YouTube

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಕೆಟಿಎಂ

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಎಲ್ಲಾ ಜನಪ್ರಿಯ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡುತ್ತಿವೆ. ಎಲ್ಲಾ ಕಂಪನಿಗಳು ಪೈಪೋಟಿಗೆ ಇಳಿದು ಎಲೆಕ್ಟಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಇದೇ ಸಾಲಿನಲ್ಲಿ ಬಜಾಜ್, ಎಲೆಕ್ಟ್ರಿಕ್ ಶ್ರೇಣಿಯ ಚೇತಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಕೆಟಿಎಂ

ಇದೀಗ ಆಸ್ಟ್ರಿಯನ್ ಮೂಲದ ಕೆಟಿಎಂ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ಹಿಂದೆ ಬಜಾಜ್ ಮತ್ತು ಕೆ‍‍ಟಿಎಂ ಸಹಯೋಗದೊಂದಿಗೆ ಹೊಸ ಎಲೆಕ್ಟಿಕ್ ಸ್ಕೂಟರ್ ಬಿಡುಗಡೆಯಾಗಲಿದೆ ಎಂಬ ವರದಿ ಪ್ರಕಟವಾಗಿತ್ತು.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಕೆಟಿಎಂ

ಬಜಾಜ್ ಆಟೋ ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಕೇಶ್ ಶರ್ಮಾ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ, ಕೆ‍‍ಟಿಎಂನಲ್ಲಿ ಬಜಾಜ್ ಶೇ.48ರಷ್ಟು ಪಾಲನ್ನು ಹೊಂದಿದೆ. ಎರಡು ಕಂಪನಿಗಳು ಕೆಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿವೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಕೆಟಿಎಂ

ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪಲ್ಸರ್ ಆರ್‍ಎಸ್ ಮತ್ತು ಎನ್‍ಎಸ್ ಸರಣಿಗಳು ಇವರ ಸಂಯೋಜನೆಯಿಂದ ತಯಾರಾದ ಬೈಕುಗಳಾಗಿವೆ. ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಎರಡು ಕಂಪನಿಗಳು ಪ್ರೀಮಿಯಂ ಸಾಲಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲು ಚಿಂತಿಸಿವೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಕೆಟಿಎಂ

ಇದರ ನಡುವೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೆಟಿಎಂ ಕಂಪನಿಯು ಪರಿಚಯಿಸಲಿದೆ. ಕೆಟಿಎಂ ತನ್ನ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದ್ದು, ಈ ಸ್ಕೂಟರ್, ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ ಇರಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಕೆಟಿಎಂ

ಕೆ‍‍ಟಿಎಂ ಮೊದಲ ಎಲೆಕ್ಟಿಕ್ ಸ್ಕೂಟರ್‍‍ನ ಮೂಲಮಾದರಿಯನ್ನು 2022ರ ಇಐಸಿಎಂಎ ಮೋಟಾರ್‍‍ಶೋದಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ. 2023ರ ವೇಳೆಗೆ ಈ ವಾಹನವು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಕೆಟಿಎಂ

ಕೆಟಿಎಂ ಬೈಕುಗಳಂತೆ ಸ್ಪೋರ್ಟಿ ಲುಕ್ ಮತ್ತು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿರುವರಿಂದ ಆಕರ್ಷಕ ಲುಕ್ ಅನ್ನು ಹೊಂದಿದೆ. ತಯಾರಕರು ಇದರ ವೈಶಿಷ್ಟ್ಯಗಳು ಮತ್ತು ಅದರ ಬೆಲೆ ಮತ್ತು ಇತರ ಮಾಹಿತಿಗಳು ಯಾವುದು ಬಹಿರಂಗಪಡಿಸಿಲ್ಲ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಕೆಟಿಎಂ

ಬಜಾಜ್, ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ಅಕ್ಟೋಬರ್ ತಿಂಗಳಲ್ಲಿ ಅನಾವರಣಗೊಳಿಸಿತ್ತು. ಕಂಪನಿಯು ಸ್ಕೂಟರ್ ಅನ್ನು ನವೆಂಬರ್ 14ರಂದು ಬಿಡುಗಡೆ ಮಾಡಿತ್ತು. ಸ್ಕೂಟರ್ ಬುಕ್ಕಿಂಗ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಇದು ಮೊದಲು ಪುಣೆಯಲ್ಲಿ ಮತ್ತು ನಂತರ ಬೆಂಗಳೂರಿನಲ್ಲಿ ಮಾರಾಟವಾಗಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಕೆಟಿಎಂ

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಜಾಜ್ ಸಂಸ್ಥೆಯು 4ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಐಪಿ67 ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಿದ್ದು, ಪೂರ್ಣ ಪ್ರಮಾಣದ ಚಾರ್ಜಿಂಗ್ ಮಾಡಲು ಕನಿಷ್ಠ 5 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದೆ. ಸ್ಕೂಟರ್‌ನಲ್ಲಿ ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ನೀಡಿರುವ ಬಜಾಜ್, ಇಕೋ‌ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 75 ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 70 ಕಿ.ಮೀ ಚಲಿಸುತ್ತದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಕೆಟಿಎಂ

ಕೆಟಿಎಂ ಕಂಪನಿಯು ಎಲೆಕ್ಟಿಕ್ ಸ್ಕೂಟರ್ ಅನ್ನು 2022ರ ಇಐಸಿಎಂಎ ಮೋಟಾರ್‍‍ಶೋದಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ. ಕೆ‍ಟಿಎಂ ಮತ್ತು ಬಜಾಜ್ ಆಟೋ ಇದರ ನಡುವೆ ಎಲೆಕ್ಟ್ರಿಕ್ ಪ್ರೀಮಿಯಂ ಸ್ಕೂಟರ್ ಅನ್ನು ತಯಾರಿಸಲು ಚಿಂತಿಸುತ್ತಿದೆ.

Most Read Articles

Kannada
Read more on ಕೆಟಿಎಂ ktm
English summary
KTM Is Ready To Race-prep The Chetak! - Read in Kannada
Story first published: Friday, November 15, 2019, 15:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X