ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಭಾರತದ ಆಟೋಮೊಬೈಲ್ ಉದ್ಯಮವು ಈ ವರ್ಷದ ಆರಂಭದಿಂದ ನಿಧಾನಗತಿಯ ಪ್ರಗತಿಯನ್ನು ಕಾಣುತ್ತಿದೆ. ಕಾರ್ ಆಗಲಿ, ಬೈಕ್ ಆಗಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ. ಇದು ವಾಹನ ಕಂಪನಿಗಳಿಗೆ ತಲೆಬಿಸಿಯನ್ನು ತಂದಿದೆ.

ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ, ಬೇಸ್ತು ಬಿದ್ದ ಸಿಬ್ಬಂದಿ..!

ದೀಪಾವಳಿಯ ಹಿನ್ನೆಲೆಯಲ್ಲಿ ಕಂಪನಿಗಳ ಮಾರಾಟವು ಮತ್ತೆ ಚೇತರಿಸಿಕೊಂಡಿದೆ. ದೀಪಾವಳಿಗೆ ಜನರು ಹೊಸ ವಾಹನಗಳನ್ನು ಕೊಳ್ಳುವುದು ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯವಾಗಿರುವ ಕಾರಣಕ್ಕೆ ವಾಹನಗಳ ಮಾರಾಟವು ಹೆಚ್ಚಾಗಿದೆ.

ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ, ಬೇಸ್ತು ಬಿದ್ದ ಸಿಬ್ಬಂದಿ..!

ಇದೇ ರೀತಿ ಮಧ್ಯ ಪ್ರದೇಶದಲ್ಲಿರುವ ಸಾತ್ನಾ ಜಿಲ್ಲೆಯ ರಾಕೇಶ್ ಕುಮಾರ್ ಗುಪ್ತಾರವರು ಸಹ ಹೊಸ ಸ್ಕೂಟರ್ ಖರೀದಿಸಲು ಬಯಸಿದ್ದಾರೆ. ಅದರಂತೆ ಇತ್ತೀಚಿನ ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರ್ ಖರೀದಿಸಲು ಡೀಲರ್ ಬಳಿ ಹೋಗಿದ್ದಾರೆ.

ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ, ಬೇಸ್ತು ಬಿದ್ದ ಸಿಬ್ಬಂದಿ..!

ಇದರಲ್ಲೇನು ವಿಶೇಷ ಅಂತೀರಾ? ವಿಶೇಷ ಇರೋದು ಇದರಲ್ಲೆ. ಎಲ್ಲರಂತೆ ರಾಕೇಶ್ ಕುಮಾರ್‍‍ರವರು ಚೆಕ್‍‍ನಲ್ಲೋ, ಡಿಡಿಯಲ್ಲೋ, ಇ‍ಎಂ‍ಐನಲ್ಲೊ ಅಥವಾ ನೂರು, ಇನ್ನೂರು, ಐನೂರು, ಎರಡು ಸಾವಿರ ಮುಖ ಬೆಲೆಯ ನೋಟುಗಳನ್ನು ನೀಡಿ ಹೋಂಡಾ ಆಕ್ಟಿವಾ ಖರೀದಿಸಿದ್ದರೆ ಸುದ್ದಿಯಾಗುತ್ತಿರಲಿಲ್ಲ.

ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ, ಬೇಸ್ತು ಬಿದ್ದ ಸಿಬ್ಬಂದಿ..!

ರಾಕೇಶ್‍‍ರವರು ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಸಾತ್ನಾದ ಪನ್ನಾ ನಾಗಾದಲ್ಲಿರುವ ಕೃಷ್ಣ ಹೋಂಡಾ ಡೀಲರ್‍‍ಶಿಪ್‍‍ನಿಂದ ಖರೀದಿಸಿದ್ದಾರೆ. ಖರೀದಿಸಲು ಪೂರ್ತಿ ಹಣವನ್ನೇ ನೀಡಿದ್ದಾರೆ. ಆದರೆ ಈ ಪೂರ್ತಿ ಹಣವು 5 ರೂಪಾಯಿ ಹಾಗೂ 10 ರೂಪಾಯಿ ನಾಣ್ಯಗಳಿಂದ ಕೂಡಿತ್ತು ಎಂಬುದು ವಿಶೇಷ.

ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ, ಬೇಸ್ತು ಬಿದ್ದ ಸಿಬ್ಬಂದಿ..!

ರಾಕೇಶ್‍‍ರವರು ನೀಡಿದ ಹಣವನ್ನು ನೋಡಿ ಡೀಲರ್ ಸಿಬ್ಬಂದಿ ಬೆಸ್ತು ಬಿದ್ದಿದ್ದಾರೆ. ಅವರು ನೀಡಿದ ಎಲ್ಲಾ ನಾಣ್ಯಗಳನ್ನು ಎಣಿಸಲು ಮೂರಕ್ಕೂ ಹೆಚ್ಚು ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಅಂದ ಹಾಗೆ ರಾಕೇಶ್‍‍ರವರು ಖರೀದಿಸಿದ್ದು, ಹೋಂಡಾ ಆಕ್ಟಿವಾ 125 ಸ್ಕೂಟರ್‍‍ನ ಟಾಪ್ ಎಂಡ್ ಮಾದರಿಯನ್ನು.

ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ, ಬೇಸ್ತು ಬಿದ್ದ ಸಿಬ್ಬಂದಿ..!

ಈ ಮಾದರಿಯ ಸ್ಕೂಟರ್ ಡಿಸ್ಕ್ ಬ್ರೇಕ್ ಹಾಗೂ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಈ ಸ್ಕೂಟರಿನ ಬೆಲೆಯು ಮಧ್ಯ ಪ್ರದೇಶದ ಸಾತ್ನಾದ ಆನ್‍‍ರೋಡ್ ದರದಂತೆ ರೂ.83,000ಗಳಾಗುತ್ತದೆ. ಡೀಲರ್‍‍ಗಳ ಪುಣ್ಯಕ್ಕೆ ರಾಕೇಶ್‍‍ರವರು 5 ರೂಪಾಯಿ ಹಾಗೂ 10 ರೂಪಾಯಿ ನಾಣ್ಯಗಳನ್ನು ನೀಡಿದ್ದಾರೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ, ಬೇಸ್ತು ಬಿದ್ದ ಸಿಬ್ಬಂದಿ..!

ಇವುಗಳ ಬದಲು ಒಂದು ರೂಪಾಯಿ ಹಾಗೂ ಎರಡು ರೂಪಾಯಿ ನಾಣ್ಯಗಳನ್ನು ನೀಡಲಿಲ್ಲವೆಂದು ಡೀಲರ್‍‍ಗಳು ನಿಟ್ಟುಸಿರು ಬಿಟ್ಟಿರುವುದು ಗ್ಯಾರಂಟಿ. ರಾಕೇಶ್ ಕುಮಾರ್ ಗುಪ್ತಾರವರು ಯಾವ ಕಾರಣಕ್ಕೆ ಈ ರೀತಿಯಾಗಿ ಹಣವನ್ನು ಪಾವತಿಸಿದರು ಎಂಬುದು ತಿಳಿದು ಬಂದಿಲ್ಲ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ, ಬೇಸ್ತು ಬಿದ್ದ ಸಿಬ್ಬಂದಿ..!

ವಿಭಿನ್ನವಾಗಿ ಸ್ಕೂಟರ್ ಅನ್ನು ಖರೀದಿಸುವ ಆಲೋಚನೆಯಿಂದ ಈ ರೀತಿಯಾಗಿ ಪಾವತಿ ಮಾಡಿರುವ ಸಾಧ್ಯತೆಗಳಿವೆ. ಆದರೆ ಈ ರೀತಿಯಾಗಿ ಹಣವನ್ನು ಪಾವತಿ ಮಾಡಿ ಸ್ಕೂಟರ್ ಅನ್ನು ಖರೀದಿಸುವವರ ಪೈಕಿ ರಾಕೇಶ್ ಕುಮಾರ್‍‍ರವರು ಮೊದಲನೇಯವರಲ್ಲ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ, ಬೇಸ್ತು ಬಿದ್ದ ಸಿಬ್ಬಂದಿ..!

ಈ ಹಿಂದೆ 13 ವರ್ಷದ ಜೈಪುರದ ಬಾಲಕನೊಬ್ಬ ಇದೇ ರೀತಿಯಾಗಿ ಸ್ಕೂಟರ್ ಅನ್ನು ಖರೀದಿಸಿ ಸುದ್ದಿಯಾಗಿದ್ದ. ಈ ಸ್ಕೂಟರ್ ಅನ್ನು ಖರೀದಿಸಿ ತನ್ನ ಸಹೋದರಿಗೆ ಗಿಫ್ಟ್ ನೀಡಿದ್ದ. ಗಮನಿಸಬೇಕಾದ ಸಂಗತಿಯೆಂದರೆ ತನ್ನ ಪಾಕೆಟ್ ಮನಿಯಿಂದ ಕೂಡಿಟ್ಟ ಹಣದಲ್ಲಿ ಆತ ಸ್ಕೂಟರ್ ಖರೀದಿಸಿದ್ದ.

ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ, ಬೇಸ್ತು ಬಿದ್ದ ಸಿಬ್ಬಂದಿ..!

ರಾಕೇಶ್ ಕುಮಾರ್‍‍ರವರು ಖರೀದಿಸಿರುವ ಹೋಂಡಾ ಆಕ್ಟಿವಾ ಸ್ಕೂಟರ್ ಭಾರತೀಯ ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಸ್ಕೂಟರ್ ಖರೀದಿಸ ಬಯಸುವವರ ಮೊದಲ ಆಯ್ಕೆ ಹೋಂಡಾ ಆಕ್ಟಿವಾ ಆಗಿರುತ್ತದೆ. ದೇಶಿಯ ಮಾರುಕಟ್ಟೆಯ ಸ್ಕೂಟರ್ ಸೆಗ್‍‍ಮೆಂಟಿನ ಮಾರಾಟದಲ್ಲಿ ಹೋಂಡಾ ಆಕ್ಟಿವಾ ಯಾವಾಗಲೂ ಅಗ್ರಸ್ಥಾನದಲ್ಲಿರುತ್ತದೆ.

Most Read Articles

Kannada
English summary
Customer buys honda activa in new way - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X