ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಕೆಟಿ‍ಎಂ 125 ಸರಣಿಯಲ್ಲಿರುವ ಡ್ಯೂಕ್ ಹಾಗೂ ಆರ್‍‍ಸಿ ಬೈಕುಗಳು ಕಳೆದ ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಈ ಬೈಕುಗಳ 2,648 ಯುನಿಟ್‍‍ಗಳು ಮಾರಾಟವಾಗಿವೆ.

ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಕೆಟಿ‍ಎಂ ಕಂಪನಿಯ ಹೆಚ್ಚು ಮಾರಾಟವಾದ ಬೈಕುಗಳ ಪೈಕಿ ಕೆಟಿ‍ಎಂ 200, ಕೆಟಿ‍ಎಂ 250, ಕೆಟಿ‍ಎಂ 390 ಹಾಗೂ ಇತ್ತೀಚಿಗೆ ಬಿಡುಗಡೆಯಾದ ಡ್ಯೂಕ್ 790 ಬೈಕುಗಳು ಸೇರಿವೆ. ಕಳೆದ ವರ್ಷದ ಸೆಪ್ಟೆಂಬರ್‍‍ಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‍‍ನಲ್ಲಿ ಕೆಟಿ‍ಎಂ ಬೈಕುಗಳ ಮಾರಾಟವು 39.28%ನಷ್ಟು ಏರಿಕೆ ಕಂಡಿದೆ.

ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 4,168 ಯುನಿಟ್‍‍ಗಳ ಮಾರಾಟವಾಗಿದ್ದರೆ, ಈ ವರ್ಷದ ಸೆಪ್ಟೆಂಬರ್‍‍ನಲ್ಲಿ 5,805 ಯುನಿಟ್‍‍ಗಳು ಮಾರಾಟವಾಗಿವೆ. ಆದರೆ ಈ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಮಾರಾಟವು 27 ಯುನಿಟ್‍‍ನಷ್ಟು ಕುಸಿದಿದೆ. ಆಗಸ್ಟ್ ತಿಂಗಳಿನಲ್ಲಿ 5,838 ಯುನಿಟ್‍‍ಗಳ ಮಾರಾಟವಾಗಿದ್ದರೆ, ಸೆಪ್ಟೆಂಬರ್ ತಿಂಗಳಿನಲ್ಲಿ 5,805 ಯುನಿಟ್‍‍ಗಳು ಮಾರಾಟವಾಗಿವೆ.

ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಕೆಟಿ‍ಎಂ 125 ಸಿಸಿಯ ಎಂಟ್ರಿ ಲೆವೆಲ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ನಂತರ ಕೆಟಿ‍ಎಂ ಬೈಕುಗಳ ಮಾರಾಟದಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಮೊದಲಿಗೆ 2018ರ ನವೆಂಬರ್‍‍ನಲ್ಲಿ ಕೆಟಿ‍ಎಂ ಡ್ಯೂಕ್ 125 ಬೈಕ್ ಅನ್ನು ಬಿಡುಗಡೆಗೊಳಿಸಲಾಗಿತ್ತು.

ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಅದಾದ ನಂತರ ಈ ವರ್ಷದ ಆರಂಭದಲ್ಲಿ ಆರ್‍‍ಸಿ 125 ಬೈಕ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಈಗ ಈ ಎರಡೂ ಬೈಕುಗಳು ಭಾರತದಲ್ಲಿ ಕೆಟಿ‍ಎಂ ಕಂಪನಿಯ ಹೆಚ್ಚು ಮಾರಾಟವಾಗುವ ಬೈಕುಗಳಾಗಿವೆ. ಒಂದೆಡೆ ಕೆಟಿ‍ಎಂ 125 ಬೈಕುಗಳು ಹೆಚ್ಚು ಮಾರಾಟವಾಗುತ್ತಿದ್ದರೆ, ಮತ್ತೊಂದೆಡೆ ಕೆಟಿ‍ಎಂ 200, ಕೆಟಿ‍ಎಂ 250 ಹಾಗೂ ಕೆಟಿ‍ಎಂ 390 ಬೈಕುಗಳ ಮಾರಾಟದಲ್ಲಿ ಕುಸಿತವಾಗಿದೆ.

ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಸೆಪ್ಟೆಂಬರ್ ತಿಂಗಳಿನಲ್ಲಿ ಕೆಟಿ‍ಎಂ 200 ಬೈಕಿನ 2,095 ಯುನಿಟ್‍‍ಗಳು ಮಾರಾಟವಾಗಿವೆ. 2018ರ ಸೆಪ್ಟೆಂಬರ್ ತಿಂಗಳಿನಲ್ಲಿ 2,864 ಯುನಿಟ್‍‍ಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 26.85%ನಷ್ಟು ಕುಸಿತವಾಗಿದೆ. ಈ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ 39 ಯುನಿಟ್‍‍ಗಳಷ್ಟು ಕಡಿಮೆ ಮಾರಾಟವಾಗಿದೆ. ಆಗಸ್ಟ್ ತಿಂಗಳಿನಲ್ಲಿ 2,134 ಯುನಿಟ್‍‍ಗಳು ಮಾರಾಟವಾಗಿದ್ದವು.

ಮಾದರಿಗಳು ಸೆಪ್ಟೆಂಬರ್-19 ಸೆಪ್ಟೆಂಬರ್-18 ವ್ಯತ್ಯಾಸ %
ಕೆಟಿ‍ಎಂ 125 ಡ್ಯೂಕ್ 2,648 0 -
ಕೆಟಿ‍ಎಂ 200 ಡ್ಯೂಕ್ 2,095 2,864 -26.85
ಕೆಟಿ‍ಎಂ 250 ಡ್ಯೂಕ್ 623 629 -0.95
ಕೆಟಿ‍ಎಂ 390 ಡ್ಯೂಕ್ 398 675 -14.04
ಕೆಟಿ‍ಎಂ 790 ಡ್ಯೂಕ್ 41 0 -
ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಈ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಕೆಟಿ‍ಎಂ 250 ಬೈಕಿನ ಮಾರಾಟವು ಏರಿಕೆಯಾಗಿದೆ. ಆದರೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಮಾರಾಟ ಪ್ರಮಾಣವು ಕಡಿಮೆಯಾಗಿದೆ. 2018ರ ಸೆಪ್ಟೆಂಬರ್‍‍ನಲ್ಲಿ 629 ಯುನಿಟ್‍‍ಗಳು ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 592 ಯುನಿ‍‍ಟ್‍‍ಗಳು ಮಾರಾಟವಾಗಿದ್ದವು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಸ್ವಲ್ಪ ಚೇತರಿಕೆ ಕಂಡ ಮಾರಾಟದಿಂದ ಸೆಪ್ಟೆಂಬರ್ ತಿಂಗಳಿನಲ್ಲಿ 623 ಯುನಿಟ್‍‍ಗಳು ಮಾರಾಟವಾಗಿದ್ದವು. ಕೆಟಿ‍ಎಂ 390 ಬೈಕಿನ ಮಾರಾಟವು ಕಳೆದ ವರ್ಷದ ಸೆಪ್ಟೆಂಬರ್‍‍ಗಿಂತ 41% ಹಾಗೂ ಈ ವರ್ಷದ ಆಗಸ್ಟ್ ತಿಂಗಳಿಗಿಂತ 11%ನಷ್ಟು ಕಡಿಮೆಯಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

2018ರ ಸೆಪ್ಟೆಂಬರ್‍‍ನಲ್ಲಿ 675 ಯುನಿಟ್‍‍ಗಳ ಮಾರಾಟವಾಗಿದ್ದರೆ, ಈ ವರ್ಷದ ಆಗಸ್ಟ್ ನಲ್ಲಿ 409 ಯುನಿಟ್‍‍ಗಳು ಮಾರಾಟವಾಗಿದ್ದವು. ಕಳೆದ ತಿಂಗಳು 398 ಯುನಿಟ್‍‍ಗಳು ಮಾರಾಟವಾಗಿವೆ. ಕೆಟಿ‍ಎಂ 790 ಬೈಕ್ ಅನ್ನು ಸೆಪ್ಟೆಂಬರ್ 23ರಂದು ಬಿಡುಗಡೆಗೊಳಿಸಲಾಗಿತ್ತು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.8.64 ಲಕ್ಷಗಳಾಗಿದೆ. ಈ ನೇಕೆಡ್ ಬೈಕ್ ಅನ್ನು ಸಿ‍‍ಕೆ‍‍ಡಿಯಾಗಿ ಆಮದು ಮಾಡಿಕೊಂಡು ಪುಣೆಯಲ್ಲಿರುವ ಬಜಾಜ್‍‍ನ ಘಟಕದಲ್ಲಿ ಅಸೆಂಬ್ಲ್ ಮಾಡಲಾಗುತ್ತದೆ. ಈ ಬೈಕ್ ದುಬಾರಿ ಬೆಲೆಯನ್ನು ಹೊಂದಿದ್ದರೂ ಸಹ ಬಿಡುಗಡೆಯಾದ ಕೇವಲ 10 ದಿನಗಳಲ್ಲಿ 41 ಯುನಿಟ್‍‍ಗಳ ಮಾರಾಟವಾಗಿದೆ.

ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಈ ಬೈಕ್ ಸುಜುಕಿ ಜಿ‍ಎಸ್‍ಎಕ್ಸ್ -ಎಸ್750, ಡುಕಾಟಿ ಮಾನ್‍‍‍ಸ್ಟರ್ 797, ಟ್ರಯಂಫ್ ಸ್ಟ್ರೀಟ್ ಟ್ರಿಪಲ್, ಯಮಹಾ ಎಂಟಿ -09 ಹಾಗೂ ಕವಾಸಕಿ ಝಡ್900 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಈ ಬೈಕಿನಲ್ಲಿ 799 ಸಿಸಿಯ ಲಿಕ್ವಿಡ್ ಕೂಲ್ ಪ್ಯಾರಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆ.

ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಈ ಎಂಜಿನ್ 104 ಬಿ‍‍ಹೆಚ್‍‍ಪಿ ಪವರ್ ಹಾಗೂ 87 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಸಸ್ಪೆಂಷನ್‍‍ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ 43 ಎಂಎಂನ ಫೋರ್ಕ್ ಹಾಗೂ ಹಿಂಭಾಗದಲ್ಲಿ ಅಡ್ಜಸ್ಟಬಲ್ ಮೊನೊಶಾಕ್‍‍ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್‍‍‍ಗಾಗಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಗಳಿವೆ.

ಹೆಚ್ಚು ಮಾರಾಟವಾಗುವ ಕೆ‍ಟಿ‍ಎಂ ಬೈಕುಗಳಿವು

ಕೆಟಿ‍ಎಂ ಕಂಪನಿಯು ಈ ವರ್ಷದ ಕೊನೆಯಲ್ಲಿ 390 ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಬೈಕ್ ಅನ್ನು ಕೆಟಿ‍ಎಂ ಅಡ್ವೆಂಚರ್ 250 ಬೈಕ್ ಅನ್ನು ಬಿಡುಗಡೆಗೊಳಿಸಿದ ನಂತರ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಎರಡೂ ಅಡ್ವೆಂಚರ್ ಬೈಕುಗಳು ಬಿಡುಗಡೆಯಾದ ನಂತರ ಕೆಟಿ‍ಎಂ ಬೈಕುಗಳ ಮಾರಾಟವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

Most Read Articles

Kannada
Read more on ಕೆಟಿಎಂ ktm
English summary
KTM Duke 125, 200 help increase sales by 39% in Sep 2019 - Read in Kannada
Story first published: Monday, October 21, 2019, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X