ಬಹಿರಂಗವಾಯ್ತು ಮೊಜೊ300 ಬೈಕ್ ಫೀಚರ್ಸ್

ಮಹೀಂದ್ರಾ ಕಂಪನಿಯು ತನ್ನ ಮೊಜೊ 300 ಎಬಿ‍ಎಸ್ ಬೈಕ್ ಅನ್ನು ಜುಲೈ ತಿಂಗಳ ಕೊನೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈಗಾಗಲೇ ಕೆಲವು ಡೀಲರ್‍‍ಗಳು ಡೆಮೊ ಬೈಕುಗಳ ಡೆಲಿವರಿಯನ್ನು ಪಡೆದಿದ್ದಾರೆ. ಇದರ ಜೊತೆಗೆ ಬೈಕಿನ ವಿವರವುಳ್ಳ ಚಿತ್ರಗಳನ್ನು ಇಂಟರ್‍‍ನೆಟ್‍‍ನಲ್ಲಿ ಶೇರ್ ಮಾಡಲಾಗಿದೆ. ರಶ್‍‍ಲೇನ್ ಸುದ್ದಿಸಂಸ್ಥೆಯು ಅಧಿಕೃತವೆಂದು ಹೇಳಲಾದ ಹೊಸ ಮಹೀಂದ್ರಾ ಮೊಜೊ ಬೈಕಿನ ಸ್ಪೆಸಿಫಿಕೇಶನ್‍‍ಗಳನ್ನು ಬಹಿರಂಗಪಡಿಸಿದೆ.

ಬಹಿರಂಗವಾಯ್ತು ಮೊಜೊ300 ಬೈಕ್ ಫೀಚರ್ಸ್

ಮಹೀಂದ್ರಾದ ಹೊಸ ಬೈಕಿನಲ್ಲಿ ಭಾರತ ಸರ್ಕಾರವು ಕಡ್ಡಾಯಗೊಳಿಸಿರುವ ಎ‍‍ಬಿ‍ಎಸ್ ಅನ್ನು ಸ್ಟಾಂಡರ್ಡ್ ಫೀಚರ್ ಆಗಿ ನೀಡಲಾಗಿದೆ. ಹೊಸ ಮೊಜೊ ಬೈಕ್ ಅನ್ನು ಹಿಂದಿನ ಮಾದರಿಯ ಬೈಕಿಗಿಂತ ಭಿನ್ನವಾಗಿ ಒಂದೇ ಮಾದರಿಯಲ್ಲಿ ಮಾರಾಟ ಮಾಡಲಾಗುವುದು. ಸ್ಟೈಲಿಂಗ್ ವಿಷಯದಲ್ಲಿ 2019ರ ಮೊಜೊ 300 ಎಬಿಎಸ್ ಬೈಕ್ ಬಹುತೇಕ ಹಳೆಯ ತಲೆಮಾರಿನ ಬೈಕ್ ಅನ್ನು ಹೋಲುತ್ತದೆ. ಆದರೆ, ಫ್ಯೂಯಲ್ ಟ್ಯಾಂಕ್ ಕೆಳಗಿರುವ ಡಬಲ್ ಟ್ಯೂಬ್ ಗೋಲ್ಡ್ ಬಣ್ಣದ ಬದಲಿಗೆ ಗ್ಲಾಸ್ ಬ್ಲಾಕ್ ಬಣ್ಣವನ್ನು ಹೊಂದಿದೆ.

ಬಹಿರಂಗವಾಯ್ತು ಮೊಜೊ300 ಬೈಕ್ ಫೀಚರ್ಸ್

ಹೊಸ ಮೊಜೊದಲ್ಲಿರುವ ಎಂಜಿನ್ ಮೊದಲಿನಂತೆಯೇ ಇದ್ದು, ಮೊದಲಿಗಿಂತ ಕಡಿಮೆ ಪವರ್ ಉತ್ಪಾದಿಸಲಿದೆ. ಎಫ್‍ಐ ಹೊಂದಿದ್ದ ಮೊದಲಿನ ಬೈಕ್ 27 ಬಿಹೆಚ್‌ಪಿ ಉತ್ಪಾದಿಸಿದರೆ, ಕಾರ್ಬ್ಯುರೇಟರ್ ಹೊಂದಿದ್ದ ಬೈಕ್ 23 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತಿತ್ತು. ಹೊಸ ಮೊಜೊ 300 ಎಬಿಎಸ್‌ ಬೈಕಿನಲ್ಲಿ 294.72 ಸಿಸಿ, ಡಿಒಹೆಚ್‌ಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅಳವಡಿಸಲಾಗಿದೆ.

ಬಹಿರಂಗವಾಯ್ತು ಮೊಜೊ300 ಬೈಕ್ ಫೀಚರ್ಸ್

ಈ ಎಂಜಿನ್ 5,500 ಆರ್‌ಪಿಎಂನಲ್ಲಿ 26 ಬಿಹೆಚ್‌ಪಿ ಪವರ್ ಹಾಗೂ 3 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಬೈಕಿನಲ್ಲಿರುವ ಎಂಜಿನ್ ಬಿಎಸ್4 ಆಧಾರಿತವಾಗಿದ್ದು, ಬಿಎಸ್ 6 ಆಧಾರಿತ ಎಂಜಿನ್ ಹೊಂದಿರುವುದಿಲ್ಲ. ಈ ಎಂಜಿನ್‍‍ನಲ್ಲಿ 6 ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಸೋರಿಕೆಯಾದ ಡಾಕ್ಯುಮೆಂಟ್ 2019 ರ ಮೊಜೊ ಬೈಕಿನ ಬಗ್ಗೆ ಹಲವಾರು ವಿಷಯಗಳನ್ನು ಬಹಿರಂಗಪಡಿಸುತ್ತದೆ.

ಬಹಿರಂಗವಾಯ್ತು ಮೊಜೊ300 ಬೈಕ್ ಫೀಚರ್ಸ್

ಈ ಬೈಕ್ ಈಗ 2115 ಎಂಎಂ ಉದ್ದ, 1150 ಎಂಎಂ ಎತ್ತರ, 800 ಎಂಎಂ ಅಗಲ ಹಾಗೂ 1460 ಎಂಎಂ ವೀಲ್ ಬೇಸ್ ಹೊಂದಿದೆ. ಹೊಸ ಬೈಕ್ 165 ಕೆ.ಜಿ ತೂಕವನ್ನು ಹೊಂದಿದೆ. ಬೈಕಿನಲ್ಲಿರುವ ಇತರ ಅಂಶಗಳೆಂದರೆ ಎಲ್‌ಇಡಿ ಡಿಆರ್‌ಎಲ್‌ಗಳು. ಅಪ್‌ಸೈಡ್ ಡೌನ್ ಫೋರ್ಕ್‌ಗಳ ಬದಲಿಗೆ ಹೊಸ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್ ಕಾರ್ಯಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂ ಒನ್ ಡಿಸ್ಕ್ ಗಳನ್ನು ಅಳವಡಿಸಲಾಗಿದ್ದು, ಇವು ಬೈಬ್ರೆ ಮೂಲದ ಕ್ಯಾಲಿಪರ್‌ಗಳನ್ನು ಹೊಂದಿವೆ.

ಬಹಿರಂಗವಾಯ್ತು ಮೊಜೊ300 ಬೈಕ್ ಫೀಚರ್ಸ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ನವೀಕರಣದ ಮತ್ತೊಂದು ಅಂಶವೆಂದರೆ, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್‍‍ಗಳು ಈಗ ಎಬಿಎಸ್ ಇಂಡಿಕೇಟರ್ ಹಾಗೂ ಪಿರೆಲ್ಲಿ ಏಂಜಲ್ ಸಿಟಿ ಟಯರ್‌ಗಳನ್ನು ಹೊಂದಿರಲಿವೆ. ಮಹೀಂದ್ರಾ ಕಂಪನಿಯು, ಮೊಜೊ 300 ಎಬಿಎಸ್ ಬೈಕಿನ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಹೊಸ ಬೈಕಿನ ಬೆಲೆಯು ರೂ.1.70 ಲಕ್ಷಗಳಾಗುವ ಸಾಧ್ಯತೆಗಳಿವೆ.

ಬಹಿರಂಗವಾಯ್ತು ಮೊಜೊ300 ಬೈಕ್ ಫೀಚರ್ಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹಿಂದಿನ ಮೊಜೊ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗ ವಿಭಿನ್ನವಾಗಿದ್ದ ಕಾರಣ ಹೆಚ್ಚಿನ ಜನರು ಇಷ್ಟಪಟ್ಟಿದ್ದರು. ಹೊಸ ಅಪ್‍‍‍ಡೇಟ್‍‍ಗಳನ್ನು ಹೊಂದಿರುವ ಹೊಸ ಮೊಜೊ 300 ಎಬಿಎಸ್ ಗ್ರಾಹಕರ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಬಿಡುಗಡೆಯಾದ ನಂತರ, ಹೊಸ ಮೊಜೊ ಬೈಕ್, ಬಜಾಜ್ ಡೊಮಿನಾರ್ 400, ಕೆಟಿಎಂ 250 ಡ್ಯೂಕ್ ಮತ್ತು ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ ಬೈಕುಗಳಿಗೆ ಪೈಪೋಟಿ ನೀಡಲಿದೆ.

Source: Autocarindia

Image Courtesy: Instagram

Most Read Articles

Kannada
English summary
Mahindra Mojo 300 ABS Specifications Leaked - Read in kannada
Story first published: Wednesday, July 17, 2019, 11:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X