ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಕೆಟಿಎಂ ಸಂಸ್ಥೆಯ ತನ್ನ ಜನಪ್ರಿಯ ಡ್ಯೂಕ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಸೂಪರ್ ಬೈಕ್ ಆವೃತ್ತಿಯಾದ ಡ್ಯೂಕ್ 790 ಬಿಡುಗಡೆ ಮಾಡುತ್ತಿದ್ದು, ಹೊಸ ಬೈಕ್ ಇದೇ ತಿಂಗಳು 23ರಂದು ಭಾರತೀಯ ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶಿಸುವುದು ಪಕ್ಕಾ ಆಗಿದೆ.

ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಡ್ಯೂಕ್ 790 ಬೈಕ್ ಖರೀದಿಗಾಗಿ ಕೆಟಿಎಂ ಸಂಸ್ಥೆಯು ಅಧಿಕೃತ ಬುಕ್ಕಿಂಗ್ ಆರಂಭ ಮಾಡದೇ ಇದ್ದರೂ ಆಸಕ್ತ ಗ್ರಾಹಕರು ಕೆಟಿಎಂ ಪ್ರಮುಖ ಡೀಲರ್ಸ್‌ಗಳಲ್ಲಿ ರೂ.30 ಸಾವಿರದಿಂದ ರೂ.40 ಸಾವಿರ ಮುಂಗಡ ಪಾವತಿಸಿ ಹೊಸ ಬೈಕ್ ಖರೀದಿಗೆ ಎದುರು ನೋಡುತ್ತಿದ್ದು, ಹೊಸ ಬೈಕ್ ಬಿಡುಗಡೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವ ಡ್ಯೂಕ್ 790 ತಾಂತ್ರಿಕ ಮಾಹಿತಿಯುಳ್ಳ ಕೈಪಿಡಿಯೊಂದು ಸಾಕಷ್ಟು ಸದ್ದು ಮಾಡುತ್ತಿದೆ.

ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಮಾಹಿತಿಗಳ ಪ್ರಕಾರ, ಡ್ಯೂಕ್ 790 ಬೈಕ್ ಮಾದರಿಯು ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬರಲಿದ್ದು, ಮೋಟಾರ್‌ಸೈಕಲ್ ಟ್ರಾಕ್ಷನ್ ಕಂಟ್ರೋಲ್(ಎಂಟಿಸಿ), ಟ್ರಾಕ್ ಮೂಡ್, ಸಿಕ್ಸ್-ಆಕ್ಸಿಸ್ ಇನೆಟೆರಿಯಾ ಮತ್ತು ಕ್ವಿಕ್ ಶಿಫ್ಟರ್ ಪ್ಲಸ್ ಸಿಸ್ಟಂ ಹಲವು ಸುಧಾರಿತ ತಂತ್ರಜ್ಞಾನ ಸೌಲಭ್ಯ ಹೊಂದಿದೆ.

ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಇನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಡ್ಯೂಕ್ 1290 ಆವೃತ್ತಿಯನ್ನು ಮಾರಾಟ ಮಾಡುತ್ತಿರುವ ಕೆಟಿಎಂ ಸಂಸ್ಥೆಯು ಭಾರತದಲ್ಲೂ ಕೂಡಾ ತನ್ನ ಜನಪ್ರಿಯ ಸೂಪರ್ ಬೈಕ್ ಆವೃತ್ತಿಗಳನ್ನು ಒಂದೊಂದಾಗಿ ಪರಿಚಯಿಸುತ್ತಿದೆ.

ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಇದರಲ್ಲಿ ಇದೀಗ ಡ್ಯೂಕ್ 790 ಬಿಡುಗಡೆಯಾಗುತ್ತಿದ್ದು, ತದನಂತರ 390 ಅಡ್ವೆಂಚೆರ್, 790 ಅಡ್ವೆಂಚೆರ್ ಮತ್ತು 500 ಸಿಸಿ ವಿಭಾಗದಲ್ಲೂ ಮತ್ತೆರಡು ಹೊಸ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯ ಸುಳಿವು ನೀಡಿದೆ. ಡ್ಯೂಕ್ 790 ಬೈಕ್ ಸದ್ಯ ಸಿ‍‍ಕೆ‍ಡಿ ವಿಧಾನದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದ್ದು, ಪುಣೆಯಲ್ಲಿರುವ ಬಜಾಜ್ ಬೈಕ್ ಉತ್ಪಾದನಾ ಘಟಕದಲ್ಲಿ ಕೆಲವು ಬದಲಾವಣೆಗಳೊಂದಿಗೆ ಮಾರಾಟಕ್ಕೆ ಸಿದ್ದವಾಗಲಿದೆ.

ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಕೆಟಿ‍ಎಂ ಸಂಸ್ಥೆಯ ಮಿಡ್ಲ್ ವೇಟ್ ವಿಭಾಗದಲ್ಲಿರುವ ಈ ನೇಕೆಡ್ ರೋಡ್‍‍ಸ್ಟರ್ ಬೈಕ್ ಮಾದರಿಯಲ್ಲಿ ಎಲ್‍‍ಸಿ8ಸಿ 799 ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರೆಲಲ್ ಟ್ವಿನ್ ಎಂಜಿನ್ ಜೋಡಣೆ ಮಾಡಿದ್ದು, ಈ ಬೈಕಿನಲ್ಲಿರುವ ಎಂಜಿನ್ 103-ಬಿಹೆಚ್‍ಪಿ ಹಾಗೂ 86-ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ.

ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಈ ಎಂಜಿನ್‍‍ನಲ್ಲಿ 6 ಸ್ಪೀಡ್ ಗೇರ್‍‍ಬಾಕ್ಸ್ ಇರಲಿದ್ದು, ಈ ಬೈಕಿನಲ್ಲಿ ಪಿ‍ಎ‍ಎಸ್‍‍ಸಿ ಸ್ಲಿಪ್ ಅಸಿಸ್ಟ್ ಕ್ಲಚ್ ಹಾಗೂ ಕ್ವಿಕ್ ಶಿಫ್ಟ್ ಅಸಿಸ್ಟ್ ಇರಲಿದೆ. ಇದರ ಜೊತೆಗೆ ಈ ಬೈಕಿನಲ್ಲಿ ರೈಡ್ ಬೈ ವೈರ್ ಥ್ರಾಟಲ್ ಇರಲಿದ್ದು, ಸ್ಪೋರ್ಟ್, ಸ್ಟ್ರೀಟ್, ರೇನ್ ಹಾಗೂ ಟ್ರ್ಯಾಕ್ ಎಂಬ ನಾಲ್ಕು ವಿವಿಧ ಬಗೆಯ ರೈಡರ್ ಮೋಡ್‍‍ಗಳನ್ನು ಒದಗಿಸಲಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಇದಲ್ಲದೇ ಹೊಸ ಬೈಕಿನಲ್ಲಿ ಮೋಟಾರ್ ಸ್ಲಿಪ್ ರೆಗ್ಯುಲೇಷನ್, ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎ‍‍ಬಿ‍ಎಸ್ ಹಾಗೂ ವ್ಹೀಲ್ ಕಂಟ್ರೋಲ್‍‍ಗಳನ್ನು ಸಹ ನೀಡಲಾಗಿದೆ.

MOST READ: ಭಾರತದಿಂದ ಮರೆಯಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳಿವು..!

ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಈ ಬೈಕಿನಲ್ಲಿರುವ ಇನ್ನೊಂದು ವಿಶೇಷತೆಯೆಂದರೆ, ಈ ಬೈಕ್ ಸೂಪರ್ ಮೋಟೊ ಮೋಡ್ ನೀಡಲಿದ್ದು, ಇದರಿಂದಾಗಿ ಚಾಲಕರು ಹಿಂದಿರುವ ವ್ಹೀಲ್‍‍ನಲ್ಲಿನ ಎ‍‍ಬಿ‍ಎಸ್ ಸುರಕ್ಷೆಯನ್ನು ಸ್ವಿಚ್ ಆಫ್ ಮಾಡಬಹುದಾಗಿದೆ. ಈ ಬೈಕಿನ ಮುಂಭಾಗದಲ್ಲಿ ಡಬ್ಲ್ಯು‍‍ಪಿ ಸೋರ್ಸಿನ 43 ಎಂಎಂ ಅಪ್ ಸೈಡ್ ಡೌನ್ ನಾನ್ ಅಡ್ಜಸ್ಟಬಲ್ ಫೋರ್ಕ್‍‍ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍ ಸಸ್ಪೆಂಷನ್‍‍ಗಳನ್ನು ಅಳವಡಿಸಲಾಗಿದೆ.

MOST READ: ಶೀಘ್ರದಲ್ಲೇ ಸ್ಕ್ರ್ಯಾಪಿಂಗ್ ನೀತಿ ಜಾರಿ- ಹೊಸ ಉದ್ಯಮಕ್ಕೆ ಕೈಜೋಡಿಸಿದ ಮಾರುತಿ ಸುಜುಕಿ ಮತ್ತು ಟೊಯೊಟಾ

ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಬ್ರೇಕಿಂಗ್ ಅನ್ನು ಮುಂಭಾಗದಲ್ಲಿರುವ ಡಬಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿರುವ ಸಿಂಗಲ್ ಡಿಸ್ಕ್ ಗಳು ನಿಯಂತ್ರಿಸುತ್ತವೆ. ಡ್ಯೂಕ್ 390 ಬೈಕಿನ ರೀತಿಯಲ್ಲಿಯೇ ಡ್ಯೂಕ್ 790 ಬೈಕ್ ಸಹ ಪೂರ್ಣವಾದ ಎಲ್‍‍ಇ‍‍ಡಿ ಲೈಟಿಂಗ್ ಸೆಟ್‍ಅಪ್, ಸ್ಮಾರ್ಟ್ ಫೋನ್‍‍ಗಳಿಗಾಗಿ ಸುಧಾರಿತ ಟೆಕ್ನಾಲಜಿಯ ಟಿ‍ಎಫ್‍‍ಟಿ ಕ್ಲಸ್ಟರ್‍‍ನ ಬ್ಲೂಟೂಟ್ ಕನೆಕ್ಟಿವಿಟಿ ಹೊಂದಿದೆ.

ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಹೊಸ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಎಕ್ಸ್ ಶೋರೂಂ ಪ್ರಕಾರ ರೂ. 7.50 ಲಕ್ಷದಿಂದ ರೂ. 8.50 ಲಕ್ಷಗಳಾಗುವ ಸಾಧ್ಯತೆಗಳಿದ್ದು, ಟ್ರ್ಯಾಕ್ ಮತ್ತು ಸ್ಟ್ರೀಟ್ ಬೈಕ್ ಸವಾರಿಗೆ ಇದು ಮತ್ತಷ್ಟು ಬಲಿಷ್ಠ ಬೈಕ್ ಆವೃತ್ತಿಯಾಗಿ ಮಿಂಚಲಿದೆ.

ಇದೇ ತಿಂಗಳು 23ಕ್ಕೆ ಕೆಟಿಎಂ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆ ಪಕ್ಕಾ..!

ಹೀಗಾಗಿ ಡ್ಯೂಕ್ 790 ಬೈಕ್ ಬಿಡುಗಡೆಯಾದ ನಂತರ ಮಾರುಕಟ್ಟೆಯಲ್ಲಿರುವ ಟ್ರಯಂಫ್ ಸ್ಟ್ರೀಟ್ ಟ್ರಿಪ್ಪಲ್, ಸುಜುಕಿ ಜಿ‍ಎಸ್‍ಎಕ್ಸ್-ಎಸ್750, ಕವಾಸಕಿ ಝಡ್900, ಡುಕಾಟಿ ಮಾನ್‍‍ಸ್ಟರ್ ಬೈಕ್‌ಗಳಿಗೆ ಪೈಪೋಟಿ ನೀಡಲಿದ್ದು, ಕೆಟಿಎಂ ಬೈಕ್ ಸರಣಿಯಲ್ಲಿ ಇದು ಅಗ್ರಸ್ಥಾನದಲ್ಲಿರಲಿದೆ.

Most Read Articles

Kannada
Read more on ಕೆಟಿಎಂ ktm
English summary
KTM Duke 790 Launch Date Confirmed For India: Here’s Everything You Need To Know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X