22 ಮೋಟಾರ್ಸ್ ಜೊತೆಗೂಡಿ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೇಮ್ಕೊ

ಕೇಮ್ಕೊ ಹಾಗೂ 22 ಮೋಟಾರ್ಸ್ ಕಂಪನಿಗಳು ಜೊತೆಗೂಡಿ ಹೊಸ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಈ ಹಿಂದೆ ಸಾಕಷ್ಟು ಬಾರಿ ವರದಿಯಾಗಿತ್ತು. ಕಂಪನಿಯು ಸಹ ಈ ಬಗ್ಗೆ ಹಲವಾರು ಟೀಸರ್‍‍ಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿದೆ ಕೇಮ್ಕೊ ಪ್ರಿಮೀಯಂ ಸ್ಕೂಟರ್‍

ಒಂದು ಟೀಸರ್‍‍ನಲ್ಲಿ ಕೇಮ್ಕೊ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸ್ಕೂಟರ್‍ ಅನ್ನು ಬಿಡುಗಡೆಗೊಳಿಸುವ ಬಗ್ಗೆ ತಿಳಿಸಲಾಗಿತ್ತು. ಈ ಟೀಸರ್‍‍ನಲ್ಲಿ 300 ಡೆಕಾಲ್ ಅನ್ನು ತೋರಿಸಲಾಗಿತ್ತು. ಕೇಮ್ಕೊದ ವಿಶ್ವ ಮಾರುಕಟ್ಟೆಯನ್ನು ಗಮನಿಸಿದರೆ, ಎಕ್ಸ್ ಟೌನ್ 300ಐ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಮೊದಲು ಕೇಮ್ಕೊ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಬಹುದೆಂದು ನಂಬಲಾಗಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿದೆ ಕೇಮ್ಕೊ ಪ್ರಿಮೀಯಂ ಸ್ಕೂಟರ್‍

ಆದರೆ ಕಂಪನಿಯು ಸಾಂಪ್ರಾದಾಯಿಕವಾದ ಪೆಟ್ರೋಲ್ ಪವರ್ ಎಂಜಿನ್ ಹೊಂದಿರುವ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ. ಎಕ್ಸ್ ಟೌನ್ 300ಐ ಮ್ಯಾಕ್ಸಿ ಸ್ಕೂಟರ್‍‍ನಲ್ಲಿ 276 ಸಿಸಿಯ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್ ಲಿಕ್ವಿಡ್ ಕೂಲ್ ಎಂಜಿನ್ ಇರಲಿದ್ದು, 24.15 ಬಿ‍‍ಹೆಚ್‍‍ಪಿ ಹಾಗೂ 25 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಕೇಮ್ಕೊ ಪ್ರಿಮೀಯಂ ಸ್ಕೂಟರ್‍

ಈ ಅಂಕಿ ಅಂಶಗಳು ಸ್ಕೂಟರ್‍‍ಗಳಿಗೆ ದೊಡ್ಡದಾಯಿತೆಂದು ಅನಿಸಿದರೂ ಇದು ಮ್ಯಾಕ್ಸಿ ಸ್ಕೂಟರ್ ಆಗಿರುವುದರಿಂದ ವಿಶೇಷವೇನೂ ಇರುವುದಿಲ್ಲ. ಈ ಸ್ಕೂಟರ್ ಗಾತ್ರದಲ್ಲಿ ದೊಡ್ಡದಾಗಿದೆ. ಸ್ಕೂಟರ್‍‍ನ ಮುಂಭಾಗದಲ್ಲಿ ಲಾರ್ಜ್ ವಿಂಡ್‍‍ಶೀಲ್ಡ್ ಹೊಂದಿರುವ ಏಪ್ರಾನ್ ಇರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಕೇಮ್ಕೊ ಪ್ರಿಮೀಯಂ ಸ್ಕೂಟರ್‍

ಈ ಸ್ಕೂಟರಿನಲ್ಲಿ ಇಳಿಜಾರಿನಂತಿರುವ ಫ್ಲೋರ್‍‍‍ಬೋರ್ಡ್ ಇರಲಿದ್ದು, ಟೂರಿಂಗ್‍‍ಗಳಲ್ಲಿ ಸಹಾಯಕ್ಕೆ ಬರಲಿದೆ. ಈ ಸ್ಕೂಟರ್ ಟೂರ್‍‍ಗಳಿಗೆ ಹಾಗೂ ದೂರ ಪಯಣಗಳಿಗೆ ಹೇಳಿ ಮಾಡಿಸಿದಂತಿದೆ. ಈ ಸ್ಕೂಟರಿನಲ್ಲಿ 12.5 ಲೀಟರಿನ ದೊಡ್ಡ ಟ್ಯಾಂಕ್, ದೊಡ್ಡದಾದ ಸೀಟುಗಳು ಹಾಗೂ ಉದ್ದವಾದ ವ್ಹೀಲ್‍‍ಬೇಸ್‍‍ಗಳಿವೆ. ಸಸ್ಪೆಂಷನ್‍‍ನಲ್ಲಿ 37ಎಂಎಂ ನಷ್ಟು ದಪ್ಪವಾಗಿರುವ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಡ್ಯೂಯಲ್ ಶಾಕ್‍‍ಗಳನ್ನು ಅಳವಡಿಸಲಾಗಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಭಾರತದಲ್ಲಿ ಬಿಡುಗಡೆಯಾಗಲಿದೆ ಕೇಮ್ಕೊ ಪ್ರಿಮೀಯಂ ಸ್ಕೂಟರ್‍

ಎಕ್ಸ್ ಟೌನ್ 300ಐ ಸ್ಕೂಟರಿನಲ್ಲಿ 13/14 ಇಂಚಿನ ವ್ಹೀಲ್‍‍ಗಳ ಜೊತೆಗೆ ಎರಡೂ ಕಡೆಗಳಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ. ಈ ಸ್ಕೂಟರಿನಲ್ಲಿ ಫ್ರಂಟ್ ವ್ಹೀಲ್‍‍‍ನಲ್ಲಿ 260 ಎಂಎಂ ಡಿಸ್ಕ್ 3 ಪಿಸ್ಟನ್ ಕ್ಯಾಲಿಪರ್ ಹಾಗೂ ಹಿಂದಿರುವ ವ್ಹೀಲ್‍‍ನಲ್ಲಿ 240 ಎಂಎಂ ಡಿಸ್ಕ್ ಹೊಂದಿರುವ ಟ್ವಿನ್ ಪಿಸ್ಟನ್ ಕ್ಯಾಲಿಪರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಸಂಚಾರಿ ಪೊಲೀಸರ ಕೈಗೆ ಬಂತು ಹೈಟೆಕ್ ಚಲನ್ ಮಷಿನ್

ಭಾರತದಲ್ಲಿ ಬಿಡುಗಡೆಯಾಗಲಿದೆ ಕೇಮ್ಕೊ ಪ್ರಿಮೀಯಂ ಸ್ಕೂಟರ್‍

ಎಕ್ಸ್ ಟೌನ್ 300ಐ ಪ್ರಿಮೀಯಂ ಸ್ಕೂಟರ್‍‍ನ ಬೆಲೆಯು ಭಾರತದಲ್ಲಿರುವ ಎಕ್ಸ್ ಶೋರೂಂ ದರದಂತೆ ರೂ.2 ಲಕ್ಷಗಳಾಗಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಮ್ಯಾಕ್ಸಿ ಸ್ಕೂಟರ್‍‍ಗಳ ಸೆಗ್‍‍ಮೆಂಟಿನಲ್ಲಿ ಎಕ್ಸ್ ಟೌನ್ 300ಐ ಸ್ಕೂಟರ್, ಸುಜುಕಿ ಕಂಪನಿಯ ಬರ್ಗ್‍‍ಮನ್ ಸ್ಟ್ರೀಟ್ ಹಾಗೂ ಕೈನೆಟಿಕ್ ಬ್ಲೇಜ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Kymco To Bring In Premium Scooters To India - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X