ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಕೆ‍ಟಿಎಂ 250 ಅಡ್ವೆಂಚರ್

ಬಹುನಿರೀಕ್ಷಿತ ಕೆ‍ಟಿಎಂ 250 ಅಡ್ವೆಂಚರ್ ಬೈಕ್ ಅನ್ನು ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಡ್ಯೂಕ್ 250 ಅಡ್ವೆಂಚರ್ ಬೈಕ್‍ನಲ್ಲಿನ ಹೆಡ್‍‍ಲೈಟ್‍‍ಗಳ ರೀತಿಯಲ್ಲಿ ಕಾಣುವ ಹಾಗೆ ವಿನ್ಯಾಸಗೊಳಿಸಲಾದ ಹ್ಯಾಲೊಜೆನ್ ಹೆಡ್‍‍ಲೈ‍ಟ್ ಅನ್ನು ಅಳವಡಿಸಿರುವುದು ಸ್ಪಾಟ್ ಟೆಸ್ಟ್ ಸ್ಪೈ ಚಿತ್ರದಿಂದ ಬಹಿರಂಗವಾಗಿದೆ. ಶೀಘ್ರದಲ್ಲೇ ಕೆಟಿಎಂ 250 ಅಡ್ವೆಂಚರ್ ಬಿಡುಗಡೆಯಾಗಲಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಕೆ‍ಟಿಎಂ 250 ಅಡ್ವೆಂಚರ್

ಬೈಕ್ ದೆಖೋ ಅವರು ಅಪ್‍ಲೋಡ್ ಮಾಡಿದ ಸ್ಪೈ ಚಿತ್ರಗಳಲ್ಲಿ ಹೆಡ್‍‍ಲೈಟ್ ಅಸೆಂಬ್ಲಿ‍ಯಲ್ಲಿ ಹೆಡ್‍‍ಲೈಟ್‍ ಮಾಸ್ಕ್ ಅನ್ನು ಹೊಂದಿದೆ ಮತ್ತು ವಿಂಡ್‍‍ಸ್ಕ್ರೀನ್ ಕೂಡ ಅಳವಡಿಸಲಾಗಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಟೆಸ್ಟಿಂಗ್ ಮಾಡುವ ವೇಳೆಯಲ್ಲಿ ವಿಂಡ್‍‍ಸ್ಕ್ರೀನ್ ಅನ್ನು ಅಳವಡಿಸಲಾಗಿಲ್ಲ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಕೆ‍ಟಿಎಂ 250 ಅಡ್ವೆಂಚರ್

ಹ್ಯಾಲೊಜೆನ್ ಹೆಡ್‍‍ಲೈಟ್ ತನ್ನದೆ ಶ್ರೇಣಿಯ 390 ಅಡ್ವೆಂಚೆರ್ ಬೈಕಿನಲ್ಲಿರುವ ಮಾದರಿಯಂತೆ ಇರಲಿದೆ. ಕೆ‍ಟಿಎಂ 250 ಅಡ್ವೆಂಚರ್ ಬೈಕಿನಲ್ಲಿ 19 ಇಂಚಿನ ಮುಂಭಾಗದ ಟಯರ್, 17 ಇಂಚಿನ ಹಿಂಬಂದಿ ಟಯರ್, ಫರ್ಲ್ ಟ್ಯಾಂಕ್ ಎಕ್ಸ್ ಟೆನ್ಷನ್ , ಸ್ಪ್ಲಿಟ್ ಸೀಟ್ ಮತ್ತು ಸಿಂಗಲ್ ಪೀಸ್ ಗ್ರ್ಯಾಬ್ ರೈಲ್ ಹೊಂದಿದೆ. 250 ಅಡ್ವೆಂಚರ್ ಮತ್ತು 390 ಅಡ್ವೆಂಚರ್ ಎರಡೂ ಸ್ಯಾಡಲ್‍‍ಬ್ಯಾಗ್ ಸ್ಟೆಸ್, ಪ್ಯಾನಿಯರ್ ಮೌಂಟ್ಸ್, ಕ್ರ್ಯಾಶ್ ಗಾರ್ಡ್ ಮತ್ತು ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಕೆ‍ಟಿಎಂ 250 ಅಡ್ವೆಂಚರ್

ಕೆ‍ಟಿಎಂ 250 ಅಡ್ವೆಂಚರ್ ಬೈಕ್ ಸ್ಟ್ಯಾಂಡರ್ಡ್ ಆರೆಂಜ್ ಬ್ಯಾಕ್ ಲಿಡ್ ಎಲ್‍‍ಸಿ‍ಡಿ ಕನ್ಸೋಲ್ ಬದಲಿಗೆ ಟಿ‍ಎಫ್‍‍ಟಿ - ಡಿಸ್‍ಪ್ಲೇಯನ್ನು ಹೊಂದಿದೆ ಎಂದು ಸ್ಪೈ ಚಿತ್ರದಲ್ಲಿ ಬಹಿರಂಗವಾಗಿದೆ. ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಕೆಟಿಎಂ ಬ್ಲೂಟೂತ್ ಕನೆಕ್ಟಿವಿಟಿ ನಂತಹ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡಬಹುದು.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಕೆ‍ಟಿಎಂ 250 ಅಡ್ವೆಂಚರ್

ಹೊಸ ಕೆ‍ಟಿಎಂ 250 ಅಡ್ವೆಂಚರ್ ಎಂಜಿನ್ ಡ್ಯೂಕ್ 250 ಎಂಜಿನ್ ಮಾದರಿಯಲ್ಲೇ ಇರಲಿದೆ. ಕ್ವಾರ್ಟರ್-ಲೀಟರ್ ಅಡ್ವೆಂಚರ್ ಟೂರರ್ ಬಿಎಸ್-6 ಪ್ರೇರಿತ 248.8 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 30 ಬಿಎಚ್‍ಪಿ ಪವರ್ ಮತ್ತು 24 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂ‍ಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಕೆ‍ಟಿಎಂ 250 ಅಡ್ವೆಂಚರ್

ಬ್ರೇಕಿಂಗ್ ಸಿಸ್ಟಂನಲ್ಲಿ ಮುಂಭಾಗದಲ್ಲಿ ಒಂದೇ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 230 ಎಂಎಂ ಡಿಸ್ಕ್ ಅನ್ನು ಅಳವಡಿಸಲಾಗಿದೆ. ಸುರಕ್ಷತೆಯನ್ನು ಹೆಚ್ಚಿಸಲು ಡ್ಯುಯಲ್ ಚಾನೆಲ್ ಎ‍‍ಬಿಎಸ್ ಅನ್ನು ಹೊಂದಿದೆ. 250 ಅಡ್ವೆಂಚರ್ ಮುಂಭಾಗದಲ್ಲಿ 43 ಎಂಎಂ ಇನ್‍ವರ್ಟಡ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಪ್ರೀ-ಲೋಡ್ ಮೊನೊ ಶಾಕ್ ಅನ್ನು ಹೊಂದಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಕೆ‍ಟಿಎಂ 250 ಅಡ್ವೆಂಚರ್

ಡ್ಯೂಕ್ ಯುವಕರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ, ಇದೇ ಡ್ಯೂಕ್ ಸಂಸ್ಥೆಗೆ ದೊಡ್ಡ ವರವಾಗಿದೆ ಎಂದು ಹೇಳಬಹುದು. ಡ್ಯೂಕ್ 390 ಉತ್ತಮವಾಗಿ ಮಾರಾಟವಾಗುತ್ತಿದ್ದು, ಡ್ಯೂಕ್ 125ಗಿಂತಲೂ ಹೆಚ್ಚು ಮಾರಾಟವಾಗುತ್ತಿದೆ. ಕೆ‍ಟಿಎಂ 250 ಅಡ್ವೆಂಚರ್ ಬೈಕಿಗೆ ಭಾರತೀಯ ಎಕ್ಸ್ ಶೋರೂಂ ಪ್ರಕಾರ ಇದರ ಬೆಲೆಯು ರೂ.2.9 ಲಕ್ಷಗಳಾಗಿರಬಹುದು ಎಂದು ನಾವು ನಿರೀಕ್ಷಿಸಲಾಗಿದೆ. ಈ ವರ್ಷದ ಕೊನೆಯ ಡಿಸೆಂಬರ್ ತಿಂಗಳಲ್ಲಿ ಕೆ‍ಟಿಎಂ 250 ಅಡ್ವೆಂಚರ್ ಬೈಕ್ ಬಿಡುಗಡೆಯಾಗುವ ನಿರೀಕ್ಷಿಸಲಾಗಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಕೆ‍ಟಿಎಂ 250 ಅಡ್ವೆಂಚರ್

ಕೆ‍ಟಿಎಂ ತಮ್ಮ ಅಡ್ವೆಂಚರ್ ಬೈಕ್‍ ಬಿಡುಗಡೆ ಮಾಡಲು ಹೆಚ್ಚಿನ ಸಮಯವಕಾಶವನ್ನು ತೆಗೆದುಕೊಂಡಿದೆ. ಡ್ಯೂಕ್ 250 ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯ ಬಳಿಕ ರಾಯಲ್ ಎನ್‍ಫೀಲ್ಡ್ ಹಿಮಾಲಯ, ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿಗೆ ಪೈಪೋಟಿಯನ್ನು ನೀಡಲಿದೆ.

Source: Bikedekho

Most Read Articles

Kannada
Read more on ಕೆಟಿಎಂ ktm
English summary
KTM 250 Adventure Spied Testing Ahead Of December Launch: Spy Pics & Details - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X