ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಬಜಾಜ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನವನ್ನು ಅತಿ ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಹೊಸ ಅರ್ಬನೈಟ್ ಸರಣಿಯ ಸ್ಕೂಟರ್ ಅನ್ನು ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಈ ದ್ವಿಚಕ್ರ ವಾಹನವು ಬಜಾಜ್ ಬಿಡುಗಡೆಗೊಳಿಸಲಿರುವ ಮೊದಲ ಎಲೆಕ್ಟ್ರಿಕ್ ವಾಹನವಾಗಿರಲಿದೆ. ಅರ್ಬನೈಟ್ ಸರಣಿಯ ಸ್ಕೂಟರ್ ಮಾಸ್ ಮಾರುಕಟ್ಟೆಯಲ್ಲಿರುವ ವಾಹನಗಳಿಗಿಂತ ಹಾಗೂ ಎಂಟ್ರಿ ಲೆವೆಲ್ ವಾಹನಗಳಿಗಿಂತ ಭಿನ್ನವಾಗಿರಲಿದೆ. ಬಜಾಜ್ - ಕೆಟಿ‍ಎಂ ಕಂಪನಿಗಳು ಜಂಟಿಯಾಗಿ ಹೊಸ ವಾಹನಗಳಿಗಾಗಿ ಹೊಸ ಪವರ್ ಟ್ರೇನ್‍‍ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಎಕಾನಾಮಿಕ್ ಟೈಮ್ಸ್ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಬಜಾಜ್ ಆಟೋದ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಕೇಶ್ ಶರ್ಮಾರವರು ಈ ಬಗ್ಗೆ ಮಾತನಾಡಿದ್ದಾರೆ.

ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಹೊಸ ವಾಹನಗಳ ಮೂಲ ಮಾದರಿಗಳನ್ನು ತಯಾರಿಸುತ್ತಿರುವುದನ್ನು ಖಚಿತಪಡಿಸಿರುವ ಅವರು ಯಾವ ವಾಹನವನ್ನು ಮೊದಲು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬೇಕೆಂದು ಇನ್ನೂ ಖಚಿತವಾಗಿಲ್ಲವೆಂದು ತಿಳಿಸಿದ್ದಾರೆ.

ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಬಜಾಜ್ ಹಾಗೂ ಕೆ‍‍ಟಿ‍ಎಂ ಕಂಪನಿಗಳು ಜೊತೆಯಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಹೊಸ ಪ್ಲಾಟ್‍‍ಫಾರಂನಲ್ಲಿ 48 ವೋಲ್ಟಿನ ಪವರ್ ಟ್ರೇನ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಪವರ್ ಟ್ರೇನ್ ಅನ್ನು ಎರಡೂ ಕಂಪನಿಗಳೂ ವಿವಿಧ ರೀತಿಯಲ್ಲಿ ಬಳಸಿಕೊಳ್ಳಲಿವೆ.

ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಮೂಲ ಮಾದರಿಯಲ್ಲಿರುವ ಪವರ್‍‍ಟ್ರೇನ್ ಪ್ಲಾಟ್‍‍ಫಾರಂ ಅನ್ನು ವೇಗವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಹೊಸ ಪವರ್‍‍ಟ್ರೇನ್ ಅನ್ನು 2022ರ ವೇಳೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. 48 ವೋಲ್ಟ್ ನ ಪವರ್‍‍ಟ್ರೇನ್ 3 ರಿಂದ 10 ಕೆ‍‍ಡಬ್ಲ್ಯು ಸಾಮರ್ಥ್ಯದ ವಾಹನಗಳನ್ನು ಚಾರ್ಜ್ ಮಾಡಲು ಸಹಕಾರಿಯಾಗಲಿದೆ. ಹೊಸ ಪ್ಲಾಟ್‍‍ಫಾರಂನಡಿಯಲ್ಲಿ ಬರುವ ಎಲ್ಲಾ ವಾಹನಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು.

ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಕೆ‍‍ಟಿ‍ಎಂ ಕಂಪನಿಯು ವಿಶ್ವಾದ್ಯಂತವಿರುವ ಮಾರುಕಟ್ಟೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿದೆ. ಹೊಸ ಪ್ಲಾಟ್‍‍ಫಾರಂ ಅನ್ನು ತಯಾರಿಸಲು ಕೆ‍‍ಟಿ‍ಎಂ ಬಿಡಿಭಾಗಗಳನ್ನು ಬಳಸಿಕೊಳ್ಳಲಾಗುವುದು.

MOST READ: ಪ್ರಪಂಚದ ದೊಡ್ಡ ಜೆಟ್ ವಿಮಾನವನ್ನು ಎಳೆದ ಮಿನಿ ಕೂಪರ್..!

ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಈ ಪ್ಲಾಟ್‍‍ಫಾರಂನಲ್ಲಿ ತಯಾರಾಗುವ ದ್ವಿಚಕ್ರ ವಾಹನಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಪ್ಲಾಟ್‍‍ಫಾರಂ ಅನ್ನು ಹಲವು ಬೈಕುಗಳು ಹಾಗೂ ಪರ್ಫಾಮೆನ್ಸ್ ಸ್ಕೂಟರ್‍‍ಗಳು ಬಳಸಿಕೊಳ್ಳುವ ಸಾಧ್ಯತೆಗಳಿವೆ.

MOST READ: ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಬಜಾಜ್-ಕೆಟಿ‍ಎಂ ಸಹಭಾಗಿತ್ವವು ಭಾರತದ ಮಟ್ಟಿಗೆ ಯಶಸ್ವಿಯಾಗಿದ್ದು, ಎರಡೂ ಕಂಪನಿಗಳೂ ಒಬ್ಬರಿಗೊಬ್ಬರು ಪ್ರಯೋಜನವನ್ನು ಪಡೆದಿದ್ದಾರೆ. ಈ ಸಹಭಾಗಿತ್ವದಿಂದಾಗಿ ಬಜಾಜ್ ಡೊಮಿನೊರ್ 400 ಹಾಗೂ ಕೆ‍‍ಟಿ‍ಎಂ 390 ಡ್ಯೂಕ್ ಬೈಕುಗಳನ್ನು ಬಿಡುಗಡೆಗೊಳಿಸಲಾಗಿದೆ.

MOST READ: ಎಸ್‍‍ಯು‍‍ವಿ ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕ್ರೆಟಾ

ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಮುಂಬರುವ ದಿನಗಳಲ್ಲಿ ಹೊಸ ಬಗೆಯ ಎಲೆಕ್ಟ್ರಿಕ್ ವಾಹನಗಳನ್ನು ಈ ಕಂಪನಿಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ನಿರೀಕ್ಷಿಸಬಹುದು. ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಯಶಸ್ವಿಯಾಗುವುದು ಇನ್ನೂ ದೂರದ ಮಾತು.

ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಭಾರತ ಸರ್ಕಾರವು ಭವಿಷ್ಯದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹಾಗೂ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಬಹುದು. ಆಗ ಈ ಹೊಸ ಪ್ಲಾಟ್‍‍ಫಾರಂನಿಂದ ಈ ಕಂಪನಿಗಳಿಗೆ ಭವಿಷ್ಯದಲ್ಲಿ ಅನುಕೂಲವಾಗಲಿದೆ.

ಜಂಟಿಯಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸುತ್ತಿವೆ ಕೆಟಿ‍ಎಂ-ಬಜಾಜ್

ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳ ಬೆಲೆಯು, ಮಾಮೂಲಿ ದ್ವಿಚಕ್ರ ವಾಹನಗಳ ಬೆಲೆಗಿಂತ ಹೆಚ್ಚಾಗಿರಲಿದೆ. ಇದಕ್ಕಾಗಿ ಸರ್ಕಾರವು ಸಬ್ಸಿಡಿಗಳನ್ನು ನೀಡಿ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಯಶಸ್ವಿಯಾಗುವಂತೆ ಮಾಡಬೇಕಿದೆ.

Source: E-Scoot

Most Read Articles

Kannada
Read more on ಕೆಟಿಎಂ ktm
English summary
KTM Bajaj developing common electric two wheeler platform - Read in kannada
Story first published: Thursday, June 6, 2019, 15:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X