ಏಪ್ರಿಲ್‍ನಲ್ಲಿ ಕೆಟಿಎಂ ಡ್ಯೂಕ್ 790 ಬಿಡುಗಡೆಯಾಗುವುದು ಖಚಿತ

ಕೆಟಿಎಂ ಇಂಡಿಯಾ ಸಂಸ್ಥೆಯು ತಮ್ಮ ಡ್ಯೂಕ್ ಹೊಸ 790 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಭಾರತಕ್ಕೆ ಕಂಪ್ಲೀಟ್ಲಿ ಕ್ನಾಕ್ಡ್ ಡೌನ್(ಸಿಕೆಡಿ) ಮಾರ್ಗದಲ್ಲಿ ಮುಂದಿನ ತಿಂಗಳು (ಏಪ್ರಿಲ್) ಕಾಲಿಡಲಿದೆ. ಈ ಲೇಖನದಲ್ಲಿ ಈ ಕುರಿತಾದ ಹೆಚ್ಚು ಮಾಹಿತಿಯನ್ನು ಪಡೆಯಿರಿ.

ಏಪ್ರಿಲ್ 2019ಕ್ಕೆ ಕೆಟಿಎಂ ಡ್ಯೂಕ್ 790 ಬಿಡುಗಡೆಯಾಗುವುದು ಖಚಿತ

ಕೆಟಿಎಂ ಬಿಡುಗಡೆಗೊಳಿಸಲಿರುವ ಹೊಸ 790 ಬೈಕ್ ಪುಣೆಯಲ್ಲಿರುವ ಬಜಾಜ್ ಆಟೋವಿನ ಚಕನ್ ಫ್ಯಾಕ್ಟರಿಯಲ್ಲಿ ನಿರ್ಮಾಣವಾಗಲಿದ್ದು, ಕೆಲವು ದಿನಗಳ ಹಿಂದಷ್ಟೆ ಈ ಬೈಕಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದೆ. ಇಷ್ಟೆ ಅಲ್ಲದೇ ಈ ಬೈಕಿನ ಖರೀದಿಗಾಗಿ ಡೀಲರ್‍‍ಗಳು ರೂ. 10,000 ಪಡೆಯುವ ಸಲುವಾಗಿ ಪ್ರೀ-ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 2019ಕ್ಕೆ ಕೆಟಿಎಂ ಡ್ಯೂಕ್ 790 ಬಿಡುಗಡೆಯಾಗುವುದು ಖಚಿತ

ವೈಶಿಷ್ಟ್ಯತೆಗಳು

ಇನ್ನು ಕೆಟಿಎಂ ಪರಿಚಯಿಸಲಿರುವ ಡ್ಯೂಕ್ 790 ಬೈಕಿನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ ಎಲ್ಇಡಿ ಹೆಡ್‍ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್, ಎಲ್ಇಡಿ ಡಿಆರ್‍ಎಲ್, ಟಿಎಫ್‍‍ಟಿ ಕಲರ್ ಇನ್ಸ್ಟ್ರೂಮೆಂಟ್ ಕಂಸೋಲ್, ಸ್ಮಾರ್ಟ್‍ಫೋನ್ ಕನೆಕ್ಟಿವಿಟಿಯನ್ನು ಪಡೆದುಕೊಂಡಿರಲಿದೆ.

ಏಪ್ರಿಲ್ 2019ಕ್ಕೆ ಕೆಟಿಎಂ ಡ್ಯೂಕ್ 790 ಬಿಡುಗಡೆಯಾಗುವುದು ಖಚಿತ

ಡ್ಯೂಕ್ 790 ಬೈಕ್ 825ಎಂಎಂನ ಸೀಟ್ ಹೈಟ್, 189ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದ್ದು, ಟ್ರೆಲ್ಲಿಸ್ ಫ್ರೇಮ್, 43ಎಂಎಂ ಡಬ್ಲ್ಯೂಪಿ ಅಪ್ಸೈಡ್ ಫ್ರಂಟ್ ಫೋರ್ಕ್ಸ್ ಹಾಗು ಹಿಂಭಾಗದಲ್ಲಿ ಡಬ್ಲ್ಯೂಪಿ ಮೊನೊಶಾಕ್ ಅಬ್ಸಾರ್ಬರ್ ಅನ್ನು ಪಡೆದುಕೊಂಡಿರಲಿದೆ.

ಏಪ್ರಿಲ್ 2019ಕ್ಕೆ ಕೆಟಿಎಂ ಡ್ಯೂಕ್ 790 ಬಿಡುಗಡೆಯಾಗುವುದು ಖಚಿತ

ಹೊಸ ಡ್ಯೂಕ್ 790 ಬೈಕ್ ರೈಡಿಂಗ್ ಪ್ರಿಯರಿಗೆ ಉತ್ತಮ ಅನುಭವವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಈ ಬೈಕ್ 5 ಸೆಕೆಂಡಿನಲ್ಲಿ ಸುಮಾರು 100 ಕಿಲೋಮೀಟರ್‍‍ನಷ್ಟು ಆಕ್ಸಿಲರೇಷನ್ ಅನ್ನು ನೀಡುವುದಲ್ಲದೇ, ಗಂಟೆಗೆ 220 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಸಹ ಪಡೆದುಕೊಂಡಿರಲಿದೆ.

ಏಪ್ರಿಲ್ 2019ಕ್ಕೆ ಕೆಟಿಎಂ ಡ್ಯೂಕ್ 790 ಬಿಡುಗಡೆಯಾಗುವುದು ಖಚಿತ

ಕೆಟಿಎಂ ಡ್ಯೂಕ್ 390 ಬೈಕಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಅನ್ನು ನೀಡಲಾಗಿದೆ. ಇಷ್ಟೆ ಅಲ್ಲದೇ, ವಿವಿಧ ಪರಿಸ್ಥಿತಿಗಳಲ್ಲಿ ಬಳಕೆಯಾಗಲು ರೈಡಿಂಗ್ ಮೋಡ್ಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಅನ್ನು ಒದಗಿಸಲಾಗುತ್ತಿದೆ.

ಏಪ್ರಿಲ್ 2019ಕ್ಕೆ ಕೆಟಿಎಂ ಡ್ಯೂಕ್ 790 ಬಿಡುಗಡೆಯಾಗುವುದು ಖಚಿತ

ಎಂಜಿನ್ ಸಾಮರ್ಥ್ಯ

ಹೊಸ ಕೆಟಿಎಂ ಡ್ಯೂಕ್ 790 ಬೈಕ್ 799ಸಿಸಿ ಪ್ಯಾರಲಲ್ ಟ್ವಿನ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 105ಬಿಹೆಚ್‍ಪಿ ಮತ್ತು 85ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಏಪ್ರಿಲ್ 2019ಕ್ಕೆ ಕೆಟಿಎಂ ಡ್ಯೂಕ್ 790 ಬಿಡುಗಡೆಯಾಗುವುದು ಖಚಿತ

ಬೆಲೆ ಮತ್ತು ಬಿಡುಗಡೆ (ಅಂದಾಜು)

ದುಬಾರಿ ಬೆಲೆಯಲ್ಲಿ ಬಿಡುಗಡೆಯಾಲರುವ ಹೊಸ ಕೆಟಿಎಂ ಡ್ಯೂಕ್ 790 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7 ರಿಂದ 9 ಲಕ್ಷದ ಬೆಲೆಯನ್ನು ಪಡೆದುಕೊಂಡಿರಲಿದೆ ಎಂದು ಅಂದಾಜಿಸಲಾಗಿದ್ದು, ಇದೇ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳಿಸುತ್ತೇವೆ ಎಂದು ಸಂಸ್ಥೆಯು ಮಾಹಿತಿ ನೀಡಿದೆ.

ಏಪ್ರಿಲ್ 2019ಕ್ಕೆ ಕೆಟಿಎಂ ಡ್ಯೂಕ್ 790 ಬಿಡುಗಡೆಯಾಗುವುದು ಖಚಿತ

ಒಟ್ಟಿನಲ್ಲಿ ದುಬಾರಿ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರೀ ನೀಡಲಿರುವ ಹೊಸ ಕೆಟಿಎಂ ಡ್ಯೂಕ್ 790 ಬೈಕ್‍ಗಳು ಮಾರಾಟವಾಗುತ್ತಿರುವ ಸುಜುಕಿ ಜಿಎಸ್ಎಕ್ಸ್-ಎಸ್750, ಡುಕಾಟಿ ಸ್ಕ್ರಾಂಬ್ಲರ್, ಹೋಂಡಾ ಸಿಬಿಆರ್ 650ಆರ್, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಮತ್ತು ಕವಾಸಕಿ ಜೆಡ್900 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಕೆಟಿಎಂ ktm duke
English summary
KTM 790 Duke Launch Confirmed For April 2019. Read In Kannada
Story first published: Thursday, March 21, 2019, 9:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X