ಕೆಟಿಎಂ ಡ್ಯೂಕ್ 790 ಟೀಸರ್ ಬಿಡುಗಡೆ ಮಾಡಿದ ಬಜಾಜ್

ಬಹು ನಿರೀಕ್ಷಿತ ಕೆಟಿಎಂ ಡ್ಯೂಕ್ 790 ಬೈಕನ್ನು ಮುಂಬರುವ ಕೆಲವೇ ವಾರಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಹೊಸ ಬೈಕಿನ ಟೀಸರ್ ಅನ್ನು ಬಜಾಜ್ ಸಂಸ್ಥೆಯು ಬಿಡುಗಡೆ ಮಾಡಲಾಗಿದೆ. ಟೀಸರ್ ನಲ್ಲಿ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ ಕೆಟಿಎಂ ಡ್ಯೂಕ್ 790 ಗ್ಲೋಬರ್ ಮಾರುಕಟ್ಟೆಯಲ್ಲಿರುವ ಕಾರಣ ನಮಗೆ ಈ ಬೈಕಿನ ಬಗ್ಗೆ ಹೆಚ್ಚು ತಿಳಿದಿದೆ.

ಕೆಟಿಎಂ ಡ್ಯೂಕ್ 790 ಟೀಸರ್ ಬಿಡುಗಡೆ ಮಾಡಿದ ಬಜಾಜ್

ಕೆಟಿಎಂ ಡ್ಯೂಕ್ 790 ಹೊಸ 799 ಸಿಸಿ ಲಿಕ್ವಿಡ್ ಕೂಲ್ ಪ್ಯಾರಲೆಲ್ ಟ್ವಿನ್ ಎಂಜಿನ್ ಹೊಂದಿದ್ದು, 103 ಹೆಚ್‍ಪಿ ಮತ್ತು 87 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದ್ದು, ಕ್ಲಚ್‍ಲೆಸ್ ಗೇರ್ ಶಿಫ್ಟ್ ನಲ್ಲಿ ವೇಗವಾಗಿ ಗೇರ್‍‍ಗಳನ್ನು ಶಿಫ್ಟ್ ಮಾಡಬಹುದು. ಈ ಬೈಕ್, ಸ್ಪೋರ್ಟ್ಸ್ ನೇಕೆಡ್ ಬಾಡಿ, ಶಾರ್ಪ್ ಫೀಚರ್ಸ್ ಮತ್ತು ಆಕರ್ಷಕ ಪೇಂಟ್ ಸ್ಕೀಮ್‍ಗಳನ್ನು ಒಳಗೊಂಡಿದೆ.

ಕೆಟಿಎಂ ಡ್ಯೂಕ್ 790 ಟೀಸರ್ ಬಿಡುಗಡೆ ಮಾಡಿದ ಬಜಾಜ್

ಕೆಟಿಎಂ ಡ್ಯೂಕ್ 790 ಹೊಸ ಚಾಸೀಸ್ ಹೊಂದಿದ್ದು ಎಂಜಿನ್ ಅನ್ನು ಸ್ಟ್ರೆಸ್ ಮೆಂಬರ್ ನಂತೆ ಬಳಸುತ್ತದೆ. ಈ ಬೈಕಿನ ಮುಂಭಾಗದಲ್ಲಿ 43 ಎಂಎಂ ಡಬ್ಲ್ಯೂಪಿ ಅಪ್ ಸೈಡ್ ಡಾನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡಬ್ಲ್ಯೂಪಿ ಮೊನೋ ಶಾಕ್ ಗಳನ್ನು ನೀಡಲಾಗಿದೆ.

ಕೆಟಿಎಂ ಡ್ಯೂಕ್ 790 ಟೀಸರ್ ಬಿಡುಗಡೆ ಮಾಡಿದ ಬಜಾಜ್

ಬ್ರೇಕ್ ಗಳ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಸಿಂಗಲ್ ಡಿಸ್ಕ್ ಇದೆ. ಬಾಷ್ 9 ಎಂಪಿ 2 ಚಾನೆಲ್ ನಲ್ಲಿ ಸ್ಟಾಂಡರ್ಡ್ ಎಬಿಎಸ್ ಲಭ್ಯವಿದ್ದು. ಸೂಪರ್ ಮೊಟೋ ರೈಡ್ ಮೋಡ್ ನಲ್ಲಿ ಹಿಂದಿನ ವ್ಹೀಲ್ ನ ಎಬಿಎಸ್ ಟರ್ನ್ ಆಫ್ ಮಾಡಬಹುದು.

ಕೆಟಿಎಂ ಡ್ಯೂಕ್ 790 ಟೀಸರ್ ಬಿಡುಗಡೆ ಮಾಡಿದ ಬಜಾಜ್

ಮೋಟಾರ್ ಸೈಕಲ್ 14 ಲೀಟರ್ ಫ್ಯೂಯೆಲ್ ಟ್ಯಾಂಕ್ ಹೊಂದಿದ್ದು, ಕೆಟಿಎಂ ಪ್ರಕಾರ ಪ್ರತಿ ಲೀಟರಿಗೆ 23 ಕಿ.ಮೀ ನಷ್ಟು ಮೈಲೇಜ್ ನೀಡಲಿದೆ. ಡ್ಯೂಕ್ 790 ನ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಇರದಿದ್ದರೂ ಅದರ ಬೆಲೆಯು ರೂ 6 ಲಕ್ಷಗಳಿಂದ ರೂ 7 ಲಕ್ಷಗಳವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಕೆಟಿಎಂ ಡ್ಯೂಕ್ ಗಳು ಸಿಕೆಡಿ ಯೂನಿಟ್ ಗಳಿಗೆ ಬಂದ ನಂತರ ಅವುಗಳನ್ನು ಪುಣೆಯ ಚಕಾನ್ ನಲ್ಲಿರುವ ಬಜಾಜ್ ಕೆಟಿಎಂ ಘಟಕದಲ್ಲಿ ಅಸ್ಸೆಂಬಲ್ ಮಾಡಲಾಗುತ್ತದೆ.

MUST READ: ಅಮೆರಿಕದಲ್ಲಿ ಟ್ರಕ್ ಓಡಿಸುವ ಈ ಭಾರತೀಯನ ಆದಾಯ ಎಷ್ಟು ಗೊತ್ತಾ?

ಕೆಟಿಎಂ ಡ್ಯೂಕ್ 790 ಟೀಸರ್ ಬಿಡುಗಡೆ ಮಾಡಿದ ಬಜಾಜ್

ಕೆಟಿಎಂ ಭಾರತದಲ್ಲಿ ಹೆಚ್ಚು ಮಾರಾಟವಾಗುವ ದ್ವಿ ಚಕ್ರವಾಹನಗಳಲ್ಲಿ ಒಂದಾಗಿದೆ. ಕೆಟಿಎಂ ಎರಡು ಮಾದರಿಯ ಬೈಕುಗಳನ್ನು ಅನೇಕ ವೆರಿಯಂಟ್ ಗಳಲ್ಲಿ ನೀಡುತ್ತಿದೆ. ಮೊದಲ ಮಾದರಿಯಾದ ಡ್ಯೂಕ್ ಅನ್ನು - 125, 200, 250 ಮತ್ತು 390 ಎಂಬ ವಿವಿಧ ಎಂಜಿನ್ ಕೆಪಾಸಿಟಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕೆಟಿಎಂ ಡ್ಯೂಕ್ 790 ಟೀಸರ್ ಬಿಡುಗಡೆ ಮಾಡಿದ ಬಜಾಜ್

ಎರಡನೇ ಮಾದರಿಯಾದ ಆರ್‍‍ಸಿ ಅನ್ನು - 200 ಮತ್ತು 390 - ಎಂಬ ಎರಡು ಎಂಜಿನ್ ಕೆಪಾಸಿಟಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳ ಬೆಲೆ ಭಾರತದ ಎಕ್ಸ್ ಶೋ ರೂಂ ದರದಲ್ಲಿರುವಂತೆ 1.24 ಲಕ್ಷಗಳಿಂದ ರೂ 2.44 ಲಕ್ಷಗಳಾಗಿರುತ್ತವೆ.

ಕೆಟಿಎಂ ಡ್ಯೂಕ್ 790 ಟೀಸರ್ ಬಿಡುಗಡೆ ಮಾಡಿದ ಬಜಾಜ್

ಕೆಟಿಎಂ ಡ್ಯೂಕ್ 790 ಹೊರತಾಗಿ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬಗ್ಗೆ ಸುದ್ದಿಗಳಿದ್ದು, ಆ ಬೈಕ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ. ಕೆಟಿಎಂ 390 ಅಡ್ವೆಂಚರ್ ಬೈಕನ್ನು ಕಳೆದ ವರ್ಷ ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು ಆದರೆ 2019ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಈಗ ಈ ಅಡ್ವೆಂಚರ್ ಸಿರೀಸ್ ಬೈಕಿನ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ.

Most Read Articles

Kannada
Read more on ಕೆಟಿಎಂ ktm
English summary
KTM Duke 790 Launching Soon — Bajaj Drops Teaser - Read in Kannada
Story first published: Wednesday, April 24, 2019, 16:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X