಳನ್ನು ಈ ಬೈಕಿನಲ್ಲಿ ನೀಡಲಾಗಿಲ್ಲ. ಡಿಸೆಂಬರ್ 6ರಂದು ಗೋವಾದಲ್ಲಿ ನಡೆಯಲಿರುವ ಬೈಕ್ ವೀಕ್‍‍ನಲ್ಲಿ ಕೆಟಿ‍ಎಂ 250 ಅಡ್ವೆಂಚರ್ ಬೈಕ್ ಅನ್ನು 390 ಅಡ್ವೆಂಚರ್ ಬೈಕಿನೊಂದಿಗೆ ಬಿಡುಗಡೆಗೊಳಿಸಲಾಗುವುದು.

ಅನಾವರಣವಾಯ್ತು ಮತ್ತೊಂದು ಕೆಟಿಎಂ ಬೈಕ್

ಈ ಬೈಕ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಲಾಗುವುದು. ಬಿಡುಗಡೆಯಾದ ನಂತರ ಈ ಬೈಕ್ ಹೀರೋ ಎಕ್ಸ್ ಪಲ್ಸ್ 200 ಹಾಗೂ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಕೆಟಿಎಂ ktm
English summary
KTM 250 adventure officially revealed - Read in Kannada
Story first published: Thursday, November 7, 2019, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X