ಇಂಡಿಯಾ ಬೈಕ್ ವೀಕ್‍‍ನಲ್ಲಿ ಬಿಡುಗಡೆಯಾಗಲಿದೆ ಕೆಟಿ‍ಎಂ ಅಡ್ವೆಂಚರ್ 390

ಕೆಟಿ‍ಎಂ ಅಡ್ವೆಂಚರ್ 390 ಬೈಕ್, 2019ರ ಇಂಡಿಯಾ ಬೈಕ್ ವೀಕ್‍‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಬಜಾಜ್ ಆಟೋ ಲಿಮಿಟೆಡ್‍‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಕೇಶ್ ಶರ್ಮಾರವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಇಂಡಿಯಾ ಬೈಕ್ ವೀಕ್‍‍ನಲ್ಲಿ ಬಿಡುಗಡೆಯಾಗಲಿದೆ ಕೆಟಿ‍ಎಂ ಅಡ್ವೆಂಚರ್ 390

ಇವರ ಜೊತೆಗೆ ಬಜಾಜ್ ಆಟೋ ಲಿಮಿಟೆಡ್‍‍ನ ಪ್ರೊಬೈಕಿಂಗ್ ಅಧ್ಯಕ್ಷರಾದ ಸುಮೀತ್ ನಾರಂಗ್ ಹಾಗೂ ಕೆಟಿ‍ಎಂ ಎ‍‍ಜಿಯ ಗ್ಲೋಬಲ್ ಮಾರ್ಕೆಟಿಂಗ್ ಉಪಾಧ್ಯಕ್ಷರಾದ ಫ್ಲೊರಿಯನ್ ಬುರ್ಗೆಟ್‍‍ರವರು ಪಾಲ್ಗೊಳ್ಳಲಿದ್ದಾರೆ.

ಇಂಡಿಯಾ ಬೈಕ್ ವೀಕ್‍‍ನಲ್ಲಿ ಬಿಡುಗಡೆಯಾಗಲಿದೆ ಕೆಟಿ‍ಎಂ ಅಡ್ವೆಂಚರ್ 390

ಕೆಟಿಎಂ ಅಡ್ವೆಂಚರ್ 390 ಬೈಕ್ ಅನ್ನು 2019ರ ಇ‍ಐ‍‍ಸಿ‍ಎಂ‍ಎ ಮೋಟಾರ್ ಶೋದಲ್ಲಿ ಅನಾವರಣಗೊಳಿಸಲಾಗಿತ್ತು. ಈ ಬೈಕಿನ ಬಿಡುಗಡೆಯನ್ನು ಬಹು ಕಾಲದಿಂದ ನಿರೀಕ್ಷಿಸಲಾಗುತ್ತಿದೆ. ಈ ಬೈಕಿನಲ್ಲಿ ಡ್ಯೂಕ್ 390 ಬೈಕಿನಲ್ಲಿರುವಂತಹ 373 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಇಂಡಿಯಾ ಬೈಕ್ ವೀಕ್‍‍ನಲ್ಲಿ ಬಿಡುಗಡೆಯಾಗಲಿದೆ ಕೆಟಿ‍ಎಂ ಅಡ್ವೆಂಚರ್ 390

ಈ ಎಂಜಿನ್ 43 ಬಿ‍‍ಹೆಚ್‍‍ಪಿ ಪವರ್ ಹಾಗೂ 37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಇದರ ಜೊತೆಗೆ ಈ ಎಂಜಿನ್ ಸ್ಲಿಪ್ ಹಾಗು ಅಸಿಸ್ಟ್ ಕ್ಲಚ್‍‍ಗಳನ್ನು ಹೊಂದಿದೆ.

ಇಂಡಿಯಾ ಬೈಕ್ ವೀಕ್‍‍ನಲ್ಲಿ ಬಿಡುಗಡೆಯಾಗಲಿದೆ ಕೆಟಿ‍ಎಂ ಅಡ್ವೆಂಚರ್ 390

ಅಡ್ವೆಂಚರ್ 390 ಬೈಕಿನಲ್ಲಿ ಅಳವಡಿಸಲಾಗುವ ಎಂಜಿನ್ ಅನ್ನು ಬೈಕಿಗೆ ಅನುಗುಣವಾಗಿ ಟ್ಯೂನ್ ಮಾಡಲಾಗುವುದು. ಕೆಟಿಎಂ 390 ಅಡ್ವೆಂಚರ್ ಬೈಕ್ ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎ‍‍ಬಿ‍ಎಸ್, ಆಫ್ ರೋಡ್ ರೈಡಿಂಗ್ ಮೋಡ್‍‍ಗಳಿವೆ.

ಇಂಡಿಯಾ ಬೈಕ್ ವೀಕ್‍‍ನಲ್ಲಿ ಬಿಡುಗಡೆಯಾಗಲಿದೆ ಕೆಟಿ‍ಎಂ ಅಡ್ವೆಂಚರ್ 390

19 ಇಂಚಿನ ಮುಂಭಾಗದ ವ್ಹೀಲ್, ಡ್ಯೂಯಲ್ ಪರ್ಪಸ್ ಟಯರ್, ಉದ್ದನೆಯ ವ್ಹೀಲ್ ಬೇಸ್, ಹೈ ಗ್ರೌಂಡ್ ಕ್ಲಿಯರೆನ್ಸ್, ಎತ್ತರದ ಸ್ಯಾಡಲ್ ಹಾಗೂ ದೊಡ್ಡ ಫ್ಯೂಯಲ್ ಟ್ಯಾಂಕ್‍‍ಗಳನ್ನು ಹೊಂದಿದೆ. ಕೆಟಿ‍ಎಂ ಅಡ್ವೆಂಚರ್ 390 ಬೈಕಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ.

ಇಂಡಿಯಾ ಬೈಕ್ ವೀಕ್‍‍ನಲ್ಲಿ ಬಿಡುಗಡೆಯಾಗಲಿದೆ ಕೆಟಿ‍ಎಂ ಅಡ್ವೆಂಚರ್ 390

ಆದರೆ ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 2.85 ಲಕ್ಷದಿಂದ ರೂ.3.25 ಲಕ್ಷಗಳಾಗುವ ಸಾಧ್ಯತೆಗಳಿವೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಹಾಗೂ ಬಿ‍ಎಂ‍‍ಡಬ್ಲ್ಯು ಮೋಟೊರಾಡ್ ಜಿ310ಜಿ‍ಎಸ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಇಂಡಿಯಾ ಬೈಕ್ ವೀಕ್‍‍ನಲ್ಲಿ ಬಿಡುಗಡೆಯಾಗಲಿದೆ ಕೆಟಿ‍ಎಂ ಅಡ್ವೆಂಚರ್ 390

ಕೆಟಿ‍ಎಂ ಕಂಪನಿಯು ತನ್ನ ಹೊಸ ಬೈಕಿನ ಸಾಮರ್ಥ್ಯವನ್ನು ಪ್ರದರ್ಶಿಸಲು ಬಯಸಿದೆ. ಕೆಟಿ‍ಎಂ ತನ್ನ ಪರ್ಫಾಮೆನ್ಸ್ ಬೈಕುಗಳನ್ನು ಈ ರೀತಿಯ ಮೇಳಗಳಲ್ಲಿ ಪ್ರದರ್ಶಿಸುತ್ತದೆ. ಇದರ ಜೊತೆಗೆ ಕೆಟಿ‍ಎಂ ಕಂಪನಿಯು ಮುಂದಿನ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಕೆಟಿ‍ಎಂ ಡ್ಯೂಕ್ 890 ಆರ್ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಇಂಡಿಯಾ ಬೈಕ್ ವೀಕ್‍‍ನಲ್ಲಿ ಬಿಡುಗಡೆಯಾಗಲಿದೆ ಕೆಟಿ‍ಎಂ ಅಡ್ವೆಂಚರ್ 390

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಅಡ್ವೆಂಚರ್ 390 ಬೈಕಿನ ಬಿಡುಗಡೆಯನ್ನು ಹಲವಾರು ದಿನಗಳಿಂದ ನಿರೀಕ್ಷಿಸಲಾಗುತ್ತಿತ್ತು. ಈ ಬೈಕ್ ಒಳ್ಳೆಯ ಪರ್ಫಾಮೆನ್ಸ್ ನೀಡುವ ಸಾಧ್ಯತೆಗಳಿವೆ.

Most Read Articles

Kannada
Read more on ಕೆಟಿಎಂ ktm
English summary
KTM Adventure 390 To Make India Debut At India Bike Week 2019 - Read in Kannada
Story first published: Monday, December 2, 2019, 16:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X