ಏರಿಕೆಯಾದ ಕೆಟಿಎಂ ಬೈಕುಗಳ ಮಾರಾಟ

ಕಳೆದ ಕೆಲವು ತಿಂಗಳುಗಳಿಂದ ಆಟೋಮೊಬೈಲ್ ಕ್ಷೇತ್ರದಲ್ಲಿನ ಕುಸಿತದಿಂದಾಗಿ ಮಾರಾಟದಲ್ಲಿ ಇಳಿಕೆಯಾಗಿತ್ತು. ಆದರೆ ಹಬ್ಬದ ಸಮಯದಲ್ಲಿ ಮಾರಾಟದಲ್ಲಿ ಚೇತರಿಕೆ ಕಂಡುಬಂದಿದೆ. ಆಸ್ಟ್ರೀಯಾದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ತನ್ನ ಸರಣಿಯ ಬೈಕುಗಳ ಮಾರಾಟದಲ್ಲಿ ಏರಿಕೆಯನ್ನು ಕಂಡಿದೆ.

ಏರಿಕೆಯಾದ ಕೆಟಿಎಂ ಬೈಕುಗಳ ಮಾರಾಟ

ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಕೆಟಿಎಂ ಬೈಕಿನ 6,481 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಕೆಟಿಎಂ ಮಾರಾಟವು ಶೇ.46.86ರಷ್ಟು ಹೆಚ್ಚಾಗಿದೆ. ಕೆಟಿಎಂ ಜನಪ್ರಿಯತೆಯು ದೇಶಿಯ ಮಾರುಕಟ್ಟೆಯಲ್ಲಿ ಕಡಿಮೆಯಾಗಿಲ್ಲ. ಇಂದಿಗೂ ಹಲವು ಯುವಜನರ ಕನಸಿನ ಬೈಕ್ ಕೆಟಿಎಂ ಆಗಿದೆ.

ಏರಿಕೆಯಾದ ಕೆಟಿಎಂ ಬೈಕುಗಳ ಮಾರಾಟ

ಈ ವರ್ಷದ ಸೆಪ್ಟೆಂಬರ್‍ ತಿಂಗಳಲ್ಲಿ ಕೆಟಿಎಂ ಬೈಕ್‍‍ಗಳ ಮಾರಾಟದಲ್ಲಿ ಶೇ.11.65 ರಷ್ಟು ಏರಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ 5,805 ಯು‍ನಿ‍‍ಟ್‍ಗಳು ಮಾರಾಟವಾಗಿವೆ ಎಂದು ಕಂಪನಿ ತಿಳಿಸಿದೆ. ಕೆಟಿಎಂ ತನ್ನ ಸರಣಿಯ ಮಾರಾಟದಲ್ಲಿ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳ 125 ಸಿಸಿ ಮತ್ತು 200 ಸಿಸಿ ರೂಪಾಂತರಗಳು ಹೆಚ್ಚು ಮಾರಾಟವಾಗಿವೆ.

ಏರಿಕೆಯಾದ ಕೆಟಿಎಂ ಬೈಕುಗಳ ಮಾರಾಟ

ಕೆಟಿಎಂ ಡ್ಯೂಕ್ 125 ಬೈಕ್ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಕೆಟಿಎಂ ಸರಣಿಯಲ್ಲಿ ಡ್ಯೂಕ್ 200 ಮತ್ತು ಆರ್‍‍ಸಿ 200 ಅತಿ ಹೆಚ್ಚು ಮಾರಾಟವಾದ ಎರಡನೇ ಮಾದರಿಗಳಾಗಿವೆ.

ಏರಿಕೆಯಾದ ಕೆಟಿಎಂ ಬೈಕುಗಳ ಮಾರಾಟ

ಕೆಟಿಎಂ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊಟ್ಟ ಮೊದಲ ಬಾರಿಗೆ ಡ್ಯೂಕ್ 200 ಅನ್ನು ಬಿಡುಗಡೆಗೊಳಿಸಿತ್ತು. ಪ್ರತಿ ತಿಂಗಳು ಡ್ಯೂಕ್ 200 ಉತ್ತಮವಾಗಿ ಮಾರಾಟವಾಗುತ್ತಿದೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ 2,095 ಯು‍ನಿ‍‍‍ಟ್‍‍ಗಳು ಮಾರಾಟವಾಗಿವೆ.

ಏರಿಕೆಯಾದ ಕೆಟಿಎಂ ಬೈಕುಗಳ ಮಾರಾಟ

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕೆಟಿಎಂ 250 ಬೈಕಿನ 620 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ 623 ಯು‍ನಿ‍‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಶೇ.6.93ರಷ್ಟು ಹೆಚ್ಚಾಗಿದೆ.

ಏರಿಕೆಯಾದ ಕೆಟಿಎಂ ಬೈಕುಗಳ ಮಾರಾಟ

ಕೆಟಿಎಂ 390 ಬೈಕಿನ ದೇಶಿಯ ಮಾರುಕಟ್ಟೆಯ ಮಾರಾಟದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕೆಟಿಎಂ 390 ಮಾದರಿಯ 553 ಯುನಿ‍‍ಟ್‍ಗಳು ಮಾರಾಟವಾಗಿವೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕೆಟಿಎಂ 390 ಮಾದರಿಯ 398 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.9.30ರಷ್ಟು ಕಡಿಮೆಯಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಏರಿಕೆಯಾದ ಕೆಟಿಎಂ ಬೈಕುಗಳ ಮಾರಾಟ

ಕೆ‍ಟಿಎಂ 390 ಅಡ್ವೆಂಚರ್ ಬೈಕ್ ಮುಂದಿನ ವರ್ಷದ ಆರಂಭದಲ್ಲಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಿದೆ. ಕೆಟಿಎಂ 390 ಅಡ್ವೆಂಚರ್ ಬೈಕಿನ ಆರಂಭಿಕ ಬೆಲೆಯು ರೂ.3.2 ಲಕ್ಷದಿಂದ ರೂ.3.5 ಲಕ್ಷಗಳಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ 390 ಅಡ್ವೆಂಚರ್ ಬಿಡುಗಡೆಯಾದ ಬಳಿಕ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಮತ್ತು ಬಿಎಂಡಬ್ಲ್ಯು ಜಿ310 ಜಿಎಸ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಏರಿಕೆಯಾದ ಕೆಟಿಎಂ ಬೈಕುಗಳ ಮಾರಾಟ

ಕೆ‍ಟಿಎಂ 790 ಬೈಕ್ ದೇಶಿಯ ಮಾರುಕಟ್ಟೆಯಲ್ಲಿರುವ ಕೆಟಿಎಂ ಕಂಪನಿಯ ಪ್ರಮುಖ ಮಾದರಿಗಳಲ್ಲಿ ಒಂದಾಗಿದೆ. ಕೆಟಿಎಂ 790 ಬೈಕಿನ ಮಾರಾಟದಲ್ಲಿ 56.10ರಷ್ಟು ಇಳಿಕೆಯಾಗಿದೆ. ಕೆಟಿಎಂ 790 ಡ್ಯೂಕ್ ಹೊಸ 799 ಸಿಸಿ ಎಲ್8, ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಎಂಜಿನ್ ಅನ್ನು ಹೊಂದಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಏರಿಕೆಯಾದ ಕೆಟಿಎಂ ಬೈಕುಗಳ ಮಾರಾಟ

ಈ ಎಂಜಿನ್ 104 ಬಿ‍‍‍‍‍‍‍ಹೆಚ್‍‍ಪಿ ಪವರ್ ಮತ್ತು 87 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಕೆಟಿಎಂ 790 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್900, ಟ್ರಯಂಫ್ ಸ್ಟೀಟ್ ಟ್ರಿಪಲ್ ಎಸ್ ಮತ್ತು ಡುಕಾಟಿ ಮಾನ್‍‍ಸ್ಟರ್ 797 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಕೆಟಿಎಂ ktm
English summary
KTM India sales break up Oct 2019 – 125, 200 Duke on top - Read in Kannada
Story first published: Friday, November 22, 2019, 16:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X