2019ರ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್

ಡ್ಯೂಕ್ 790 ನಂತರ ಇದೀಗ 390 ಅಡ್ವೆಂಚರ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿರುವ ಕೆಟಿಎಂ ಸಂಸ್ಥೆಯು ಹೊಸ ಬೈಕ್ ಎಂಜಿನ್ ಪರ್ಫಾಮೆನ್ಸ್ ಕುರಿತಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಇದೇ ವರ್ಷಾಂತ್ಯದಲ್ಲಿ ಹೊಸ ಬೈಕ್ ಬಿಡುಗಡೆ ಮಾಡುವ ಸುಳಿವು ನೀಡಿದೆ.

2019ರ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್

2019ರ ಡಿಸೆಂಬರ್ 6 ಮತ್ತು 7ರಂದು ನಡೆಯಲಿರುವ 'ಇಂಡಿಯಾ ಬೈಕ್ ವೀಕ್' ಸಮ್ಮೇಳನದಲ್ಲಿ ಹೊಸ 390 ಅಡ್ವೆಂಚರ್ ಬಿಡುಗಡೆ ಮಾಡುವ ಕುರಿತಾದ ನಿಖರ ಮಾಹಿತಿ ದೊರೆತ್ತಿದ್ದು, ಕಾರಣಾಂತರಗಳಿಂದ ಹೊಸ ಬೈಕ್ ಬಿಡುಗಡೆಯನ್ನು ಮುಂದೂಡುತ್ತಾ ಬಂದಿದ್ದ ಕೆಟಿಎಂ ಸಂಸ್ಥೆಯು ಇದೀಗ ಅಡ್ವೆಂಚರ್ ಬೈಕ್ ಪ್ರಿಯರನ್ನು ಸೆಳೆಯಲು ಸಜ್ಜಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸೂಪರ್ ಬೈಕ್‌ಗಳನ್ನು ಮಾರಾಟ ಮಾಡುವ ಕೆಟಿಎಂ ಸಂಸ್ಥೆಯು ಭಾರತದಲ್ಲೂ ವಿವಿಧ ನಮೂನೆಯ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಅಡ್ವೆಂಚರ್ ಆವೃತ್ತಿಗಳ ಮಾರಾಟವನ್ನು ಆರಂಭಿಸುತ್ತಿದೆ.

2019ರ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್

ಕೆಟಿಎಂ ಬಿಡುಗಡೆ ಮಾಡಲು ನಿರ್ಧರಿಸಿರುವ 390 ಅಡ್ವೆಂಚರ್ ಬೈಕ್‌ಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ 1290 ಸೂಪರ್ ಅಡ್ವೆಂಚರ್ ಬೈಕ್ ಹೋಲಿಕೆಯನ್ನೇ ಪಡೆದುಕೊಂಡಿದ್ದು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹಿಮಾಲಯನ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಈ ಬೈಕ್ ಮಾರಾಟಗೊಳ್ಳಲಿದೆ.

2019ರ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್

ಎಂಜಿನ್ ಸಾಮರ್ಥ್ಯ

ಬಿಡುಗಡೆಗೆ ಸಜ್ಜಾಗಿರುವ ಕೆಟಿಎಂ 390 ಬೈಕ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯ 373ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, ಬೆಸ್ಟ್ ಪರ್ಫಾಮೆನ್ಸ್ ಮಾದರಿಯಾಗಿ 43-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

2019ರ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್

ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಕೆ ಹೊಂದಿರುವ 390 ಅಡ್ವೆಂಚರ್ ಬೈಕ್‌ ಮಾದರಿಯು, ಸುಧಾರಿತ ವಿನ್ಯಾಸಗಳಾದ ಟಿಪಿಎಫ್ ಇನ್ಟ್ರುಮೆಂಟ್ ಡಿಸ್‌ಪ್ಲೇ, ಲಾಂಗ್ ಟ್ರಾವೆಲ್ ಫ್ರಂಟ್ ಮತ್ತು ರಿಯರ್ ಸಸ್ಷೆನ್ ಜೋಡಣೆ ಹೊಂದಿರಲಿವೆ. ಇದರ ಹೊರತಲಾಗಿ ಕೆಲವು ಮುಖ್ಯ ತಾಂತ್ರಿಕ ಅಂಶಗಳನ್ನು ಗೌಪ್ಯವಾಗಿ ಇಡಲಾಗಿದ್ದು, ಬಿಡುಗಡೆಯ ಹೊತ್ತಿಗೆ ಮತ್ತಷ್ಟು ಮಾಹಿತಿ ಸಿಗಲಿದೆ.

2019ರ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್

ಇವುಗಳಲ್ಲದೇ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್ ತಂತ್ರಜ್ಞಾನದೊಂದಿಗೆ ಡ್ಯುಯಲ್ ಡಿಸ್ಕ್ ಬ್ರೇಕ್, ಸ್ಲಿಪ್ಪರ್ ಕ್ಲಚ್, ರೈಡ್ ಬೈ ವೈರ್ ಟೆಕ್ನಾಲಜಿ ಮತ್ತು ಪರ್ಫಾಮೆನ್ಸ್‌ಗೆ ಸಹಕಾರಿಯಾಗಬಲ್ಲ ಡ್ಯುಯಲ್-ಸ್ಪೋಟ್ ಟೈರ್ ಮಾದರಿಗಳನ್ನು ಬಳಕೆ ಮಾಡಿರುವುದು ಸ್ಪಾಟ್ ಟೆಸ್ಟಿಂಗ್‌ನಲ್ಲಿ ಬಹಿರಂಗವಾಗಿದೆ.

2019ರ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್

ಬಿಡುಗಡೆಯ ಅವಧಿ ಮತ್ತು ಬೆಲೆಗಳು (ಅಂದಾಜು)

2019ರ ಡಿಸೆಂಬರ್‌ನಲ್ಲಿ ನಡೆಯಲಿರುವ ಇಂಡಿಯಾ ಬೈಕ್ ವೀಕ್ ಸಮ್ಮೇಳನದಲ್ಲಿ ಭಾಗಿಯಾದ ನಂತರವಷ್ಟೇ 390 ಅಡ್ವೆಂಚರ್ ಬೈಕ್‌ ಖರೀದಿಗೆ ಲಭ್ಯವಾಗಲಿದ್ದು, ಹೊಸ ಬೈಕ್ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 2.30 ಲಕ್ಷದಿಂದ ರೂ. 2.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

2019ರ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್

ಹೀಗಾಗಿ ಕೆಟಿಎಂ 390 ಅಡ್ವೆಂಚರ್ ಬೈಕ್‌ಗಳು ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಮಾರುಕಟ್ಟೆಯಲ್ಲಿ ಸದ್ಯ ಜನಪ್ರಿಯವಾಗಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಇತ್ತೀಚೆಗಷ್ಟೆ ಬಿಡುಗಡೆಯಾದ ಎಂಟ್ರಿ ಲೆವಲ್ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕ್ ಮಾದರಿಗೂ ಇದು ತೀವ್ರ ಪೈಪೋಟಿ ನೀಡಲಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

2019ರ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆಯಲ್ಲಿ ಕೆಟಿಎಂ ಸಂಸ್ಥೆಯು ತನ್ನ ಬಹುನೀರಿಕ್ಷಿತ 390 ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ನಿಗದಿತ ಅವಧಿಯಲ್ಲಿ ಬಿಡುಗಡೆಗೊಂಡಲ್ಲಿ ಹೊಸ ಬೈಕ್‌ಗಳು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Via - ACI

Most Read Articles

Kannada
Read more on ಕೆಟಿಎಂ ktm
English summary
KTM 390 Adventure will make its debut in India at IBW on December 6-7, 2019.
Story first published: Monday, October 7, 2019, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X