ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಂಡ ಕೆಟಿ‍ಎಂ 390 ಅಡ್ವೆಂಚರ್

ಕೆಟಿ‍ಎಂ 390 ಅಡ್ವೆಂಚರ್ ಬೈಕ್ ಅನ್ನು 2019ರ ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಳಿಸಲಾಗಿದೆ. ಕೆಟಿ‍ಎಂ 390 ಅಡ್ವೆಂಚರ್ ಬೈಕ್ ಅನ್ನು ಹಲವು ದಿನಗಳಿಂದ ನಿರೀಕ್ಷಿಸಲಾಗುತ್ತಿದೆ. ಈ ಬೈಕ್ ಅನ್ನು ಭಾರತದಲ್ಲಿ ಹಾಗೂ ಅಂತರ್‍‍ರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಂಡ ಕೆಟಿ‍ಎಂ 390 ಅಡ್ವೆಂಚರ್

ಕೆಟಿಎಂ ಕೊನೆಗೂ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿರುವ 390 ಅಡ್ವೆಂಚರ್ ಬೈಕ್ ಅನ್ನು ಅನಾವರಣಗೊಳಿಸಿದೆ. ಕೆಟಿಎಂ 390 ಅಡ್ವೆಂಚರ್ 390 ಡ್ಯೂಕ್‌ ಬೈಕಿನ ಆಫ್-ರೋಡ್ ಆವೃತ್ತಿಯಾಗಿದ್ದು, ಡಿಸೆಂಬರ್‌ನಲ್ಲಿ ನಡೆಯಲಿರುವ 2019ರ ಇಂಡಿಯಾ ಬೈಕ್ ವೀಕ್ ವೇಳೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಂಡ ಕೆಟಿ‍ಎಂ 390 ಅಡ್ವೆಂಚರ್

ಕೆಟಿಎಂ 390 ಅಡ್ವೆಂಚರ್ ಬೈಕ್, 390 ಡ್ಯೂಕ್ ಹಾಗೂ ಆರ್‍‍ಸಿ ಮಾದರಿಯ ಬೈಕುಗಳಲ್ಲಿರುವ 373.2 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 9000 ಆರ್‍‍ಪಿ‍ಎಂನಲ್ಲಿ 44 ಬಿ‍‍ಹೆಚ್‍‍ಪಿ ಪವರ್ ಹಾಗೂ 7000 ಆರ್‍‍ಪಿ‍ಎಂನಲ್ಲಿ 37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಂಡ ಕೆಟಿ‍ಎಂ 390 ಅಡ್ವೆಂಚರ್

390 ಅಡ್ವೆಂಚರ್ ಬೈಕ್, ಬಿಎಸ್ 6 ಎಂಜಿನ್ ಅನ್ನು ಹೊಂದಿರಲಿದೆಯೆ, ಇಲ್ಲವೇ ಎಂಬುದನ್ನು ಕೆಟಿಎಂ ಇನ್ನೂ ದೃಢೀಕರಿಸಿಲ್ಲ. ಕೆಟಿಎಂ 390 ಬೈಕಿನಲ್ಲಿ ಬಿ‍ಎಸ್ 6 ಎಂಜಿನ್‌ ಅಳವಡಿಸಿದರೆ, ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಯಾಗುವ ಕೆಟಿ‍ಎಂ ಕಂಪನಿಯ ಮೊದಲ ಬೈಕ್ ಆಗಿರಲಿದೆ.

ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಂಡ ಕೆಟಿ‍ಎಂ 390 ಅಡ್ವೆಂಚರ್

ಕೆಟಿಎಂ 390 ಅಡ್ವೆಂಚರ್ ತನ್ನ ನೇಕೆಡ್ ಸ್ಟ್ರೀಟ್‌ಫೈಟರ್ ಬೈಕಿಗಿಂತ ದೊಡ್ಡದಾದ ವ್ಹೀಲ್‌ಬೇಸ್, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಎತ್ತರದ ಸೀಟ್, ದೊಡ್ಡ ಫ್ಯೂಯಲ್ ಟ್ಯಾಂಕ್, ಹೆಚ್ಚು ತೂಕ ಹಾಗೂ ಸ್ಟೀಯರಿಂಗ್ ಹೆಡ್ ಆಂಗಲ್ ಹಾಗೂ ಭಿನ್ನವಾದ ಟ್ರಯಲ್‌ಗಳನ್ನು ಹೊಂದಿರಲಿದೆ.

ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಂಡ ಕೆಟಿ‍ಎಂ 390 ಅಡ್ವೆಂಚರ್

390 ಡ್ಯೂಕ್ ಬೈಕ್, 65 ಡಿಗ್ರಿ ಸ್ಟೀಯರಿಂಗ್ ಹೆಡ್ ಆಂಗಲ್ ಹಾಗೂ 95 ಡಿಗ್ರಿ ಟ್ರಯಲ್ ಹೊಂದಿದ್ದರೆ, ಕೆಟಿಎಂ 390 ಅಡ್ವೆಂಚರ್ 63.5-ಡಿಗ್ರಿ ಹೆಡ್ ಆಂಗಲ್ ಹೊಂದಿರಲಿದೆ. 98 ಡಿಗ್ರಿಯ ಟ್ರಯಲ್ ಆಂಗಲ್ ಹೊಂದಿರಲಿದೆ. ಇದರಿಂದಾಗಿ ವ್ಹೀಲ್‌ಬೇಸ್‍‍ನ ಗಾತ್ರವು 1,430 ಎಂಎಂಗೆ ಹೆಚ್ಚಲಿದೆ. 390 ಡ್ಯೂಕ್‌ ಬೈಕಿನ ವ್ಹೀಲ್‍‍ಬೇಸ್ 1,357 ಎಂಎಂಗಳಾಗಿದೆ.

ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಂಡ ಕೆಟಿ‍ಎಂ 390 ಅಡ್ವೆಂಚರ್

390 ಅಡ್ವೆಂಚರ್ ಬೈಕ್, 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಸೀಟಿನ ಎತ್ತರವು 855 ಎಂಎಂಗಳಾಗಿದೆ. 390 ಅಡ್ವೆಂಚರ್ ಬೈಕ್, 14.8 ಲೀಟರಿನ ದೊಡ್ಡ ಇಂಧನ ಟ್ಯಾಂಕ್‍‍ನೊಂದಿಗೆ ಬರುತ್ತದೆ. 158 ಕೆ.ಜಿ ತೂಕವನ್ನು ಹೊಂದಿರುವ ಈ ಬೈಕಿನ ತೂಕವು 390 ಡ್ಯೂಕ್ ಬೈಕಿಗಿಂತ ಸ್ವಲ್ಪ ಹೆಚ್ಚಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಂಡ ಕೆಟಿ‍ಎಂ 390 ಅಡ್ವೆಂಚರ್

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿರುವ ಟಯರ್‌ ಹಾಗೂ ಸಸ್ಪೆಂಷನ್ ಸೆಟಪ್‍‍ಗಳಲ್ಲೂ ಸಹ ಬದಲಾವಣೆ ಮಾಡಲಾಗಿದೆ. ಈ ಆಫ್ ರೋಡರ್ ಬೈಕಿನ ಮುಂಭಾಗದಲ್ಲಿ 19 ಇಂಚಿನ ದೊಡ್ಡ ಟಯರ್ ಹಾಗೂ ಹಿಂಭಾಗದಲ್ಲಿ 17 ಇಂಚಿನ ಟಯರ್‍‍ಗಳಿದ್ದು, ಕ್ರಮವಾಗಿ 100/90 ಹಾಗೂ 130/80 ಪ್ರೊಫೈಲ್‍‍ನೊಂದಿಗೆ ಬರುತ್ತವೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಂಡ ಕೆಟಿ‍ಎಂ 390 ಅಡ್ವೆಂಚರ್

ಸಸ್ಪೆಂಷನ್‍‍ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ ಕಂಪ್ರೆಷನ್ ಹೊಂದಿರುವ 43 ಎಂಎಂ ಯುಎಸ್‍‍ಡಿ ಫೋರ್ಕ್‌ ಹಾಗೂ ರಿಬೌಂಡ್ ಅಡ್ಜಸ್ಟಬಿಲಿಟಿಗಳಿವೆ. ಈ ಬೈಕಿನ ಮುಂಭಾಗದಲ್ಲಿ 170 ಎಂಎಂ ಸಸ್ಪೆಂಷನ್‍‍ಗಳಿದ್ದರೆ, 390 ಡ್ಯೂಕ್ ಬೈಕಿನಲ್ಲಿ 142 ಎಂಎಂ ಸಸ್ಪೆಂಷನ್‍‍ಗಳಿವೆ. ಹಿಂಭಾಗದಲ್ಲಿ ಪ್ರಿಲೋಡ್ ಹಾಗೂ ರಿಬೌಂಡ್ ಅಡ್ಜಸ್ಟಬಿಲಿಟಿ ಹೊಂದಿರುವ ಮೊನೊ ಶಾಕ್‍‍ಗಳಿವೆ.

MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಂಡ ಕೆಟಿ‍ಎಂ 390 ಅಡ್ವೆಂಚರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕೆಟಿಎಂ 390 ಅಡ್ವೆಂಚರ್, ಕೆಟಿ‍ಎಂ ಕಂಪನಿಯ ಬಹುನಿರೀಕ್ಷಿತ ಬೈಕುಗಳಲ್ಲಿ ಒಂದಾಗಿದೆ. ಅಡ್ವೆಂಚರ್ ಬೈಕ್ ಅನ್ನು ಜಾಗತಿಕವಾಗಿ ಮತ್ತು ಭಾರತದಲ್ಲಿ ಕೆಲವು ಬಾರಿ ಟೀಸ್ ಮಾಡಲಾಗಿದೆ. ಈಗ ಇಐಸಿಎಂಎದಲ್ಲಿ ಮೊದಲ ಬಾರಿಗೆ ಅನಾವರಣಗೊಳ್ಳುವುದರೊಂದಿಗೆ, ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ.

ಇ‍ಐ‍‍ಸಿ‍ಎಂ‍ಎ‍‍ನಲ್ಲಿ ಅನಾವರಣಗೊಂಡ ಕೆಟಿ‍ಎಂ 390 ಅಡ್ವೆಂಚರ್

ಭಾರತದಲ್ಲಿ ಬಿಡುಗಡೆಯಾದ ನಂತರ, ಕೆಟಿಎಂ 390 ಅಡ್ವೆಂಚರ್ ಬಿಎಂಡಬ್ಲ್ಯು ಜಿ 310 ಜಿಎಸ್ ಮತ್ತು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕುಗಳಿಗೆ ಪೈಪೋಟಿ ನೀಡಲಿದೆ. ಇದರ ಬೆಲೆಯು ಬಿಎಂಡಬ್ಲ್ಯು ಜಿ 310 ಬೈಕಿಗಿಂತ ರೂ.2.5 ಲಕ್ಷದಿಂದ ರೂ.3 ಲಕ್ಷಗಳವರೆಗೆ ಕಡಿಮೆ ಇರಲಿದೆ.

Most Read Articles

Kannada
Read more on ಕೆಟಿಎಂ ktm
English summary
EICMA 2019: KTM 390 Adventure Showcased Ahead Of Its India Launch Later This Year - Read in Kannada
Story first published: Wednesday, November 6, 2019, 12:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X